ಹೇಳಿಕೆ/Claim :ಯುನೈಟೆಡ್ ಸ್ಟೇಟ್ಸ್ ಗ್ರೀನ್‌ಲ್ಯಾಂಡ್ ಅನ್ನು ಖರೀದಿಸಲು 700 ಬಿಲಿಯ ಡಾಲರ್ ಗಳ ನಗದು ಆಫರ್, ಜೊತೆಗೆ ಅದರ 57,000 ನಿವಾಸಿಗಳಿಗೆ $100,000 ಒಟ್ಟು ಮೊತ್ತದ ಪಾವತಿಗಳನ್ನು ಅಂತಿಮಗೊಳಿಸುತ್ತಿದೆ.
ಕಡೆನುಡಿ/Conclusion : ಹೇಳಿಕೆ ಸುಳ್ಳು. ಟ್ರಂಪ್ ಆಡಳಿತವು ಕಾರ್ಯತಾಂತ್ರಿಕ ಕಾರಣಗಳಿಗಾಗಿ ಗ್ರೀನ್‌ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಆಸಕ್ತಿ ವ್ಯಕ್ತಪಡಿಸಿದೆಯಾದರೂ, ನಿವಾಸಿಗಳಿಗೆ ನೀಡಲಾಗುವ ಪಾವತಿಗಳ ಕುರಿತು ಚರ್ಚೆಗಳು ಎಂದಿಗೂ ಸಾರ್ವಜನಿಕವಾಗಿ ಹೊರಬಂದಿಲ್ಲ.
ರೇಟಿಂಗ್/Rating : ಸುಳ್ಳು — ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
******************************************************
ಗ್ರೀನ್‌ಲ್ಯಾಂಡ್ ಅನ್ನು ಖರೀದಿಸಲು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಒಂದು ಒಪ್ಪಂದವನ್ನು ಅಂತಿಮಗೊಳಿಸುತ್ತಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘_MAGA_NEWS_’ ಅಂತಹ ಪೋಸ್ಟ್ ಅನ್ನು ಹಂಚಿಕೊಳ್ಳುತ್ತಾ, ಯುನೈಟೆಡ್ ಸ್ಟೇಟ್ಸ್ ಗ್ರೀನ್‌ಲ್ಯಾಂಡ್‌ಗಾಗಿ ಡೆನ್ಮಾರ್ಕ್‌ಗೆ 700 ಬಿಲಿಯ ಡಲರ್ ಗಳ ನಗದು ಆಫರ್ ಮತ್ತು ಅದರ ಸರಿಸುಮಾರು 57,000 ನಿವಾಸಿಗಳಿಗೆ 100,000 ಡಲರ್ ಪಾವತಿಗಳನ್ನು ಅಂತಿಮಗೊಳಿಸುತ್ತಿದ್ದು, ಒಟ್ಟು ಸುಮಾರು $706 ಬಿಲಿಯ ವೆಚ್ಚವಾಗಲಿದೆ ಎಂದು ಶ್ವೇತಭವನದ ಉನ್ನತ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ಪೋಸ್ಟ್ ಗೆ 13.4 ಮಿಲಿಯಕ್ಕಿಂತಲೂ ಹೆಚ್ಚು ವೀಕ್ಷಣೆಗಳು ದೊರಕಿವೆ, ಇದನ್ನು ಕೆಳಗೆ ನೋಡಬಹುದು –
🚨ALERT: In a bombshell revelation, top White House officials disclosed that the United States is finalizing a staggering $700 billion cash offer to buy Greenland outright from Denmark, plus $100,000 lump-sum payments to each of its ~57,000 residents—totaling nearly $706 billion. pic.twitter.com/KdjvNwEmjO
— WORLD NEWS (@_MAGA_NEWS_) January 20, 2026

ಇತರ ಬಳಕೆದಾರರು ಇಲ್ಲಿ ಮತ್ತು ಇಲ್ಲಿ ನೋಡಬಹುದಾದ ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ.
🚨🇺🇸🇩🇰#BREAKING | Greenland
Senior White House officials have revealed that the United States is finalizing a $700 billion cash proposal to purchase #Greenland from #Denmark, alongside $100,000 lump-sum payments for each of Greenland’s roughly 57,000 residents bringing the total… pic.twitter.com/b5E6PAXwC4
— Mansoor Ahmed Dhillon (@mansoor_dhillon) January 20,
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಹೇಳಿಕೆ ಬಹುಪಾಲು ಸುಳ್ಳು ಎಂದು ಕಂಡುಕೊಂಡಿತು. ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಇಲ್ಲಿಯವರೆಗೆ ಅಂತಹ ಪಾವತಿ ಒಪ್ಪಂದದ ಬಗ್ಗೆ ಅಧಿಕೃತವಾಗಿ ಏನನ್ನೂ ಘೋಷಿಸಿಲ್ಲ.
ವಿವರಗಳು:
ಹೇಳಿಕೆಯನ್ನು ದೃಢಪಡಿಸಲು ನಾವು ಮೊದಲು “USA ಗ್ರೀನ್‌ಲ್ಯಾಂಡ್ ನೊಂದಿಗೆ $700 ಬಿಲಿಯ ಒಪ್ಪಂದವನ್ನು ಅಂತಿಮಗೊಳಿಸುತ್ತಿದೆ” ಎಂಬ ಪದಪುಂಜವನ್ನು ಬಳಸಿ ಅಂತರ್ಜಾಲ ಹುಡುಕಾಟವನ್ನು ನಡೆಸಿದೆವು. 700 ಬಿಲಿಯ ಡಾಲರ್ ಗಳ ಅಂಕಿಅಂಶವು ಯಾವುದೇ ಅಂತಿಮಗೊಳಿಸಲಾದ ಅಥವಾ ಔಪಚಾರಿಕವಾಗಿ ಪ್ರಸ್ತಾಪಿಸಲಾದ ಒಪ್ಪಂದಕ್ಕೆ ಸಂಬಂಧಿಸಿಲ್ಲ ಎಂದು ಹಲವು ವರದಿಗಳು ಸ್ಪಷ್ಟಪಡಿಸುತ್ತವೆ. ಬದಲಾಗಿ, ಇದು ವಿವಿಧ ಜನರು ಚರ್ಚಿಸಿದ/ಹೇಳಿಕೆ ನೀಡಿದ ಆಂತರಿಕ ಅಂದಾಜನ್ನು ಪ್ರತಿಬಿಂಬಿಸುತ್ತದೆ.
ಉದಾಹರಣೆಗೆ, NBC ನ್ಯೂಸ್‌ನ ವರದಿಯೊಂದು ಹೇಳುವಂತೆ “ಟ್ರಂಪ್ ಅವರ ಆಕಾಂಕ್ಷೆಯಾಧಾರಿತ ಯೋಜನೆ ರೂಪಿಸುವ ಭಾಗವಾಗಿ ತಜ್ಞರು ಮತ್ತು ಮಾಜಿ US ಅಧಿಕಾರಿಗಳು ರಚಿಸಿದ…” ಅಂದಾಜಿನ ಪ್ರಕಾರ “ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗ್ರೀನ್‌ಲ್ಯಾಂಡ್ ಖರೀದಿಸುವ ಗುರಿಯನ್ನು ಸಾಧಿಸಲು ಯುನೈಟೆಡ್ ಸ್ಟೇಟ್ಸ್ 700 ಬಿಲಿಯ ಡಾಲರ್ ವರೆಗಿನ ಮೊತ್ತವನ್ನು ಪಾವತಿಸಬೇಕಾಗಬಹುದು…” ವರದಿಯ ಒಂದು ಭಾಗವನ್ನು ಕೆಳಗೆ ನೋಡಿ –

ಇದರ ನಂತರ, ಪ್ರಸ್ತಾಪಿಸಲಾದ ಒಟ್ಟು ಮೊತ್ತದ ಪಾವತಿಗಳ ಕುರಿತು ಬೆಳಕು ಚೆಲ್ಲುವ ರಾಯಿಟರ್ಸ್‌ನ ಮತ್ತೊಂದು ವರದಿ ನಮ್ಮ ಕೈಸೇರಿತು. “ಶ್ವೇತಭವನದ ಸಹಾಯಕರು ಸೇರಿದಂತೆ U.S. ಅಧಿಕಾರಿಗಳು ಪ್ರತಿ ವ್ಯಕ್ತಿಗೆ $10,000 ರಿಂದ $100,000 ವರೆಗಿನ ಅಂಕಿಗಳನ್ನು ಚರ್ಚಿಸಲಾಗಿದೆ ಎಂದು ಎರಡು ಮೂಲಗಳು ತಿಳಿಸಿವೆ” ಎಂದು ವರದಿ ಹೇಳುತ್ತದೆ. ಆದಾಗ್ಯೂ, ಮತ್ತೊಮ್ಮೆ ಇದು ದೃಢೀಕರಿಸಲ್ಪ ವಿಷಯವಲ್ಲ ಮತ್ತು ಹೇಳಿಕೆಯಲ್ಲಿ ಉಲ್ಲೇಖಿಸಿದಂತೆ ಗ್ರೀನ್‌ಲ್ಯಾಂಡ್ ಅನ್ನು ಖರೀದಿಸಲು $700 ಬಿಲಿಯನ್ ಒಪ್ಪಂದಕ್ಕೆ ಸಂಬಂಧಿಸಿಲ್ಲ. ಈ ವರದಿಯ ಒಂದು ಭಾಗವನ್ನು ಕೆಳಗೆ ವೀಕ್ಷಿಸಿ –

ನಂತರ ನಾವು ವೀಡಿಯೊದ ವಿವಿಧ ಕೀಫ್ರೇಮ್‌ಗಳಿಂದ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಲಾರಂಭಿಸಿದೆವು. ಹುಡುಕಾಟದ ಫಲಿತಾಂಶಗಳಲ್ಲಿ ನಮಗೆ ಜನವರಿ 7, 2025 ರಂದು ಪ್ರಕಟವಾದ BBC ವರದಿಯು ನಮಗೆ ದೊಕಕಿತು, ಅದರ ಶೀರ್ಷಿಕೆ: ತಂದೆಯು ಈ ಪ್ರದೇಶವನ್ನು US ಹೊಂದಬೇಕೆಂದು ಹೇಳಿದ ನಂತರ ಗ್ರೀನ್‌ಲ್ಯಾಂಡ್‌ಗೆ ಟ್ರಂಪ್ ಜೂನಿಯರ್ ಆಗಮನ. ಕೆಳಗಿನ ಲೇಖನದಲ್ಲಿ ಹಂಚಿಕೊಂಡ ವೀಡಿಯೊದ ಸ್ಕ್ರೀನ್‌ಶಾಟ್ ನೋಡಿ-

CNN ಮತ್ತು WCNC ಅಪ್‌ಲೋಡ್ ಮಾಡಿದ ವೀಡಿಯೊಗಳಲ್ಲಿ ಶ್ವೇತಭವನದ ಅಧಿಕಾರಿಗಳು ದೃಢಪಡಿಸಿದಂತೆ ಗ್ರೀನ್‌ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಳ್ಳುವುದು ಟ್ರಂಪ್ ಅವರ ಆದ್ಯತೆಯಾಗಿದ್ದರೂ, ಗ್ರೀನ್‌ಲ್ಯಾಂಡ್ ಅನ್ನು ಖರೀದಿಸಲು US 700 ಬಿಲಿಯ ಡಾಲರ್ ಗಳನ್ನು ಪಾವತಿಸಲು ಒಪ್ಪಂದವನ್ನು ಅಂತಿಮಗೊಳಿಸುವುದರ ಕುರಿತು ಇನ್ನೂ ದೃಢೀಕರಣ ದೊರಕಿಲ್ಲ.
ಮತ್ತು ಟ್ರಂಪ್ ಅವರ 700 ಬಿಲಿಯ ಡಾಲರ್ ಗಳ ಗ್ರೀನ್‌ಲ್ಯಾಂಡ್ ಬೆಲೆಪಟ್ಟಿ ಎಲ್ಲಿಂದ ಬರುತ್ತದೆ ಎಂಬುದನ್ನು ಬಹುಮಟ್ಟಿಗೆ CGTN ಈ ವೀಡಿಯೊದಲ್ಲಿ ವಿವರಿಸುತ್ತದೆ.
ಗ್ರೀನ್‌ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಳ್ಳಲು US ಹೇಗೆ ಪ್ರಯತ್ನಿಸುತ್ತಿದೆ ಎಂಬುದರ ಕುರಿತು ಹಲವು ವೀಡಿಯೊಗಳು ಪ್ರಸಾರವಾಗುತ್ತಿವೆ, ಆದರೆ ಈ ಕುರಿತು ಶ್ವೇತ ಭವನದಿಂದ ಯಾವುದೇ ಅಧಿಕೃತ ದೃಢೀಕರಣವಿಲ್ಲ.
ಹೀಗಾಗಿ, ‘ಗ್ರೀನ್‌ಲ್ಯಾಂಡ್ ಅನ್ನು ಖರೀದಿಸಲು USA 700 ಬಿಲಿಯ ಪಾವತಿಸಲು ಒಪ್ಪಂದವನ್ನು ಅಂತಿಮಗೊಳಿಸುತ್ತಿದೆ’ ಎಂಬ ಹೇಳಿಕೆ ಈಗಿನ ಮಟ್ಟಿಗೆ ಸುಳ್ಳು.
******************************************************
ಇದನ್ನೂ ಓದಿ :
ಮೊಬೈಲ್ ಟವರ್ ಅಳವಡಿಸಲು ಟೆಲಿಕಾಂ ಇಲಾಖೆಯು ನಿಜವಾಗಿಯೂ ₹2,500 ಕೇಳುತ್ತದೆಯೇ? ಸತ್ಯ ಪರಿಶೀಲನೆ
Digiteye Kannada Fact Checkers