Don't Miss

ಲಡಾಖ್ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರ ಕಸ್ಟಡಿ ಮರಣದ ಬಗ್ಗೆ ಭಾರತೀಯ ಪತ್ರಕರ್ತೆ ಜೆಸ್ಸಿಕಾ ಗೋಯಲ್ ವರದಿ ಮಾಡಿದರೇ? ಸತ್ಯ ಪರಿಶೀಲನೆ

ಹೇಳಿಕೆ/Claim : ಇಂಡಿಯಾ ಟುಡೇ ಪತ್ರಕರ್ತೆ ಜೆಸ್ಸಿಕಾ ಗೋಯಲ್ ಅವರು ಲಡಾಖ್ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಪೊಲೀಸ್ ಕಸ್ಟಡಿಯಲ್ಲಿ ನಿಧನರಾದರು ಎಂದು ವರದಿ ಮಾಡುತ್ತಿರುವುದನ್ನು ವೈರಲ್ ಕ್ಲಿಪ್ ತೋರಿಸುತ್ತದೆ.

ಕಡೆನುಡಿ/Conclusion : : ಹೇಳಿಕೆ ಸುಳ್ಳು. ವೀಡಿಯೊದಲ್ಲಿನ ಧ್ವನಿ ಮುದ್ರೆಯನ್ನು AI ಮತ್ತು ಕೆಲವು ಕಲ್ಪಿತ ಮತ್ತು ಯಾದೃಚ್ಛಿಕ ದೃಶ್ಯಗಳ ಜೊತೆಗೆ ಮಾರ್ಪಡಿಸಲಾಗಿದೆ. ಅಧಿಕೃತ ದೃಶ್ಯಾವಳಿಗಳಲ್ಲಿ ಕರ್ನಾಟಕ ರಾಜ್ಯ ರಾಜಕೀಯದ ಬೇರೊಂದು ಘಟನೆಯನ್ನು ತೋರಿಸಲಾಗಿದೆ, ಸೋನಮ್ ವಾಂಗ್‌ಚುಕ್ ಅವರ ಸಾವಿನ ಬಗ್ಗೆ ಅಲ್ಲ.

ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು–Five rating

*******************************************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.


ಅಥವಾ ಕೆಳಗಿನ ಲೇಖನವನ್ನು ಓದಿ.
*******************************************************************************

ಸೋನಮ್ ವಾಂಗ್‌ಚುಕ್ ಮರಣದ ಬಗ್ಗೆ ವರದಿ ಮಾಡುತ್ತಿರುವ ಇಂಡಿಯಾ ಟುಡೇ ಪತ್ರಕರ್ತೆ ಜೆಸ್ಸಿಕಾ ಗೋಯಲ್ ಅವರ ಕ್ಲಿಪ್ ಅನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಈ ಕ್ಲಿಪ್ ಅನ್ನು X ಬಳಕೆದಾರ ‘Mushk_0’ ಈ ಮುಂದಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ-“ಸೋನಮ್ ವಾಂಗ್‌ಚುಕ್ ಅವರ ಕಾನೂನುಬಾಹಿರ ಹತ್ಯೆ ಮತ್ತು ಕೇಂದ್ರ ಸಂಸ್ಥೆಗಳು ಸುದ್ದಿಯನ್ನು ನಿಗ್ರಹಿಸಲು ಪ್ರಯತ್ನಿಸುತ್ತಿರುವುದು ಅನುಮಾನವನ್ನು ಹುಟ್ಟುಹಾಕುತ್ತದೆ. ಲಡಾಖ್‌ ನಲ್ಲಿ ಪರಿಸ್ಥಿತಿ ಕಠೋರವಾಗಿದೆ, ಈ ಮೋದಿ ಆಡಳಿತವು ವಿವೇಕದ ಎಲ್ಲಾ ಮಿತಿಗಳನ್ನು ಮೀರಿದೆ”. ಪೋಸ್ಟ್ ಅನ್ನು ಕೆಳಗೆ ನೋಡಿ

ಪೋಸ್ಟ್‌ನಲ್ಲಿ ಇಂಡಿಯಾ ಟುಡೇ ಟಿವಿ ವಾಹಿನಿಯದ್ದು ಎನ್ನಲಾಗಿರುವ 1:21 ನಿಮಿಷಗಳ ವೀಡಿಯೊ ಸೇರಿದೆ, ಇದರಲ್ಲಿ ಪತ್ರಕರ್ತೆ ಜೆಸ್ಸಿಕಾ ಗೋಯಲ್ ರವರು ಜೋಧ್‌ಪುರ ಕೇಂದ್ರ ಕಾರಾಗಾರದಲ್ಲಿ “ವೈದ್ಯಕೀಯ ಕುಸಿತ” ಅಥವಾ “ಕಸ್ಟಡಿ ಹತ್ಯೆ” ಇಂದಾಗಿ ಉಂಟಾದ ವಾಂಗ್‌ಚುಕ್ ಅವರ ಮರಣದ ಕುರಿತು ವರದಿ ಮಾಡಿದ್ದಾರೆ ಎಂದು ಚಿತ್ರಿಸಲಾಗಿದೆ.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಲಡಾಖ್ ರಾಜ್ಯತ್ವಕ್ಕಾಗಿ ನಡೆದ ಪ್ರತಿಭಟನೆಗಳ ನಂತರ, ವಾಂಗ್‌ಚುಕ್ ರವರನ್ನು ಸೆಪ್ಟೆಂಬರ್ 26, 2025 ರಿಂದ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿಯಲ್ಲಿ ಬಂಧಿಸಲಾಯಿತು ಮತ್ತು ಅವರು ಜೀವಂತವಾಗಿದ್ದಾರೆ. ಅವರ ಸಾವಿನ ಬಗ್ಗೆ ಯಾವುದೇ ವಿಶ್ವಾಸಾರ್ಹ ವರದಿಗಳು ಅಥವಾ ಸರ್ಕಾರ ದೃಢೀಕರಣವನ್ನು ಮಾಡಲಾಗಿಲ್ಲ ಮತ್ತು ವೀಡಿಯೊ ಡೀಪ್ ಫೇಕ್ ವೀಡಿಯೊ ಆಗಿದೆ.

ನಾವು ಮೊದಲು ವೀಡಿಯೊವನ್ನು ನೋಡಿದಾಗ “ಸೋನಮ್ ವಾಂಗ್‌ಚುಕ್ ಜೈಲಿನೊಳಗೆ ಕುಸಿದು ಬಿದ್ದರು ಮತ್ತು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾದ ಕೆಲವೇ ನಿಮಿಷಗಳಲ್ಲಿ ಅವರು ಸಾವನ್ನಪ್ಪಿದರು ಎಂದು ಮೂಲಗಳು ಹೇಳುತ್ತವೆ. ಜೈಲು ಆಡಳಿತವು ನಿಯಮಿತ ಕಾರ್ಯವಿಧಾನವನ್ನು ತಿಳಿಸುತ್ತದೆ ಆದರೆ ಕಥೆ ಹೆಚ್ಚೆಚ್ಚು ರಹಸ್ಯಮಯವಾಗುತ್ತಿದೆ. ಅವರ ಕುಟುಂಬವು ಮಾಹಿತಿ ಒದಗಿಸುವಿಕೆಯಲ್ಲಿ ತಡವಾಯಿತೆಂದು, ಗಾಯದ ಗುರುತುಗಳಿರುವ ಸಾಧ್ಯತೆಯನ್ನು ಮತ್ತು ದೇಹವನ್ನು ತಕ್ಷಣ ನೋಡಲು ಬಿಡಲಾಗಲಿಲ್ಲ ಎಂದು ಆರೋಪಿಸಿದೆ” ಎಂಬಂತಹ ಹೇಳಿಕೆಗಳನ್ನು ಗಮನಿಸಿದೆವು. ಇದಲ್ಲದೆ, “ಕೇಂದ್ರ ಗೃಹ ಸಚಿವಾಲಯ ವರದಿಗಳನ್ನು ಆದೇಶಿಸಿದೆ. ಏಜೆನ್ಸಿಗಳು CCTV ಮತ್ತು ವೈದ್ಯಕೀಯ ದಾಖಲೆಗಳಿಗಾಗಿ ತಡಕಾಡುತ್ತಿವೆ…” ಎಂದು ಕೂಡ ವೀಡಿಯೊ ಹೇಳುತ್ತದೆ.

ಇದರ ನಂತರ, ಹೇಳಿಕೆಯ ಕುರಿತು ವರದಿಗಳನ್ನು ಪಡೆಯಲು ನಾವು ಮೇಲಿನ ವಿಷಯದಿಂದ ವಿವಿಧ ಪದಪುಂಜಗಳನ್ನು ಬಳಸಿ ಅಂತರ್ಜಾಲ ಹುಡುಕಾಟವನ್ನು ನಡೆಸಿದೆವು. ಆದಾಗ್ಯೂ, ತನಿಖೆಯನ್ನು ಪ್ರಾರಂಭಿಸುವ ಬಗ್ಗೆ ಅಥವಾ CCTV ಅಥವಾ ವೈದ್ಯಕೀಯ ದಾಖಲೆಗಳಿಗಾಗಿ ಮಾಧ್ಯಮಗಳು ತಡಕಾಡುತ್ತಿರುವ ಬಗ್ಗೆ ಯಾವುದೇ ವಿಶ್ವಾಸಾರ್ಹ ಮಾಧ್ಯಮಗಳು ಅಥವಾ ಕೇಂದ್ರ ಗೃಹ ಸಚಿವಾಲಯದ ಯಾವುದೇ ವರದಿಗಳು ನಮಗೆ ಸಿಗಲಿಲ್ಲ.

ಮುಂದೆ, ವೀಡಿಯೊದ ಆರಂಭದಲ್ಲಿ ನಾವು ವಿವಿಧ ಕೀಫ್ರೇಮ್‌ಗಳಿಂದ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ನವೆಂಬರ್ 26, 2025 ರಂದು ಇಂಡಿಯಾ ಟುಡೇ ತಮ್ಮ ಅಧಿಕೃತ X ಖಾತೆಯಲ್ಲಿ ಪೋಸ್ಟ್ ಮಾಡಿದ ವಾಸ್ತವಿಕ ವೀಡಿಯೊ ತುಣುಕನ್ನು ನೋಡಿದೆವು. ಪೋಸ್ಟ್‌ನ ಶೀರ್ಷಿಕೆ ಹೀಗಿದೆ: “ಕರ್ನಾಟಕ ಸಿಎಂ ಓಟದ ಮಧ್ಯೆ, ಹೈಕಮಾಂಡ್‌ಗೆ ಡಿಕೆ ಶಿವಕುಮಾರ್ ರವರ ರಹಸ್ಯ ಸಂದೇಶ – ‘ಪದ ಶಕ್ತಿ ವಿಶ್ವ ಶಕ್ತಿ’ @sagayrajp ಹೆಚ್ಚಿನ ವಿವರಗಳೊಂದಿಗೆ…” ಪೋಸ್ಟ್ ಅನ್ನು ಇಲ್ಲಿ ನೋಡಿ.

ಅದೇ ಉಡುಗೆ, ಆಕೆಯ ಕೈಯಲ್ಲಿದ್ದ ರಿಮೋಟ್ ಮತ್ತು ಆಕೆಯ ಬಲಭಾಗದಲ್ಲಿರುವ ನೀರಿನ ಲೋಟದಿಂದ ಇದು ಅಧಿಕೃತ ದೃಶ್ಯಾವಳಿ ಎಂದು ನಾವು ಪರಿಶೀಲಿಸಿದೆವು. ಹೇಳಿಕೆಯಲ್ಲಿರುವ ವೈರಲ್ ವೀಡಿಯೊ ಕೆಳಗಿನ ಬ್ಯಾನರ್ ಅನ್ನು ಬದಲಾಯಿಸಿದೆ ಮತ್ತು ವೀಡಿಯೊದ ಸಂಪೂರ್ಣ ಸಂದರ್ಭವನ್ನು ಬದಲಾಯಿಸಿದೆ. ಇದಲ್ಲದೆ, ನಾವು ಜೆಸ್ಸಿಕಾ ಗೋಯೆಲ್ ಅವರ ಅಧಿಕೃತ X ಖಾತೆಯನ್ನು ಪರಿಶೀಲಿಸಿದಾಗ ಆಕೆ ಇಂಡಿಯಾ ಟುಡೇಯ ಈ ಪೋಸ್ಟ್ ಅನ್ನು ಮರುಟ್ವೀಟ್ ಮಾಡಿದ್ದನ್ನು ಗಮನಿಸಿದೆವು.

ಮೂಲ ವೀಡಿಯೊದಲ್ಲಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಕಾಂಗ್ರೆಸ್ ಹೈಕಮಾಂಡ್ ಎಡೆಗೆ ರಹಸ್ಯ ಬಾಣಗಳನ್ನು ಬೀಸುತ್ತಿರುವ ಸಮಯದಲ್ಲಿ ಪತ್ರಕರ್ತೆ ಜೆಸ್ಸಿಕಾ ಗೋಯೆಲ್ ಕರ್ನಾಟಕದ ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ರಾಜಕೀಯ ಕಾಳಗದ ಬಗ್ಗೆ ಮಾತನಾಡುತ್ತಿದ್ದಾರೆ. 2023ರ ಅಧಿಕಾರ ಹಂಚಿಕೆ ಒಪ್ಪಂದವನ್ನು ಉಲ್ಲೇಖಿಸಿ, ಡಿಕೆಶಿ “ವಿಶ್ವ ಶಕ್ತಿ ಎಂದರೆ ಪದ ಶಕ್ತಿ, ವಿಶ್ವದ ಅತಿದೊಡ್ಡ ಶಕ್ತಿ ಮಾತನ್ನು ಉಳಿಸಿಕೊಳ್ಳುವುದು” ಎಂದು ಒತ್ತಿ ಹೇಳಿದರು.

ಇದನ್ನು ಅನುಸರಿಸಿ, ನಾವು ಹೇಳಿಕೆಯಿಂದ ಧ್ವನಿಯನ್ನು ಹೊರತೆಗೆದು Undetectable AIನ ಆಡಿಯೊ ವಾಯ್ಸ್ ಡಿಟೆಕ್ಟರ್ ನಲ್ಲಿ ಅದನ್ನು ಪರೀಕ್ಷಿಸಿದೆವು. ಫಲಿತಾಂಶಗಳಲ್ಲಿ ಕೇವಲ 1% ಮಾತ್ರ ನಿಜ ಎಂದು ತಿಳಿದುಬಂತು, ಇದರಿಂದಾಗಿ ಧ್ವನಿಯನ್ನು AI ಮೂಲಕ ಉತ್ಪಾದಿಸಲಾಗಿದೆ ಎಂದು ಸಾಬೀತಾಗುತ್ತದೆ. ಫಲಿತಾಂಶಗಳನ್ನು ಕೆಳಗೆ ವೀಕ್ಷಿಸಿ –

ದ ಹಿಂದೂ ಪ್ರಕಟಿಸಿದ ಒಂದು ವರದಿ ಸೇರಿದಂತೆ ಹಲವಾರು ವರದಿಗಳು ಸೋನಮ್ ವಾಂಗ್‌ಚುಕ್ ಅವರ NSA ಬಂಧನದ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆಗಳನ್ನು ಡಿಸೆಂಬರ್ 8, 2025 ಕ್ಕೆ ಮುಂದೂಡಿದೆ ಎಂದು ಬರೆದಿದ್ದವು. ಯಾವುದೇ ಅಧಿಕೃತ ಪ್ರಕಟಣೆಗಳು ಅಥವಾ ವೈದ್ಯಕೀಯ ದಾಖಲೆಗಳು ಪಾಲಿಸಿ ಕಸ್ಟಡಿಯಲ್ಲಿ ಸಾವು ಸಂಭವಿಸಿದೆ ಎಂದು ಸೂಚಿಸುವುದಿಲ್ಲ. ನ್ಯೂಸ್‌ಲಾಂಡ್ರಿ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಅವರನ್ನು ಸಂದರ್ಶಿಸಿತ್ತು, ಅವರು ಪತಿ ನಿಧನರಾಗಿದ್ದಾರೆಂದು ಉಲ್ಲೇಖಿಸಲಿಲ್ಲ, ಬದಲಿಗೆ ಇತರ ವಿಷಯಗಳೊಂದಿಗೆ ಲಡಾಖ್‌ನಲ್ಲಿ ಸ್ಥಿತಿಗತಿಗಳು ಸಾಮಾನ್ಯದಂತಾಗುವ ಸಮಸ್ಯೆಯ ಕುರಿತು ಮಾತನಾಡಿದರು.

ಆದ್ದರಿಂದ, ಈ ಹೇಳಿಕೆ ಸುಳ್ಳು.

******************************************************
ಇದನ್ನೂ ಓದಿ:

1000 ವರ್ಷ ಹಳೆಯ ವೆಸ್ಟ್‌ಮಿನಿಸ್ಟರ್ ಆಬಿಯಲ್ಲಿ ಬ್ರಿಟಿಷ್ ಧ್ವಜದ ಬದಲಿಗೆ ಪಾಕಿಸ್ತಾನದ ಧ್ವಜ ಬಂದಿದೆಯೇ? ಸತ್ಯ ಪರಿಶೀಲನೆ

ಈ ವೀಡಿಯೊದಲ್ಲಿ ಭಾರತೀಯ ಸೇನಾ ಮುಖ್ಯಸ್ಥರು ಸೋನಮ್ ವಾಂಗ್‌ಚುಕ್‌ಗೆ ಸಂತಾಪ ಸೂಚಿಸಿದರೇ? ಸತ್ಯ ಪರಿಶೀಲನೆ

 

Leave a Reply

Your email address will not be published. Required fields are marked *

*