ಹೇಳಿಕೆ/Claim :US ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿ ನಾಮನಿರ್ದೇಶಿತರ ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಕಡೆನುಡಿ/Conclusion : ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಕೆಲವರು ಟ್ರಂಪ್ ಅವರ ನಾಮನಿರ್ದೇಶನ ಮಾಡಿದ್ದರು ಮತ್ತು ಅದನ್ನು ಸಾರ್ವಜನಿಕವಾಗಿ ಘೋಷಿಸಿದ್ದರು. ಆದರೆ ನಾರ್ವೇಜಿಯನ್ ನೊಬೆಲ್ ಸಮಿತಿಯಿಂದ ಸ್ವೀಕರಿಸಲ್ಪಟ್ಟ ನಾಮನಿರ್ದೇಶಿತರ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿಲ್ಲ, ನೀವು ಟ್ರಂಪ್ ಅವರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ನೋಡಲು ಸಾಧ್ಯವಿಲ್ಲ ಏಕೆಂದರೆ ಪಟ್ಟಿ 50 ವರ್ಷಗಳಿಂದ ಗೌಪ್ಯವಾಗಿದೆ.
ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು– ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
******************************************************
US ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿ ನಾಮನಿರ್ದೇಶಿತರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ‘GyanJaraHatk’ ಎಂಬ ದೃಢೀಕೃತ X ಬಳಕೆದಾರರು ಅಂತಹ ಪೋಸ್ಟ್ ಅನ್ನು ಮಾಡಿದ್ದು, “ನೊಬೆಲ್ ಶಾಂತಿ ಪ್ರಶಸ್ತಿ ನಾಮನಿರ್ದೇಶಿತರ ಪಟ್ಟಿಯಿಂದ ಟ್ರಂಪ್ ರವರನ್ನು ತೆಗೆದುಹಾಕಲಾಗಿದೆ: ಮೂಲ” ಎಂಬ ಶೀರ್ಷಿಕೆ ನೀಡಿದ್ದಾರೆ, ಅದರೊಂದಿಗೆ ನಗುವ ಎಮೋಜಿಗಳು ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಖದ ಮೇಲೆ ಕಣ್ಣೀರು ಸುರಿಯುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಟ್ರಂಪ್ ಅವರಿಗೆ 2025ರ ನೊಬೆಲ್ ಶಾಂತಿ ಪ್ರಶಸ್ತಿ ಸಿಗದಿದ್ದ ಸಂದರ್ಭದಲ್ಲಿ ಅವರನ್ನು ಅಪಹಾಸ್ಯ ಮಾಡುವಂತೆ ಕಾಣುತ್ತದೆ. ಈ ಪೋಸ್ಟ್ ಗೆ 10,400 ಕ್ಕೂ ಹೆಚ್ಚು ವೀಕ್ಷಣೆಗಳು ದೊರಕಿವೆ ಮತ್ತು ಇದನ್ನು ಕೆಳಗೆ ನೋಡಬಹುದು –
Trump removed from a list of Nobel Peace Prize nominees: source 😆😅😂🤣 pic.twitter.com/v5jzGun0cf
— Gyan Jara Hatke (@GyanJaraHatke) August 30, 2025

ಇಂಥದ್ದೇ ಹೇಳಿಕೆಗಳನ್ನು ಸೆಪ್ಟೆಂಬರ್ 2025ರಲ್ಲಿ ಮತ್ತು ಅಕ್ಟೋಬರ್ 2025ರಲ್ಲಿ ಮಾಡಲಾಗಿತ್ತು, ಅದನ್ನು ಕೆಳಗೆ ನೋಡಬಹುದು:
Back to squre one!! pic.twitter.com/5q0fdIEksh
— Chakravarty Sulibele (@astitvam) September 27, 2025
ಗಮನಾರ್ಹವಾಗಿ, 2025ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು “ವೆನೆಜುವೆಲಾದ ಜನರಿಗಾಗಿ ಪ್ರಜಾಪ್ರಭುತ್ವದ ಹಕ್ಕನ್ನು ಉತ್ತೇಜಿಸುವ ಆಕೆಯ ಅವಿಶ್ರಾಂತ ಕೆಲಸಕ್ಕಾಗಿ ಮತ್ತು ಸರ್ವಾಧಿಕಾರದಿಂದ ಪ್ರಜಾಪ್ರಭುತ್ವಕ್ಕೆ ನ್ಯಾಯಯುತ ಮತ್ತು ಶಾಂತಿಯುತ ಪರಿವರ್ತನೆಯನ್ನು ಸಾಧಿಸುವೆಡೆಗೆ ಆಕೆಯ ಹೋರಾಟಕ್ಕಾಗಿ” ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಕಾಡೊ ಅವರಿಗೆ ನೀಡಲಾಗಿತ್ತು.
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸಂಪೂರ್ಣವಾಗಿ ಸುಳ್ಳು ಎಂದು ಕಂಡುಕೊಂಡಿತು. ನಾಮನಿರ್ದೇಶನಗಳನ್ನು ಸಲ್ಲಿಸಿದ ನಂತರ ಅವುಗಳನ್ನು ನಾರ್ವೇಜಿಯನ್ ನೊಬೆಲ್ ಸಮಿತಿಯ ಪರಿಶೀಲನೆಗೆ ಕಳುಹಿಸಲಾಗುವುದರಿಂದ ಯಾವುದೇ ನಾಮನಿರ್ದೇಶಿತರ ಪಟ್ಟಿಯು ಸಾರ್ವಜನಿಕರಿಗೆ ಲಭ್ಯವಿಲ್ಲ ಮತ್ತು ಆ ದಾಖಲೆಗಳು 50 ವರ್ಷಗಳವರೆಗೆ ಗೌಪ್ಯವಾಗಿರುತ್ತದೆ. ಅದನ್ನು ರದ್ದುಗೊಳಿಸಲು ಅಥವಾ ಹಿಂತೆಗೆದುಕೊಳ್ಳಲು ಸಮಿತಿಯು ಯಾವುದೇ ಕ್ರಮಗಳನ್ನು ರೂಪಿಸಿಲ್ಲ.
ವಿವರಗಳು:
ಇನ್ನಷ್ಟು ತಿಳಿದುಕೊಳ್ಳಲು ನಾವು ಮೊದಲು “ನೊಬೆಲ್ ಶಾಂತಿ ಪ್ರಶಸ್ತಿ ಪಟ್ಟಿಯಿಂದ ನಾಮನಿರ್ದೇಶಿತರನ್ನು ತೆಗೆದುಹಾಕಬಹುದೇ?” ಎಂಬ ಪದಗಳೊಂದಿಗೆ ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. ಅಧಿಕೃತ ನೊಬೆಲ್ ಶಾಂತಿ ಪ್ರಶಸ್ತಿ ವೆಬ್‌ಸೈಟ್ ಪ್ರಕಾರ, “ನೊಬೆಲ್ ಪ್ರತಿಷ್ಠಾನದ ಕಾನೂನುಗಳ ಅನುಸಾರ ಸಾರ್ವಜನಿಕವಾಗಿ ಅಥವಾ ಖಾಸಗಿಯಾಗಿ 50 ವರ್ಷಗಳವರೆಗೆ ನಾಮನಿರ್ದೇಶನಗಳ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸುವುದನ್ನು ನಿರ್ಬಂಧಿಸಲಾಗಿದೆ.”
ಇದಲ್ಲದೆ, ಈ “ನಿರ್ಬಂಧವು ನಾಮನಿರ್ದೇಶಿತರು ಮತ್ತು ನಾಮನಿರ್ದೇಶನ ನೀಡುವವರಿಗೆ, ಹಾಗೆಯೇ ಬಹುಮಾನದ ಪ್ರಶಸ್ತಿಗೆ ಸಂಬಂಧಿಸಿದ ತನಿಖೆಗಳು ಮತ್ತು ಅಭಿಪ್ರಾಯಗಳಿಗೆ ಸಂಬಂಧಿಸಿದೆ.” ಆದ್ದರಿಂದ, ಸಮಿತಿಯು ಸ್ವತಃ ಯಾವುದೇ ನಾಮನಿರ್ದೇಶಿತರನ್ನು ಎಂದಿಗೂ ಸಾರ್ವಜನಿಕವಾಗಿ ಬಿಡುಗಡೆ ಮಾಡುವುದಿಲ್ಲ ಅಥವಾ ದೃಢೀಕರಿಸುವುದಿಲ್ಲ, ಆದರೆ ಶಾಂತಿ ಪ್ರಶಸ್ತಿಗೆ ಟ್ರಂಪ್ ಅವರನ್ನು ನಾಮನಿರ್ದೇಶನ ಮಾಡಿದ ಕೆಲವರು ಅದನ್ನು ಸಾರ್ವಜನಿಕಗೊಳಿಸಬಹುದು. ಈ ವಿಭಾಗದ ಸ್ಕ್ರೀನ್‌ಶಾಟ್ ಕೆಳಗೆ ನೋಡಿ-

ಇದರ ನಂತರ, ಸಮಿತಿಯು ಸಲ್ಲಿಕೆಯ ನಂತರ ಮಾನ್ಯವಾದ ನಾಮನಿರ್ದೇಶನಗಳನ್ನು ಹಿಂಪಡೆಯಲು, ತೆಗೆದುಹಾಕಲು ಅಥವಾ ಅನರ್ಹಗೊಳಿಸುವ ಕುರಿತು ಯಾವುದೇ ಮಾಹಿತಿ ಅಥವಾ ನಿಬಂಧನೆ ನಮಗೆ ಕಂಡುಬಂದಿಲ್ಲ. ಫೆಬ್ರವರಿ 1ರ ಗಡುವಿನ ನಂತರ, ಸಮಿತಿಯು ಪಟ್ಟಿಯನ್ನು ಪರಿಶೀಲಿಸುತ್ತದೆ, ಅದಾಗ ಸಮಿತಿಯು ಹೆಸರುಗಳನ್ನು ಸೇರಿಸಬಹುದು, ನಂತರ ಮೌಲ್ಯಮಾಪನಕ್ಕಾಗಿ ನಾಮನಿರ್ದೇಶನಗಳನ್ನು ಮುಚ್ಚುತ್ತದೆ. ಅಕ್ಟೋಬರ್‌ನಲ್ಲಿ, “ನೊಬೆಲ್ ಸಮಿತಿಯು ಬಹುಮತದ ಮತದ ಮೂಲಕ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡುತ್ತದೆ. ನಿರ್ಧಾರವು ಅಂತಿಮವಾಗಿದ್ದು ಇದಕ್ಕೆ ಮೇಲ್ಮನವಿ ಇಲ್ಲ.” ಇದರ ನಂತರ ಸಮಿತಿಯು ಅಭ್ಯರ್ಥಿಯನ್ನು ಅನರ್ಹಗೊಳಿಸಲು ಅನುಮತಿಸುವ ಯಾವುದೇ ಹೆಜ್ಜೆಯು ಆಯ್ಕೆ ಕಾರ್ಯವಿಧಾನದಲ್ಲಿ ಲಭ್ಯವಿಲ್ಲ. ಹೆಚ್ಚಿನ ಮಾಹಿತಿಯನ್ನು ಇಲ್ಲಿ ಕಾಣಬಹುದು.

ಸಮಿತಿಯು ನಾಮನಿರ್ದೇಶನ ತೆಗೆದುಹಾಕುವುದನ್ನು ಬೆಂಬಲಿಸಲಾಗದಿದ್ದರೂ, ನಾಮನಿರ್ದೇಶಿತರು ತಮ್ಮ ಸಲ್ಲಿಕೆಗಳನ್ನು ಹಿಂತೆಗೆದುಕೊಳ್ಳಬಹುದು. ಉದಾಹರಣೆಗೆ, ಜೂನ್ 2025 ರಲ್ಲಿ, ಉಕ್ರೇನಿನ ಸಂಸದ ಒಲೆಕ್ಸಾಂಡರ್ ಮೆರೆಜ್ಕೊ ರಷ್ಯಾದ ನೀತಿಯ ಕುರಿತಾದ ಕಾಳಜಿಗಳ ಕಾರಣ ಟ್ರಂಪ್ ಅವರ ನೊಬೆಲ್ ನಾಮನಿರ್ದೇಶನವನ್ನು ಹಿಂಪಡೆದಿದ್ದರು. ಮತ್ತೊಂದೆಡೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಪಾಕಿಸ್ತಾನದ ರಕ್ಷಣಾ ಪಡೆಗಳ ಮುಖ್ಯಸ್ಥ ಅಸಿಮ್ ಮುನೀರ್ ಮತ್ತಿತರರು ಟ್ರಂಪ್ ಅವರನ್ನು ಬೆಂಬಲಿಸಿದ್ದಾರೆ. ಆದ್ದರಿಂದ, ಅಭ್ಯರ್ಥಿಯ ಈ ನಾಮನಿರ್ದೇಶನಗಳು ಸಮಿತಿಯ ನಿರ್ಧಾರಗಳಲ್ಲ, ವೈಯಕ್ತಿಕ ಕ್ರಮಗಳಾಗಿವೆ ಮತ್ತು ಟ್ರಂಪ್ ಅವರನ್ನು ತೆಗೆದುಹಾಕಲಾಗಿದೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ಮಾರ್ಗಗಳಿಲ್ಲ. ಟ್ರಂಪ್ ಅವರ ನಾಮನಿರ್ದೇಶನ ನೀಡಿದ ಅಭ್ಯರ್ಥಿಗಳ ಪಟ್ಟಿಯನ್ನು ಕೆಳಗೆ ನೋಡಿ-

ಹೇಳಿಕೆಯಲ್ಲಿ ಹಂಚಿಕೊಳ್ಳಲಾದ ಚಿತ್ರದ ಬಗ್ಗೆ ಹೇಳುವುದಾದರೆ, ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ನಾವು ಅದನ್ನು AI ಡಿಟೆಕ್ಟರ್ ನಲ್ಲಿ ಪರಿಶೀಲಿಸಿದೆವು. ಈ ಚಿತ್ರವು 99.9% AI ಅಥವಾ ಡೀಪ್‌ಫೇಕ್ ಚಿತ್ರವೆಂದು ಫಲಿತಾಂಶಗಳು ಸಾಬೀತುಪಡಿಸಿವೆ. ಫಲಿತಾಂಶಗಳನ್ನು ಕೆಳಗೆ ನೋಡಿ-

ನಾರ್ವೇಜಿಯನ್ ನೊಬೆಲ್ ಸಮಿತಿಯು ವಿವರಿಸಿದಂತೆ ಅರ್ಹ ನಾಮನಿರ್ದೇಶಿತರು ಶಾಂತಿ ಪ್ರಶಸ್ತಿಗೆ ಅರ್ಹ ವ್ಯಕ್ತಿಗಳ ನಾಮನಿರ್ದೇಶನ ಮಾಡಬಹುದು ಮತ್ತು ಅವರ ನಾಮನಿರ್ದೇಶನಗಳನ್ನು ಸಾರ್ವಜನಿಕವಾಗಿ ಘೋಷಿಸಬಹುದು ಆದರೆ ಸಮಿತಿಯು ಸ್ವತಃ ನಾಮನಿರ್ದೇಶಿತರ ಹೆಸರುಗಳನ್ನು ಮಾಧ್ಯಮಗಳಿಗೆ ಅಥವಾ ಅಭ್ಯರ್ಥಿಗಳಿಗೆ ಘೋಷಿಸುವುದಿಲ್ಲ.
ಯಾವುದೇ ವರ್ಷದ ಪ್ರಶಸ್ತಿಯನ್ನು ಯಾರಿಗೆ ನೀಡಲಾಗುತ್ತದೆ ಎಂಬ ವಿಷಯದಲ್ಲಿ ಮೊದಲೇ ಹರಡುವ ಊಹಾಪೋಹಗಳಲ್ಲಿ ಮೇಲ್ಬರುವ ಹೆಸರುಗಳು ಕೇವಲ ಊಹೆಗಳಾಗಿರುತ್ತದೆ ಅಥವಾ ನಾಮನಿರ್ದೇಶನದ ಹಿಂದಿನ ವ್ಯಕ್ತಿಯು ಅಥವಾ ವ್ಯಕ್ತಿಗಳು ಹೊರಹಾಕಿದ ಮಾಹಿತಿಯಾಗಿರುತ್ತದೆ.
ಆದ್ದರಿಂದ, ಹೇಳಿಕೆ ಸಂಪೂರ್ಣವಾಗಿ ಸುಳ್ಳು.
******************************************************
ಇದನ್ನೂ ಓದಿ:
