ಭಾರತದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಬೈಕ್ ಸವಾರರು ಬೀಳುವುದನ್ನು ಕೃತಕ ವೀಡಿಯೊ ತೋರಿಸುತ್ತದೆ; ಸತ್ಯ ಪರಿಶೀಲನೆ

ಭಾರತದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಬೈಕ್ ಸವಾರರು ಬೀಳುವುದನ್ನು ಕೃತಕ ವೀಡಿಯೊ ತೋರಿಸುತ್ತದೆ; ಸತ್ಯ ಪರಿಶೀಲನೆ

ಹೇಳಿಕೆ/Claim : ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾರತೀಯ ಸೇನೆಯು ಬೈಕ್ ಸಾಹಸಗಳನ್ನು ಮಾಡುವಾಗ ವಿಫಲಗೊಂಡಿದೆ ಎಂದು ವೀಡಿಯೊ ತೋರಿಸುತ್ತದೆ.

ಕಡೆನುಡಿ/Conclusion :ಹೇಳಿಕೆ ಸಂಪೂರ್ಣವಾಗಿ ಸುಳ್ಳು. ದೃಶ್ಯಾವಳಿಯು AI- ರಚಿತವಾಗಿದ್ದು ಯಾವುದೇ ನೈಜ ಸಾಹಸಕೃತ್ಯವನ್ನು ಪ್ರತಿಬಿಂಬಿಸುವುದಿಲ್ಲ. ವಿವಿಧ ವರದಿಗಳು/ಟಿವಿ ಚಾನೆಲ್‌ಗಳಲ್ಲಿ ಕಾಣುವಂತೆ ಭಾರತೀಯ ಸೇನೆಯು ಅದ್ಭುತ ಬೈಕ್ ಸಾಹಸಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿತ್ತು.

ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು Five rating

******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

******************************************************

2026ರ ಭಾರತದ ಗಣರಾಜ್ಯೋತ್ಸವ ಮೆರವಣಿಗೆಯ ಸಮಯದಲ್ಲಿ ಭಾರತೀಯ ಸೇನೆಯ ವಿಫಲಗೊಂಡ ಬೈಕ್ ಸಾಹಸಗಳನ್ನು ಪ್ರದರ್ಶಿಸುವ ವೀಡಿಯೊ ಎನ್ನಲಾಗಿರುವ ಕ್ಲಿಪ್ ಅನ್ನು ಇತ್ತೀಚೆಗೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘sadafzbaloch’ ಅಂತಹ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಇದರಲ್ಲಿ ಭಾರತೀಯ ಧ್ವಜದ ಬಣ್ಣಗಳಲ್ಲಿ ಚಿತ್ರಿಸಿದ ರ‍್ಯಾಂಪ್ ಮೇಲೆ ಮೋಟಾರ್‌ಸೈಕ್ಲಿಸ್ಟ್‌ಗಳು ಧೈರ್ಯಶಾಲಿ ಜಿಗಿತಗಳನ್ನು ಪ್ರದರ್ಶಿಸುವುದನ್ನು ಮತ್ತು ಹಲವಾರು ಪಲ್ಟಿಗಳು ಮತ್ತು ಅಪಘಾತಗಳ ನಿದರ್ಶನಗಳನ್ನು ತೋರಿಸಲಾಗಿದೆ. “ಬಾಲಿವುಡ್ ನಾಯಕರು ಗುರುತ್ವಾಕರ್ಷಣೆಗೆ ಸಡ್ಡೆ ಹೊಡೆಯುವಂತೆ, ರಕ್ಷಣಾ ತಂತ್ರವು ರ‍್ಯಾಂಪ್‌ಗಳಿಗಿಂತ ಹೆಚ್ಚು ಲೋಪದೋಷಗಳನ್ನು ಜಿಗಿಯುತ್ತದೆ!” ಎಂಬ ಶೀರ್ಷಿಕೆಯು ಬೈಕ್‌ಗಳು ಹೇಗೆ ಹಾರುತ್ತಿವೆ ಎಂಬುದನ್ನು ಉಲ್ಲೇಖಿಸುವ ಮೂಲಕ ಭಾರತದ ಬಗ್ಗೆ ಅಗೌರವ ತೋರುತ್ತದೆ. ವೀಡಿಯೊದ ಮೇಲೆ “ಟೆಸ್ ಮೆಂಬುವಾಟ್ ಸಿಮ್ ಡಿ ಇಂಡಿಯಾ” ಎಂಬ ಇಂಡೋನೇಷಿಯನ್ ಪಠ್ಯವನ್ನು ಸೇರಿಸಲಾಗಿದೆ, ಇದರ ಅರ್ಥ “ಭಾರತದಲ್ಲಿ ಡ್ರೈವಿಂಗ್ ಲೈಸನ್ಸ್ ಪರೀಕ್ಷೆ” ಎಂದಾಗಿದೆ. ಪೋಸ್ಟ್ ಅನ್ನು ಕೆಳಗೆ ನೋಡಿ-

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸಂಪೂರ್ಣವಾಗಿ ಸುಳ್ಳು ಎಂದು ಕಂಡುಕೊಂಡಿತು. 2026ರ ಭಾರತದ ಗಣರಾಜ್ಯೋತ್ಸವ ಮೆರವಣಿಗೆಯ ಈ ದೃಶ್ಯಗಳನ್ನು ಬೆಂಬಲಿಸುವ ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ. ಇದು AI- ರಚಿತವಾಗಿದೆ ಎಂಬುದಕ್ಕೆ ಸ್ಪಷ್ಟ ಲಕ್ಷಣಗಳು ಕಂಡುಬರುತ್ತವೆ ಮತ್ತು ಈ ವೀಡಿಯೊ ಅಸಂಗತತೆಗಳನ್ನು ಕೂಡ ಒಳಗೊಂಡಿದೆ.

ವಿವರಗಳು:

ಮೊದಲು ನಾವು ಹೇಳಿಕೆಯಲ್ಲಿ ಹಂಚಿಕೊಳ್ಳಲಾದ ಕ್ಲಿಪ್‌ನ ವಿವಿಧ ಪ್ರಮುಖ್ಹ ಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಆದರೆ, ಅದರ ಸತ್ಯಾತೆಯನ್ನು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ಸುದ್ದಿ ಮಾಧ್ಯಮಗಳು ಅಥವಾ ವರದಿಗಳು ನಮಗೆ ಸಿಗಲಿಲ್ಲ. “2026 ಭಾರತ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಬೈಕ್ ಸ್ಟಂಟ್ ವೈಫಲ್ಯ” ಎಂದು ನಾವು ನಡೆಸಿದ ಹುಡುಕಾಟಗಳು ಯಾವುದೇ ದೃಢೀಕೃತ ಫಲಿತಾಂಶಗಳನ್ನು ನೀಡಿಲ್ಲ.

ಇದರ ನಂತರ, 2026ರ ಭಾರತದ ಗಣರಾಜ್ಯೋತ್ಸವ ಪೆರೇಡ್ ಸಮಯದ ಬೈಕ್ ಸ್ಟಂಟ್‌ಗಳ ವೀಡಿಯೊ ಕ್ಲಿಪ್‌ಗಳು ಮತ್ತು ದೃಶ್ಯಾವಳಿಗಳನ್ನು ಪಡೆಯಲು ನಾವು ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. ಹುಡುಕಾಟದಲ್ಲಿ ನಮಗೆ ಜನವರಿ 26, 2026ರಂದು PIB (ಪತ್ರಿಕಾ ಮಾಹಿತಿ ಬ್ಯೂರೋ) ಹಾಕಿದ X ಪೋಸ್ಟ್‌ ದೊರಕಿತು.

ಈ ಪೋಸ್ಟ್‌ನಲ್ಲಿ ಕರ್ತವ್ಯ ಪಥದಲ್ಲಿ ಜನಸಮೂಹವನ್ನು ಆಕರ್ಷಿಸಿದಂತಹ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಮತ್ತು ಸಶಸ್ತ್ರ ಸೀಮಾ ಬಲದ(SSB) ಜಂಟಿ ಡೇರ್‌ಡೆವಿಲ್ಸ್ ತಂಡದ ಬೈಕ್ ಸಾಹಸಗಳ ವೀಡಿಯೊ ಒಳಗೊಂಡಿತ್ತು. ಅವರು ಹೇಗೆ ಅತೀವ ಶೌರ್ಯ ಮತ್ತು ದೋಷರಹಿತವಾದ ಅತ್ಯದ್ಭುತ ಸಾಹಸಗಳನ್ನು ಪ್ರದರ್ಶಿಸಿದರು ಎಂಬುದನ್ನು ಇದರಲ್ಲಿ ನೋಡಬಹುದು ಮತ್ತು ಪ್ರದರ್ಶನದ ಉದ್ದಕ್ಕೂ ಯಾವುದೇ ಅಪಘಾತಗಳು ಅಥವಾ ವೈಫಲ್ಯಗಳು ಇರಲಿಲ್ಲ. ವೀಡಿಯೊ/ಪೋಸ್ಟ್ ಅನ್ನು ಕೆಳಗೆ ನೋಡಿ.

ಹಾಗೆಯೇ, ಜನವರಿ 26, 2026ರಂದು ಪ್ರಕಟವಾದ NDTV ವರದಿಯಲ್ಲಿ “ಕರ್ತವ್ಯ ಪಥದಲ್ಲಿ 2026ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ CRPF ಮತ್ತು SSB ಸಿಬ್ಬಂದಿ ನಡೆಸಿದ ರೋಮಾಂಚಕ ಬೈಕ್ ಡೇರ್‌ಡೆವಿಲ್ ಸಾಹಸಗಳ” ಬಗ್ಗೆ ತಿಳಿಸಲಾಗಿದೆ. ವರದಿಯಲ್ಲಿರುವ ಸುಮಾರು 7 ನಿಮಿಷಗಳ ವೀಡಿಯೊ ಕ್ಲಿಪ್ ನಲ್ಲಿ, ರಾಯಲ್ ಎನ್‌ಫೀಲ್ಡ್ ಬುಲೆಟ್ ಮೋಟಾರ್‌ಸೈಕಲ್‌ಗಳಲ್ಲಿ ನಿಖರವಾದ ಸವಾರಿ, ಸಮತೋಲನಸಹಿತ ರಚನೆಗಳು ಮತ್ತು ಧೈರ್ಯಶಾಲಿ ಕುಶಲತೆಯನ್ನು ಪ್ರದರ್ಶಿಸಲಾಗಿದೆ. ಇದಲ್ಲದೆ, ಮೆರವಣಿಗೆಯ ದೃಶ್ಯಗಳು ಹೇಳಿಜಕೆಯಲ್ಲಿ ಹಂಚಿಕೊಂಡ ವೀಡಿಯೊಗೆ ಹೊಂದಿಕೆಯಾಗುವುದಿಲ್ಲ. ಸ್ಕ್ರೀನ್‌ಶಾಟ್ ಅನ್ನು ಕೆಳಗೆ ನೋಡಿ-

ಇಂಡಿಯಾ ಟುಡೇ ಮತ್ತು HT ಇಂಡಿಯಾ ಕೂಡ ಮೆರವಣಿಯಲ್ಲಿ CRPF ಮತ್ತು SSB ಡೇರ್‌ಡೆವಿಲ್ ಗಳ ಅದ್ಭುತ ಸಾಹಸಗಳನ್ನು ಪ್ರದರ್ಶಿಸುವ ವೀಡಿಯೊಗಳನ್ನು ಅಪ್‌ಲೋಡ್ ಮಾಡಿವೆ, ಇವುಗಳನ್ನು ಕ್ರಮವಾಗಿ ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಸಾಹಸಗಳು ದೋಷರಹಿತವಾಗಿ ಕಾಣುತ್ತಿದ್ದು ಅದರಲ್ಲಿ ಯಾರೂ ಬೀಳುವುದು, ಉರುಳುವುದು ಕಾಣುವುದಿಲ್ಲ.

ಸಂಪೂರ್ಣ 77 ನೇ ಗಣರಾಜ್ಯೋತ್ಸವ| 26 ಜನವರಿ 2026 ಪೆರೇಡ್ ಇಲ್ಲಿ ನೋಡಬಹುದು.

ಕೊನೆಯದಾಗಿ, ನಾವು ಹೇಳಿಕೆಯಲ್ಲಿರುವ ವೀಡಿಯೊವನ್ನು ತೆಗೆದು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು AI ಡಿಟೆಕ್ಟರ್ ನಲ್ಲಿ ಹಾಕಿ ನೋಡಿದೆವು. ವೀಡಿಯೊ 99% AI ಅಥವಾ ಡೀಪ್‌ಫೇಕ್ ವೀಡಿಯೊ ಹೊಂದಿರುವ ಸಾಧ್ಯತೆಯಿದೆ ಎಂದು ಫಲಿತಾಂಶಗಳು ಸಾಬೀತುಪಡಿಸಿವೆ. ಸ್ಪಷ್ಟವಾದ ಅಸಂಗತತೆಗಳು ಸಹ ಇವೆ, ಉದಾಹರಣೆಗೆ ಅಂದಾಜು 15 ಸೆಕೆಂಡುಗಳ ಸಮಯಮುದ್ರೆಯಲ್ಲಿ, ಮೂವರು ಬೈಕರ್‌ಗಳು ಬೀಳುತ್ತಾರೆ ಆದರೆ ಇದ್ದಕ್ಕಿದ್ದಂತೆ ಕೊನೆಯಲ್ಲಿ ಮತ್ತೊಬ್ಬರು ಬೈಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಫಲಿತಾಂಶಗಳನ್ನು ಕೆಳಗೆ ನೋಡಿ-

ಪ್ರಸ್ತುತ ಡಿಲೀಟ್ ಮಾಡಲಾಗಿರುವ ಈ ವೀಡಿಯೊವನ್ನು ಕೃತಕವಾಗಿ ರಚಿಸಲಾಗಿದೆ ಮತ್ತು ಈ ಹೇಳಿಕೆ 2026ರ ಗಣರಾಜ್ಯೋತ್ಸವ ಮೆರವಣಿಗೆಯ ಸಮಯದಲ್ಲಿ ನಡೆದ ಯಾವುದೇ ನೈಜ ಸನ್ನಿವೇಶ ಅಥವಾ ಘಟನೆಯನ್ನು ಪ್ರತಿಬಿಂಬಿಸುವುದಿಲ್ಲ.

ಹೀಗಾಗಿ, ಹೇಳಿಕೆಯು ಸಂಪೂರ್ಣವಾಗಿ ಸುಳ್ಳು.

******************************************************
ಇದನ್ನೂ ಓದಿ:

ಭಾರತದ ರಾಜಧಾನಿ ದೆಹಲಿಯನ್ನು ಶೀಘ್ರದಲ್ಲೇ ಇಂದ್ರಪ್ರಸ್ಥ ಎಂದು ಮರುನಾಮಕರಣ ಮಾಡಲಾಗುವುದೇ? ಸತ್ಯ ಪರಿಶೀಲನೆ

ರಾಜ್ಯಸಭಾ ಸಂಸದೆ ಸುಧಾ ಮೂರ್ತಿಯವರು 10 ಲಕ್ಷ ರೂ. ಗಳಿಸುವ ಹಣಕಾಸು ಯೋಜನೆಗೆ ಪ್ರಚಾರ ನೀಡಿದರೇ? ಸತ್ಯ ಪರಿಶೀಲನೆ

Leave a Reply

Your email address will not be published.