ಹೇಳಿಕೆ/Claim: ದೇವ್ ಭೂಮಿ ಉತ್ತರಾಖಂಡ್ ವಿಶ್ವವಿದ್ಯಾಲಯವು ಪ್ರಧಾನಿ ಮೋದಿಯವರ ರ‍್ಯಾಲಿಯಲ್ಲಿ ಭಾಗವಹಿಸುವವರಿಗೆ 50 ಅಂಕಗಳನ್ನು ನೀಡುತ್ತಿದೆ ಎಂದು ವೈರಲ್ ನೋಟಿಸ್ ಹೇಳಿಕೊಂಡಿದೆ.
ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಪ್ರಸಾರವಾಗುತ್ತಿರುವ ನೋಟಿಸ್ ಕಟ್ಟುಕಥೆಯಾಗಿದ್ದು, ಅಧಿಕಾರಿಗಳು ತಮ್ಮ X ಖಾತೆಯಲ್ಲಿ ಇದನ್ನು ಸ್ಪಷ್ಟಪಡಿಸಿದ್ದಾರೆ ಮತ್ತು ಉತ್ತರಾಖಂಡ್ ಉನ್ನತ ಶಿಕ್ಷಣ ಇಲಾಖೆಗೆ ಸ್ಪಷ್ಟೀಕರಣ ಪತ್ರವನ್ನು ನೀಡಿದ್ದಾರೆ.
ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು — ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
******************************************************
ದೇವ್ ಭೂಮಿ ಉತ್ತರಾಖಂಡ್ ವಿಶ್ವವಿದ್ಯಾಲಯ (DBUU) ನವೆಂಬರ್ 9, 2025 ರಂದು ತಮ್ಮ ಕ್ಯಾಂಪಸ್‌ನಲ್ಲಿ ನಡೆಯಲಿದ್ದ ಪ್ರಧಾನಿ ನರೇಂದ್ರ ಮೋದಿಯವರ ರ‍್ಯಾಲಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ 50 ಅಂಕಗಳನ್ನು ನೀಡುತ್ತಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘pbhushan1’ ಅಂತಹ ಹೇಳಿಕೆಯನ್ನು ನೀಡಿದ್ದು, ಆತ ದೆಹ್ರಾದೂನ್‌ನಲ್ಲಿರುವ ದೇವ್ ಭೂಮಿ ಉತ್ತರಾಖಂಡ್ ವಿಶ್ವವಿದ್ಯಾಲಯ (DBUU) ದಿಂದ ಬಂದ ಅಧಿಕೃತ ಸೂಚನೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ
ಈ ನೋಟಿಸ್‌ನ ಪ್ರಕಾರ, ನವೆಂಬರ್ 9, 2025 ರಂದು ದೆಹ್ರಾದೂನ್‌ನಲ್ಲಿರುವ ಅರಣ್ಯ ಸಂಶೋಧನಾ ಸಂಸ್ಥೆ (FRI) ಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ “ಸಂವಾದ”ವನ್ನು ಒಳಗೊಂಡ ಕಾರ್ಯಕ್ರಮಕ್ಕೆ B.Tech CSE (2ನೇ ವರ್ಷ) ವಿಶೇಷತೆ ಮತ್ತು BCA (2ನೇ ವರ್ಷ) ವಿದ್ಯಾರ್ಥಿಗಳು ಹಾಜರಾಗಬೇಕು ಎಂದು ಮತ್ತು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ 50 ಆಂತರಿಕ ಅಂಕಗಳನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ ಎಂಬಂತೆ ತೋರಿಸಲಾಗಿತ್ತು.
ಈ ಪೋಸ್ಟ್ 617,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು ಅದನ್ನು ಇಲ್ಲಿ ನೋಡಬಹುದು
Dev Bhumi Uttarakhand University to award 50 marks for attending Modi’s rally! And how many for shouting Modi Modi? pic.twitter.com/9wiEKr2pCO
— Prashant Bhushan (@pbhushan1) November 8, 2025

ಇತರ ಬಳಕೆದಾರರು ಸಹ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ಕುರಿತು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಹೇಳಿಕೆಯಲ್ಲಿ ಹಂಚಿಕೊಳ್ಳಲಾದ ಸೂಚನೆಯು ಕೃತ್ರಿಮ ಮತ್ತು ನಕಲಿಯಾಗಿದೆ. DBUU ಇಂತಹ ಒಂದು ಸೂಚನೆ ಬಿಡುಗಡೆ ಮಾಡಿಲ್ಲವೆಂದು ಸ್ಪಷ್ಟವಾಗಿ ನಿರಾಕರಿಸಿದೆ ಮತ್ತು ನವೆಂಬರ್ 9, 2025ರಂದು ಪ್ರಧಾನಿ ಮೋದಿಯವರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದಾಗ ವಿದ್ಯಾರ್ಥಿಗಳೊಂದಿಗೆ ಯಾವುದೇ ಮಾತುಕತೆ ನಡೆಯಲಿಲ್ಲ.
ಈ ಸುತ್ತೋಲೆಯನ್ನು ಪರಿಶೀಲಿಸಲು ನಾವು ಮೊದಲು ದೇವ್ ಭೂಮಿ ಉತ್ತರಾಖಂಡ್ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ ನಲ್ಲಿ ಸೂಚನೆಗಳ ವಿಭಾಗವನ್ನು ನೋಡಿದೆವು. ಪ್ರಧಾನಿ ಸಂವಹನ, ಕಡ್ಡಾಯ ಹಾಜರಾತಿ ಅಥವಾ ಬಾಹ್ಯ ಕಾರ್ಯಕ್ರಮಗಳಿಗೆ ಅಂಕಗಳ ಕುರಿತು ಯಾವುದೇ ಪ್ರಕಟಣೆಗಳು ಇರಲಿಲ್ಲ. ವೆಬ್‌ಸೈಟ್‌ನಲ್ಲಿನ ಸೂಚನೆಗಳ ವಿಭಾಗದ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ಕಾಣಬಹುದು-

ಅಧಿಕೃತ ಪ್ರತಿಕ್ರಿಯೆಗಾಗಿ ಹುಡುಕಾಟ ನಡೆಸಿದಾಗ, DBUU ಆಡಳಿತವು ಸೂಚನೆಯು ಅಧಿಕೃತವಲ್ಲ ಎಂದು ದೃಢೀಕರಿಸುತ್ತಾ ನೀಡಿದ ಹೇಳಿಕೆ ನಮಗೆ ದೊರಕಿತು. ಅವರು ಉತ್ತರಾಖಂಡ್ ಉನ್ನತ ಶಿಕ್ಷಣ ಇಲಾಖೆಗೆ ಸ್ಪಷ್ಟೀಕರಣ ಪತ್ರವನ್ನು ನೀಡಿದ್ದು ಕೆಳಗೆ ತೋರಿಸಿರುವಂತೆ ಅದನ್ನು ತಮ್ಮ X ಖಾತೆಯಲ್ಲಿಯೂ ಪೋಸ್ಟ್ ಮಾಡಿದ್ದಾರೆ.
ಪತ್ರದಲ್ಲಿ ಅವರು ಹೇಳಿರುವುದೇನೆಂದರೆ: “ನವೆಂಬರ್ 09, 2025 ರಂದು FRIಗೆ ಮುಂಬರುವ ಭೇಟಿಗೆ ಸಂಬಂಧಿಸಿದಂತೆ ಅಂಕಗಳ ಕುರಿತು DBUU ಹೆಸರಿನಲ್ಲಿ ನಕಲಿ ಸೂಚನೆಯನ್ನು ಪ್ರಸಾರ ಮಾಡಲಾಗಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ”, ಅದನ್ನು ಕೆಳಗೆ ನೋಡಬಹುದು –
It has come to our attention that a fake notice has been circulated in the name of DBUU regarding marks for the upcoming visit to FRI on 09 November 2025. pic.twitter.com/xETkQTkaGk
— Dev Bhoomi Uttarakhand University (@dbuu_dehradun) November 8, 2025

ಕೊನೆಯದಾಗಿ, ನಾವು ಪ್ರಧಾನಿ ಮೋದಿಯವರೊಂದಿಗೆ ಯಾವುದೇ “ಕಡ್ಡಾಯ” ವಿದ್ಯಾರ್ಥಿ ಸಂವಾದದ ಕುರಿತು ಹುಡುಕಾಟ ನಡೆಸಿದಾಗ, ಅಂತಹ ಯಾವುದೇ ವರದಿಗಳು ಕಾಣಲಿಲ್ಲ. ಅವರು ನವೆಂಬರ್ 9, 2025ರಂದು ಉತ್ತರಾಖಂಡದ 25ನೇ ರಾಜ್ಯ ರಚನೆ ದಿನಾಚರಣೆಗಾಗಿ ದೆಹ್ರಾದೂನ್‌ಗೆ ಭೇಟಿ ನೀಡಿದ್ದರು ಮತ್ತು ₹8,260 ಕೋಟಿಗೂ ಹೆಚ್ಚು ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ್ದರು. ಅಧಿಕೃತ PMO ಬಿಡುಗಡೆಯ ಪ್ರಕಾರ, ಪ್ರಧಾನಿ ಮೋದಿಯವರ ನವೆಂಬರ್ 9ರ ವೇಳಾಪಟ್ಟಿಯಲ್ಲಿ FRIಯಲ್ಲಿ ಬೆಳ್ಳಿ ಮಹೋತ್ಸವವನ್ನು ಉದ್ದೇಶಿಸಿ ಮಾತನಾಡುವುದು, ನೀರು, ಇಂಧನ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಅನಾವರಣಗೊಳಿಸುವುದು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದ್ದವು.


ಹೀಗಾಗಿ, ಹೇಳಿಕೆ ಸುಳ್ಳು.
******************************************************
ಇದನ್ನೂ ಓದಿ:
Digiteye Kannada Fact Checkers