ಹೇಳಿಕೆ/Claim: ಡಿಸೆಂಬರ್ 2025ರಲ್ಲಿ ಗೋವಾ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಇಂಡಿಗೋ ವಿಮಾನ ವಿಳಂಬದ ಸಮಯದಲ್ಲಿ ಜನರು ಗಾರ್ಬಾ ನೃತ್ಯ ಮಾಡುತ್ತಿರುವುದನ್ನು ವೈರಲ್ ವೀಡಿಯೊ ತೋರಿಸುತ್ತದೆ.
ಕಡೆನುಡಿ/Conclusion: ಹೇಳಿಕೆ ದಾರಿ ತಪ್ಪಿಸುವಂಥದ್ದು. ಈ ವೀಡಿಯೊ ಸೆಪ್ಟೆಂಬರ್ 2025ರದ್ದು ಮತ್ತು ಡಿಸೆಂಬರ್ 2025 ರಲ್ಲಿ ದೇಶಾದ್ಯಂತ ಇಂಡಿಗೋ ವಿಮಾನಗಳು ಭಾರಿ ವಿಳಂಬವನ್ನು ಎದುರಿಸಿದಾಗ ಮತ್ತೆ ಈ ವೀಡಿಯೊವನ್ನು ಪುನಃ ಹಂಚಿಕೊಳ್ಳಲಾಗಿತ್ತು.
ರೇಟಿಂಗ್/Rating: ದಾರಿ ತಪ್ಪಿಸುವಂಥದ್ದು– ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
******************************************************
ಡಿಸೆಂಬರ್ 2025 ರಲ್ಲಿ ಇಂಡಿಗೋ ವಿಮಾನ ವಿಳಂಬದ ಸಮಯದಲ್ಲಿ ಜನರು ಗಾರ್ಬಾ ನೃತ್ಯ ಮಾಡುತ್ತಿರುವ ಬಗ್ಗೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವಿವಿಧ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ. X ಬಳಕೆದಾರ ‘RealitySach’ ಡಿಸೆಂಬರ್ 6, 2025 ರಂದು ಈ ಮುಂದಿನ ಹೇಳಿಕೆಯೊಂದಿಗೆ ಅಂತಹ ಒಂದು ಹೇಳಿಕೆಯನ್ನು ಹಂಚಿಕೊಂಡಿದ್ದಾರೆ “ಕಾಯುತ್ತಿರುವ ಪ್ರಯಾಣಿಕರು ಸಮಯ ಕಳೆಯಲು ಗಾರ್ಬಾ ನೃತ್ಯ ಮಾಡಲು ಪ್ರಾರಂಭಿಸಿದಾಗ ಗೋವಾ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದ ವಿಳಂಬವು ಅನಿರೀಕ್ಷಿತ ಸಾಂಸ್ಕೃತಿಕ ಆಚರಣೆಯಾಗಿ ಮಾರ್ಪಟ್ಟಿತು”.
16 ಸೆಕೆಂಡುಗಳ ಕ್ಲಿಪ್ ನಲ್ಲಿ ಪುರುಷರು ಮತ್ತು ಮಹಿಳೆಯರೂ ಸೇರಿದಂತೆ ಸುಮಾರು 20-30 ಜನರ ಗುಂಪೊಂದು ಗಾರ್ಬಾ ನೃತ್ಯ ಮಾಡುವುದನ್ನು ಕಾಣಬಹುದು. ಪೋಸ್ಟ್ ಅನ್ನು ಕೆಳಗೆ ನೋಡಿ:
The delay of an IndiGo flight at Goa Airport turned into an unexpected moment of cultural celebration when waiting passengers began performing Garba to pass the time. pic.twitter.com/lWFgsA4JRU
— SachTheReality (@RealitySach) December 6, 2025

ಇತರ ಬಳಕೆದಾರರು ಸಹ ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಿತು ಮತ್ತು ಈ ಹೇಳಿಕೆಯು ದಾರಿತಪ್ಪಿಸುವಂತಿದೆ ಎಂದು ಕಂಡುಕೊಂಡಿತು. ಈ ವೀಡಿಯೊ ಸೆಪ್ಟೆಂಬರ್ 2025ರದ್ದು ಮತ್ತು ಡಿಸೆಂಬರ್ 2025 ರಲ್ಲಿ ದೇಶಾದ್ಯಂತ ಇಂಡಿಗೋ ವಿಮಾನಗಳು ಭಾರಿ ವಿಳಂಬವನ್ನು ಎದುರಿಸಿದಾಗ ಮತ್ತೆ ಕಾಣಿಸಿಕೊಂಡಿರುವಂಥದ್ದು. ಸೆಪ್ಟೆಂಬರ್ 2025 ರಲ್ಲಿ ವೀಡಿಯೊವನ್ನು ಹಂಚಿಕೊಂಡಿರುವ ಹಲವಾರು ವರದಿಗಳು ಮತ್ತು ಹಿಂದಿನ ನಿದರ್ಶನಗಳು ಅದರ ಮೂಲ ಸಮಯವನ್ನು ದೃಢಪಡಿಸುತ್ತವೆ.
ವಿವರಗಳು:
ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಾವು ಮೊದಲು ವೀಡಿಯೊದ ವಿವಿಧ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಹುಡುಕಾಟವು ಸೆಪ್ಟೆಂಬರ್ 30, 2025 ರ ‘heraldo_goa’ ನ ಇನ್ಸ್ಟಾಗ್ರಾಂ ರೀಲ್‌ಗೆ ನಮ್ಮನ್ನು ಕರೆದೊಯ್ಯಿತು. “ಗೋವಾದಿಂದ ಸೂರತ್‌ಗೆ ತೆರಳುವ ವಿಮಾನವು ಐದು ಗಂಟೆಗಳ ವಿಳಂಬ ಕಂಡ ನಂತರ, ಗೋವಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿ ಒಟ್ಟಿಗೆ ಗರ್ಬಾ ಪ್ರದರ್ಶಿಸುವ ಮೂಲಕ ಕಾಯುವುದನ್ನು ಹಬ್ಬದ ಆಚರಣೆಯನ್ನಾಗಿ ಪರಿವರ್ತಿಸಿದರು” ಎಂದು ಶೀರ್ಷಿಕೆಯು ಹೇಳುತ್ತದೆ. ಪೋಸ್ಟ್ ಅನ್ನು ಕೆಳಗೆ ನೋಡಿ:
View this post on Instagram

ಸೆಪ್ಟೆಂಬರ್ 30, 2025 ರಂದು ‘ಲೋಕ್ಮತ್ ಟೈಮ್ಸ್’ ಮತ್ತು ‘ಇಂಡಿಯಾ ಟೈಮ್ಸ್’ ಪೋಸ್ಟ್ ಮಾಡಿದ ಇದೇ ಘಟನೆಯ ಇತರ ವೀಡಿಯೊಗಳೂ ಸಹ ನಮ್ಮ ಕೈಸೇರಿದವು, ಅವುಗಳನ್ನು ಕ್ರಮವಾಗಿ ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಇದರ ನಂತರ, ಹೆಚ್ಚಿನ ಮಾಹಿತಿಗಾಗಿ ನಾವು “ಗೋವಾ ವಿಮಾನ ವಿಳಂಬ ಸೂರತ್ 30 ಸೆಪ್ಟೆಂಬರ್ 2025 ಗಾರ್ಬಾ” ಎಂಬ ಪದಗುಚ್ಛದೊಂದಿಗೆ ಅಂತರ್ಜಾಲ ಹುಡುಕಾಟವನ್ನು ನಡೆಸಿದೆವು. ಸೆಪ್ಟೆಂಬರ್ 30, 2025 ರಂದು ಪ್ರಕಟವಾದ ಇಂಡಿಯಾ ಟಿವಿ ವರದಿಯ ಪ್ರಕಾರ, “ಸೂರತ್‌ನ ಪ್ರಯಾಣಿಕರ ಗುಂಪೊಂದು ಆಕಸ್ಮಿಕ ಗಾರ್ಬಾ ಪ್ರಾರಂಭಿಸಿದಾಗ ಗೋವಾ ವಿಮಾನ ನಿಲ್ದಾಣದಲ್ಲಿ ದೀರ್ಘ ವಿಮಾನ ವಿಳಂಬವು ಅನಿರೀಕ್ಷಿತ ಆಚರಣೆಯಾಗಿ ಮಾರ್ಪಟ್ಟಿತು”. ಸಂಜೆ 5 ಗಂಟೆಗೆ ನಿಗದಿಯಾಗಿದ್ದ ವಿಮಾನವು “ಸುಮಾರು ಐದು ಗಂಟೆಗಳ ಕಾಲ ವಿಳಂಬವಾಯಿತು” ಎಂದು ವರದಿಯು ಮತ್ತಷ್ಟು ವಿವರ ನೀಡುತ್ತದೆ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ:

ಸೆಪ್ಟೆಂಬರ್ 30, 2025 ರಂದು NDTV ಪ್ರಕಟಿಸಿದ ಮತ್ತೊಂದು ವರದಿಯು ಸಹ ಇದನ್ನು ದೃಢಪಡಿಸಿದೆ. ವರದಿಯಲ್ಲಿ “ವೈರಲ್ ವಿಡಿಯೋ: ಗೋವಾ ವಿಮಾನ ನಿಲ್ದಾಣದಲ್ಲಿ ಗಾರ್ಬಾ: ವಿಮಾನ ವಿಳಂಬವನ್ನು ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳುವಾಗ ಇಂಡಿಗೋ ಸಿಬ್ಬಂದಿಯೂ ಸೇರಿದರು” ಎಂಬ ಶೀರ್ಷಿಕೆಯೊಂದಿಗೆ ವೈರಲ್ ಕ್ಲಿಪ್ ಅನ್ನು ಸೇರಿಸಲಾಗಿದೆ. “ಗೋವಾದಿಂದ ಸೂರತ್‌ಗೆ ಹಾರುತ್ತಿದ್ದ ವಿಮಾನವು ಐದು ಗಂಟೆ ತಡವಾಗಿ ಬಂದಿತು” ಮತ್ತು ಪ್ರಯಾಣಿಕರು ಗಾರ್ಬಾವನ್ನು ಆನಂದಿಸಿದರು ಎಂಬುದನ್ನು ವರದಿಯು ತಿಳಿಸುತ್ತದೆ.
ಹೀಗಾಗಿ, ಈ ಹೇಳಿಕೆ ದಾರಿತಪ್ಪಿಸುವಂತಿದೆ.
Digiteye Kannada Fact Checkers