Don't Miss

ಡೇವಿಡ್ ಬೆಕ್‌ಹ್ಯಾಮ್ ಕಿಂಗ್ ಚಾರ್ಲ್ಸ್ III ರಿಂದ ನೈಟ್‌- ಪದವಿ ನಿರಾಕರಿಸುವುದನ್ನು ಈ ವೈರಲ್ ಕ್ಲಿಪ್ ನಿಜವಾಗಿಯೂ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ವೈರಲ್ ಕ್ಲಿಪ್‌ನಲ್ಲಿ ಡೇವಿಡ್ ಬೆಕ್‌ಹ್ಯಾಮ್ ಕಿಂಗ್ ಚಾರ್ಲ್ಸ್ III ರಿಂದ ನೈಟ್‌ ಪದವಿ ನಿರಾಕರಿಸುವುದನ್ನು ಮತ್ತು ನಂತರ ಅವರನ್ನು ಗುದ್ದು ನೀಡುವುದನ್ನು ತೋರಿಸಲಾಗಿದೆ.

ಕಡೆನುಡಿ/Conclusion: ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಡೇವಿಡ್ ಬೆಕ್‌ಹ್ಯಾಮ್ ನೈಟ್‌ ಪದವಿ ನಿರಾಕರಿಸಲಿಲ್ಲ ಅಥವಾ ಕಿಂಗ್ ಚಾರ್ಲ್ಸ್ III ಗೆ ಗುದ್ದು ನೀಡಲಿಲ್ಲ. ಕ್ಲಿಪ್ ಅನ್ನು AI ಬಳಸಿ ತಿದ್ದಲಾಗಿದೆ. ಕ್ರೀಡೆ ಮತ್ತು ದಾನದರ್ಮದಲ್ಲಿ ನೀಡಿದ ಸೇವೆಗಾಗಿ ಬೆಕ್‌ಹ್ಯಾಮ್ ಕಿಂಗ್ ಚಾರ್ಲ್ಸ್‌ರಿಂದ ನೈಟ್‌ ಪದವಿಯನ್ನು ಪಡೆದರು.

ರೇಟಿಂಗ್/Rating: ಸಂಪೂರ್ಣವಾಗಿ ಸುಳ್ಳು — Five rating

******************************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

******************************************************

ಡೇವಿಡ್ ಬೆಕ್‌ಹ್ಯಾಮ್ ಕಿಂಗ್ ಚಾರ್ಲ್ಸ್ IIIರಿಂದ ನೈಟ್‌ ಪದವಿ ನಿರಾಕರಿಸಿ ನಂತರ ಅವರಿಗೆ ಗುದ್ದು ನೀಡಿದ್ದಾರೆ ಎಂದು ಹೇಳುವ ವೈರಲ್ ಕ್ಲಿಪ್ ಅನ್ನು ಪ್ರಸಾರ ಮಾಡಲಾಗುತ್ತಿದೆ. ದೃಢೀಕೃತ X ಬಳಕೆದಾರ ‘MemerunnerGPT’ ಅಂತಹ ಹೇಳಿಕೆಯನ್ನು “ಡೇವಿಡ್ ಬೆಕ್‌ಹ್ಯಾಮ್ ಕಿಂಗ್ ಚಾರ್ಲ್ಸ್‌ನಿಂದ ನೈಟ್‌ ಪದವಿ ನಿರಾಕರಿಸಿದ್ದಾರೆ!” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ವಿಂಡ್ಸರ್ ಕಾಸ್ಟಲ್ ನಂತೆ ಕಾಣುವ ಸ್ಥಳದಲ್ಲಿ ನಡೆಯುತ್ತಿರುವ ದೃಶ್ಯವನ್ನು ಚಿತ್ರಿಸುವ 14 ಸೆಕೆಂಡುಗಳ ಔಪಚಾರಿಕ ವೀಡಿಯೊ ಕ್ಲಿಪ್ ಸೇರಿದೆ, ಇದರಲ್ಲಿ ಬೆಕ್‌ಹ್ಯಾಮ್ ಕಿಂಗ್ ಚಾರ್ಲ್ಸ್ III ರ ಮುಂದೆ ಮಂಡಿಯೂರಿ ನಂತರ ರಾಜನಿಗೆ ಗುದ್ದು ನೀಡಿ ಪದಕವನ್ನು ಎಸೆಯುವುದನ್ನು ತೋರಿಸಲಾಗಿದೆ. ಪೋಸ್ಟ್ ಅನ್ನು ಕೆಳಗೆ ವೀಕ್ಷಿಸಿ –

 

ಇತರ ಬಳಕೆದಾರರು ಇಲ್ಲಿ ಮತ್ತು ಇಲ್ಲಿ ನೋಡಬಹುದಾದ ಇದೇ ರೀತಿಯ ಹೇಳಿಕೆಗಳನ್ನು ಮಾಡಿದ್ದಾರೆ

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ಈ ಹೇಳಿಕೆಯ ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸಂಪೂರ್ಣವಾಗಿ ಸುಳ್ಳು ಎಂದು ಕಂಡುಕೊಂಡಿತು. ಈ ವೀಡಿಯೊ AI ಮೂಲಕ ರಚಿಸಲ್ಪಟ್ಟಿರುವಂಥದ್ದು ಮತ್ತು ಡೇವಿಡ್ ಬೆಕ್‌ಹ್ಯಾಮ್ ಕಿಂಗ್ ಚಾರ್ಲ್ಸ್ III ಅವರಿಂದ ನೈಟ್ ಪದವಿಯನ್ನು ನಿರಾಕರಿಸಲಿಲ್ಲ ಅಥವಾ ಅವರಿಗೆ ಹೊಡೆಯಲೂ ಇಲ್ಲ. ನಿಜವಾದ ದೃಶ್ಯಗಳು ಮತ್ತು ಹಲವಾರು ವರದಿಗಳು ನವೆಂಬರ್ 4, 2025ರಂದು ವಿಂಡ್ಸರ್ ಕ್ಯಾಸಲ್‌ನಲ್ಲಿ ಅವರಿಗೆ ನೈಟ್ ಪದವಿ ನೀಡಲಾಯಿತು ಎಂದು ಖಚಿತಪಡಿಸುತ್ತವೆ.

ನಾವು ಮೊದಲು “ಡೇವಿಡ್ ಬೆಕ್‌ಹ್ಯಾಮ್ ನೈಟ್‌ ಪದವಿಯನ್ನು ನಿರಾಕರಿಸಿದರು” ಎಂಬ ಪದಗುಚ್ಛದೊಂದಿಗೆ ಅಂತರ್ಜಾಲ ಹುಡುಕಾಟವನ್ನು ನಡೆಸಿದೆವು ಆದರೆ ಯಾವುದೇ ವಿಶ್ವಾಸಾರ್ಹ ವರದಿ ಕಾಣಲಿಲ್ಲ. ಮತ್ತೊಂದೆಡೆ, BBC ಪ್ರಕಟಿಸಿದ ವರದಿಯಂತಹ ಹಲವಾರು ವರದಿಗಳು ಡೇವಿಡ್ ಬೆಕ್‌ಹ್ಯಾಮ್ ಕಿಂಗ್ ಚಾರ್ಲ್ಸ್ III ರವರಿಂದ ನೈಟ್‌ ಪದವಿ ಸ್ವೀಕರಿಸಿದ್ದಾರೆ ಎಂದು ದೃಢಪಡಿಸುತ್ತವೆ. “ಈ ವರ್ಷ ಕಿಂಗ್ ಚಾರ್ಲ್ಸ್ ರವರ ಜನ್ಮದಿನದ ಗೌರವ ಪಟ್ಟಿಯಲ್ಲಿ ಹೆಸರಿಸಲಾದ 50 ವರ್ಷ ವಯಸ್ಸಿನ ಇವರನ್ನು ಮಂಗಳವಾರ ಬರ್ಕ್‌ಷೈರ್‌ನಲ್ಲಿ ನಡೆದ ಸಮಾರಂಭದಲ್ಲಿ ರಾಜರಿಂ ನೈಟ್‌ ಪದವಿ ಪಡೆದರು” ಎಂದು ವರದಿಯು ಉಲ್ಲೇಖಿಸುತ್ತದೆ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಇದರ ನಂತರ, ಡೇವಿಡ್ ಬೆಕ್‌ಹ್ಯಾಮ್ ನೈಟ್‌ ಪದವಿ ಸ್ವೀಕರಿಸುವ ನಿಜವಾದ ದೃಶ್ಯಗಳನ್ನು ನಾವು ಹುಡುಕಿದೆವು. ಇಂಗ್ಲಿಷ್ ಬ್ರಾಡ್‌ಕಾಸ್ಟ್ ಕಂಪನಿಯು ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಆ ಕ್ಷಣದ ದೃಶ್ಯಗಳನ್ನು ಅಪ್‌ಲೋಡ್ ಮಾಡಿದೆ. ಕ್ಲಿಪ್‌ನಲ್ಲಿ, ರಾಜ ಚಾರ್ಲ್ಸ್ III ಬೆಕ್‌ಹ್ಯಾಮ್ ರ ಭುಜಗಳನ್ನು ಕತ್ತಿಯಿಂದ ತಟ್ಟುತ್ತಾರೆ ಮತ್ತು ಬೆಕ್‌ಹ್ಯಾಮ್ ಕೆಂಪು ರಿಬ್ಬನ್ ಚಿಹ್ನೆಯೊಂದಿಗೆ ಸಂತೋಷದಿಂದ ಎದ್ದು ನಿಲ್ಲುತ್ತಾರೆ.

news.com.au  ನಂತಹ ಇತರ ವಾಹಿನಿಗಳು ವಿಸ್ತೃತ ಆವೃತ್ತಿಯನ್ನು ಸಹ ಅಪ್‌ಲೋಡ್ ಮಾಡಿವೆ, ಅದನ್ನು ಇಲ್ಲಿ ಕಾಣಬಹುದು.

ಕೊನೆಯದಾಗಿ,  ಹೇಳಿಕೆಯಲ್ಲಿ ಬಳಸಲಾದ ಕ್ಲಿಪ್‌ನಿಂದ ವಿವಿಧ ಕೀಫ್ರೇಮ್‌ಗಳನ್ನು ನಾವು AI-ಪತ್ತೆ ಟೂಲ್ ನಲ್ಲಿ ಪರಿಶೀಲಿಸಿದೆವು, ಆಗ ವೀಡಿಯೊವನ್ನು AI ಮೂಲಕ ಸಂಪೂರ್ಣವಾಗಿ ತಿದ್ದಲಾಗಿದೆ ಎಂದು ಫಲಿತಾಂಶಗಳು ಸಾಬೀತುಪಡಿಸಿದವು. ಫಲಿತಾಂಶಗಳನ್ನು ಕೆಳಗೆ ವೀಕ್ಷಿಸಿ –

ಹೀಗಾಗಿ, ಹೇಳಿಕೆ ಸಂಪೂರ್ಣವಾಗಿ ಸುಳ್ಳು.

******************************************************
ಇದನ್ನೂ ಓದಿ:

ಟ್ರಂಪ್ UK ಭೇಟಿಯ ಸಮಯದಲ್ಲಿ ಸ್ಟಾರ್ ವಾರ್ಸ್‌ನ “ದಿ ಇಂಪೀರಿಯಲ್ ಮಾರ್ಚ್” ಎಂಬ ಹಾಡಿಗೆ ನಮನ ಸಲ್ಲಿಸಿದರೇ? ಸತ್ಯ ಪರಿಶೀಲನೆ

ಇಟಲಿಯ ಪ್ರಧಾನಿ ಮೆಲೋನಿಯವರು ನೆತನ್ಯಾಹು ಇಟಲಿಗೆ ಪ್ರವೇಶಿಸಿದರೆ ಆತನನ್ನು ಬಂಧಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರಾ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*