Don't Miss

ಟ್ರಂಪ್ ರವರ ಬೆದರಿಕೆಗಳ ವಿರುದ್ಧ ಡೆನ್ಮಾರ್ಕ್ ಪ್ರತಿಭಟನೆ ನಡೆಸುವುದನ್ನು ಈ ವೀಡಿಯೊ ನಿಜವಾಗಿಯೂ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :  ಗ್ರೀನ್‌ಲ್ಯಾಂಡ್ ಅನ್ನು ವಶಪಡಿಸಿಕೊಳ್ಳುವ ಟ್ರಂಪ್ ಅವರ ಬೆದರಿಕೆಗಳ ವಿರುದ್ಧ ಡೆನ್ಮಾರ್ಕ್‌ನ ರಾಜಧಾನಿ ಕೋಪನ್‌ಹೇಗನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯೆಂದು ಹೇಳಲಾದ ದೃಶ್ಯಾವಳಿಗಳನ್ನು ವೀಡಿಯೊ ತೋರಿಸುತ್ತದೆ.

ಕಡೆನುಡಿ/Conclusion : ಹೇಳಿಕೆ ನಿಜ. ಟ್ರಂಪ್ ರವರ ಗ್ರೀನ್‌ಲ್ಯಾಂಡ್ ಕುರಿತಾದ ಮಹತ್ವಾಕಾಂಕ್ಷೆಗಳನ್ನು ವಿರೋಧಿಸಿ ಜನವರಿ 17, 2026 ರಂದು ಕೋಪನ್‌ಹೇಗನ್‌ನಲ್ಲಿ ಪ್ರತಿಭಟನೆಗಳು ನಡೆದದ್ದು ನಿಜ. ಡೆನ್ಮಾರ್ಕ್‌ನಲ್ಲಿ ನಡೆದ ಗಮನಾರ್ಹ ಪ್ರತಿಭಟನೆಗಳ ಕುರಿತು ಹಲವು ವಿಶ್ವಾಸಾರ್ಹ ಮೂಲಗಳು ಮತ್ತು ಸುದ್ದಿ ಸಂಸ್ಥೆಗಳು ದೃಢಪಡಿಸಿವೆ.

ರೇಟಿಂಗ್/Rating : ನಿಜ-

******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

******************************************************

ಗ್ರೀನ್‌ಲ್ಯಾಂಡ್‌ನ ಮೇಲಿನ ಟ್ರಂಪ್‌ರ ಬೆದರಿಕೆಗಳಿಗೆ ಸಂಬಂಧಿಸಿದಂತೆ ಜನವರಿ 17, 2026 ರಂದು ಡೆನ್ಮಾರ್ಕ್‌ನಲ್ಲಿ ಪ್ರತಿಭಟನೆಗಳು ನಡೆದವು ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘_MAGA_NEWS_’ ಅಂತಹ ಒಂದು ವೀಡಿಯೊವನ್ನು ಹಂಚಿಕೊಂಡಿದ್ದು, ಜನವರಿ 17, 2026 ರಂದು ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನ ಸಿಟಿ ಹಾಲ್ ಸ್ಕ್ವೇರ್‌ನಲ್ಲಿ ಸಾವಿರಾರು ಪ್ರತಿಭಟನಾಕಾರರು “ಹ್ಯಾಂಡ್ಸ್ ಆಫ್ ಗ್ರೀನ್‌ಲ್ಯಾಂಡ್” ಪ್ರದರ್ಶನದಲ್ಲಿ ಪಾಲ್ಗೊಂಡು ಡ್ಯಾನಿಶ್ ಮತ್ತು ಗ್ರೀನ್‌ಲ್ಯಾಂಡಿನ ಧ್ವಜಗಳನ್ನು ಬೀಸಿದರು ಎಂದು ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ. ಇದರಲ್ಲಿ ಈ ಘಟನೆಯನ್ನು “ಗ್ರೀನ್‌ಲ್ಯಾಂಡ್ ಮಾರಾಟಕ್ಕಿಲ್ಲ!” ಎಂಬ ಘೋಷಣೆಗಳನ್ನು ಕೂಗುವ “ಅಮೆರಿಕ ವಿರೋಧಿ ಕೋಪ” ಎಂದು ವಿವರಿಸಲಾಗಿದೆ. ಲಗತ್ತಿಸಲಾಗಿರುವ “ಕ್ಲಾಶ್ ರಿಪೋರ್ಟ್” ಲೋಗೋ ಹೊಂದಿರುವ ವೀಡಿಯೊದಲ್ಲಿ ಸಿಟಿ ಸ್ಕ್ವೇರ್ ನಲ್ಲಿ ನೆರೆದಿರುವ ದೊಡ್ಡ ಜನಸಮೂಹದ ವೈಮಾನಿಕ ನೋಟವನ್ನು ತೋರಿಸಲಾಗಿದೆ. ಪೋಸ್ಟ್ ಅನ್ನು ಕೆಳಗೆ ನೋಡಿ-

ಇತರ ಬಳಕೆದಾರರು ಇಲ್ಲಿ ಮತ್ತು ಇಲ್ಲಿ ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ನಿಜವೆಂದು ಕಂಡುಕೊಂಡಿತು. ಗ್ರೀನ್‌ಲ್ಯಾಂಡ್ ಕುರಿತು ಡೊನಾಲ್ಡ್ ಟ್ರಂಪ್ ರವರ ಹೇಳಿಕೆಗಳಿಗೆ ಪ್ರತಿಕ್ರಿಯೆ ಬಂದ ನಂತರ, ಜನವರಿ 17, 2026 ರಂದು ಕೋಪನ್‌ಹೇಗನ್‌ನಲ್ಲಿ ಸಾರ್ವಜನಿಕ ಪ್ರದರ್ಶನಗಳು ನಡೆದವು. ಹಲವಾರು ಸ್ವತಂತ್ರ ಮತ್ತು ಪ್ರತಿಷ್ಠಿತ ಸುದ್ದಿ ಸಂಸ್ಥೆಗಳ ವರದಿಗಳು ಈ ಪ್ರತಿಭಟನೆಗಳು ನಿಜವಾಗಿಯೂ ನಡೆದಿವೆ ಎಂದು ಪರಿಶೀಲಿಸುತ್ತವೆ.

ವಿವರಗಳು:

ಮೂಲದ ಬಗ್ಗೆ ತಿಳಿಯಲು ನಾವು ಮೊದಲು ವೀಡಿಯೊದ ವಿವಿಧ ಕೀಫ್ರೇಮ್‌ಗಳಿಂದ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಈ ಹುಡುಕಾಟದಲ್ಲಿ ನಮಗೆ ಜನವರಿ 17, 2026 ರಂದು ಕ್ಲಾಷ್ ರಿಪೋರ್ಟ್ ಅಪ್‌ಲೋಡ್ ಮಾಡಿದ ಮೂಲ ಪೋಸ್ಟ್‌ ದೊರಕಿತು. 139,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿರುವ ಈ X ಪೋಸ್ಟ್‌ನ ಶೀರ್ಷಿಕೆ ಹೀಗಿದೆ: “ಗ್ರೀನ್‌ಲ್ಯಾಂಡ್ ಅನ್ನು ವಶಪಡಿಸಿಕೊಳ್ಳುವ ಟ್ರಂಪ್‌ನ ಬೆದರಿಕೆಗಳ ವಿರುದ್ಧ ಕೋಪನ್‌ಹೇಗನ್‌ನಲ್ಲಿ ಸಾವಿರಾರು ಜನರು ಪ್ರತಿಭಟಿಸಿದರು.”

ಇತರ ಹುಡುಕಾಟಗಳನ್ನು ನಡೆಸಿದಾಗ, ಫಲಿತಾಂಶಗಳಲ್ಲಿ ನಮಗೆ ಘಟನೆಯ ಸತ್ಯಾಸತ್ಯತೆಯನ್ನು ದೃಢಪಡಿಸುವ CNN ಪ್ರಕಟಿಸಿದ ಲೇಖನ ದೊರಕಿತು. ಲೇಖನದ ಶೀರ್ಷಿಕೆ: ‘ನಾವು ಅಮೆರಿಕನ್ನರಾಗಲು ಬಯಸುವುದಿಲ್ಲ’- ಟ್ರಂಪ್ ವಿರುದ್ಧ ಡೆನ್ಮಾರ್ಕ್‌ನಲ್ಲಿ ಸಾವಿರಾರು ಜನರು ರ‍್ಯಾಲಿ ನಡೆಸಿದರು. ಇದರಿಂದ, “ಕೋಪನ್‌ಹೇಗನ್, ಆರ್ಹಸ್, ಆಲ್ಬೋರ್ಗ್ ಮತ್ತು ಒಡೆನ್ಸ್ ನಗರಗಳಲ್ಲಿ ಗ್ರೀನ್‌ಲ್ಯಾಂಡ್ ನ ಜನರೊಂದಿಗೆ ಒಗ್ಗಟ್ಟನ್ನು ತೋರಿಸಲು ಸಾವಿರಾರು ಜನರು ಸೇರಿದ್ದರು” ಎಂದೂ ಸಹ ನಾವು ತಿಳಿದುಕೊಂಡಿದ್ದೇವೆ. ಇದರ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ವೀಕ್ಷಿಸಿ –

ಮತ್ತೊಂದು ಸುದ್ದಿವಾಹಿನಿ, ‘ಲೆ ಜರ್ನಲ್ ಡಿ ಕ್ವಿಬೆಕ್’ ತಮ್ಮ ವರದಿಯಲ್ಲಿ ಈ ಘಟನೆಯ ಬಗ್ಗೆ ಮಾಹಿತಿ ನೀಡಿತು. ಡೆನ್ಮಾರ್ಕ್‌ನಲ್ಲಿ ಪ್ರತಿಭಟನಾಕಾರರನ್ನು ಪ್ರದರ್ಶಿಸುವ LCNನ ದೀರ್ಘ ವೀಡಿಯೊವನ್ನು ಅವರು ಹಂಚಿಕೊಂಡಿದ್ದಾರೆ. ಮೂಲತಃ ಫ್ರೆಂಚ್‌ನಲ್ಲಿ ಬರೆಯಲಾಗಿರುವ ಈ ಲೇಖನವು ಹೀಗಿದೆ: “ಗ್ರೀನ್‌ಲ್ಯಾಂಡ್ ಅನ್ನು ವಶಪಡಿಸಿಕೊಳ್ಳುವ ಉದ್ದೇಶವನ್ನು ಪ್ರದರ್ಶಿಸುತ್ತಲೇ ಇರುವ ಡೊನಾಲ್ಡ್ ಟ್ರಂಪ್ ರವರ ಪ್ರಾದೇಶಿಕ ಮಹತ್ವಾಕಾಂಕ್ಷೆಗಳನ್ನು ಖಂಡಿಸಲು ಹಲವು ಸಾವಿರ ಪ್ರತಿಭಟನಾಕಾರರು ಶನಿವಾರ ಕೋಪನ್‌ಹೇಗನ್, ಡೆನ್ಮಾರ್ಕ್ ಮತ್ತು ದೇಶದ ಇತರೆಡೆಗಳಲ್ಲಿ ಒಟ್ಟುಗೂಡಿದರು.” ಸ್ಕ್ರೀನ್‌ಶಾಟ್ ಅನ್ನು ಕೆಳಗೆ ನೋಡಿ –

ಹೀಗಾಗಿ, ಹೇಳಿಕೆ ನಿಜ.

******************************************************
ಇದನ್ನೂ ಓದಿ:

ಈ ಚಿತ್ರವು ಜನವರಿ 2026 ರಲ್ಲಿ 2 ಇರಾನೀ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಗ್ರೀನ್‌ಲ್ಯಾಂಡ್ ಅನ್ನು ಖರೀದಿಸಲು USA 700 ಬಿಲಿಯ ಡಲರ್ ಗಳನ್ನು ಪಾವತಿಸಲು ಒಪ್ಪಂದವನ್ನು ಮಾಡುತ್ತಿದೆಯೇ? ಸತ್ಯ ಪರಿಶೀಲನೆ

 

Leave a Reply

Your email address will not be published. Required fields are marked *

*