ಹೇಳಿಕೆ/Claim: ಪಾಟ್ನಾದ RJD ಕಚೇರಿಯಲ್ಲಿ ಸಿಹಿತಿಂಡಿಗಳನ್ನು ಕೆಸರುಗುಂಡಿಯಲ್ಲಿ ಸುರಿಯಲಾಗುತ್ತಿದೆ ಎಂದು ವೈರಲ್ ಪೋಸ್ಟ್‌ನಲ್ಲಿಹೇಳಲಾಗಿದೆ.
ಕಡೆನುಡಿ/Conclusion: ಹೇಳಿಕೆ ಸುಳ್ಳು. ಹರಿಯಾಣದ ಸಿರ್ಸಾದಲ್ಲಿ ಸರ್ಕಾರಿ ದಾಳಿಯ ಸಮಯದಲ್ಲಿ ಹಾಳಾದ ಸಿಹಿತಿಂಡಿಗಳನ್ನು ಹೊರಹಾಕುತ್ತಿರುವುದನ್ನು ದೃಶ್ಯಗಳು ಚಿತ್ರಿಸುತ್ತವೆ. ಇದಕ್ಕೂ ಯಾವುದೇ ರಾಜಕೀಯ ಪಕ್ಷ ಅಥವಾ ಪಾಟ್ನಾದಲ್ಲಿರುವ RJD ಕಚೇರಿಗೂ ಯಾವುದೇ ಸಂಬಂಧವಿಲ್ಲ.
ರೇಟಿಂಗ್/Rating: ಸಂಪೂರ್ಣವಾಗಿ ಸುಳ್ಳು — ![]()
ಕೆಲವು ವ್ಯಕ್ತಿಗಳು ಸಿಹಿತಿಂಡಿಗಳನ್ನು ಕೆಸರು ಗುಂಡಿಯಲ್ಲಿ ಎಸೆಯುವ ದೃಶ್ಯಗಳನ್ನು ಹಲವಾರು ಬಳಕೆದಾರರು ಹಂಚಿಕೊಂಡಿದ್ದಾರೆ ಮತ್ತು ಅದು ಪಾಟ್ನಾದ RJD ಕಚೇರಿಯಲ್ಲಿ ನಡೆದದ್ದು ಎಂದು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘RanjanSingh_’ ಅವರು ಈ ಮುಂದಿನ ಶೀರ್ಷಿಕೆಯೊಂದಿಗೆ ಇಂತಹ ಒಂದು ಹೇಳಿಕೆಯನ್ನು ಹಂಚಿಕೊಂಡಿದ್ದಾರೆ: रसगुल्ले को दफ़न कर दिया लेकिन गरीबों को नहीं खिलाया क्योंकि RJD के बाहुबली नेता चुनाव हार गए, Bihar Election Result.” ಕನ್ನಡದ ಅನುವಾದ ಹೀಗಿದೆ: “ರಸಗುಲ್ಲಾವನ್ನು ಹೂತು ಹಾಕಿದರು ಆದರೆ ಬಡವರಿಗೆ ನೀಡಲಿಲ್ಲ ಯಾಕೆಂದರೆ RJDಯ ಬಾಹುಬಲಿ ನಾಯಕ ಬಿಹಾರ ಚುನಾವಣೆಯಲ್ಲಿ ಸೋತರು, ಬಿಹಾರ ಚುನಾವಣಾ ಫಲಿತಾಂಶ.” ಈ ಪೋಸ್ಟ್ 232,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ, ಅದನ್ನು ಕೆಳಗೆ ವೀಕ್ಷಿಸಬಹುದು:

रसगुल्ले को दफ़न कर दिया लेकिन गरीबों को नहीं खिलाया क्योंकि RJD के बाहुबली नेता चुनाव हार गए,
Bihar Election Result pic.twitter.com/OpeSTOkn2J— Ranjan Singh 🇮🇳 (@RanjanSinghh_) November 14, 2025
Other users shared the same claim which can be seen here and here.
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ಕುರಿತು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಈ ಚಿತ್ರಗಳು 5 ರಿಂದ 6 ವರ್ಷಗಳಷ್ಟು ಹಳೆಯವು ಮತ್ತು ಹರಿಯಾಣದ ಸಿರ್ಸಾದಲ್ಲಿ ಸರ್ಕಾರಿ ದಾಳಿಯ ಸಮಯದಲ್ಲಿ ಹಾಳಾದ ಸಿಹಿತಿಂಡಿಗಳನ್ನು ಹೊರಹಾಕಿದ್ದನ್ನು ಚಿತ್ರಿಸುತ್ತವೆ. ಈ ಚಿತ್ರಗಳಿಗೂ, ಇತ್ತೀಚಿನ ಬಿಹಾರ ಚುನಾವಣೆಗಳು ಅಥವಾ ಆರ್‌ಜೆಡಿ ಕಚೇರಿಗೂ ಯಾವುದೇ ಸಂಬಂಧವಿಲ್ಲ.
ಹೇಳಿಕೆಗಳ ಬಗ್ಗೆ ತಿಳಿಯಲು ನಾವು ಮೊದಲು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು, ಆಗ ನಮಗೆ 5 ವರ್ಷಗಳ ಹಿಂದಿನ ಫೇಸ್‌ಬುಕ್ ಪೋಸ್ಟ್ ದೊರಕಿತು. ನವೆಂಬರ್ 2025ರಲ್ಲಿ ನಡೆದ ಇತ್ತೀಚಿನ ಬಿಹಾರ ಚುನಾವಣೆಗಳ ನಂತರ ಹಳೆಯ ಚಿತ್ರದ ಭಾಗವೊಂದು ಮತ್ತೆ ಕಾಣಿಸಿಕೊಳ್ಳುತ್ತಿದೆ.

ಇದರ ನಂತರ, 5 ವರ್ಷಗಳ ಹಿಂದೆ ಅಮರ್ ಉಜಾಲಾ “मुख्यमंत्री उड्नदस्ते ने एक क्विंटल खराब मिठाई कराया नष्ट” ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಿದ ವರದಿಯು ನಮಗೆ ರಿವರ್ಸ್ ಇಮೇಜ್ ಹುಡುಕಾಟದಲ್ಲಿ ಸಿಕ್ಕಿತು. (ಮುಖ್ಯಮಂತ್ರಿ ಕ್ಷಿಪ್ರಪಡೆಯು ಒಂದು ಕ್ವಿಂಟಾಲ್ ಹಾಳಾದ ಸಿಹಿತಿಂಡಿಗಳನ್ನು ನಾಶಪಡಿಸಿತು). ಈ ಘಟನೆಯು ನವೆಂಬರ್ 10, 2020ರಂದು ಕಂಗನ್‌ಪುರ ರಸ್ತೆಯಲ್ಲಿರುವ ಶ್ರೀ ರಾಧೆ ರಸಗುಲ್ಲಾ ಕಾರ್ಖಾನೆಯಲ್ಲಿ ಮುಖ್ಯಮಂತ್ರಿಗಳ ಕ್ಷಿಪ್ರಪಡೆ ಮತ್ತು ಆಹಾರ ಮತ್ತು ಔಷಧ ಆಡಳಿತ (FDA) ಅಧಿಕಾರಿಗಳ ಹಠಾತ್ ತಪಾಸಣೆಯ ಸಮಯದಲ್ಲಿ ಸಂಭವಿಸಿತ್ತು
ವರದಿಯ ಪ್ರಕಾರ “3 क्विंटल रसगुल्ला, क्विंटल गुलाब जामुन व एक क्विंटल मावा मिला है” ಕನ್ನಡದಲ್ಲಿ ಇದು: “3 ಕ್ವಿಂಟಾಲ್ ರಸಗುಲ್ಲಾ, 2 ಕ್ವಿಂಟಾಲ್ ಗುಲಾಬ್ ಜಾಮೂನ್, ಮತ್ತು ಒಂದು ಕ್ವಿಂಟಾಲ್ ಮಾವಾ ಸಿಕ್ಕಿದೆ”.ಇವುಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಹೆಚ್ಚುವರಿಯಾಗಿ, ರಸಗುಲ್ಲಾ ಕಾರ್ಖಾನೆಯಿಂದ ಒಂದು ಕ್ವಿಂಟಾಲ್ ಹಾಳಾದ ಸಿಹಿತಿಂಡಿಯನ್ನು ನಾಶಪಡಿಸಲಾಯಿತು.
ವರದಿಯ ಒಂದು ಭಾಗವನ್ನು ಕೆಳಗೆ ನೋಡಿ:

ಇದೇ ಸಮಯಾವಧಿಯಲ್ಲಿ ದೈನಿಕ್ ಭಾಸ್ಕರ್ ಪ್ರಕಟಿಸಿದ ಮತ್ತೊಂದು ವರದಿಯು CM ಕ್ಷಿಪ್ರಪಡೆಯ ದಾಳಿಯನ್ನು ದೃಢಪಡಿಸುತ್ತದೆ.

ಮುಂದೆ, ನಾವು ಎರಡನೇ ಚಿತ್ರದ ಮೇಲೆ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು, ಆಗ ಆಗಸ್ಟ್ 16, 2019 ರಂದು ನ್ಯೂಸ್ 18 (ಹಿಂದಿ) ಪ್ರಕಟಿಸಿದ ವರದಿ ನಮಗೆ ದೊರಕಿತು. ಚಿತ್ರದ ಶೀರ್ಷಿಕೆ ಹೀಗಿತ್ತು: बासी और ख़राब मिठाइयों और मवा को नये माल में मिलाकर दोबारा नयी मिठाई बनायी जा रही थी. टीम ने इस दुकान से 250 किलो से ज्यादा के दूषित लड्डू, पेड़ा, रसगुल्ला और इमारती बरामद कीं. ಕನ್ನಡದಲ್ಲಿ ಇದು ಹೀಗಿದೆ: “ಹಳಸಿದ ಮತ್ತು ಹಾಳಾದ ಸಿಹಿತಿಂಡಿಗಳು ಮತ್ತು ಖೋಯಾವನ್ನು ಹೊಸ ಮಾಲಿನೊಂದಿಗೆ ಸೇರಿಸಿ ಪುನಃ ಹೊಸ ಸಿಹಿತಿಂಡಿಗಳನ್ನು ತಯಾರಿಸಲಾಗುತ್ತಿತ್ತು. ತಂಡವು ಈ ಅಂಗಡಿಯಿಂದ 250 ಕಿಲೋಗಿಂತ ಹೆಚ್ಚು ಕಲುಷಿತ ಲಡ್ಡುಗಳು, ಪೇಡಾಗಳು, ರಸಗುಲ್ಲಾಗಳು ಮತ್ತು ಇಮರ್ತಿಗಳನ್ನು ವಶಪಡಿಸಿಕೊಂಡಿದೆ.” ಈ ಘಟನೆ ಗ್ವಾಲಿಯರ್ ನಲ್ಲಿ ನಡೆಯಿತು.
ವರದಿಯ ಒಂದು ಭಾಗವನ್ನು ಕೆಳಗೆ ನೋಡಿ:

ದೈನಿಕ್ ಭಾಸ್ಕರ್ 6 ವರ್ಷಗಳ ಹಿಂದೆ ಪ್ರಕಟಿಸಿದ ಮತ್ತೊಂದು ವರದಿಯೊಂದಿಗೆ ನಾವು ಇದನ್ನು ಪರಿಶೀಲಿಸಿ ದೃಢಪಡಿಸಿದೆವು. ಹೇಳಿಕೆಯಲ್ಲಿರುವ ಅದೇ ಚಿತ್ರಗಳನ್ನು ಸರಿಯಾದ ಸಂದರ್ಭದೊಂದಿಗೆ ಬಳಸಲಾಗಿದೆ ಮತ್ತು ವರದಿಯ ಶೀರ್ಷಿಕೆ ಹೀಗಿದೆ: ग्वालियर में सड़े लड्डू-पेड़े मिलाकर बनायी जा रही थी नयी मिठाई; ढाई क्विंटल खराब मिठाई जब्त, फिंकवाई. ಕನ್ನಡದ ಅನುವಾದ ಹೀಗಿದೆ: “ಗ್ವಾಲಿಯರ್‌ನಲ್ಲಿ ಕೊಳೆತ ಲಡ್ಡು ಮತ್ತು ಪೇಡಾಗಳನ್ನು ಬೆರೆಸಿ ಹೊಸ ಸಿಹಿತಿಂಡಿಗಳನ್ನು ತಯಾರಿಸಲಾಗುತ್ತಿತ್ತು; ಎರಡೂವರೆ ಕ್ವಿಂಟಾಲ್‌ಗಳಷ್ಟು ಹಾಳಾದ ಸಿಹಿತಿಂಡಿಗಳನ್ನು ವಶಪಡಿಸಿಕೊಂಡು ಎಸೆಯಲಾಯಿತು.” ಕೆಳಗೆ ನೋಡಿ:

ಆದ್ದರಿಂದ, ಹೇಳಿಕೆ ಸುಳ್ಳು.
******************************************************
ಇದನ್ನೂ ಓದಿ:
ಈ ಕ್ಲಿಪ್ ನಲ್ಲಿ ನಿಜವಾಗಿಯೂ ಕೆಳಜಾತಿಯ ಹಿಂದೂಗಳಿಗೆ ನೆಲದ ಮೇಲೆ ಊಟ ಬಡಿಸುವುದನ್ನು ತೋರಿಸಲಗಿದೆಯೇ? ಸತ್ಯ ಪರಿಶೀಲನೆ
Digiteye Kannada Fact Checkers