ಇರಾನ್‌ನಲ್ಲಿನ ಅಶಾಂತಿಯಿಂದಾಗಿ ಭಾರತವು ಅಫ್ಘಾನಿಸ್ತಾನದೊಂದಿಗಿನ ಎಲ್ಲಾ ವ್ಯಾಪಾರ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆಯೇ? ಸತ್ಯ ಪರಿಶೀಲನೆ

ಇರಾನ್‌ನಲ್ಲಿನ ಅಶಾಂತಿಯಿಂದಾಗಿ ಭಾರತವು ಅಫ್ಘಾನಿಸ್ತಾನದೊಂದಿಗಿನ ಎಲ್ಲಾ ವ್ಯಾಪಾರ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :ಇರಾನ್‌ನಲ್ಲಿನ ಅಶಾಂತಿಯಿಂದಾಗಿ ಭಾರತವು ಅಫ್ಘಾನಿಸ್ತಾನದೊಂದಿಗಿನ ಎಲ್ಲಾ ವ್ಯಾಪಾರವನ್ನು ಸ್ಥಗಿತಗೊಳಿಸಿದೆ ಎಂದು ಪತ್ರವು ಹೇಳುತ್ತದೆ.

ಕಡೆನುಡಿ/Conclusion : ಹೇಳಿಕೆಯು ಸುಳ್ಳು. ಪತ್ರವು ನಕಲಿಯಾಗಿದ್ದು ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ವ್ಯಾಪಾರವನ್ನು ಯಾವುದೇ ರೀತಿಯಲ್ಲಿ ಸ್ಥಗಿತಗೊಳಿಸಲಾಗಿದೆ. ಅಧಿಕೃತ ಸರ್ಕಾರಿ ಮೂಲಗಳು ಇದನ್ನು ನಕಲಿ ಪತ್ರ ಎಂದು ತಳ್ಳಿಹಾಕಿವೆ.

ರೇಟಿಂಗ್/Rating : ಸುಳ್ಳು — Five rating

******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

******************************************************

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ವ್ಯಾಪಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿಕೊಂಡು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ನಕಲಿ ಪತ್ರವನ್ನು ಹಂಚಿಕೊಳ್ಳುತ್ತಿದ್ದಾರೆ. “ಇರಾನ್‌ನಲ್ಲಿನ ಅಶಾಂತಿಯ ಕಾರಣದಿಂದ ಭಾರತ ಅಫ್ಘಾನಿಸ್ತಾನದೊಂದಿಗಿನ ವ್ಯಾಪಾರವನ್ನು ಸ್ಥಗಿತಗೊಳಿಸಿದೆ” ಎಂಬ ಶೀರ್ಷಿಕೆಯೊಂದಿಗೆ X ಬಳಕೆದಾರ ‘ADeshmukh30278’ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ 01-12-2026 ರ ದಿನಾಂಕವನ್ನು ಹೊಂದಿರುವ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ್ದು ಎನ್ನಲಾಗಿರುವ ಅಧಿಕೃತ ಪತ್ರದ ಚಿತ್ರವನ್ನೂ ಲಗತ್ತಿಸಲಾಗಿದೆ, ಈ ಪತ್ರವು ವ್ಯಾಪಾರ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸುತ್ತದೆ. ಪೋಸ್ಟ್ ಮತ್ತು ಸಂಪೂರ್ಣ ಪತ್ರವನ್ನು ಕೆಳಗೆ ವೀಕ್ಷಿಸಿ –

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

 ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಪತ್ರವು ಕಟ್ಟುಕಥೆಯಾಗಿದ್ದು, ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ವ್ಯವಹಾರಗಳನ್ನು ಸ್ಥಗಿತಗೊಳಿಸಲಾಗಿಲ್ಲ. ಇದಲ್ಲದೆ, ಅಧಿಕೃತ ಸರ್ಕಾರಿ ಮೂಲಗಳು ಇದನ್ನು ನಿರಾಕರಿಸಿವೆ ಮತ್ತು ಪತ್ರವು ನಕಲಿ ಎಂದು ಹೇಳಿಕೆ ನೀಡಿವೆ.

ಈ ಹೇಳಿಕೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಾವು ಮೊದಲು “ಭಾರತವು ಅಫ್ಘಾನಿಸ್ತಾನದೊಂದಿಗಿನ ವ್ಯಾಪಾರ ಸಂಬಂಧಗಳನ್ನು ಸ್ಥಗಿತಗೊಳಿಸಿದೆ” ಎಂಬ ಪದಗಳೊಂದಿಗೆ ಅಂತರ್ಜಾಲ ಹುಡುಕಾಟವನ್ನು ನಡೆಸಿದೆವು. ಯಾವುದೇ ವಿಶ್ವಾಸಾರ್ಹ ಸುದ್ದಿ ಸಂಸ್ಥೆ ಅಥವಾ ಸರ್ಕಾರದಿಂದ ಯಾವುದೇ ಅಧಿಕೃತ ಪತ್ರ ಪ್ರಕಟಣೆಯು ಅಂತಹ ಪತ್ರವನ್ನು ದೃಢಪಡಿಸಿಲ್ಲ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ವೆಬ್‌ಸೈಟ್‌ನ ಇತ್ತೀಚಿನ ಪತ್ರಿಕಾ ಪ್ರಕಟಣೆಗಳು ಭಾರತದ ವ್ಯಾಪಾರದ ಮಾಸಿಕ ವರದಿಗಳಿಗೆ ಸಂಬಂಧಿಸಿದಂತಿವೆ. ಇದರ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ನೋಡಿ-

ಇದರ ನಂತರ, ನಾವು ಪತ್ರವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ ಅದರಲ್ಲಿ ಹಲವಾರು ಕೊರತೆಗಳು ಕಂಡುಬಂದವು. ಉದಾಹರಣೆಗೆ, ಪತ್ರಕ್ಕೆ “ಶ್ರೀ ವಿಮಲ್ ಆನಂದ್” ರವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸಹಿ ಮಾಡಿದ್ದಾರೆ. ಆದರೆ, ಅಧಿಕೃತ ಸಚಿವಾಲಯದ ದಾಖಲೆಗಳ ಅನುಸಾರ ವಿಮಲ್ ಆನಂದ್ ರವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾಗಿ ಅಲ್ಲ, ಜಂಟಿ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಳಗಿನ ಅಧಿಕೃತ ವೆಬ್‌ಸೈಟ್‌ನಲ್ಲಿ ಇದರ ಸ್ಕ್ರೀನ್‌ಶಾಟ್ ನೋಡಿ-

ಮುಂದೆ, ಪತ್ರದ ಸತ್ಯಾಸತ್ಯತೆಗೆ ಸಂಬಂಧಿಸಿದಂತೆ ಅಧಿಕೃತ ಸರ್ಕಾರಿ ಮೂಲಗಳಿಂದ ಯಾವುದೇ ಸ್ಪಷ್ಟೀಕರಣವಿದೆಯೇ ಎಂದು ನಾವು ಹುಡುಕಿದೆವು. ಪತ್ರಿಕಾ ಮಾಹಿತಿ ಬ್ಯೂರೋ (PIB) ಸತ್ಯ ಪರಿಶೀಲನಾ ಘಟಕವು ಜನವರಿ 13, 2026 ರಂದು X ಪೋಸ್ಟ್‌ನಲ್ಲಿ ಪತ್ರವನ್ನು ಸ್ಪಷ್ಟವಾಗಿ ನಿರಾಕರಿಸಿ, ಇದು ಪಾಕಿಸ್ತಾನಿ ಪ್ರಚಾರ ಅಕೌಂಟ್ ಗಳು ಹರಡಿರುವಂತಹ ಸುದ್ದಿಯಾಗಿದ್ದು, ಸಂಪೂರ್ಣವಾಗಿ ನಕಲಿ ಎಂದು ಹೇಳಿದೆ. ಅಫ್ಘಾನಿಸ್ತಾನದೊಂದಿಗಿನ ವ್ಯಾಪಾರವನ್ನು ಸ್ಥಗಿತಗೊಳಿಸಲಾಗಿದೆ ಎಂಬುದರ ಕುರಿತು ಯಾವುದೇ ಅಧಿಕೃತ ಸಲಹೆ ಅಥವಾ ಆದೇಶ ಅಸ್ತಿತ್ವದಲ್ಲಿಲ್ಲ. ಕೆಳಗಿನ X ಪೋಸ್ಟ್ ನೋಡಿ:

ಆದ್ದರಿಂದ, ಹೇಳಿಕೆ ಸುಳ್ಳು.

******************************************************
ಇದನ್ನೂ ಓದಿ:

2025ರ ನೊಬೆಲ್ ಶಾಂತಿ ಪ್ರಶಸ್ತಿಯ ನಾಮನಿರ್ದೇಶಿತರ ಪಟ್ಟಿಯಿಂದ ಟ್ರಂಪ್ ಅವರನ್ನು ತೆಗೆದುಹಾಕಲಾಗಿದೆಯೇ? ಸತ್ಯ ಪರಿಶೀಲನೆ

ಈ ಚಿತ್ರವು ಜನವರಿ 2026 ರಲ್ಲಿ 2 ಇರಾನೀ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

Leave a Reply

Your email address will not be published.