Don't Miss

ಇಂದಿರಾ ಗಾಂಧಿಯೊಂದಿಗೆ ಕನ್ನಡದ ವರನಟ ಡಾ। ರಾಜಕುಮಾರ್ ಅವರ ಹಳೆಯ ಛಾಯಾಚಿತ್ರದಲ್ಲಿ ಮೋದಿ? Fact Check

ಕನ್ನಡದ ವರನಟ ಡಾ| ರಾಜಕುಮಾರ್ ಅವರೊಂದಿಗೆ ಇಂದಿರಾ ಗಾಂಧಿಯವರ ಹಳೆಯ ಕಪ್ಪು ಬಿಳುಪು ಛಾಯಾಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಲಿತವಾಗಿದ್ದು ಆ ಗುಂಪು ಛಾಯಾಚಿತ್ರದಲ್ಲಿ  ಯುವ ನರೇಂದ್ರ ಮೋದಿ ಹಿಂದೆ ನಿಂತಿರುವುದು ತೋರಿಸಲಾಗಿದೆ.

ಕೆಲವು ಕಾಂಗ್ರೆಸ್ ಮತ್ತು ಇತರ AIMIM ಬೆಂಬಲಿಗರು ಫೇಸ್ಬುಕ್ ನಲ್ಲಿ ಷೇರ್ ಮಾಡಿರುವ ಚಿತ್ರವು: “ಪ್ರಧಾನಿ ಮೋದಿ ಕಾಂಗ್ರೆಸ್ ಬೆಂಬಲಿಗರಾಗಿದ್ದರು. ನೀವು ಈಗ ಏನು ಹೇಳುತ್ತೀರಿ, ಭಕ್ತರೇ?” ಎಂದು ಹೇಳಿತು #Sameer_Ali_Farooqui ಮಾಡಿದ ಒಂದು ಪೋಸ್ಟ್ ಹೀಗಿದೆ:

ಇದನ್ನು ಅಸದುದ್ದೀನ್ ಓವೈಸಿಯ AIMIM ಪಕ್ಷವನ್ನು ಬೆಂಬಲಿಸುವ ಮತ್ತೊಂದು ಫೇಸ್ಬುಕ್ ಪುಟವು ಇಲ್ಲಿ ನೀಡಲಾದ ಲಿಂಕ್ ನಲ್ಲಿ ಷೇರ್ ಮಾಡಿದೆ:

ಮೇಲ್ನೋಟದಲ್ಲಿ, ನಂಬಲಸಾಧ್ಯವಾದ ಈ ಛಾಯಾಚಿತ್ರವು ನಮ್ಮ ತಂಡ ಕಣ್ಣರಳಿಸುವಂತೆ ಮಾಡಿತು ಮತ್ತು ಒಂದು ಸರಳವಾದ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಲ್ಲಿ ವಾಸ್ತವಿಕ ಮೂಲ ಚಿತ್ರ ಹೊರಬಿತ್ತು. ಶೀಘ್ರದಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಪಳಿಸಿದ ಮೂಲ ಚಿತ್ರ ಇಲ್ಲಿದೆ: ಈ ಛಾಯಾಚಿತ್ರವನ್ನು ಇತ್ತೀಚಿಗೆ  ಕ್ವಾಂಟಂ ನ ಏಪ್ರಿಲ್ 24, 2019 ರ ಲೇಖನದಲ್ಲಿ ಬಳಸಲಾಗಿತ್ತು. ಲೇಖನದ ಶೀರ್ಷಿಕೆ, “Karnataka’s Reluctant Politician: The Life and Times of ‘Annavaru’. ಕರ್ನಾಟಕದಲ್ಲಿ ದಿವಂಗತ ನಟ ಡಾ । ರಾಜಕುಮಾರ್ ಅವರನ್ನು ‘ಅಣ್ಣಾವರು’ ಎಂದು ಕರೆಯುತ್ತಾರೆ ಮತ್ತು ಇಂದಿಗೂ ಅವರ ಅನುಯಾಯಿಗಳ ಸಂಖ್ಯೆ ಅಪಾರವಾಗಿದೆ.

ಚಿತ್ರದಲ್ಲಿ ಮೋದಿಯಾಗಿ ರೂಪಾಂತರಗೊಳಿಸಲಾಗಿದ್ದ ವ್ಯಕ್ತಿ ಪೂರ್ವದ ಕಾಂಗ್ರೆಸ್ ನಾಯಕ ಮತ್ತು ಈಗ ಬಿಜೆಪಿ ಸದಸ್ಯರಾಗಿರುವ ಎಸ್.ಎಂ. ಕೃಷ್ಣ.  ಡಿಜಿಟೈ ಇಂಡಿಯಾ ವಾಸ್ತವಂಶವನ್ನು ಪರಿಶೀಲಿಸಲು ಸಾಧ್ಯವಾಗಲಿಲ್ಲ ಆದರೆ ಅದೇ ಸಂದರ್ಭದಲ್ಲಿ ತೆಗೆಯಲಾದ ಕೃಷ್ಣ ಅವರ ಚಿತ್ರವನ್ನು ಹೋಲಿಸಿತು.

ಇಂದಿರಾ ಗಾಂಧಿಯವರ ಸೀರೆ ಒಂದೇ ಇದ್ದು, ಆ ದಿನಗಳಲ್ಲಿ ಕರ್ನಾಟಕ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದ ಕೃಷ್ಣ ಅವರೊಂದಿಗೆ ರಾಜಕುಮಾರ್ ಅವರೂ ಇದ್ದುದರಿಂದ, ಎರಡನೇ ಚಿತ್ರವನ್ನು ಪ್ರಾಯಶಃ ಅದೇ ಸಂದರ್ಭದಲ್ಲಿ ತೆಗೆಯಲಾಗಿರಬಹುದು.

ಸಂಗೀತ ಕಾರ್ಯಕ್ರಮವೊಂದರಲ್ಲಿ ತೆಗೆದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಛಾಯಾಚಿತ್ರದಲ್ಲಿ ಡಾ। ರಾಜಕುಮಾರ್ ಅವರು ಕಾಣಿಸಿಕೊಂಡಿದ್ದರು. ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರೊಂದಿಗೆ ಗುಂಪು ಚಿತ್ರದಲ್ಲಿ ವಾಸ್ತವಿಕವಾಗಿ ಕಂಡುಬಂದವರು ಡಾ। ರಾಜಕುಮಾರ್ ಅವರ ಕುಟುಂಬ ಸದಸ್ಯರು ಮತ್ತು ಕಲಾವಿದರು. ನರೇಂದ್ರ ಮೋದಿಯವರ ಚಿತ್ರವನ್ನು ತರಲು ಅವರ ಹಿಂದೆ ನಿಂತಿದ್ದ ವ್ಯಕ್ತಿಯನ್ನು ಫೋಟೋಶಾಪ್ ಮಾಡಲಾಗಿತ್ತು.

ಹೇಳಿಕೆ: ಕನ್ನಡದ ವರನಟ ಡಾ| ರಾಜಕುಮಾರ್ ಅವರೊಂದಿಗೆ ಇಂದಿರಾ ಗಾಂಧಿಯವರ ಹಳೆಯ ಕಪ್ಪು ಬಿಳುಪು ಗುಂಪು ಛಾಯಾಚಿತ್ರದಲ್ಲಿ  ಯುವ ನರೇಂದ್ರ ಮೋದಿ ಹಿಂದೆ ನಿಂತಿರುವುದು ತೋರಿಸಲಾಗಿದೆ.

ಕಡೆನುಡಿ: ಕನ್ನಡದ ನಟ  ಡಾ। ರಾಜಕುಮಾರ್ ಅವರ ಛಾಯಾಚಿತ್ರದಲ್ಲಿ ಮೋದಿಯವರ ಚಿತ್ರವನ್ನು ಸೇರಿಸಲಾಗಿದೆ. ಸಂಪೂರ್ಣ ಸುಳ್ಳು.

Rating: Totally False  –

ಇದನ್ನೂ ಓದಿ: ಹಮಾಸ್ ಇಸ್ರೇಲ್‌ ನೊಳಗೆ ಪ್ಯಾರಾಗ್ಲೈಡ್ ಮಾಡಿ ಆಟದ ಮೈದಾನವನ್ನು ಪ್ರವೇಶಿಸಿತು ಎಂದು ವೈರಲ್ ವೀಡಿಯೊ ಆರೋಪಿಸಿದೆ; ಸತ್ಯ ಪರಿಶೀಲನೆ

ಈ ದೀಪಾವಳಿಗೆ ಚೀನಾದ ಪಟಾಕಿಗಳನ್ನು ಖರೀದಿಸುವುದನ್ನು ತಪ್ಪಿಸಬೇಕೆಂದು ಗೃಹ ಸಚಿವಾಲಯವು ಜನರಿಗೆ ಹೇಳಿದೆಯೇ? ಸತ್ಯ ಪರಿಶೀಲನೆ]

 

Leave a Reply

Your email address will not be published. Required fields are marked *

*