ಹೇಳಿಕೆ/Claim : ವೀಡಿಯೊ ಗಾಜಾ ನಿವಾಸಿಗಳು ಸ್ವೀಡನ್‌ಗೆ ವಲಸೆ ಹೋಗುವುದನ್ನು ತೋರಿಸುತ್ತದೆ, ಈ ದೃಶ್ಯಾವಳಿಯು ಜನರನ್ನು ಪ್ಯಾಲೆಸ್ಟೈನ್‌ನಿಂದ ಹೊರಟು ಹೋಗಲೂ ಒತ್ತಾಯಿಸುತ್ತದೆ.
ಕಡೆನುಡಿ/Conclusion : ಈ ಹೇಳಿಕೆ ಸುಳ್ಳು ಮತ್ತು ವೀಡಿಯೊದಲ್ಲಿರುವ ಜನರು ಶರಣಾರ್ಥಿಗಳಲ್ಲ, ಅವರು ಪ್ಯಾಲೆಸ್ಟೈನ್‌ನ ವೆಸ್ಟ್ ಬ್ಯಾಂಕ್‌ನಲ್ಲಿರುವ ರಾವಾಹೆಲ್ ಚಾರಿಟಿ ಅಸೋಸಿಯೇಷನ್‌ನ ಅಂಡರ್-14 ಫುಟ್‌ಬಾಲ್ ತಂಡದ ಸದಸ್ಯರು. ಅವರು 46 ದಿನಗಳ ಯುರೋಪ್ ಪ್ರವಾಸಕ್ಕೆ ಹೊರಟಿದ್ದರು..
ರೇಟಿಂಗ್/Rating : ಸುಳ್ಳು-
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
************************************************************************
ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿರುವ ವೀಡಿಯೊವೊಂದು ಗಾಜಾ ನಿವಾಸಿಗಳು ಸ್ವೀಡನ್‌ಗೆ ವಲಸೆ ಹೋಗುತ್ತಿದ್ದಾರೆ ಎಂದು ಹೇಳುತ್ತದೆ. ಈ ವೀಡಿಯೊದಲ್ಲಿ ವಲಸೆಯ ಭಾಗವಾಗಿ ಗಾಜಾ ನಿವಾಸಿಗಳು ಸ್ವೀಡನ್‌ಗೆ ಆಗಮಿಸುತ್ತಿರುವುದನ್ನು ಚಿತ್ರಿಸಲಾಗಿದೆ, ಜೊತೆಗೆ ಇದು ಹೆಚ್ಚಿನ ಗಾಜಾ ನಿವಾಸಿಗಳು ಪ್ಯಾಲೆಸ್ಟೈನ್‌ನಿಂದ ಓಡಿಹೋಗುವಂತೆ ಒತ್ತಾಯಿಸುತ್ತದೆ.
‘Betar_USA’ ಎಂಬ ಹ್ಯಾಂಡಲ್‌ನ ಪರಿಶೀಲಿತ X ಬಳಕೆದಾರರು ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಈ ಪೋಸ್ಟ್ 3.9 ಮಿಲಿಯ ವೀಕ್ಷಣೆಗಳನ್ನು ಗಳಿಸಿದೆ. ಶೀರ್ಷಿಕೆ ಹೀಗಿದೆ: ಗಾಜಾದ ನಿವಾಸಿಗಳು ಸ್ವೀಡನ್‌ಗೆ ಆಗಮಿಸುತ್ತಿರುವ ಅದ್ಭುತ ಸುದ್ದಿ! ಇನ್ನಷ್ಟು ಜನರು ಗಾಜಾವನ್ನು ಬೇಗನೆ ತೊರೆದು ಪ್ಯಾಲೆಸ್ಟೈನ್‌ನಿಂದ ಪಲಾಯನ ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ!! ಪೋಸ್ಟ್ ನೊಂದಿಗೆ ಅರೇಬಿಕ್ ಭಾಷೆಯ ಒಂದು ಶೀರ್ಷಿಕೆ ಮತ್ತು ಕೆಲವು ವ್ಯಕ್ತಿಗಳು ವಿಮಾನದಲ್ಲಿರುವುದನ್ನು ತೋರಿಸುವ ವೀಡಿಯೊ ಕೂಡ ಇದೆ.
Wonderful news of gazans arriving in Sweden! We urge many many to leave Gaza asap and flee flee Palestine!! pic.twitter.com/I9jr1B8y6Z
— Betar Worldwide (@Betar_USA) July 14, 2025
ಇತರ ಬಳಕೆದಾರರೂ ಕೂಡ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು (ಇಲ್ಲಿ) ಮತ್ತು (ಇಲ್ಲಿ) ನೋಡಬಹುದು
FACT CHECK
ಡಿಜಿಟೈ ಇಂಡಿಯಾ ಈ ಹೇಳಿಕೆಯ ತನಿಖೆ ಮಾಡಲು ನಿರ್ಧರಿಸಿತು ಮತ್ತು ದೃಶ್ಯಾವಳಿಗಳು ದಾರಿತಪ್ಪಿಸುವಂತಿವೆ ಎಂದು ಕಂಡುಕೊಂಡಿತು. ಸ್ವೀಡಿಷ್ ವಲಸೆ ಸಂಸ್ಥೆಯು ಈ ಹಿಂದೆ ಪ್ಯಾಲೆಸ್ಟೀನಿಯರಿಗೆ ಆಶ್ರಯ ನೀಡಿದೆಯಾದರೂ, ಹೇಳಿಕೆಯಲ್ಲಿರುವ ನಿರ್ದಿಷ್ಟ ವೀಡಿಯೊ ಅದಕ್ಕೆ ಸಂಬಂಧಿಸಿಲ್ಲ.
ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ ನಂತರ, ನಮಗೆ ರಾವಾಹೆಲ್ ಚಾರಿಟಿ ಅಸೋಸಿಯೇಷನ್‌ನ ಟಿಕ್‌ಟಾಕ್ ವೀಡಿಯೊ ದೊರೆಯಿತು. ಜುಲೈ 11, 2025 ರಂದು ಪ್ಯಾಲೆಸ್ಟೀನೀ ರಾಷ್ಟ್ರೀಯ ಫುಟ್‌ಬಾಲ್ ತಂಡವಾದ ಕೆನಾನ್ ಲಯನ್ಸ್ ಯುರೋಪ್‌ಗೆ ಹೊರಡುತ್ತಿದ್ದಾಗ ಈ ವೀಡಿಯೊವನ್ನು ಟಿಕ್‌ಟಾಕ್ ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ವೀಡಿಯೊವನ್ನು ಇಲ್ಲಿ ನೋಡಬಹುದು (ಇಲ್ಲಿ ಆರ್ಕೈವ್ ಮಾಡಲಾಗಿದೆ)
ಈ ಕೃತ್ರಿಮ ವೀಡಿಯೊದೊಂದಿಗೆ ಅರೇಬೀ ಭಾಷೆಯ ಶೀರ್ಷಿಕೆಯನ್ನು ಸೇರಿಸಲಾಗಿದೆ. “ಸ್ವೀಡನ್‌ಗೆ” ಎಂಬುದು ಅದರರ್ಥ.
ನಂತರ ನಾವು ರಾವಾಹೆಲ್ ಚಾರಿಟಿ ಅಸೋಸಿಯೇಷನ್‌ನ ಇನ್‌ಸ್ಟಾಗ್ರಾಮ್ ಪುಟವನ್ನು ಪರಿಶೀಲಿಸಿದಾಗ, ಈ ತಂಡವು ಯುರೋಪ್ ಗೆ ಆಗಮಿಸಿದೆ ಎಂಬ ಹೊಸ ಸುದ್ದಿ ನಮಗೆ ದೊರೆಯಿತು. ಆಟಗಾರರು 24 ಜೂನ್ 2025 ರಂದು ಪ್ಯಾರಿಸ್‌ಗೆ ಬಂದಾಗ ಅಪ್‌ಲೋಡ್ ಮಾಡಿದ ಅಂತಹ ಒಂದು ಪೋಸ್ಟ್ ಅನ್ನು ಇಲ್ಲಿ ಕಾಣಬಹುದು.
ಜುಲೈ 5, 2025 ರ ಮತ್ತೊಂದು ಇನ್‌ಸ್ಟಾಗ್ರಾಮ್ ಪೋಸ್ಟ್ ನಲ್ಲಿ ತಂಡವು ಪ್ಯಾರಿಸ್‌ನ ಸೇಂಟ್-ಜರ್ಮೈನ್ ಕ್ಲಬ್‌ನಲ್ಲಿ ಫೋಟೋಗೆ ನಿಂತಿರುವುದನ್ನು ಕಾಣಬಹುದು. ಐಫೆಲ್ ಟವರ್ ಮುಂದೆ ನಿಂತ ತಂಡದ ಈ ಫೇಸ್‌ಬುಕ್ ಪೋಸ್ಟ್ ಸೇರಿದಂತೆ, ಇಂತಹ ಹಲವು ಫೋಟೋಗಳು ನಮಗೆ ದೊರೆತಿವೆ.
..
ದ ನ್ಯಾಷನಲ್‌ನ ಒಂದು ಲೇಖನದ ಪ್ರಕಾರ, “ರಾವಾಹೆಲ್ ಚಾರಿಟಿ ಅಸೋಸಿಯೇಷನ್‌ನ ಅಂಡರ್ 14 ಹುಡುಗರು ಫ್ರಾನ್ಸ್, ಸ್ವೀಡನ್, ಡೆನ್ಮಾರ್ಕ್ ಮತ್ತು ನಾರ್ವೆಯಲ್ಲಿ ನಡೆಯುವ 46 ದಿನಗಳ ಯುರೋಪ್ ಪ್ರವಾಸದ ಮೇಲೆ ಹೋಗಿದ್ದಾರೆ. ಮೂರು ಸ್ಕ್ಯಾಂಡಿನೇವಿಯನ್ ಪಂದ್ಯಾವಳಿಗಳಲ್ಲಿ 25 ಕ್ಕೂ ಹೆಚ್ಚು ಪಂದ್ಯಗಳಿಗೆ ತಯಾರಿ ನಡೆಸಲು ಅವರು ಪ್ಯಾರಿಸ್‌ಗೆ ತರಬೇತಿ ಶಿಬಿರಕ್ಕೆ ಬಂದಿಳಿದಿದ್ದಾರೆ.”
“ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪ್ಯಾಲೆಸ್ಟೈನ್ ಅನ್ನು ಪ್ರತಿನಿಧಿಸುವುದು ಗೌರವ ಮತ್ತು ಅತೀವ ಹೆಮ್ಮೆಗೆ ಕಾರಣವಾಗಿದೆ” ಎಂದ ಕೋಚ್ ಮತ್ತು ಕ್ಲಬ್ ಅಧ್ಯಕ್ಷ ಅಹ್ಮದ್ ನಾಲ್ವೆ ರವರ ಹೇಳಿಕೆಯನ್ನೂ ಕೂಡ ಈ ಲೇಖನವು ಒಳಗೊಂಡಿದೆ. ಲೇಖನದ ಮತ್ತೊಂದು ತುಣುಕನ್ನು ಈ ಕೆಳಗೆ ನೋಡಬಹುದು::
ಅಷ್ಟಲ್ಲದೆ, X ಪೋಸ್ಟ್‌ಗೆ ಲಗತ್ತಿಸಲಾದ ಸಮುದಾಯ ಟಿಪ್ಪಣಿಯನ್ನೂ ನಾವು ಪರಿಶೀಲಿಸಿದ್ದು, ಅದರಲ್ಲಿಯೂ ಈ ವೀಡಿಯೊ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರಯಾಣಿಸುತ್ತಿರುವ ಪ್ಯಾಲೆಸ್ಟೀನೀ ಸಾಕರ್ ತಂಡಕ್ಕೆ ಸಂಬಂಧಿಸಿದ್ದು ಎಂದು ಹೇಳಲಾಗಿದೆ.
ಹೀಗಾಗಿ, ಈ ಹೇಳಿಕೆ ದಾರಿತಪ್ಪಿಸುವಂಥದ್ದು ಮತ್ತು ಸುಳ್ಳೊಂದನ್ನು ನಿರೂಪಿಸಲು ದೃಶ್ಯಾವಳಿಗಳನ್ನು ಸಂದರ್ಭಬಾಹಿರವಾಗಿ ಬಳಸಲಾಗಿದೆ.
ಇದನ್ನೂ ಓದಿ:
ಆಸ್ಟ್ರೇಲಿಯದ ಅಪಘಾತಕ್ಕೀಡಾದ ರಾಕೆಟ್ ಇಸ್ರೋ ಎಂಜಿನ್ ಹೊಂದಿತ್ತೇ? ಸತ್ಯ ಪರಿಶೀಲನೆ