Don't Miss

Tag Archives: fake news

ರತನ್ ಟಾಟಾರವರು ಇತ್ತೀಚೆಗೆ ಗುಂಡು ತಡೆದುಕೊಳ್ಳುವ ಮತ್ತು ಬಾಂಬ್ ತಡೆದುಕೊಳ್ಳುವ ಬಸ್ಸುಗಳನ್ನು ಭಾರತೀಯ ಸೇನೆಗೆ ಉಡುಗೊರೆಯಾಗಿ ನೀಡಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಟಾಟಾ ಗ್ರೂಪ್ ಅಧ್ಯಕ್ಷರಾದ ರತನ್ ಟಾಟಾರವರು ಇತ್ತೀಚೆಗೆ ಭಾರತೀಯ ಸೇನೆಗೆ ಗುಂಡು ತಡೆದುಕೊಳ್ಳುವಂತಹ ಮತ್ತು ಬಾಂಬ್ ತಡೆದುಕೊಳ್ಳುವಂತಹ ಬಸ್ ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಕಡೆನುಡಿ/Conclusion:ಸುಳ್ಳು. ಈ ಬಸ್‌ಗಳನ್ನು ಮಿಶ್ರಾ ಧಾತು ನಿಗಮ್ ಲಿಮಿಟೆಡ್ (MIDHANI) 2017 ರಲ್ಲಿ CRPF ಗೆ ನೀಡಿತ್ತು. ರೇಟಿಂಗ್:ತಪ್ಪು ನಿರೂಪಣೆ ಸತ್ಯ ಪರಿಶೀಲನೆ ವಿವರಗಳು ಟಾಟಾ ಗ್ರೂಪ್‌ನ ಅಧ್ಯಕ್ಷರಾದ ರತನ್ ಟಾಟಾರವರ ಚಿತ್ರ ಮತ್ತು ಅದರೊಂದಿಗೆ ಒಂದು ಶಸ್ತ್ರಸಜ್ಜಿತ ಬಸ್ಸಿನ  ಮತ್ತೊಂದು ಚಿತ್ರವನ್ನು ತೋರಿಸುವ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿದೆ. ತನ್ನ ಪರೋಪಕಾರಿ ಚಟುವಟಿಕೆಗಳಿಗಾಗಿ ಹೆಸರುವಾಸಿಯಾದ ಈ ...

Read More »

ಈ ಸಂಪೂರ್ಣ ವೀಡಿಯೊ ಕೇರಳದ ದೇವಸ್ಥಾನವೊಂದರ ಪ್ರಸಿದ್ಧ ಸಸ್ಯಾಹಾರಿ ಮೊಸಳೆಯನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಕೇರಳದ ಕಾಸರಗೋಡು ಜಿಲ್ಲೆಯ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಕೆರೆಯಲ್ಲಿ ಬಾಬಿಯಾ ಎಂಬ ಸಸ್ಯಾಹಾರಿ ಮೊಸಳೆಯೊಂದು ವೈರಲ್  ವೀಡಿಯೊ ತೋರಿಸುತ್ತದೆ. ಮೊಸಳೆಯು ದೇವಸ್ಥಾನದ ನೈವೇದ್ಯವನ್ನು ಮಾತ್ರ ತಿನ್ನುತ್ತದೆ ಎಂದು ಹೇಳಲಾಗಿದೆ. ಕಡೆನುಡಿ/Conclusion: ಕೇರಳದ ಕಾಸರಗೋಡು ಜಿಲ್ಲೆಯ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಕೆರೆಯಲ್ಲಿ ವಾಸಿಸುವ ಸಸ್ಯಾಹಾರಿ ಮೊಸಳೆ ಬಾಬಿಯಾ ಬಗೆಗಿನ ವಿಷಯ ಸತ್ಯ. ಆದರೆ, ಬಾಬಿಯಾ 2022ರಲ್ಲಿ ಮರಣಹೊಂದಿತು ಮತ್ತು ಒಂದು ವರ್ಷದ ನಂತರ ಕೆರೆಯಲ್ಲಿ ಹೊಸ ಮೊಸಳೆಯೊಂದು ಕಾಣಿಸಿಕೊಂಡಿತು. ವೈರಲ್ ವೀಡಿಯೊದಲ್ಲಿ ಬಾಬಿಯಾ ಮೊಸಳೆಯ ಕೆಲವು ಚಿತ್ರಗಳನ್ನು ತೋರಿಸಲಾಗಿದೆ, ಆದರೆ ಎಲ್ಲವೂ ಬಾಬಿಯಾದ ...

Read More »

ಮೊರ್ಬಿ ಸೇತುವೆ ಕುಸಿತದ ನಂತರ ತೆಲಂಗಾಣದಲ್ಲಿ ರಾಹುಲ್ ಗಾಂಧಿ ನೃತ್ಯ? ಸತ್ಯ ಪರಿಶೀಲನೆ

ಹೇಳಿಕೆ/Claim: ಗುಜರಾತ್‌ನಲ್ಲಿ ಮೋರ್ಬಿ ಸೇತುವೆ ಕುಸಿದ ನಂತರ ಕಾಂಗ್ರೆಸ್ ನಾಯಕರು ಸಂತೋಷದಿಂದ ನೃತ್ಯ ಮಾಡುತ್ತಿರುವುದು. ಕಡೆನುಡಿ/Conclusion: ಸುಳ್ಳು. ಇದು ಸೇತುವೆ ಕುಸಿತದ ದುರಂತದ ಮೊದಲು ಅಪ್‌ಲೋಡ್ ಮಾಡಿದ ಘಟನೆಯ ವೀಡಿಯೊ ಆಗಿತ್ತು. ರೇಟಿಂಗ್: ತಪ್ಪು ನಿರೂಪಣೆ— ಸತ್ಯ ಪರಿಶೀಲನೆ ವಿವರಗಳು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಕೆಸಿ ವೇಣುಗೋಪಾಲ್ ಅವರು ಸ್ಥಳೀಯರೊಂದಿಗೆ ಸೇರಿ ಕುಣಿಯುತ್ತಿರುವ ಒಂದು ವೀಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ, ಮೋರ್ಬಿಯಲ್ಲಿ ಸೇತುವೆ ಕುಸಿದ ನಂತರ ಅವರು ಸಂತಸದಿಂದ ಕುಣಿಯುತ್ತಿದ್ದರು ಎಂಬುದು ಈ ವೀಡಿಯೊದಲ್ಲಿ ನೀಡಲಾದ ಹೇಳಿಕೆ. Man who wants ...

Read More »

ಇಲ್ಲ, ರಘುರಾಮ್ ರಾಜನ್ ಎಂದಿಗೂ ಮೋದಿಯ ಬಗ್ಗೆ ಯಾವುದೇ ಕಟುವಾದ ಟೀಕೆಗಳನ್ನು ಮಾಡಿಲ್ಲ; ಸತ್ಯ ಪರಿಶೀಲನೆ

ಹೇಳಿಕೆ/Claim: ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಮೋದಿ ಸರ್ಕಾರದ ನೀತಿಗಳ ಬಗ್ಗೆ ಕಟುವಾದ ಟೀಕೆಗಳನ್ನು ಮಾಡಿದ್ದಾರೆ. ಕಡೆನುಡಿ/Conclusion: ಸುಳ್ಳು, ಅವರು ಯಾವುದೇ ಸಾಮಾಜಿಕ ಮಾಧ್ಯಮದಲ್ಲಿ ಅಂತಹ ಟೀಕೆಗಳನ್ನು ಎಂದಿಗೂ ಮಾಡಿಲ್ಲ. ರೇಟಿಂಗ್: ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು: ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರದ್ದು ಎಂದು ಹೇಳಿಕೊಂಡು ಹಂಚಿಕೊಳ್ಳಲಾಗುತ್ತಿರುವ ಒಂದು ಟ್ವಿಟ್ಟರ್ ಪೋಸ್ಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಕೆಲವು ಟೀಕೆ ಟಿಪ್ಪಣಿಗಳನ್ನು ಮಾಡಲಾಗಿದೆ, ಮೋದಿ ಅವರು ತಮ್ಮ “ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ” ಭಾರತವನ್ನು 40 ...

Read More »

ಇಲ್ಲ, ಹೇಳಿಕೊಂಡಂತೆ ಈ ‘ಪಿತ್ರ್’ ನದಿಯು ವರ್ಷದಲ್ಲೊಮ್ಮೆ ಕಾಣಿಸಿಕೊಳ್ಳುವುದಿಲ್ಲ; ಸತ್ಯ ಪರಿಶೀಲನೆ

ಹೇಳಿಕೆ/Claim: ದಕ್ಷಿಣ ಭಾರತದಲ್ಲಿ ‘ಪಿತ್ರಿ ನದಿ’ ಪ್ರತಿ ವರ್ಷ ಪಿತೃ ಪಕ್ಷದ ರಾತ್ರಿ ಕಾಣಿಸಿಕೊಂಡು ನಂತರ ದೀಪಾವಳಿಯಂದು ಕಣ್ಮರೆಯಾಗುತ್ತದೆ ಎಂದು ವೀಡಿಯೊ ಹೇಳುತ್ತದೆ. ಕಡೆನುಡಿ/Conclusion: ಸುಳ್ಳು. ಇದು, ಕರ್ನಾಟಕದಿಂದ ತಮಿಳುನಾಡಿಗೆ ಬಿಡುಗಡೆ ಮಾಡಲಾದ ಕಾವೇರಿ ನೀರಿಗೆ ಸಂಬಂಧಿಸಿದ ವೀಡಿಯೊ ಕ್ಲಿಪ್. ರೇಟಿಂಗ್: ಸಂಪೂರ್ಣವಾಗಿ ಸುಳ್ಳು . Fact Check ವಿವರಗಳು: ಬಂಜರು ಭೂಮಿಯಲ್ಲಿ ನದಿ ನೀರು ಹರಿಯುತ್ತಿರುವುದನ್ನು ತೋರಿಸುವ ವೀಡಿಯೊವನ್ನು ವಾಟ್ಸಾಪ್ನಲ್ಲಿ ಹಂಚಿಕೊಳ್ಳಲಾಗುತ್ತಿತ್ತು, ಅದು ದಕ್ಷಿಣ ಭಾರತದ ‘ಪಿತ್ರಿ ನದಿ’ಗೆ ಸೇರಿದ್ದು ಎಂಬುದು ವೀಡಿಯೊದಲ್ಲಿನ ಹೇಳಿಕೆ. ಪ್ರತಿ ವರ್ಷ ಪಿತೃಪಕ್ಷದ ರಾತ್ರಿ ಈ ನದಿಯು ...

Read More »

‘ಪ್ರೀಮಿಯಂ’ ಉಪ್ಪಿನಲ್ಲಿ ಸೈನೈಡ್ ಇದೆಯೆಂಬ ಸುಳ್ಳು ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ; ಸತ್ಯ ಪರಿಶೀಲನೆ

ಹೇಳಿಕೆ/Claim:  ಭಾರತೀಯ ಪ್ರೀಮಿಯಂ ಉಪ್ಪುಗಳು ಸೈನೈಡ್ ಅನ್ನು ಹೊಂದಿವೆ ಎಂದು ವೈರಲ್ ಸುದ್ದಿ ವರದಿ ಹೇಳುತ್ತದೆ. ಕಡೆನುಡಿ/Conclusion: ಎಫ್.ಎಸ್.ಎಸ್.ಎ.ಐ ಸಂಸ್ಥೆಯು 1 ಕೆಜಿಗೆ 10 ಮಿಗ್ರಾಂ ವರೆಗಿನ ಪೊಟ್ಯಾಸಿಯಮ್ ಫೆರೋಸೈನೈಡ್ ಬಳಕೆಯನ್ನು ಅನುಮತಿಸುತ್ತದೆ. ಟಾಟಾ ಉಪ್ಪಿನಂತಹ ಉಪ್ಪಿನ ಬ್ರ್ಯಾಂಡ್‌ಗಳು ಪಿ.ಎಫ್‌.ಸಿ ಮಟ್ಟವನ್ನು ಪ್ರತಿ ಕಿಲೋಗೆ 3 ಮಿಗ್ರಾಂನಷ್ಟಕ್ಕೆ ಇರಿಸುತ್ತವೆ, ಇದು ಅನುಮತಿಸಲಾದ ಮಿತಿಯೊಳಗಿದ್ದು ಉಪ್ಪನ್ನು ಬಳಕೆಗೆ ಸುರಕ್ಷಿತವಾಗಿಸುತ್ತದೆ. ಪಿ.ಎಫ್.ಸಿ ಎಂಬುದು ಉಪ್ಪಿನ ಕಣಗಳಲ್ಲಿ ತೇವಾಂಶ ಉಳಿಯದಂತೆ ಕಾಪಾಡುವ ಒಂದು ಆಂಟಿ-ಕೇಕಿಂಗ್ ಏಜೆಂಟ್. ಟಾಟಾ ಕೆಮಿಕಲ್ಸ್ ಸಹ ಈ ಹೇಳಿಕೆಯನ್ನು ನಿರಾಕರಿಸಿದೆ ಮತ್ತು ತಾವು ಅನುಮೋದಿತ ...

Read More »

ರಾಜಸ್ಥಾನದ ಬೂಂದಿಯಲ್ಲಿ ರಾಹುಲ್ ಗಾಂಧಿಯವರ ‘ಭಾರತ್ ಮಾತಾ’ ಭಾಷಣವನ್ನು ಸಂದರ್ಭದಿಂದ ಹೊರತಾಗಿಸಿ ತಿರುಚಿರುವುದನ್ನು ತೋರಿಸುವ ವೀಡಿಯೊ ಕ್ಲಿಪ್ ; ಸತ್ಯ ಪರಿಶೀಲನೆ

Claim/ಹೇಳಿಕೆ: “ಈ ಭಾರತ ಮಾತಾ ಯಾರು” ಎಂದು ರಾಹುಲ್ ಗಾಂಧಿ ಕೇಳುತ್ತಿರುವುದನ್ನು ವೀಡಿಯೊ ಕ್ಲಿಪ್ ತೋರಿಸುತ್ತದೆ ಮತ್ತು ಅವರು “ಜಾರ್ಜ್ ಸೊರೊಸ್ ಕೈಗೊಂಬೆ” ಎಂದು ಆರೋಪಿಸುತ್ತದೆ. Conclusion/ಕಡೆನುಡಿ: ಭಾಷಣದ ಸಂಪೂರ್ಣ ಸಂದರ್ಭವನ್ನು ತಪ್ಪಾಗಿ ನಿರೂಪಿಸಲು ವೀಡಿಯೊ ಕ್ಲಿಪ್ ಅನ್ನು ಕತ್ತರಿಸಲಾಗಿದೆ. ರೇಟಿಂಗ್:ತಪ್ಪು ನಿರೂಪಣೆ Fact Check  ವಿವರಗಳು: ರಾಜಸ್ಥಾನದ ವಿಧಾನಸಭಾ ಚುನಾವಣೆಯ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾರತ ಮಾತೆ ಯಾರು ಎಂದು ಪ್ರಶ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊ ಕ್ಲಿಪ್ ಅನ್ನು ಇಲ್ಲಿ ನೋಡಿ: ये भारत माता ...

Read More »

ಇಲ್ಲ, ರಾಹುಲ್ ಗಾಂಧಿಯವರು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಉಚಿತ ಮೊಬೈಲ್ ರೀಚಾರ್ಜ್ ಅನ್ನು ಘೋಷಿಸಿಲ್ಲ

Claim/ಹೇಳಿಕೆ: ರಾಹುಲ್ ಗಾಂಧಿಯವರು ಎಲ್ಲಾ ಭಾರತೀಯ ಪ್ರಜೆಗಳಿಗೆ ‘3 ತಿಂಗಳ ಉಚಿತ ಮೊಬೈಲ್ ರೀಚಾರ್ಜ್’ ಕೊಡುಗೆಯನ್ನು ಘೋಷಿಸಿದ್ದಾರೆ. Conclusion/ಕಡೆನುಡಿ:2024ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ರಾಹುಲ್ ಗಾಂಧಿಯವರು ಯಾವುದೇ ಉಚಿತ ಮೊಬೈಲ್ ರೀಚಾರ್ಜ್ ಕೊಡುಗೆಯನ್ನು ನೀಡಿಲ್ಲ. ರೇಟಿಂಗ್: Misleading/ದಾರಿತಪ್ಪಿಸುವ ಮಾಹಿತಿ. Fact Check ವಿವರಗಳು: 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಸಾಧ್ಯತೆಗಳನ್ನು ಹೆಚ್ಚಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಎಲ್ಲಾ ಭಾರತೀಯ ಪ್ರಜೆಗಳಿಗೆ ‘3 ತಿಂಗಳ ಉಚಿತ ಮೊಬೈಲ್ ರೀಚಾರ್ಜ್’ ಕೊಡುಗೆಯನ್ನು ಘೋಷಿಸಿದ್ದಾರೆ ಎಂಬ ಹೇಳಿಕೆಯನ್ನು ಹೊಂದಿರುವ ಒಂದು ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ...

Read More »

ಈ ವೈರಲ್ ವೀಡಿಯೊ ಪ್ಲಾಸ್ಟಿಕ್ನಿಂದ ಗೋಧಿಯ ಉತ್ಪಾದನೆಯನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

Claim/ಹೇಳಿಕೆ: ಫ್ಯಾಕ್ಟರಿಯು ಪ್ಲಾಸ್ಟಿಕ್‌ನಿಂದ ಗೋಧಿ ಧಾನ್ಯಗಳನ್ನು ತಯಾರಿಸುತ್ತಿರುವುದನ್ನು ಒಂದು ವೈರಲ್ ವೀಡಿಯೊ ತೋರಿಸುತ್ತದೆ. Conclusion/ಕಡೆನುಡಿ: ಈ ವೈರಲ್ ವೀಡಿಯೊ ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡುವಂತಹ ಉತ್ಪಾದನಾ ಕಂಪನಿಯೊಂದನ್ನು ತೋರಿಸುತ್ತದೆ. ಪ್ಲಾಸ್ಟಿಕ್ ಅನ್ನು ಸಣ್ಣ ತುಂಡುಗಳಾಗಿ ವಿಭಜಿಸಿ, ತೊಳೆದು, ನೂಲನ್ನಾಗಿ ಮಾಡಿ, ನಂತರ ಸಣ್ಣ ಗುಳಿಗೆಗಳನ್ನು ರೂಪಿಸಲು ಪುಡಿಮಾಡಲಾಗುತ್ತದೆ. ಈ ಗುಳಿಗೆಗಳನ್ನು ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ ಮತ್ತು ಅವು ಮಾನವ ಬಳಕೆಗಾಗಿ ಅಲ್ಲ. ಅವು ಆಹಾರ ಧಾನ್ಯಗಳೂ ಸಹ ಅಲ್ಲ. ರೇಟಿಂಗ್: ಶುದ್ಧ ಸುಳ್ಳು. Fact check  ವಿವರಗಳು: ಒಂದು ವೈರಲ್ ವೀಡಿಯೊ ಪ್ಲಾಸ್ಟಿಕ್‌ನಿಂದ ಗೋಧಿಯನ್ನು ಉತ್ಪಾದಿಸಲಾಗುತ್ತಿದೆ ಎನ್ನುವ ...

Read More »

ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ನಿಧನರಾದರೇ? ನಕಲಿ ಟ್ವಿಟರ್ ಖಾತೆಯ ಹೇಳಿಕೆ ವೈರಲ್ ಆಗಿದೆ; ಸತ್ಯ ಪರಿಶೀಲನೆ

ಈ ವರ್ಷದ ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿ ವಿಜೇತ ಕ್ಲಾಡಿಯಾ ಗೋಲ್ಡಿನ್ ರವರ ಹೆಸರಿನಲ್ಲಿರುವ X ಕಾರ್ಪ್ (ಈ ಹಿಂದೆ ಟ್ವಿಟರ್) ಹ್ಯಾಂಡಲ್ ನಿಂದ ಅಕ್ಟೋಬರ್ 10 ರಂದು ಅನುಭವಿ ಭಾರತೀಯ ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಅಮರ್ತ್ಯ ಸೇನ್ ರವರ ಮರಣದ ಬಗ್ಗೆ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿದವು. ಹೆಚ್ಚಿನ ಸುದ್ದಿವಾಹಿನಿಗಳು ಈ ಸುದ್ದಿಯನ್ನು ಎತ್ತಿಕೊಂಡವು ಮತ್ತು ಪರಿಶೀಲಿಸದ ಖಾತೆಯ ಒಂದು ಟ್ವೀಟ್‌ನ ಆಧಾರದ ಮೇಲೆ ಪಿಟಿಐ ಬ್ರೇಕಿಂಗ್ ನ್ಯೂಸ್ ಅನ್ನು ಸಹ ಹಾಕಿತು. ಕ್ಲಾಡಿಯಾ ಗೋಲ್ಡಿನ್ ರವರನ್ನು ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ...

Read More »