Don't Miss

ಆಪರೇಷನ್ ಸಿಂಧೂರ್ ಕುರಿತಾಗಿ ಅಮಿತ್ ಶಾರವರು ಪ್ರಧಾನಿ ಮೋದಿಯವರನ್ನು ಟೀಕಿಸುತ್ತಿರುವುದನ್ನು ಈ ವೀಡಿಯೊ ಕ್ಲಿಪ್‌ನಲ್ಲಿ ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಆಪರೇಷನ್ ಸಿಂಧೂರ್‌ನಲ್ಲಿ ಭಾರತದ ವೈಫಲ್ಯದ ಕುರಿತು ಅಮಿತ್ ಶಾರವರು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಿರುವುದನ್ನು ವೀಡಿಯೊ ಕ್ಲಿಪ್ ತೋರಿಸುತ್ತದೆ.

ಕಡೆನುಡಿ/Conclusion: ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಬಳಸಲಾದ ಆಡಿಯೊ AI ರಚಿಸಿದ್ದು ಮತ್ತು ಅಮಿತ್ ಶಾರವರು ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ.

ರೇಟಿಂಗ್/Rating: ಸಂಪೂರ್ಣವಾಗಿ ಸುಳ್ಳು — Five rating


ಭಾರತದ ಗೃಹ ಸಚಿವ ಅಮಿತ್ ಶಾರವರು ಪ್ರಧಾನಿ ನರೇಂದ್ರ ಮೋದಿಯವರ ವಿದೇಶಾಂಗ ನೀತಿಯನ್ನು ಟೀಕಿಸುವುದನ್ನು ತೋರಿಸಲಾಗಿದೆ ಎಂದು ಸೆಪ್ಟೆಂಬರ್ 19, 2025 ರಂದು ‘InsiderWB’ ಹಂಚಿಕೊಂಡ ಒಂದು X ಪೋಸ್ಟ್‌ನಲ್ಲಿ ಹೇಳಲಾಗಿದೆ.  ಶಾರವರು ರಾಜತಾಂತ್ರಿಕತೆಯಲ್ಲಿ ಮೋದಿಯವರ “ವೈಫಲ್ಯ”ವನ್ನು ಒಪ್ಪಿಕೊಂಡಿರುವಂತೆ 46 ಕ್ಷಣಗಳ ಈ ವೀಡಿಯೊದಲ್ಲಿ ಚಿತ್ರಿಸಲಾಗಿದೆ. ಅದರಲ್ಲಿ ರಫೇಲ್ ಮತ್ತು S-400 ನಂತಹ ಕಳೆದುಹೋದ ಒಪ್ಪಂದಗಳನ್ನು ಉಲ್ಲೇಖಿಸಲಾಗಿದೆ ಮತ್ತು ಪಾಕಿಸ್ತಾನವು ಭಾರತ ಮತ್ತು ಇಸ್ರೇಲ್‌ಗೆ ಪಾಠ ಕಲಿಸುವ “ಆಪರೇಷನ್ ಸಿಂಧೂರ್” ಅನ್ನು ಸಹ ಉಲ್ಲೇಖಿಸಲಾಗಿದೆ.

ಪೋಸ್ಟ್‌ನ ಶೀರ್ಷಿಕೆ ಹೀಗಿದೆ: “ಪಾಕಿಸ್ತಾನ-ಸೌದಿ ಅರೇಬಿಯಾ ರಕ್ಷಣಾ ಒಪ್ಪಂದದ ಕುರಿತು ಭಾರತದ ಗೃಹ ಸಚಿವ ಅಮಿತ್ ಶಾರವರ ಹೇಳಿಕೆಯು ಹೊರಬಂದಿದೆ. ಇದು ಮೋದಿಯವರ ಸೋಲಿನ ಸ್ಪಷ್ಟ ಒಪ್ಪಿಗೆ.” ಈ ಪೋಸ್ಟ್ ಗೆ 185,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 12,000 ಕ್ಕೂ ಹೆಚ್ಚು ಲೈಕ್‌ಗಳನ್ನು ದೊರಕಿವೆ, ಅದನ್ನು ಇಲ್ಲಿ ನೋಡಬಹುದು.

ಇತರ ಬಳಕೆದಾರರೂ ಕೂಡ ಈ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ, ಅದನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು

 

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ನಿರ್ಧರಿಸಿತು ಮತ್ತು ಹೇಳಿಕೆ ಸಂಪೂರ್ಣವಾಗಿ ಸುಳ್ಳು ಎಂದು ಕಂಡುಕೊಂಡಿತು. ವೀಡಿಯೊದ ಸಂಪೂರ್ಣ ಧ್ವನಿಸುರುಳಿಯನ್ನು AI ಮೂಲಕ ರಚಿಸಲಾಗಿದೆ, ಇದು ಬೇರೆ ಯಾವುದೋ ಮೂಲ ANI ದೃಶ್ಯಾವಳಿಯಿಂದ ಮಾಡಲಾದ ನಕಲಿ ಕ್ಲಿಪ್. ಅಮಿತ್ ಶಾರವರು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಲಿಲ್ಲ ಅಥವಾ ರಫೇಲ್ ಯುದ್ಧ ವಿಮಾನಗಳು ಮತ್ತು S-400 ವ್ಯವಸ್ಥೆಯ ನಷ್ಟದ ಬಗ್ಗೆ ಅವರು ಏನೂ ಹೇಳಲಿಲ್ಲ.

ನಾವು ಅದನ್ನು ಕಂಡುಹಿಡಿದದ್ದು ಹೇಗೆ?

ನಾವು ಮೊದಲು ಪ್ರಮುಖ ದೃಶ್ಯದ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು ಮತ್ತು ಫಲಿತಾಂಶಗಳು ನಮ್ಮನ್ನು ಸೆಪ್ಟೆಂಬರ್ 18, 2025ರಂದು ANI ಮಾಡಿದ ಮೂಲ ಟ್ವೀಟ್ ಗೆ ಕರೆದೊಯ್ದವು. ಈ ಪೋಸ್ಟ್ ನಲ್ಲಿ ಅಮಿತ್ ಶಾ ರವರು ಪ್ರಧಾನಿ ಮೋದಿಯವರನ್ನು 370 ನೇ ವಿಧಿಯನ್ನು ತೆಗೆದುಹಾಕಿ ಕಾಶ್ಮೀರವನ್ನು ಭಾರತದೊಂದಿಗೆ ಒಗ್ಗೂಡಿಸಿದ್ದಕ್ಕಾಗಿ ಹೊಗಳಿದ್ದರು. ಕೆಳಗಿನ ಪೋಸ್ಟ್ ಅನ್ನು ನೋಡಿ:

 

ಮುಂದೆ, ಅಮಿತ್ ಶಾರವರ ಅಧಿಕೃತ ಯೂಟ್ಯೂಬ್ ವಾಹಿನಿಯನ್ನೂ ನಾವು ನೋಡಿದೆವು, ಅಲ್ಲಿ ಅವರ ಭಾಷಣದ ನೇರ ಪ್ರಸಾರ ಮಾಡಲಾಗಿತ್ತು. ಅವರು ಸೆಪ್ಟೆಂಬರ್ 18, 2025ರಂದು ಬೇಗುಸರಾಯಿ ಬಿಜೆಪಿ ಕಾರ್ಯಕರ್ತರ ಸಭೆಯ ಸಂದರ್ಭದಲ್ಲಿ ಪಾಟ್ನಾದಲ್ಲಿ ಈ ಭಾಷಣವನ್ನು ನೀಡಿದ್ದರು. ಅವರ ಯೂಟ್ಯೂಬ್ ವಾಹಿನಿಯಲ್ಲಿನ ದೃಶ್ಯಾವಳಿಗಳನ್ನು ಇಲ್ಲಿ ನೋಡಿ.

ಹಲವಾರು ಸುದ್ದಿ ಮಾಧ್ಯಮಗಳು ಸಹ ಇದನ್ನು ವರದಿ ಮಾಡಿವೆ ಮತ್ತು ಅವುಗಳಲ್ಲೆಲ್ಲೂ ಗೃಹ ಸಚಿವ ಅಮಿತ್ ಶಾರವರು ಪ್ರಧಾನಿ ಮೋದಿಯವರನ್ನು ಟೀಕಿಸಿದ ಅಥವಾ S-400 ವ್ಯವಸ್ಥೆಗಳ ಬಗ್ಗೆ ಮಾತನಾಡಿದ ಅಥವಾ ರಫೇಲ್ ಯುದ್ಧ ವಿಮಾನಗಳ ನಷ್ಟದ ಬಗ್ಗೆ ಮಾತನಾಡಿದ ಯಾವುದೇ ನಿದರ್ಶನವನ್ನು ಉಲ್ಲೇಖಿಸಲಾಗಿಲ್ಲ. ಕೆಳಗಿನ ಸುದ್ದಿ ಲೇಖನದ ತುಣುಕನ್ನು ನೋಡಿ:

ನಂತರ ನಾವು ಅಮಿತ್ ಶಾರವರು ಪ್ರಧಾನಿ ಮೋದಿಯವರ ವಿರುದ್ಧ ಮಾಡಿದ ಟೀಕೆಗಳ ಬಗ್ಗೆ ವಿಶ್ವಾಸಾರ್ಹ ಮಾಧ್ಯಮಗಳಿಂದ ಯಾವುದೇ ಅಧಿಕೃತ ವರದಿಗಳು ಬಂದಿವೆಯೇ ಎಂದು ಹುಡುಕಿದೆವು. ಅಮಿತ್ ಶಾರವರ ನಕಲಿ ದೃಶ್ಯಾವಳಿಗಳಲ್ಲಿ ತೋರಿಸಿರುವಂತೆ ಈ ಹೇಳಿಕೆಗಳ ಬಗ್ಗೆ ಯಾವುದೇ ವರದಿಗಳು ಅಥವಾ ಗಣನೀಯ ಪುರಾವೆಗಳು ನಮಗೆ ಕಂಡುಬರಲಿಲ್ಲ.

ಇದಲ್ಲದೆ, ಕ್ಲಿಪ್‌ನಲ್ಲಿರುವ ದೃಶ್ಯಗಳು ಅಸ್ವಾಭಾವಿಕ ಲಿಪ್ ಸಿಂಕ್ ಮತ್ತು ಶಾರವರು ಪ್ರಧಾನಿಯ ವಿಷಯದಲ್ಲಿ ಅನ್ನುವುದನ್ನು ಬಿಡಿ, ತಮ್ಮದೇ ಪಕ್ಷದ ಸದಸ್ಯರನ್ನು ಟೀಕಿಸುವ ಅನಪೇಕ್ಷಿತ ಕೃತ್ಯದಂತಹ ಹಲವು ವ್ಯತ್ಯಾಸಗಳನ್ನು ಒಳಗೊಂಡಿವೆ. ಹೀಗಾಗಿ, ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತವಾಗಿದೆ.


ಇದನ್ನೂ ಓದಿ:

ಭಾರತದ ರಾಷ್ಟ್ರಗೀತೆಯನ್ನು ಕೇಳಿದ ನಂತರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡೆಯುವುದನ್ನು ನಿಲ್ಲಿಸಿದ್ದರೇ? ಸತ್ಯ ಪರಿಶೀಲನೆ

ಟ್ರಂಪ್ ರವರ ಆರೋಗ್ಯ ಗಂಭೀರವಾಗಿದೆಯೇ, ಮತ್ತು ಪ್ರಸ್ತುತ ಕೋಮಾದಲ್ಲಿದ್ದಾರೆಯೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*