ಹೇಳಿಕೆ/Claim: ತೆರಿಗೆದಾರರಿಗೆ ಬಹುಮಾನರೂಪವಾಗಿ ಭಾರತ ಸರ್ಕಾರವು ‘PM ಕರದಾತ ಕಲ್ಯಾಣ ಯೋಜನೆ’ ಎಂಬ ಯೋಜನೆಯನ್ನು ಪ್ರಾರಂಭಿಸಿದೆ.
ಕಡೆನುಡಿ/Conclusion: ತೆರಿಗೆದಾರರಿಗೆ ಬಹುಮಾನರೂಪವಾಗಿ ಭಾರತ ಸರ್ಕಾರ ‘PM ಕರದಾತ ಕಲ್ಯಾಣ ಯೋಜನೆ’ ಎಂಬ ಯಾವುದೇ ಯೋಜನೆಯನ್ನು ಪ್ರಾರಂಭಿಸಿಲ್ಲ. ಈ ಹೇಳಿಕೆ ನೀಡಿರುವ ವೀಡಿಯೊ ಏಪ್ರಿಲ್ ಫೂಲ್ಸ್ ದಿನದಂದು ಮಾಡಲಾದ ತಮಾಷೆಯಾಗಿತ್ತು.
ರೇಟಿಂಗ್/Rating: ಸಂಪೂರ್ಣವಾಗಿ ತಪ್ಪು —
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
************************************************************************
‘PM ಕರದಾತಾ ಕಲ್ಯಾಣ ಯೋಜನಾ’ ಅಡಿಯಲ್ಲಿ ತೆರಿಗೆದಾರರಿಗೆ ದೊರಕುವ ಕೆಲವು ಅನುಕೂಲಗಳನ್ನು ವಿವರಿಸುವ ನಿರೂಪಕರ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗುತ್ತಿದೆ, ಇದು ಏಪ್ರಿಲ್ 01, 2025 ರಿಂದ ಜಾರಿಗೆ ಬರಲಿದೆ ಎಂದು ನಿರೂಪಕರ ಹೇಳಿಕೆ.
GOOD NEWS!!
For all TAX PAYERS. pic.twitter.com/GtrkRBK1pr— Bhupy (@singhbhupy7) April 7, 2025
ಇದೇ ಹೇಳಿಕೆಯನ್ನು PMYojanaWala.com ನಲ್ಲಿ “कारदाता कल्याण योजना इनकम टैक्स” (ಕರ್ದಾತಾ ಕಲ್ಯಾಣ ಯೋಜನೆ ಆದಾಯ ತೆರಿಗೆ) ಎಂಬ ಶೀರ್ಷಿಕೆಯಡಿಯಲ್ಲಿ ಲೇಖನ ರೂಪದಲ್ಲಿ ಪ್ರಕಟಿಸಲಾಗಿದೆ.
Kardata Kalyan Yojana Income Tax कारदाता कल्याण योजना इनकम टैक्स
ಇದೇ ಸುದ್ದಿಯನ್ನು ಮತ್ತೊಂದು ವೆಬ್‌ಸೈಟ್ ಇಲ್ಲಿ ಪ್ರಕಟಿಸಿದೆ.
FACT-CHECK
ನಮ್ಮ ವಾಟ್ಸಾಪ್ ಟಿಪ್ ಲೈನಿನಲ್ಲಿ ಬಂದ ಒಂದು ವಿನಂತಿಯ ಪತ್ರಿಯಾಗಿ, ಈ ಸುದ್ದಿಯು ಭಾರತ ಸರ್ಕಾರವನ್ನು ಒಳಗೊಂಡಿರುವುದರಿಂದ, ಡಿಜಿಟೈ ಇಂಡಿಯಾ ತಂಡವು ಈ ಸುದ್ದಿಯನ್ನು ದೃಢೀಕರಿಸುವ ಸಲುವಾಗಿ ಪರಿಶೀಲನೆ ನಡೆಸಿತು. ಸಾಮಾನ್ಯವಾಗಿ PIB ಮೊದಲ ಮೂಲವಾಗಿರುತ್ತದೆ ಆದ್ರೆ ಈ ಕುರಿತು PIBಯಿಂದ ಯಾವುದೇ ಪತ್ರಿಕಾ ಪ್ರಕಟಣೆ ಕಂಡುಬಂದಿಲ್ಲ. ಮುಂದೆ, ನಾವು ಸರ್ಕಾರದ ಪ್ರಕಟಣೆಗೆ ಸಂಬಂಧಿತ ಇತರ ಸಾಮಾಜಿಕ ಮಾಧ್ಯಮ ಲಿಂಕ್‌ಗಳನ್ನು ಹುಡುಕಲಾರಂಭಿಸಿದೆವು, ಆದರೆ ಯಾವುದೇ ಅಧಿಕೃತ ಮೂಲ ಸಿಗಲಿಲ್ಲ.
ಏಪ್ರಿಲ್ 1, 2025 ರಂದು ‘ಲೇಬರ್ ಲಾ ಅಡ್ವೈಸರ್’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಇನ್ಫ್ಲೂಯೆನ್ಸರ್ ಒಬ್ಬರು X ನಲ್ಲಿ ಪೋಸ್ಟ್ ಮಾಡಿದ ಮೂಲ ಪೋಸ್ಟ್ ಅನ್ನು ಪರಿಶೀಲಿಸಿದಾಗ, 0:32-ಸೆಕೆಂಡುಗಳ ಸಮಯಮುದ್ರೆಯಲ್ಲಿ ಪರದೆಯ ಬಲಮೇಲ್ಭಾಗದಲ್ಲಿ “ಹ್ಯಾಪಿ ಏಪ್ರಿಲ್ ಫೂಲ್ಸ್ ಡೇ” ಎನ್ನುವ ವಾಟರ್‌ಮಾರ್ಕ್ ಕಂಡುಬಂತು. ವೀಡಿಯೊದಲ್ಲಿ ಯೋಜನೆಯನ್ನು ವಿವರಿಸುವ ದಾಖಲೆಯನ್ನು ಸಹ ತೋರಿಸಲಾಗಿದೆ, ಅದರಲ್ಲಿ ಇದು “ಏಪ್ರಿಲ್ ಫೂಲ್ ದಿನದಂದು LLA ಪೋಸ್ಟ್ ಮಾಡಿದೆ” ಎಂಬ ಬರಹವನ್ನೂ ಕಾಣಬಹುದು, ಏಪ್ರಿಲ್ ಫೂಲ್ಸ್ ದಿನಕ್ಕಾಗಿ ತಮಾಷೆಯಾಗಿ ಬಳಸುವ ಉದ್ದೇಶದಿಂದಲೇ ಈ ವೀಡಿಯೊವನ್ನು ಮಾಡಲಾಗಿತ್ತು ಎಂದಿದು ಸ್ಪಷ್ಟಪಡಿಸುತ್ತದೆ.
ಆದ್ದರಿಂದ ಪೋಸ್ಟ್‌ನಲ್ಲಿ ನೀಡಲಾದ ಹೇಳಿಕೆ ಸುಳ್ಳು.
ಇದನ್ನೂ ಓದಿ:
ಈ ಚಿತ್ರವು ರಾಜಸ್ಥಾನದ 5000 ವರ್ಷ ಹಳೆಯ ದೇವಾಲಯವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ