Don't Miss

ಮುಂಗಾರು ಅಧಿವೇಶನಕ್ಕೆ ಹಾಜರಾಗದಿದ್ದಕ್ಕಾಗಿ ಈ ವೀಡಿಯೊದಲ್ಲಿ ಬಿಜೆಪಿ ಸಂಸದ ಅರುಣ್ ಗೋವಿಲ್ ರವರು ಮೋದಿಯವರನ್ನು ಟೀಕಿಸಿದ್ದಾರೆಯೇ ? ಸತ್ಯ ಪರಿಶೀಲನೆ

ಹೇಳಿಕೆ/Claim: ಮುಂಗಾರು ಅಧಿವೇಶನಕ್ಕೆ ಹಾಜರಾಗದಿದ್ದಕ್ಕಾಗಿ ಬಿಜೆಪಿ ಸಂಸದ ಅರುಣ್ ಗೋವಿಲ್ ರವರು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಿದ್ದಾರೆ ಎಂದು ವೀಡಿಯೊ ಹೇಳುತ್ತದೆ.

ಕಡೆನುಡಿ/Conclusion: ದಾರಿತಪ್ಪಿಸುವ ಹೇಳಿಕೆ. ಮೂಲ ವೀಡಿಯೊವನ್ನು ತಿರುಚಲಾಗಿದೆ. ಬಿಜೆಪಿ ಸಂಸದ ಅರುಣ್ ಗೋವಿಲ್ ರವರು ವಾಸ್ತವವಾಗಿ ವಿರೋಧ ಪಕ್ಷದ ಪ್ರತಿಭಟನೆಯನ್ನು ಟೀಕಿಸುತ್ತಿದ್ದರು ಮತ್ತು ಪ್ರಧಾನಿ ಮೋದಿ ಬಗ್ಗೆ ಮಾತಾಡಲಿಲ್ಲ.

ರೇಟಿಂಗ್/Rating: ದಾರಿತಪ್ಪಿಸುವ ಹೇಳಿಕೆ. —

********************************************************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ

****************************************************************

ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಹಾಜರಾಗದಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಬಿಜೆಪಿ ಸಂಸದ ಅರುಣ್ ಗೋವಿಲ್ ಟೀಕಿಸುವ ಇತ್ತೀಚಿನ ವೀಡಿಯೊ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊದ ಶೀರ್ಷಿಕೆ ಹೀಗಿದೆ: ಮೇಲ್ಭಾಗದಲ್ಲಿ, “मोदी पर जबरदत गर्मा ए भाजपा सांसद” ಮಧ್ಯಭಾಗದಲ್ಲಿ “संसद शुरू होते ही  विदेश भाग गए मोदी. भड़के BJP सांसद अण गोविल, बोले इन्हे शर्म नहीं” ಮತ್ತು ಕೆಳಭಾಗದಲ್ಲಿ “जनता को क्या मुँह दिखाएंगे मोदी” ಎಂದು ಬರೆಯಲಾಗಿದೆ.

ಇಂಗ್ಲಿಷ್‌ ಅನುವಾದ ಹೀಗಿದೆ: ಶೀರ್ಷಿಕೆಯ ಮೇಲ್ಭಾಗದಲ್ಲಿ ‘ಮೋದಿ ಮೇಲೆ ಬಲವಾಗಿ ಕಿಡಿಕಾರಿದ ಈ ಬಿಜೆಪಿ ಸಂಸದ’ ನಂತರ “ಸಂಸತ್ತು ಆರಂಭವಾದ ಕೂಡಲೆ ವಿದೇಶಕ್ಕೆ ಹೋದರು ಮೋದಿ. ಕೋಪಗೊಂಡ ಬಿಜೆಪಿ ಸಂಸದ ಅರುಣ್ ಗೋವಿಲ್, ಇವರಿಗೆ ಯಾವುದೇ ನಾಚಿಕೆ ಇಲ್ಲ ಎಂದರು’ ಮತ್ತು  ‘ಸಾರ್ವಜನಿಕರಿಗೆ ಹೇಗೆ ಮುಖ ತೋರಿಸುತ್ತಾರೆ ಮೋದಿ?’

ಈ ಪೋಸ್ಟ್ ಫೇಸ್‌ಬುಕ್‌ನಲ್ಲಿ ಸುಮಾರು 71,600 ಲೈಕ್‌ಗಳು ಮತ್ತು 11,000 ಶೇರ್‌ಗಳನ್ನು ಗಳಿಸಿದೆ.

ಇದೇ ರೀತಿಯ ಹೇಳಿಕೆಯನ್ನು ಮತ್ತೊಬ್ಬ X ಬಳಕೆದಾರರು ಹಂಚಿಕೊಂಡಿದ್ದಾರೆ, ಅವರ ಪೋಸ್ಟ್ 14,500 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಈ ಪೋಸ್ಟ್ ನ ಶೀರ್ಷಿಕೆ ಹೀಗಿದೆ – “बीजेपी पर भड़के बीजेपी सांसद अरुण गोविल संसद शुरू होते ही विदेश भाग जाते है मोदी”.

ಆನುವಾದಿತ ಪೋಸ್ಟ್ ಹೀಗಿದೆ: “ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು ಬಿಜೆಪಿ ಸಂಸದ ಅರುಣ್ ಗೋವಿಲ್. ಸಂಸತ್ತು ಆರಂಭವಾದ ತಕ್ಷಣ ವಿದೇಶಕ್ಕೆ ಓಡಿ ಹೋಗುತ್ತಾರೆ ಮೋದಿ.”

ಪೋಸ್ಟ್‌ ನ ಲಿಂಕ್ ಅನ್ನು ಇಲ್ಲಿ ನೋಡಿ.

 

ಸತ್ಯ ಪರಿಶೀಲನೆ:

ಅರುಣ್ ಗೋವಿಲ್ ರವರ ವೀಡಿಯೊ ಜೊತೆಗೆ ಮೋದಿಯವರ ಫೋಟೋ/ ವೀಡಿಯೊವನ್ನು ಪೋಸ್ಟ್ ಮಾಡಲಾದ ಈ ಹೇಳಿಕೆಯ ಸತ್ಯ ಪರಿಶೀಲನೆ ಮಾಡಲು ಡಿಜಿಟೈ ಇಂಡಿಯಾ ನಿರ್ಧರಿಸಿತು. ಗೋವಿಲ್ ರವರು ಮೋದಿಯವರ ಬಗ್ಗೆ ಮಾತನಾಡುತ್ತಿರುವಂತೆ ಕಾಣುವ ವೀಡಿಯೊದ ಒಂದು ತುಣುಕನ್ನು ಮಾತ್ರ ಪೋಸ್ಟ್ ಮಾಡಲಾಗಿದೆ. ವೀಕ್ಷಕರ ದಾರಿ ತಪ್ಪಿಸುವ ಸಲುವಾಗಿ ಮೋದಿಯವರ ಫೋಟೋ/ವೀಡಿಯೊವನ್ನು ಸೇರಿಸಲಾಗಿದೆ.

ಡಿಜಿಟೈ ಇಂಡಿಯಾ ತಂಡವು “ಅರುಣ್ ಗೋವಿಲ್ ಮಳೆಗಾಲ ಅಧಿವೇಶನ್” ಮತ್ತು “ಪ್ರಧಾನಿ ಮೋದಿಯನ್ನು ಟೀಕಿಸಿರುವ ಅರುಣ್ ಗೋವಿಲ್” ಎಂಬ ಕೀವರ್ಡ್ ಗಳನ್ನು ಬಳಸಿ ಹುಡುಕಾಟ ನಡೆಸಿದಾಗ, ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ವಿರೋಧ ಪಕ್ಷದ ಸದಸ್ಯರು (INDIA ಬ್ಲಾಕ್) ಪ್ರತಿಭಟಿಸಿದ ನಂತರ ಜುಲೈ 23, 2025 ರಂದು ನಡೆದ ಮೂಲ ಸಂದರ್ಶನವನ್ನು ತೋರಿಸುವ ಫಲಿತಾಂಶವು ನಮಗೆ ದೊರಕಿತು.

ವಿವಿಧ ಮಾಧ್ಯಮಗಳು ಈ ಪ್ರತಿಭಟನೆಯನ್ನು ದೃಢಪಡಿಸಿವೆ. ದ ಹಿಂದೂ ಪತ್ರಿಕೆಯು ಇಲ್ಲಿ ಪ್ರತಿಭಟನೆಗಳ ಕುರಿತು ವರದಿಯನ್ನು ಸಲ್ಲಿಸಿದೆ. ವಿರೋಧ ಪಕ್ಷಗಳಲ್ಲಿ ಟಿಎಂಸಿ, ಸಮಾಜವಾದಿ ಪಕ್ಷ, ಕಾಂಗ್ರೆಸ್, ಡಿಎಂಕೆ, ಶಿವಸೇನೆ ಮತ್ತು ಇತರ ಪಕ್ಷಗಳು ಸೇರಿವೆ. ಕೆಳಗೆ ಪ್ರತಿಭಟನೆ ನಡೆಸುತ್ತಿರುವ ವಿರೋಧ ಪಕ್ಷದ ಸಂಸದರ ಚಿತ್ರವನ್ನು ನೋಡಿ:

ಮಾಧ್ಯಮಗಳು ಬಿಜೆಪಿ ಸಂಸದ ಅರುಣ್ ಗೋವಿಲ್ ಅವರನ್ನು ಈ ಬಗ್ಗೆ ವಿಚಾರಿಸಿದಾಗ, ವಿರೋಧ ಪಕ್ಷಗಳು ಅವರನ್ನು ಇಲ್ಲಿಗೆ ಆಯ್ಕೆ ಮಾಡಿ ಕಳುಹಿಸಿದ ಜನರಿಗೆ ಏನು ಉತ್ತರ ನೀಡುತ್ತವೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಅವರು ಮಾಧ್ಯಮಗಳಿಗೆ ಉತ್ತರಿಸಿದರು. “ಅವರು ಇಲ್ಲಿಗೆ ಇದನ್ನು ಮಾಡಲು ಬರುತ್ತಾರೆಯೇ? ಇದು ನಾಚಿಕೆಗೇಡಿನ ಕೃತ್ಯ.” ಸಂಸತ್ತನ್ನು ನಡೆಸಲು ಸಾಕಷ್ಟು ಹಣ ಖರ್ಚಾಗುತ್ತದೆ ಮತ್ತು ಅವರಿಗೆ ಅದರ ಬಗ್ಗೆ ತಿಳಿದಿಲ್ಲ, ”ಎಂದು ಅವರು ಹೇಳಿದರು.

ANI ಟ್ವೀಟ್ ಮಾಡಿದ ವಿಸ್ತೃತ ಸಂದರ್ಶನದ ಲಿಂಕ್ ಅನ್ನು ಇಲ್ಲಿ ನೋಡಿ.

 

ಸಿಎನ್‌ಬಿಸಿ ಆವಾಜ್ ಕೂಡ ತನ್ನ ಯೂಟ್ಯೂಬ್ ವಾಹಿನಿಯಲ್ಲಿ ಅದೇ ಸಂದರ್ಶನವನ್ನು ಪೋಸ್ಟ್ ಮಾಡಿದೆ, ಅಲ್ಲಿ ಬಿಜೆಪಿ ಸಂಸದ ಅರುಣ್ ಗೋವಿಲ್ ರವರು ವಿರೋಧ ಪಕ್ಷದ ಸಂಸದರ ಗಲಾಟೆ ಮಾಡಿದ್ದಕ್ಕೆ ಟೀಕಿಸಿದ್ದಾರೆ. ಯೂಟ್ಯೂಬ್ ಶಾರ್ಟ್ ನ ಲಿಂಕ್ ಅನ್ನು ಇಲ್ಲಿ ಕಾಣಬಹುದು.

ಬಿಜೆಪಿ ಸಂಸದ ಅರುಣ್ ಗೋವಿಲ್ ರವರು ತಮ್ಮ ಪಕ್ಷದ ವಿರುದ್ಧ ಅಥವಾ ನರೇಂದ್ರ ಮೋದಿಯವರ ವಿರುದ್ಧ ಮಾತನಾಡಿಲ್ಲ. ವಾಸ್ತವವಾಗಿ, ಉಲ್ಲೇಖಿತ ವೀಡಿಯೊವನ್ನು ವಿಭಿನ್ನ ಸನ್ನಿವೇಶದಿಂದ ತೆಗೆದುಕೊಳ್ಳಲಾಗಿದೆ, ಅಲ್ಲಿ ಸಂಸದ ಅರುಣ್ ಗೋವಿಲ್ ಸಂಸತ್ತಿನಲ್ಲಿ ಅಡ್ಡಿಪಡಿಸಿದ್ದಕ್ಕಾಗಿ ಮತ್ತು ಪ್ರತಿಭಟನೆ ಮಾಡಿದ್ದಕ್ಕಾಗಿ ವಿರೋಧ ಪಕ್ಷವನ್ನು ಟೀಕಿಸುತ್ತಿದ್ದಾರೆ..

ಹೀಗಾಗಿ, ಬಿಜೆಪಿ ಸಂಸದ ಅರುಣ್ ಗೋವಿಲ್ ರವರು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಿದ್ದಾರೆ ಎಂಬ ಹೇಳಿಕೆ ಸುಳ್ಳು.

 

 

 

 

 

 

 

Leave a Reply

Your email address will not be published. Required fields are marked *

*