ಹೇಳಿಕೆ/Claim: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಧಾರ್ ಕಾರ್ಡ್ ಹೊಂದಿರುವ ಭಾರತೀಯ ನಾಗರಿಕರಿಗೆ ಉಚಿತ ಸ್ಪ್ಲೆಂಡರ್ ಬೈಕ್ ಯೋಜನೆಯನ್ನು ಘೋಷಿಸಿದ್ದಾರೆ.
ಕಡೆನುಡಿ/Conclusion: ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಅಂತಹ ಯಾವುದೇ ಉಚಿತ ಸ್ಪ್ಲೆಂಡರ್ ಬೈಕ್ ಯೋಜನೆ ಇಲ್ಲ ಮತ್ತು ಈ ಹೇಳಿಕೆ ಸಂಪೂರ್ಣ ಕಟ್ಟುಕಥೆಯಾಗಿದೆ. ವೀಡಿಯೊದ ಧ್ವನಿಮುದ್ರೆಯನ್ನು AI ಬಳಸಿ ಮಾರ್ಪಡಿಸಲಾಗಿದೆ.
ರೇಟಿಂಗ್/Rating: ಸಂಪೂರ್ಣವಾಗಿ ಸುಳ್ಳು– ![]()
ಪ್ರಧಾನಿ ನರೇಂದ್ರ ಮೋದಿಯವರು ಆಧಾರ್ ಕಾರ್ಡ್ ಹೊಂದಿರುವ ಎಲ್ಲಾ ಭಾರತೀಯ ನಾಗರಿಕರಿಗೆ ಉಚಿತ ಸ್ಪ್ಲೆಂಡರ್ ಬೈಕ್ ಯೋಜನೆಯನ್ನು ಘೋಷಿಸಿದ್ದಾರೆ ಎಂದು ಹೇಳಿಕೊಳ್ಳುತ್ತಾ ಹಲವಾರು ಬಳಕೆದಾರರು ರೀಲ್ ಅನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಬಳಕೆದಾರ ‘bikebazzarupdate’ ಅಂತಹ ರೀಲ್ ಅನ್ನು ಹಂಚಿಕೊಳ್ಳುತ್ತಾ, ಈ ಆಫರ್ ಅನ್ನು ಪಡೆಯಲು ಜನರು ಅದನ್ನು ಇತರ 4 ಜನ ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಕೆಂದು ಮತ್ತು ನೀಡಿರುವ ಅಕೌಂಟ್ ಫಾಲೊ ಮಾಡಿ ತಮ್ಮ ವಿವರಗಳನ್ನು ಹಂಚಿಕೊಳ್ಳಬೇಕೆಂದು ಒತ್ತಾಯಿಸಿದರು. ಪೋಸ್ಟ್ ಅನ್ನು ಕೆಳಗೆ ನೋಡಿ-

ಇತರ ಬಳಕೆದಾರರು ಸಹ ಇದೇ ರೀತಿಯ ರೀಲ್ ಅನ್ನು ಹಂಚಿಕೊಂಡಿದ್ದು, ಇದು ಆಧಾರ್ ಕಾರ್ಡ್ ಹೊಂದಿರುವವರಿಗೆ ದೊಡ್ಡ ಸುದ್ದಿ ಎಂದು ಹೇಳಿಕೊಳ್ಳುಂಡರು ಮತ್ತು ಜನರು ತಮ್ಮ ರೀಲ್ ಅನ್ನು ಲೈಕ್ ಮಾಡಿ, ತಮ್ಮ ತಮ್ಮ ರಾಜ್ಯವನ್ನು ನಮೂದಿಸಲು ಮತ್ತು ಗೂಗಲ್ ನಲ್ಲಿ ‘ಲೋನ್ ಮೈಟಹುಕೊ’ ವೆಬ್‌ಸೈಟ್ ಅನ್ನು ಪರಿಶೀಲಿಸಲು ಮತ್ತು ಆಫರ್ ಅನ್ನು ಪಡೆಯಲು ತಮ್ಮ ವಿವರಗಳನ್ನು ಹಂಚಿಕೊಳ್ಳಲು ಕೇಳಿಕೊಳ್ಳುತ್ತಾರೆ. ಇನ್ಸ್ಟಾಗ್ರಾಮ್ ಪೋಸ್ಟ್ ಅನ್ನು ಕೆಳಗೆ ನೋಡಿ:
View this post on Instagram

ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸಂಪೂರ್ಣವಾಗಿ ಸುಳ್ಳು ಎಂದು ಕಂಡುಕೊಂಡಿತು. ಉಚಿತ ಸ್ಪ್ಲೆಂಡರ್ ಬೈಕ್ ಯೋಜನೆಯ ಬಗ್ಗೆ ಯಾವುದೇ ವಿಶ್ವಾಸಾರ್ಹ ಮಾಧ್ಯಮ ವರದಿಗಳು ಅಥವಾ ಯಾವುದೇ ಸರ್ಕಾರಿ ಪ್ರಕಟಣೆಗಳು ಬಂದಿಲ್ಲ. ಆಡಿಯೋವನ್ನು AI ಬಳಸಿ ಮಾರ್ಪಡಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.
ಹೇಳಿಕೆಯ ಬಗ್ಗೆ ತಿಳಿಯಲು ನಾವು ಮೊದಲು “PM ಮೋದಿ ಉಚಿತ ಸ್ಪ್ಲೆಂಡರ್ ಬೈಕ್ ಯೋಜನೆಯನ್ನು ಘೋಷಿಸಿದ್ದಾರೆ” ಎಂಬ ಪದಗುಚ್ಛದೊಂದಿಗೆ ಅಂತರ್ಜಾಲವನ್ನು ಹುಡುಕಿದೆವು. ಯಾವುದೇ ಮಾಧ್ಯಮಗಳಿಂದ ಯಾವುದೇ ದೃಢೀಕೃತ ವರದಿಗಳು ಅಥವಾ ಪ್ರಧಾನ ಮಂತ್ರಿ ಕಚೇರಿಯ ವೆಬ್‌ಸೈಟ್‌ನಲ್ಲಿ ಯಾವುದೇ ಅಧಿಕೃತ ಪ್ರಕಟಣೆಗಳು ಬಂದಿಲ್ಲ
ಇದರ ನಂತರ, ಹೇಳಿಕೆಯಲ್ಲಿ ಕಂಡುಬರುವಂತೆ ಯಾವುದೋ ಒಂದು ಬ್ಯಾಂಕ್ ಖಾತೆಯ ಸಂದೇಶ ಸೇರಿದಂತೆ ಹಲವಾರು ಅಸಂಗತತೆಗಳನ್ನು ನಾವು ಗಮನಿಸಿದೆವು. ನಾವು ಹೇಳಿಕೆಯಲ್ಲಿ ತೋರಿಸಿರುವ ಚಿತ್ರದ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, 6 ವರ್ಷಗಳ ಹಿಂದೆ PMO ಇಂಡಿಯಾದ ಯೂಟ್ಯೂಬ್ ವಾಹಿನಿಯಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊಗೆ ನಿಖರವಾದ ಹೊಂದಾಣಿಕೆಯನ್ನು ನಾವು ಕಂಡೆವು, ಇದು ಕಿಸಾನ್ ಯೋಜನೆಯ ಘೋಷಣೆಯಾಗಿತ್ತು.
ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ 2019ರಲ್ಲಿ ನಡೆದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಭಾಷಣವನ್ನು ಮೂಲ ವೀಡಿಯೊ ವಿವರಿಸುತ್ತದೆ. ಅದರ ವೀಡಿಯೊವನ್ನು ಕೆಳಗೆ ವೀಕ್ಷಿಸಿ:
ಕೆಳಗೆ, 2019ರ ಬೇರೊಂದು ಕಾರ್ಯಕ್ರಮದಿಂದ ಮೋದಿಯವರ ಚಿತ್ರವನ್ನು ತೆಗೆದುಕೊಂಡು ಈ ಆಡಿಯೊವನ್ನು ಸೇರಿಸಿ ನಕಲಿ ಹೇಳಿಕೆ ರಚಿಸಲಾಗಿದೆ ಎಂಬುದನ್ನು ಗಮನಿಸಬಹುದು.

ಅದೇ ರೀತಿ, ಕೆಳಗೆ ತೋರಿಸಿರುವಂತೆ ಮತ್ತೊಂದು ಕಾರ್ಯಕ್ರಮದಿಂದ ಮೋದಿಯವರ ಚಿತ್ರವನ್ನು ತೆಗೆದುಕೊಂಡು ಎರಡನೇ ಹೇಳಿಕೆಯನ್ನು ರಚಿಸಲಾಗಿದೆ:

ಕೊನೆಯದಾಗಿ, ಹಲವಾರು ಆಡಿಯೊ ಓವರ್‌ಲೇಗಳು ಮತ್ತು ಲಿಪ್-ಸಿಂಕ್ ಭಿನ್ನತೆಗಳನ್ನು ಕಂಡುಕೊಂಡ ನಂತರ, ನಾವು ರೀಲ್‌ನಿಂದ ಆಡಿಯೊವನ್ನು ಹೊರತೆಗೆದು ಅದನ್ನು AI ಆಡಿಯೊ ಡಿಟೆಕ್ಟರ್‌ನಲ್ಲಿ ಇರಿಸಿದೆವು. ಈ ಆಡಿಯೋ ಬಹುಶಃ AI ನಿಂದ ಉತ್ಪತ್ತಿಯಾಗಿರುವಂಥದ್ದು ಮತ್ತು ಅದರಲ್ಲಿ ಕೇವಲ 1% ಮಾತ್ರ ನಿಜವಾಗಿದೆ ಎಂದು ಫಲಿತಾಂಶಗಳು ಬಹಿರಂಗಪಡಿಸಿವೆ. ಫಲಿತಾಂಶಗಳನ್ನು ಕೆಳಗೆ ನೋಡಿ:

ಹೀಗಾಗಿ, ಹೇಳಿಕೆ ಸಂಪೂರ್ಣವಾಗಿ ಸುಳ್ಳು ಮತ್ತು ಆಡಿಯೊವನ್ನು AI ನಿಂದ ರಚನೆ ಮಾಡಲಾಗಿದೆ.
******************************************************
ಇದನ್ನೂ ಓದಿ:
ಈಗಿನಿಂದ ಪ್ರತಿ ತಿಂಗಳ ಎಲ್ಲಾ ಭಾನುವಾರಗಳು ಮತ್ತು ಶನಿವಾರಗಳಂದು ಬ್ಯಾಂಕುಗಳು ಮುಚ್ಚಿರುತ್ತವೆಯೇ? ಸತ್ಯ ಪರಿಶೀಲನೆ
Digiteye Kannada Fact Checkers