Don't Miss

ಈ ವೀಡಿಯೊದಲ್ಲಿ ಆಪರೇಷನ್ ಸಿಂಧೂರ್ ಕುರಿತಂತೆ ಐಶ್ವರ್ಯಾ ರೈ ಬಚ್ಚನ್ ಪ್ರಧಾನಿ ಮೋದಿಯವರನ್ನು ಪ್ರಶ್ನಿಸುತ್ತಿರುವುದು ಕಾಣುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಆಪರೇಷನ್ ಸಿಂಧೂರ್‌ನಲ್ಲಿನ ಮಿಲಿಟರಿ ನಷ್ಟಗಳ ಕುರಿತು ಐಶ್ವರ್ಯಾ ರೈ ಬಚ್ಚನ್ ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದರು ಎಂದು ವೀಡಿಯೊ ಹೇಳುತ್ತದೆ.

ಕಡೆನುಡಿ/Conclusion : ಈ ಹೇಳಿಕೆಯು ತಪ್ಪು ನಿರೂಪಣೆ ನೀಡುತ್ತದೆ. ಇದು ನವೆಂಬರ್ 19, 2025 ರಂದು ಶ್ರೀ ಸತ್ಯ ಸಾಯಿ ಬಾಬಾ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಐಶ್ವರ್ಯಾ ರೈಯವರ ಭಾಷಣದಿಂದ ಪಡೆದ ಅಧಿಕೃತ ದೃಶ್ಯಾವಳಿಯಲ್ಲಿ AI ಧ್ವನಿಯನ್ನು ಸೇರಿಸಿ ರಚಿಸಲಾದ ಡೀಪ್ ಫೇಕ್ ವೀಡಿಯೊ.

ರೇಟಿಂಗ್/ating: ತಪ್ಪು ನಿರೂಪಣೆ  —

******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.
******************************************************

ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಅಶ್ವರ್ಯ ರೈ ಬಚ್ಚನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ನಡುವಿನ ಚರ್ಚೆಯ ವೈರಲ್ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ರವರು “ಆಪರೇಷನ್ ಸಿಂಧೂರ್” ಸಮಯದಲ್ಲಿ ಭಾರತದ ಮಿಲಿಟರಿ ಹಿನ್ನಡೆಗಳು ಎನ್ನಲಾಗಿರುವ ಅಂಶಗಳ ಬಗ್ಗೆ ಪ್ರಧಾನಿ ಮೋದಿಯವರನ್ನು ನೇರವಾಗಿ ಪ್ರಶ್ನಿಸುತ್ತಿರುವುದನ್ನು ತೋರಿಸುವ 29 ಸೆಕೆಂಡುಗಳ ವೀಡಿಯೊ ಕ್ಲಿಪ್ ಅನ್ನು ಸಹ ಈ ಪೋಸ್ಟ್ ನಲ್ಲಿ ಹಂಚಿಕೊಳ್ಳಲಾಗಿದೆ. ಪೋಸ್ಟ್ ಅನ್ನು ಕೆಳಗೆ ನೋಡಿ:

ಐಶ್ವರ್ಯ ರವರು “ನಾನು ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳಲು ಬಯಸುತ್ತೇನೆ, ನಾವು ಪಾಕಿಸ್ತಾನಕ್ಕೆ ಆರು ಜೆಟ್‌ಗಳನ್ನು ಕಳೆದುಕೊಂಡದ್ದು ಯಾಕೆ? ನಾವು ಪಾಕಿಸ್ತಾನಕ್ಕೆ ನಾಲ್ಕು ರಫೇಲ್‌ಗಳನ್ನುಕಳೆದುಕೊಂಡದ್ದು ಯಾಕೆ? ನಾವು ಪಾಕಿಸ್ತಾನಕ್ಕೆ ಎರಡು S-400 ಸಿಸ್ಟಮ್ ಗಳನ್ನು ಕಳೆದುಕೊಂಡದ್ದು ಯಾಕೆ? ನಾವು ಪಾಕಿಸ್ತಾನಕ್ಕೆ ಮುನ್ನೂರು ಸೈನಿಕರನ್ನು ಕಳೆದುಕೊಂಡದ್ದು ಯಾಕೆ? ಕಾಶ್ಮೀರ ಮತ್ತು ರಾಜಸ್ಥಾನದಲ್ಲಿನ ನಮ್ಮ ಗಡಿಯ ಗಮನಾರ್ಹ ಭಾಗಗಳನ್ನು ನಾವು ಪಾಕಿಸ್ತಾನಕ್ಕೆ ಕಳೆದುಕೊಂಡದ್ದು ಯಾಕೆ? ಪ್ರಧಾನಿ ನರೇಂದ್ರ ಮೋದಿಯವರೇ, ಚಲನಚಿತ್ರರಂಗದವರು ರಾಜಕೀಯದಲ್ಲಿ ಭಾಗವಹಿಸುವುದಿಲ್ಲ ಎಂಬುದು ನಮಗೆ ಗೊತ್ತು ಆದರೆ ಇದು ರಾಷ್ಟ್ರವು ತಿಳಿಯಲು ಬಯಸುವ ವಿಷಯ. ನೀವು ನಮಗೆ ಹೇಳಲೇಬೇಕು. (sic)”

ಇನ್ನೊಬ್ಬ ಬಳಕೆದಾರರಿಂದ ಇದೇ ರೀತಿಯ ಪೋಸ್ಟ್ ಅನ್ನು ಇಲ್ಲಿ ನೋಡಿ.

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅದನ್ನು ಇಲ್ಲಿ ನೋಡಬಹುದು.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ಸತ್ಯವೆಂದು ಪರಿಶೀಲಿಸಲು ನಿರ್ಧರಿಸಿತು ಮತ್ತು ಅದು ಸಂಪೂರ್ಣವಾಗಿ ಸುಳ್ಳು ಎಂದು ಕಂಡುಕೊಂಡಿತು. ಈ ಆಡಿಯೊವನ್ನು AI ಮೂಲಕ ಬದಲಾಯಿಸಲಾಗಿದೆ ಮತ್ತು ಕಾರ್ಯಕ್ರಮದ ಅಧಿಕೃತ ದೃಶ್ಯಾವಳಿಗಳಲ್ಲಿ ಅಂತಹ ಸಾಲುಗಳಿಲ್ಲ. ಇದಲ್ಲದೆ, ಐಶ್ವರ್ಯಾ ರೈ ಬಚ್ಚನ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಆ ಪ್ರಶ್ನೆಗಳನ್ನು ಕೇಳಿದ ಬಗ್ಗೆ ಮಾಧ್ಯಮಗಳಲ್ಲಿ ಯಾವುದೇ ವಿಶ್ವಾಸಾರ್ಹ ವರದಿ ಇಲ್ಲ.

ಮೂಲ ವೀಡಿಯೊದ ಬಗ್ಗೆ ತಿಳಿಯಲು ನಾವು ಮೊದಲು ವೀಡಿಯೊದ ವಿವಿಧ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸುವ ಮೂಲಕ ಪರಿಶೀಲನೆ ಆರಂಭಿಸಿದೆವು. ನಮ್ಮ ಹುಡುಕಾಟದ ಫಲಿತಾಂಶಗಳು ಶ್ರೀ ಸತ್ಯ ಸಾಯಿ ಹಿಂದಿಯ ಯೂಟ್ಯೂಬ್ ವಾಹಿನಿಯಲ್ಲಿ ಅಪ್‌ಲೋಡ್ ಮಾಡಲಾದ ಕಾರ್ಯಕ್ರಮದ ಮೂಲ ವೀಡಿಯೊಗೆ ನಮ್ಮನ್ನು ಕರೆದೊಯ್ದವು. ಈ ವೀಡಿಯೊದ ಶೀರ್ಷಿಕೆ: “शताब्दी समारोह: ಪ್ರಶಾಂತಿ ನಿಲಯಕ್ಕೆ ಭಾರತದ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಭೇಟಿ | ನವೆಂಬರ್ 19, 2025.”

ವೀಡಿಯೊದಲ್ಲಿ, ಕಾರ್ಯಕ್ರಮದಲ್ಲಿ ಮಾತನಾಡಲು ಐಶ್ವರ್ಯಾ ರೈಯವರನ್ನು ವೇದಿಕೆಗೆ ಕರೆಯಲಾಗಿದುದನ್ನು ನೋಡಬಹುದು. ಆಕೆ ಸುಮಾರು 10 ನಿಮಿಷಗಳ ಕಾಲ ಮಾತನಾಡಿದರು (ಕೆಳಗಿನ ವೀಡಿಯೊದಲ್ಲಿ ಟೈಮ್‌ಸ್ಟ್ಯಾಂಪ್ 2:05:18 ರಿಂದ 2:14:01 ರವರೆಗೆ).

ತಮ್ಮ ಭಾಷಣದ ಸಮಯದಲ್ಲಿ, ಐಶ್ವರ್ಯಾರವರು ಬಾಬಾರವರ ಕುರಿತಾದ ಭಕ್ತಿಯನ್ನು ವ್ಯಕ್ತಪಡಿಸುತ್ತಾರೆ ಮತ್ತು ಅವರ ಬೋಧನೆಗಳು ಅವರ ಜನ್ಮ ಶತಮಾನ ಕಳೆದರೂ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತಲೇ ಇವೆ ಎಂದು ಹೇಳುತ್ತಾರೆ. ಆಕೆ ಪ್ರಧಾನಿ ಮೋದಿಯವರ ಉಪಸ್ಥಿತಿಗಾಗಿ ಧನ್ಯವಾದಗಳನ್ನು ಅರ್ಪಿಸುತ್ತಾ, ಅವರ ಉಪಸ್ಥಿತಿಯು ನೈರ್ಮಲ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ ಮತ್ತು ನಿಜವಾದ ನಾಯಕತ್ವ ಎಂದರೆ ದೇವರ ಸೇವೆಯಂತೆ ಮಾನವೀಯತೆಗೆ ಸೇವೆ ಸಲ್ಲಿಸುವುದು ಎಂಬ ಬಾಬಾರವರ ವಿಚಾರವನ್ನು ನೆನೆಯುತ್ತಾರೆ. ಆಪರೇಷನ್ ಸಿಂಧೂರ್ ಕುರಿತಾದ ಪ್ರಶ್ನೆಯಿರಲಿ ಆಕೆ ಪ್ರಧಾನಿ ಮೋದಿಯವರನ್ನು ಯಾವುದರ ಬಗ್ಗೆಯೂ ಪ್ರಶ್ನಿಸುವುದಿಲ್ಲ. ಕೆಳಗೆ ಪೂರ್ಣ ವೀಡಿಯೊ ಮತ್ತು ಸ್ಕ್ರೀನ್‌ಶಾಟ್ ನೋಡಿ.

ANI ನ್ಯೂಸ್ ಆಕೆಯ ಭಾಷಣದ ತುಣುಕಿನ ಮತ್ತೊಂದು ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದು, ಅದನ್ನು ಇಲ್ಲಿ ವೀಕ್ಷಿಸಬಹುದು.

ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ವರದಿಯೊಂದು ಕಾರ್ಯಕ್ರಮದಲ್ಲಿ ಐಶ್ವರ್ಯಾರವರ ಭಾಷಣದ ಬಗ್ಗೆ ಬರೆದಿದೆ. “ಧರ್ಮವಿರುವುದು ಒಂದೇ ಒಂದು, ಪ್ರೀತಿಯ ಧರ್ಮ. ಭಾಷೆ ಇರುವುದು ಒಂದೇ ಒಂದು, ಹೃದಯದ ಭಾಷೆ, ಮತ್ತು ದೇವರಿರುವುದು ಒಬ್ಬನೇ ಒಬ್ಬ ಮತ್ತು ಅವನು ಸರ್ವವ್ಯಾಪಿ.”… ಎಂದು ಐಶ್ವರ್ಯಾ  ಹೇಳಿರುವುದಾಗಿ ಅದರಲ್ಲಿ ಉಲ್ಲೇಖಿಸಲಾಗಿದೆ. ಮೌಲ್ಯಗಳು ಬೇರೂರಿರುವ ಬಾಲವಿಕಾಸ್‌ನಿಂದ ಹಿಡಿದು ಉಚಿತ ವಿಶ್ವವಿದ್ಯಾಲಯಗಳು, ಉಚಿತ ವಿಶ್ವ ದರ್ಜೆಯ ಆರೈಕೆಯನ್ನು ನೀಡುವ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳು ಮತ್ತಿತರ ಉಪಕ್ರಮಗಳವರೆಗೆ ಸಾಯಿ ಶಿಕ್ಷಣ ವ್ಯವಸ್ಥೆಯನ್ನು ಆಕೆ ಹೊಗಳಿದರು ಎಂಬುದನ್ನೂ ಸಹ ವರದಿಯು ಉಲ್ಲೇಖಿಸುತ್ತದೆ. ವರದಿಯ ಒಂದು ಭಾಗವನ್ನು ಕೆಳಗೆ ಓದಿ-

ಕೊನೆಯದಾಗಿ, ನಾವು ಕ್ಲೈಮ್‌ನಲ್ಲಿ ಹಂಚಿಕೊಂಡ ವೀಡಿಯೊದಿಂದ ಆಡಿಯೊವನ್ನು ಹೊರತೆಗೆದು Resemble AI ನ ಆಡಿಯೊ ಡಿಟೆಕ್ಷನ್ ಟೂಲ್ ನಲ್ಲಿ ಅದನ್ನು ಹಾಕಿದೆವು. ಫಲಿತಾಂಶಗಳು ನಕಲಿಯೆಂದು ತಿಳಿಸಿದವು, ಮತ್ತು ಈ ಮೂಲಕ ಅದು AI ರಚಿತ ಎಂದು ಸಾಬೀತಾಯಿತು. ಫಲಿತಾಂಶಗಳನ್ನು ಕೆಳಗೆ ನೋಡಿ-

ಆದ್ದರಿಂದ, ಹೇಳಿಕೆ ಸುಳ್ಳು.

*********************************************************************

ಇದನ್ನೂ ಓದಿ:

ಈ ಫೋಟೋದಲ್ಲಿ ಚುನಾವಣಾ ಸೋಲಿನ ನಂತರ ಪಾಟ್ನಾದ RJD ಕಚೇರಿಯಲ್ಲಿ ಸಿಹಿತಿಂಡಿಗಳನ್ನು ಗುಂಡಿಯಲ್ಲಿ ಸುರಿಯಲಾಗುತ್ತಿದೆಯೇ? ಸತ್ಯ ಪರಿಶೀಲನೆ

ಈ ವೀಡಿಯೊ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಯುವತಿಯೊಂದಿಗೆ ವಿದೇಶಕ್ಕೆ ಹೋಗುವುದನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*