ಹೇಳಿಕೆ/Claim:ನ್ಯೂಜಿಲೆಂಡ್‌ನ ಗೃಹ ಸಚಿವರು ಸನಾತನ ಧರ್ಮವನ್ನು ಅಳವಡಿಸಿಕೊಳ್ಳುತ್ತಿದ್ದಾರೆಂದು ತೋರಿಸುವ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಕಡೆನುಡಿ/Conclusion: ಸುಳ್ಳು. ನ್ಯೂಜಿಲೆಂಡ್‌ನ ಗೃಹ ಸಚಿವರು ಸನಾತನ ಧರ್ಮವನ್ನು ಅಳವಡಿಸಿಕೊಳ್ಳುತ್ತಿರುವುದನ್ನು ವೀಡಿಯೊ ತೋರಿಸುವುದಿಲ್ಲ, ಅದು ಬ್ರೆಂಟ್ ಗೋಬಲ್ ಎಂಬ ಅಮೇರಿಕದ ಯೋಗ ಶಿಕ್ಷಕರು ದೈನಂದಿನ ಪ್ರಾರ್ಥನೆಯಲ್ಲಿ ತೊಡಗಿರುವುದನ್ನು ತೋರಿಸುತ್ತದೆ. ರೇಟಿಂಗ್:ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು ವಿದೇಶಿ ವ್ಯಕ್ತಿಯೊಬ್ಬರು ಕೈಮುಗಿದು ಹಿಂದೂ ಆಚರಣೆಗಳನ್ನು ಪರಿಪಾಲಿಸುತ್ತಿರುವ ವೀಡಿಯೊವೊಂದು ಅದು ನ್ಯೂಜಿಲೆಂಡ್‌ನ ಗೃಹ ಸಚಿವರು ಸನಾತನ ಧರ್ಮವನ್ನು ಅಳವಡಿಸಿಕೊಳ್ಳುತ್ತಿರುವುದು ಎಂಬ ಹೇಳಿಕೆಯೊಂದಿಗೆ Xನಲ್ಲಿ (ಈ ಹಿಂದೆ ಟ್ವಿಟರ್) ವೈರಲ್ ಆಗುತ್ತಿದೆ. ಶೀರ್ಷಿಕೆಯು ಹೀಗಿದೆ: “ಸನಾತನದ ಶಕ್ತಿಯನ್ನು ...
Read More »Tag Archives: fake news
ಇಲ್ಲ, ಎಲಾನ್ ಮಸ್ಕ್ ‘ನಾನು ಶಿಶುಕಾಮಿ’ ಎಂದು Xನಲ್ಲಿ ತನ್ನ ಉತ್ತರವನ್ನು ಪೋಸ್ಟ್ ಮಾಡಿಲ್ಲ; ಸತ್ಯ ಪರಿಶೀಲನೆ
ಹೇಳಿಕೆ/Claim: ಎಲಾನ್ ಮಸ್ಕ್ ತಾನು ಶಿಶುಕಾಮಿ ಎಂದು ಹೇಳುವ ಟ್ವೀಟ್‌ಗೆ ಸಕಾರಾತ್ಮಕವಾಗಿ ಉತ್ತರಿಸಿದರು. ಕಡೆನುಡಿ/Conclusion: ಸುಳ್ಳು, ಎಲಾನ್ ಮಸ್ಕ್ ಅವರ X ಅಥವಾ Twitter ಖಾತೆಯಿಂದ ಅಂತಹ ಯಾವುದೇ ಉತ್ತರವನ್ನು ನೀಡಲಾಗಿಲ್ಲ. ರೇಟಿಂಗ್:ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು X ಸಾಮಾಜಿಕ ಜಾಲತಾಣದ ಮಾಲೀಕ ಎಲಾನ್ ಮಸ್ಕ್ ಅವರ ಪೋಸ್ಟ್ ನ ಸ್ಕ್ರೀನ್‌ಶಾಟ್‌ನೊಂದಿಗೆ ತೋರಿಸುವ ಹೇಳಿಕೆಯನ್ನು ಹೊಂದಿರುವ ಟ್ವೀಟ್ X ನಲ್ಲಿ ತಿರುಗಾಡುತ್ತಿದೆ. “ನೀವು ಶಿಶುಕಾಮಿ” ಎಂದು ಯಾರೋ ಸುಳ್ಳು ಹರಡುತ್ತಿರುವ ಬಗ್ಗೆ ಬಳಕೆದಾರರೊಬ್ಬರ ಎಚ್ಚರಿಕೆಯು ಇದಕ್ಕೆ ಕಾರಣವಾಗಿತ್ತು. ಶೀಘ್ರದಲ್ಲೇ ಮಾಸ್ಕ್ ಉದ್ದೇಶಪೂರ್ವಕವಾಗಿ ...
Read More »ಭಾರತದಲ್ಲಿ ಈಗ ಹೊಸ ರೈಲು ಹಳಿ ಯಂತ್ರಗಳನ್ನು ಬಳಸಲಾಗುತ್ತಿದೆ ಎಂದು ವೈರಲ್ ವೀಡಿಯೊ ಹೇಳುತ್ತದೆ; ಸತ್ಯ ಪರಿಶೀಲನೆ
ಹೇಳಿಕೆ/Claim: ಅರವತ್ತು ವರ್ಷ ಹಿಂದಿನ ಅವಧಿಗೆ ಹೋಲಿಸಿದರೆ ಈಗ ಭಾರತದ ತಂತ್ರಜ್ಞಾನವು ಬಹಳ ಉತ್ತಮವಾಗಿದೆ ಎಂಬ ಹೇಳಿಕೆಯೊಂದಿಗೆ ರೈಲು ಹಳಿ ಇರಿಸುವ ಯಂತ್ರದ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಕಡೆನುಡಿ/Conclusion: ಸುಳ್ಳು. ಭಾರತವು ಸುಧಾರಿತ ತಂತ್ರಜ್ಞಾನದೊಂದಿಗೆ ಹೊಸ ರೈಲುಮಾರ್ಗಗಳನ್ನು ಹೇಗೆ ನಿರ್ಮಿಸುತ್ತಿದೆ ಎಂಬುದನ್ನು ತೋರಿಸುವ ವೈರಲ್ ವೀಡಿಯೊ ವಾಸ್ತವವಾಗಿ ಚೈನಾ ಕಮ್ಯುನಿಕೇಷನ್ಸ್ ಕನ್ಸ್ಟ್ರಕ್ಷನ್ ಮಲೇಷ್ಯಾದಲ್ಲಿ ರೈಲು ಮಾರ್ಗವನ್ನು ನಿರ್ಮಿಸುತ್ತಿರುವ ವೀಡಿಯೊ. ರೇಟಿಂಗ್:ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು ಟ್ಯಾಂಪಿಂಗ್ ಯಂತ್ರವೊಂದು ಚಲಿಸುತ್ತಾ ರೈಲು ಸ್ಲೀಪರ್ ಗಳನ್ನು ಇರಿಸುವ ಒಂದು ಸಣ್ಣ ವೈರಲ್ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ, ...
Read More »ಯೋಗಿ ಆದಿತ್ಯನಾಥ್ 2017 ರಲ್ಲಿ ಮುಖ್ಯ ಮಂತ್ರಿಯಾಗುವ ಮೊದಲು ಉತ್ತರ ಪ್ರದೇಶದಲ್ಲಿ ಕೇವಲ 2 ವಿಮಾನ ನಿಲ್ದಾಣಗಳಿದ್ದವು? ಸತ್ಯ ಪರಿಶೀಲನೆ
ಹೇಳಿಕೆ/Claim: ಬ್ರಿಟಿಷರ ಕಾಲದಿಂದ 2017ರ ವರೆಗೆ ಉತ್ತರ ಪ್ರದೇಶದಲ್ಲಿ ಕೇವಲ ಎರಡು ವಿಮಾನ ನಿಲ್ದಾಣಗಳಿದ್ದವು. ಯೋಗಿ ಆದಿತ್ಯನಾಥ್ ರವರಡಿಯಲ್ಲಿ ಈಗ 24 ವಿಮಾನ ನಿಲ್ದಾಣಗಳಿವೆ. ಕಡೆನುಡಿ/Conclusion: 2017 ರ ಮೊದಲು, ದಾಖಲೆಯನುಸಾರ ಉತ್ತರ ಪ್ರದೇಶದಲ್ಲಿ 6 ವಿಮಾನ ನಿಲ್ದಾಣಗಳಿದ್ದವು ಮತ್ತು ಪ್ರಸ್ತುತ 10 ಕಾರ್ಯಾಚರಣೆಯಲ್ಲಿರುವ ವಿಮಾನ ನಿಲ್ದಾಣಗಳಿವೆ ಹಾಗೂ 14 ನಿರ್ಮಾಣ ಹಂತದಲ್ಲಿವೆ ಎಂದು ವಿಮಾನಯಾನ ಸಚಿವರ ಪ್ರಕಟಣೆ ತಿಳಿಸಿದೆ. ರೇಟಿಂಗ್: ದಾರಿತಪ್ಪಿಸುವ ಸುದ್ದಿ— ಸತ್ಯ ಪರಿಶೀಲನೆ ವಿವರಗಳು ಯೋಗಿ ಆದಿತ್ಯನಾಥ್ ರವರು 2017 ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಉತ್ತರ ಪ್ರದೇಶದಲ್ಲಿ ...
Read More »‘ಹೆಚ್ಚು ಹಳದಿ’ಯಾಗಿರುವ ಅರಿಶಿನವು ಸೀಸದ ಕ್ರೋಮೇಟ್ ಅನ್ನು ಹೊಂದಿರುತ್ತದೆ ಎಂದು ವೈರಲ್ ಸಂದೇಶವು ಹೇಳುತ್ತದೆ; ಸತ್ಯ ಪರಿಶೀಲನೆ
ಹೇಳಿಕೆ/Claim: ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿರುವ ‘ಹೆಚ್ಚು ಹಳದಿಯಾಗಿರುವ’ ಅರಿಶಿನವು ಸೀಸದ ಕ್ರೋಮೇಟ್ ಪುಡಿಯನ್ನು ಹೊಂದಿರುತ್ತದೆ ಎಂದು ವೈರಲ್ ಸಂದೇಶವೊಂದು ಹೇಳುತ್ತದೆ. ಕಡೆನುಡಿ/Conclusion: ಅರಿಶಿನವು ಹೆಚ್ಚು ಹಳದಿಯಾಗಿ ಕಾಣುವಂತೆ ಮಾಡಲು ಅದರಲ್ಲಿ ಸೀಸದ ಕ್ರೋಮೇಟ್ ಅನ್ನು ಬಳಸಲಾಗುತ್ತದೆ. ಅರಿಶಿನದಲ್ಲಿ ಸೀಸದ ಕ್ರೋಮೇಟ್ ಇರಬಾರದು ಎಂದು FSSAI ಹೇಳಿದೆ. ಅಷ್ಟೇ ಅಲ್ಲದೆ, ಅರಿಶಿನದಲ್ಲಿ ಕಲಬೆರಕೆಯನ್ನು ಪರೀಕ್ಷಿಸಲು ಜನರು ತಮ್ಮ ಮನೆಗಳಲ್ಲಿ ನಡೆಸಬಹುದಾದ ಸರಳ ಪರೀಕ್ಷೆಗಳನ್ನು ಸಹ ಸಂಸ್ಥೆಯು ಬಹಿರಂಗಪಡಿಸಿದೆ. ಮಾರುಕಟ್ಟೆಯಲ್ಲಿ ಪ್ರಮಾಣೀಕೃತ ಮತ್ತು ಅಧಿಕೃತ ಮಾರಾಟಗಾರರಿಂದ ಅರಿಶಿನವನ್ನು ಖರೀದಿಸಲು ಸಲಹೆ ನೀಡಲಾಗಿದೆ. ರೇಟಿಂಗ್: ನಿಜ — ಸತ್ಯ ಪರಿಶೀಲನೆ ವಿವರಗಳು ...
Read More »ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡುತ್ತಿದೆಯೇ? ಹಳೆಯ ಹೇಳಿಕೆಯ ಮರುಕಳಿಕೆ; ಸತ್ಯ ಪರಿಶೀಲನೆ
ಹೇಳಿಕೆ/Claim: ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಸರ್ಕಾರವು ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡುತ್ತಿದೆ ಎಂದು ವೈರಲ್ ಸಂದೇಶವೊಂದು ಹೇಳುತ್ತದೆ. ಕಡೆನುಡಿ/Conclusion:ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಕೇಂದ್ರ ಸರ್ಕಾರವು ಈವರೆಗೆ ತಮ್ಮ ಯಾವುದೇ ಯೋಜನೆಯಡಿಯಲ್ಲಿ ಇಂತಹ ಯಾವುದೇ ಸ್ಕೀಮನ್ನು ಪ್ರಾರಂಭಿಸಿಲ್ಲ. ರೇಟಿಂಗ್: ಸಂಪೂರ್ಣವಾಗಿ ಸುಳ್ಳು. ಸತ್ಯ ಪರಿಶೀಲನೆ ವಿವರಗಳು ಸರ್ಕಾರವು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಗಳನ್ನು ನೀಡುತ್ತಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಸಲುವಾಗಿ ಸರ್ಕಾರವು ಉಚಿತ ಯೋಜನೆಯನ್ನು ಪ್ರಾರಂಭಿಸಿದೆ ಎಂದು ವೈರಲ್ ಸಂದೇಶವು ಹೇಳುತ್ತದೆ. ವೈರಲ್ ಸಂದೇಶವು ಹೀಗಿದೆ: ...
Read More »ರತನ್ ಟಾಟಾರವರು ಇತ್ತೀಚೆಗೆ ಗುಂಡು ತಡೆದುಕೊಳ್ಳುವ ಮತ್ತು ಬಾಂಬ್ ತಡೆದುಕೊಳ್ಳುವ ಬಸ್ಸುಗಳನ್ನು ಭಾರತೀಯ ಸೇನೆಗೆ ಉಡುಗೊರೆಯಾಗಿ ನೀಡಿದ್ದಾರೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಟಾಟಾ ಗ್ರೂಪ್ ಅಧ್ಯಕ್ಷರಾದ ರತನ್ ಟಾಟಾರವರು ಇತ್ತೀಚೆಗೆ ಭಾರತೀಯ ಸೇನೆಗೆ ಗುಂಡು ತಡೆದುಕೊಳ್ಳುವಂತಹ ಮತ್ತು ಬಾಂಬ್ ತಡೆದುಕೊಳ್ಳುವಂತಹ ಬಸ್ ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಕಡೆನುಡಿ/Conclusion:ಸುಳ್ಳು. ಈ ಬಸ್‌ಗಳನ್ನು ಮಿಶ್ರಾ ಧಾತು ನಿಗಮ್ ಲಿಮಿಟೆಡ್ (MIDHANI) 2017 ರಲ್ಲಿ CRPF ಗೆ ನೀಡಿತ್ತು. ರೇಟಿಂಗ್:ತಪ್ಪು ನಿರೂಪಣೆ ಸತ್ಯ ಪರಿಶೀಲನೆ ವಿವರಗಳು ಟಾಟಾ ಗ್ರೂಪ್‌ನ ಅಧ್ಯಕ್ಷರಾದ ರತನ್ ಟಾಟಾರವರ ಚಿತ್ರ ಮತ್ತು ಅದರೊಂದಿಗೆ ಒಂದು ಶಸ್ತ್ರಸಜ್ಜಿತ ಬಸ್ಸಿನ ಮತ್ತೊಂದು ಚಿತ್ರವನ್ನು ತೋರಿಸುವ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿದೆ. ತನ್ನ ಪರೋಪಕಾರಿ ಚಟುವಟಿಕೆಗಳಿಗಾಗಿ ಹೆಸರುವಾಸಿಯಾದ ಈ ...
Read More »ಈ ಸಂಪೂರ್ಣ ವೀಡಿಯೊ ಕೇರಳದ ದೇವಸ್ಥಾನವೊಂದರ ಪ್ರಸಿದ್ಧ ಸಸ್ಯಾಹಾರಿ ಮೊಸಳೆಯನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಕೇರಳದ ಕಾಸರಗೋಡು ಜಿಲ್ಲೆಯ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಕೆರೆಯಲ್ಲಿ ಬಾಬಿಯಾ ಎಂಬ ಸಸ್ಯಾಹಾರಿ ಮೊಸಳೆಯೊಂದು ವೈರಲ್ ವೀಡಿಯೊ ತೋರಿಸುತ್ತದೆ. ಮೊಸಳೆಯು ದೇವಸ್ಥಾನದ ನೈವೇದ್ಯವನ್ನು ಮಾತ್ರ ತಿನ್ನುತ್ತದೆ ಎಂದು ಹೇಳಲಾಗಿದೆ. ಕಡೆನುಡಿ/Conclusion: ಕೇರಳದ ಕಾಸರಗೋಡು ಜಿಲ್ಲೆಯ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಕೆರೆಯಲ್ಲಿ ವಾಸಿಸುವ ಸಸ್ಯಾಹಾರಿ ಮೊಸಳೆ ಬಾಬಿಯಾ ಬಗೆಗಿನ ವಿಷಯ ಸತ್ಯ. ಆದರೆ, ಬಾಬಿಯಾ 2022ರಲ್ಲಿ ಮರಣಹೊಂದಿತು ಮತ್ತು ಒಂದು ವರ್ಷದ ನಂತರ ಕೆರೆಯಲ್ಲಿ ಹೊಸ ಮೊಸಳೆಯೊಂದು ಕಾಣಿಸಿಕೊಂಡಿತು. ವೈರಲ್ ವೀಡಿಯೊದಲ್ಲಿ ಬಾಬಿಯಾ ಮೊಸಳೆಯ ಕೆಲವು ಚಿತ್ರಗಳನ್ನು ತೋರಿಸಲಾಗಿದೆ, ಆದರೆ ಎಲ್ಲವೂ ಬಾಬಿಯಾದ ...
Read More »ಮೊರ್ಬಿ ಸೇತುವೆ ಕುಸಿತದ ನಂತರ ತೆಲಂಗಾಣದಲ್ಲಿ ರಾಹುಲ್ ಗಾಂಧಿ ನೃತ್ಯ? ಸತ್ಯ ಪರಿಶೀಲನೆ
ಹೇಳಿಕೆ/Claim: ಗುಜರಾತ್‌ನಲ್ಲಿ ಮೋರ್ಬಿ ಸೇತುವೆ ಕುಸಿದ ನಂತರ ಕಾಂಗ್ರೆಸ್ ನಾಯಕರು ಸಂತೋಷದಿಂದ ನೃತ್ಯ ಮಾಡುತ್ತಿರುವುದು. ಕಡೆನುಡಿ/Conclusion: ಸುಳ್ಳು. ಇದು ಸೇತುವೆ ಕುಸಿತದ ದುರಂತದ ಮೊದಲು ಅಪ್‌ಲೋಡ್ ಮಾಡಿದ ಘಟನೆಯ ವೀಡಿಯೊ ಆಗಿತ್ತು. ರೇಟಿಂಗ್: ತಪ್ಪು ನಿರೂಪಣೆ— ಸತ್ಯ ಪರಿಶೀಲನೆ ವಿವರಗಳು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಕೆಸಿ ವೇಣುಗೋಪಾಲ್ ಅವರು ಸ್ಥಳೀಯರೊಂದಿಗೆ ಸೇರಿ ಕುಣಿಯುತ್ತಿರುವ ಒಂದು ವೀಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ, ಮೋರ್ಬಿಯಲ್ಲಿ ಸೇತುವೆ ಕುಸಿದ ನಂತರ ಅವರು ಸಂತಸದಿಂದ ಕುಣಿಯುತ್ತಿದ್ದರು ಎಂಬುದು ಈ ವೀಡಿಯೊದಲ್ಲಿ ನೀಡಲಾದ ಹೇಳಿಕೆ. Man who wants ...
Read More »ಇಲ್ಲ, ರಘುರಾಮ್ ರಾಜನ್ ಎಂದಿಗೂ ಮೋದಿಯ ಬಗ್ಗೆ ಯಾವುದೇ ಕಟುವಾದ ಟೀಕೆಗಳನ್ನು ಮಾಡಿಲ್ಲ; ಸತ್ಯ ಪರಿಶೀಲನೆ
ಹೇಳಿಕೆ/Claim: ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಮೋದಿ ಸರ್ಕಾರದ ನೀತಿಗಳ ಬಗ್ಗೆ ಕಟುವಾದ ಟೀಕೆಗಳನ್ನು ಮಾಡಿದ್ದಾರೆ. ಕಡೆನುಡಿ/Conclusion: ಸುಳ್ಳು, ಅವರು ಯಾವುದೇ ಸಾಮಾಜಿಕ ಮಾಧ್ಯಮದಲ್ಲಿ ಅಂತಹ ಟೀಕೆಗಳನ್ನು ಎಂದಿಗೂ ಮಾಡಿಲ್ಲ. ರೇಟಿಂಗ್: ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು: ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರದ್ದು ಎಂದು ಹೇಳಿಕೊಂಡು ಹಂಚಿಕೊಳ್ಳಲಾಗುತ್ತಿರುವ ಒಂದು ಟ್ವಿಟ್ಟರ್ ಪೋಸ್ಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಕೆಲವು ಟೀಕೆ ಟಿಪ್ಪಣಿಗಳನ್ನು ಮಾಡಲಾಗಿದೆ, ಮೋದಿ ಅವರು ತಮ್ಮ “ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ” ಭಾರತವನ್ನು 40 ...
Read More »