ಹೇಳಿಕೆ/Claim: ಭಾರತದ ಜನಸಂಖ್ಯೆ ಸುಮಾರು 146 ಕೋಟಿ, ಆದರೂ 2,500 ಕೋಟಿ ಜನರು ಸರ್ಕಾರಿ ಸಾಲ ಪಡೆದಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾರವರು ಹೇಳಿದ್ದಾರೆನ್ನಲಾಗಿದೆ.
ಕಡೆನುಡಿ/Conclusion : ಹೇಳಿಕೆ ಸುಳ್ಳು. ಮುಖ್ಯಮಂತ್ರಿ ರೇಖಾ ಗುಪ್ತಾರವರು ಸಾಲದ ಮೊತ್ತದ ಬಗ್ಗೆ ಮಾತನಾಡುತ್ತಿದ್ದಾಗ ವೀಡಿಯೊವನ್ನು ಆಯ್ದು ಸಂಪಾದಿಸಲಾಗಿದೆ. 2,500 ಕೋಟಿ ಜನರು ಸಾಲ ಪಡೆದಿದ್ದಾರೆ ಎಂದು ಆಕೆ ಹೇಳಲಿಲ್ಲ, ಇದು ಫಲಾನುಭವಿಗಳ ಸಂಖ್ಯೆಯಲ್ಲ, ಯೋಜನೆಯಡಿಯಲ್ಲಿ ₹2,500 ಕೋಟಿ ಮೊತ್ತದ ಮೇಲಾಧಾರ ರಹಿತ ಸಾಲಗಳನ್ನು ಬೆಂಬಲಿಸಲು ಮತ್ತು ಸೇವೆ ನೀಡಲು ನಿಗದಿಪಡಿಸಿದ ₹50 ಕೋಟಿಯನ್ನು ಉಲ್ಲೇಖಿಸಿದ್ದಾರೆ.
ರೇಟಿಂಗ್/Rating : ಸುಳ್ಳು — ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
******************************************************
ದೆಹಲಿ ಸಿಎಂ ರೇಖಾ ಗುಪ್ತಾ ರವರು 2,500 ಕೋಟಿ ಜನರು ಒಂದು ಯೋಜನೆಯಡಿ ಸಾಲ ಪಡೆಯಬಹುದು ಎಂದು ಹೇಳಿದ್ದಾರೆನ್ನುವ ವೀಡಿಯೊವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘nkk_123’ ಅಂತಹ ಒಂದು ಪೋಸ್ಟ್ ಅನ್ನು ಈ ಮುಂದಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ “ದೆಹಲಿಯ ಜನಸಂಖ್ಯೆ 2.25 ಕೋಟಿ. ಭಾರತದ ಜನಸಂಖ್ಯೆ 146 ಕೋಟಿ. ವಿಶ್ವದ ಜನಸಂಖ್ಯೆ 830 ಕೋಟಿ. ದೆಹಲಿ ಸಿಎಂ ರೇಖಾ ಗುಪ್ತಾರವರು 2500 ಕೋಟಿ ಜನರಿಗೆ ಸಾಲ ನೀಡಿದ್ದಾರೆ”. ಇದು ಈ ಹೇಳಿಕೆಯನ್ನು ಅಪಹಾಸ್ಯ ಮಾಡುವ ಪ್ರಯತ್ನವಾಗಿತ್ತು. ಈ ಪೋಸ್ಟ್ ಗೆ 108,000 ಕ್ಕೂ ಹೆಚ್ಚು ವೀಕ್ಷಣೆಗಳು ದೊರಕಿವೆ ಮತ್ತು ಅದನ್ನು ಕೆಳಗೆ ನೋಡಬಹುದು:
Population of Delhi 2.25 crore
Population of India 146 crore
Population of World 830 crore
Delhi CM Rekha Gupta has given loan to 2500 crore people. 🤡 pic.twitter.com/1REya3jSwg— ηᎥ†Ꭵղ (@nkk_123) January 31, 2026

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ವೀಡಿಯೊವನ್ನು ಸಂಪಾದಿಸಲಾಗಿದೆ, ಮುಖ್ಯಮಂತ್ರಿ ರೇಖಾ ಗುಪ್ತಾರವರು 2,500 ಕೋಟಿ ಜನರು ಸಾಲ ಪಡೆದಿದ್ದಾರೆ ಎಂದು ಹೇಳಿಲ್ಲ. ಆಕೆ ₹2,500 ಕೋಟಿವರೆಗಿನ ಮೇಲಾಧಾರ-ಮುಕ್ತ ಸಾಲಗಳನ್ನು ಸುಗಮಗೊಳಿಸಲು ಮತ್ತು ಸೇವೆ ನೀಡಲು ₹50 ಕೋಟಿ ಹಂಚಿಕೆ ಮಾಡಿದ ಯೋಜನೆಯ ಬಗ್ಗೆ ಮಾತನಾಡುತ್ತಿದ್ದರು, ಇದು ಫಲಾನುಭವಿಗಳ ಅಥವಾ ಜನರ ಸಂಖ್ಯೆ ಅಲ್ಲ.
ವಿವರಗಳು:
ನಾವು ಮೊದಲು ಹೇಳಿಕೆಯಲ್ಲಿ ಹಂಚಿಕೊಂಡಿದ್ದ ವೀಡಿಯೊದ ವಿವಿಧ ಕೀಫ್ರೇಮ್‌ಗಳಿಂದ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಹುಡುಕಾಟದ ಫಲಿತಾಂಶಗಳು ಜನವರಿ 27, 2026 ರಂದು X ಪ್ಲಾಟ್‌ಫಾರ್ಮ್‌ನಲ್ಲಿ ANI ಪೋಸ್ಟ್ ಮಾಡಿದ ವೀಡಿಯೊಗೆ ನಮ್ಮನ್ನು ಕರೆದೊಯ್ದವು. ವೀಡಿಯೊವನ್ನು ಕೆಳಗೆ ವೀಕ್ಷಿಸಿ:
#WATCH | On Delhi government signing MoU with CGTMSE, CM Rekha Gupta says, “This MoU is very important… I understand that in Delhi, there are lakhs of young people with innovative ideas who want to start a good business, a good job, a good industry, or some initiatives in the… https://t.co/dyCTKSGGtT pic.twitter.com/ba1ujjJFXt
— ANI (@ANI) January 27, 2026
ವೀಡಿಯೊವನ್ನು ನೋಡಿದ ನಂತರ, ದೆಹಲಿ ಸರ್ಕಾರವು ಆರಂಭದಲ್ಲಿ 50 ಕೋಟಿ ರೂ. ನಿಧಿಯನ್ನು ಇಟ್ಟುಕೊಂಡಿತ್ತು ಮತ್ತು ಇದರೊಂದಿಗೆ ಜನರು 2,500 ಕೋಟಿ ರೂ. ಸಾಲವನ್ನು ಪಡೆಯಬಹುದು ಎಂದು ಸಿ.ಎಂ ಗುಪ್ತಾರವರು ಹೇಳಿದ್ದನ್ನು ಸುಮಾರು 3.45ರ ಸಮಯಮುದ್ರೆಯಲ್ಲಿ ಕಾಣಬಹುದು. ಇದರ ನಂತರ, ಈ ಯೋಜನೆಯು ಬಹಳ ಉತ್ತೇಜಕವಾಗಿದೆ, ಮತ್ತು ಜನರು ತಮ್ಮ ದೈನಂದಿನ ವ್ಯವಹಾರವನ್ನು ಮಾಡಬಹುದು ಮತ್ತು ಭವಿಷ್ಯದಲ್ಲಿ ಈ ₹2,500 ಕೋಟಿ ಮೊತ್ತವನ್ನು ಹೆಚ್ಚಿಸಬಹುದು ಎಂದು ಆಕೆ ಹೇಳುತ್ತಾರೆ. ಸಿಎಂ ರೇಖಾ ಸಾಲ ತೆಗೆದುಕೊಳ್ಳುವ 2,500 ಕೋಟಿ ಜನರ ಬಗ್ಗೆ ಉಲ್ಲೇಖಿಸಲಿಲ್ಲ, ಬದಲಿಗೆ ಸಾಲದ ಮೊತ್ತವನ್ನು ಮಾತ್ರ ಉಲ್ಲೇಖಿಸಿದ್ದಾರೆ.
ಇದರ ನಂತರ, ಜನವರಿ 27, 2026 ರಂದು ದೆಹಲಿ ಸರ್ಕಾರವು ದೆಹಲಿ ಸೆಕ್ರೆಟರಿಯೇಟ್‌ನಲ್ಲಿ ದೆಹಲಿ ಸರ್ಕಾರ ಮತ್ತು CGTMSE (ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ ಫಾರ್ ಮೈಕ್ರೋ ಅಂಡ್ ಸ್ಮಾಲ್ ಎಂಟರ್‌ಪ್ರೈಸಸ್) ನಡುವೆ ದೆಹಲಿ ಕ್ರೆಡಿಟ್ ಗ್ಯಾರಂಟಿ ಸ್ಕೀಮ್ (CGS) ಗಾಗಿ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ನಮಗೆ ತಿಳಿದುಬಂತು.
ನಾವು ಅದರ ಬಗ್ಗೆ ಅಂತರ್ಜಾಲ ಹುಡುಕಾಟ ನಡೆಸಿದೆವು, ಆಗ ಜನವರಿ 28, 2026ರಂದು ಪ್ರಕಟವಾದ ದ ಹಿಂದೂ ವರದಿಯು ನಮಗೆ ದೊರಕಿತು. CMO ಹೇಳಿದ್ದನ್ನು ಈ ವರದಿಯೂ ಸಹ ದೃಢಪಡಿಸುತ್ತದೆ. “ಈ ಸೀಮಿತ ಕಾರ್ಪಸ್ ಅನ್ನು ಬಳಸಿಕೊಂಡು, ಬ್ಯಾಂಕುಗಳು ಸುಮಾರು ₹2,500 ಕೋಟಿ ಮೊತ್ತದ ಸಾಲಗಳನ್ನು ನೀಡಲು ಸಾಧ್ಯವಾಗುತ್ತದೆ.” ವರದಿಯ ಈ ಭಾಗವನ್ನು ಕೆಳಗೆ ನೋಡಿ:

ದೆಹಲಿಯು ಸಣ್ಣ ಉದ್ಯಮಿಗಳಿಗಾಗಿ ಮೇಲಾಧಾರ ರಹಿತ ಸಾಲ ಯೋಜನೆಯನ್ನು ಪ್ರಾರಂಭಿಸಿದೆ ಎಂದು TOI ವರದಿ ದೃಢಪಡಿಸಿದೆ. ಈ ಕಾರ್ಯಕ್ರಮಕ್ಕಾಗಿ “50 ಕೋಟಿ ರೂ. ಮೀಸಲು ನಿಧಿ”ಯನ್ನು ರಚಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸುಮಾರು 2,500 ಕೋಟಿ ರೂ.ಗಳ ಬಳಕೆ ಸಾಮರ್ಥ್ಯದೊಂದಿಗೆ, ಬ್ಯಾಂಕುಗಳು ಗಮನಾರ್ಹವಾಗಿ ಹೆಚ್ಚಿನ ಸಾಲವನ್ನು ನೀಡಲು ಸಾಧ್ಯವಾಗುತ್ತದೆ ಮತ್ತು ಭವಿಷ್ಯದಲ್ಲಿ ಕಾರ್ಪಸ್ ಅನ್ನು ಹೆಚ್ಚಿಸಬಹುದು. ಹೇಳಿಕೆಯಲ್ಲಿ ತೋರಿಸಿರುವಂತೆ ಸಿಎಂ ರೇಖಾ ಗುಪ್ತಾರವರು 2,500 ಕೋಟಿ ಜನರ ಬಗ್ಗೆ ಮಾತನಾಡಿದ್ದಾರೆ ಎಂದು ವರದಿಗಳಲ್ಲಿ ಎಲ್ಲಿಯೂ ಉಲ್ಲೇಖಿಸಲಾಗಿಲ್ಲ ಅಥವಾ ಹೇಳಲಾಗಿಲ್ಲ. TOI ವರದಿಯ ಭಾಗವನ್ನು ಕೆಳಗೆ ನೋಡಿ:

ಹೇಳಿಕೆಯಲ್ಲಿ ತೋರಿಸಿರುವ ವೀಡಿಯೊವನ್ನು ಸುಳ್ಳನ್ನು ನಿರೂಪಿಸಲು ತಿದ್ದಲಾಗಿದೆ.
ಆದ್ದರಿಂದ, ಈ ಹೇಳಿಕೆ ಸುಳ್ಳು.
******************************************************
ಇದನ್ನೂ ಓದಿ:
ಮಾರುತಿ ಸುಜುಕಿ ಭಾರತದಲ್ಲಿ ₹4.99 ಲಕ್ಷಕ್ಕೆ ಹೊಸ ‘ಮಿನಿ ಬಸ್’ ಬಿಡುಗಡೆ ಮಾಡಿದೆಯೇ? ಸತ್ಯ ಪರಿಶೀಲನೆ
ಭಾರತದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಬೈಕ್ ಸವಾರರು ಬೀಳುವುದನ್ನು ಕೃತಕ ವೀಡಿಯೊ ತೋರಿಸುತ್ತದೆ; ಸತ್ಯ ಪರಿಶೀಲನೆ
