ಹೇಳಿಕೆ/Claim: ಇಸ್ರೇಲ್ನ ಕೂರ್ ಇಂಡಸ್ಟ್ರೀಸ್ಗೆ ನೀಡಿದ $1.5 ಬಿಲಿಯ ಸಾಲವನ್ನು ಮರಳಿ ಪಡೆಯುವ ಮೂಲಕ ಚೀನಾ ದೇಶವು ಇಸ್ರೇಲ್ ಮೇಲೆ ನಿರ್ಬಂಧಗಳನ್ನು ವಿಧಿಸಲು ಯೋಜಿಸಿದೆ.
ಕಡೆನುಡಿ/Conclusion:ಹೇಳಿಕೆ ದಾರಿತಪ್ಪಿಸುವಂತಿದೆ. ಚೀನಾದ CNAC (ಚೈನಾ ನ್ಯಾಷನಲ್ ಆಗ್ರೊಕೆಮಿಕಲ್ ಕಾರ್ಪೊರೇಶನ್) ಇಸ್ರೇಲ್ನ ಕೂರ್ ಇಂಡಸ್ಟ್ರೀಸ್ಗೆ $960 ಮಿಲಿಯ ಸಿಂಡಿಕೇಟೆಡ್ ಸಾಲವನ್ನು ಒದಗಿಸಿತ್ತು. ಆದರೆ 2014ರಲ್ಲಿ, ಕೂರ್ ಅನ್ನು ಇಸ್ರೇಲ್ನ ಡಿಸ್ಕೌಂಟ್ ಇನ್ವೆಸ್ಟ್ಮೆಂಟ್ ಕಾರ್ಪ್ (DIC) ಸ್ವಾಧೀನಪಡಿಸಿಕೊಂಡಿತು, ನಂತರ ಇದನ್ನು 2016ರಲ್ಲಿ ಕೆಮ್ಚೈನಾ (CNACಯ ಪೋಷಕ ಕಂಪನಿ) ಭಾಗಶಃ ಸಾಲ ಸೇರಿದಂತೆ $1.4 ಬಿಲಿಯ ಮೌಲ್ಯಮಾಪನಕ್ಕೆ ಸ್ವಾಧೀನಪಡಿಸಿಕೊಂಡಿತು. ಈಗ, ಕೂರ್ ಒಂದು ಖಾಸಗಿ ಸಂಸ್ಥೆಯಾಗಿದೆ.
ರೇಟಿಂಗ್/Rating: ದಾರಿತಪ್ಪಿಸುವಂತಿದೆ– ![]()
ಸಾಮಾಜಿಕ ಜಾಲತಾಣದಾದ್ಯಂತ ಬಳಕೆದಾರರು ಚೀನಾ ದೇಶವು ಇಸ್ರೇಲ್ ಮೇಲೆ ನಿರ್ಬಂಧಗಳನ್ನು ವಿಧಿಸುವ ಮತ್ತು ಇಸ್ರೇಲ್ನ ಕೂರ್ ಇಂಡಸ್ಟ್ರೀಸ್ಗೆ ನೀಡಲಾದ $1.5 ಬಿಲಿಯ ಸಾಲವನ್ನು ಮರಳಿ ಪಡೆಯುವ ಬಗ್ಗೆ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘rkmtimes’ ಸೆಪ್ಟೆಂಬರ್ 20, 2025 ರಂದು ಅಂತಹ ಹೇಳಿಕೆಯನ್ನು ಮಾಡಿದ್ದಾರೆ. “ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಒಕ್ಕೂಟದ ನಂತರ ಚೀನಾ ದೇಶವು ಇಸ್ರೇಲ್ನ ಮೂರನೇ ಅತಿದೊಡ್ಡ ಆರ್ಥಿಕ ಮತ್ತು ರಕ್ಷಣಾ ಪಾಲುದಾರ” ಎಂಬುದನ್ನು ಶೀರ್ಷಿಕೆಯು ಒತ್ತಿಹೇಳುತ್ತದೆ.
ಈ ಪೋಸ್ಟ್ 425,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 22,000 ಲೈಕ್ಗಳನ್ನು ಗಳಿಸಿದೆ, ಅದನ್ನು ಕೆಳಗೆ ನೋಡಬಹುದು –
JUST IN🇨🇳🇮🇱🔥 China plans to impose Sanctions on #Israel by re-claiming $1.5 Billion loan given to Israel’s Koor Industries.
🚨 #China is Israel’s third largest partner of Economy and Defense after US and European union.
🚨 Well done, Xi Jinping. pic.twitter.com/r6qCNkarKL
— RKM (@rkmtimes) September 20, 2025

ಮತ್ತೊಬ್ಬ ‘hellopakistan’ ಎಂಬ ಹ್ಯಾಂಡಲ್ನ ಇನ್ಸ್ಟಾಗ್ರಾಮ್ ಬಳಕೆದಾರರು ಸೆಪ್ಟೆಂಬರ್ 20, 2025 ರಂದು ಅಂತಹದ್ದೇ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ ಅನ್ನು ಇಲ್ಲಿ ನೋಡಿ
View this post on Instagram
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಹಿಡಿಯಿತು. ಈ ಆರೋಪಕ್ಕೆ ಅಧಿಕೃತ ಮೂಲಗಳು ಅಥವಾ ಪ್ರಮುಖ ಸುದ್ದಿ ಸಂಸ್ಥೆಗಳಿಂದ ಯಾವುದೇ ರೀತಿಯ ವಿಶ್ವಾಸಾರ್ಹ ಬೆಂಬಲವಿಲ್ಲ. ಚೀನಾ ಸರ್ಕಾರಿ ಸಂಸ್ಥೆಗಳು ಅಥವಾ ಇಸ್ರೇಲಿ ಸರ್ಕಾರಿ ಪಡೆಗಳಿಂದ ಯಾವುದೇ ಪ್ರಕಟಣೆಗಳು ಈ ಹೇಳಿಕೆಯನ್ನು ದೃಢೀಕರಿಸುವುದಿಲ್ಲ.
ಈ ಹೇಳಿಕೆಯನ್ನು ಅರ್ಥಮಾಡಿಕೊಳ್ಳಲು, ಇದ ಭಾಗಿಗಳಾಗಿರುವ ಸಂಸ್ಥೆಗಳನ್ನು ತಿಳಿದುಕೊಳ್ಳುವುದು ಮುಖ್ಯ: –
- ಕೂರ್ ಇಂಡಸ್ಟ್ರೀಸ್ (ಇಸ್ರೇಲ್): ಮುಂದೆ ಅಡಾಮಾ ಅಗ್ರಿಕಲ್ಚರಲ್ ಸೊಲ್ಯೂಷನ್ಸ್ ಎಂದು ಕರೆಯಲ್ಪಟ್ಟ ಮಖ್ತೆಶಿಮ್ ಅಗಾನ್ ಇಂಡಸ್ಟ್ರೀಸ್ (MAI) ನಲ್ಲಿ ಪ್ರಮುಖ ಪಾಲನ್ನು ಹೊಂದಿದ್ದ ಒಂದು ಇಸ್ರೇಲಿ ಹೋಲ್ಡಿಂಗ್ ಸಂಸ್ಥೆ.
- ಕೆಮ್ಚೈನಾ (ಚೀನಾ ರಾಷ್ಟ್ರೀಯ ರಾಸಾಯನಿಕ ನಿಗಮ, ಚೀನಾ): ಅಡಾಮಾದಲ್ಲಿ ನಿಯಂತ್ರಕ ಪಾಲನ್ನು ಪಡೆದುಕೊಂಡ ಸರ್ಕಾರಿ ಸ್ವಾಮ್ಯದ ಚೀನೀ ರಾಸಾಯನಿಕ ಸಂಸ್ಥೆ.
- CNAC (ಚೀನಾ ರಾಷ್ಟ್ರೀಯ ಕೃಷಿ ರಾಸಾಯನಿಕ ನಿಗಮ, ಚೀನಾ): ಮುಂದೆ ಕೂರ್ನ ಸಾಲವನ್ನು ಸ್ವಾಧೀನಪಡಿಸಿಕೊಂಡ ಕೆಮ್ಚೈನಾದ ಅಂಗಸಂಸ್ಥೆ.
- ಡಿಸ್ಕೌಂಟ್ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ (DIC, ಇಸ್ರೇಲ್): ಮುಂದೆ 2014 ರಲ್ಲಿ ಕೂರ್ನೊಂದಿಗೆ ವಿಲೀನಗೊಂಡ ಕಂಪನಿ.
- ಚೀನಾ ರಾಷ್ಟ್ರೀಯ ಕೃಷಿ ರಾಸಾಯನಿಕ ನಿಗಮವು (CNAC) ಅಕ್ಟೋಬರ್ 2011ರಲ್ಲಿ ಅಡಾಮಾ ಅಗ್ರಿಕಲ್ಚರಲ್ ಸೊಲ್ಯೂಷನ್ಸ್ ನಲ್ಲಿ (ಕೂರ್) 2.4 ಬಿಲಿಯ ಯುಎಸ್ ಡಾಲರ್ ಹೂಡಿಕೆ ಮಾಡಿತು.
- ನಂತರ CNAC ಆ ಕಂಪನಿಯಲ್ಲಿ $1.44 ಬಿಲಿಯಕ್ಕೆ 60% ಪಾಲನ್ನು ಪಡೆದುಕೊಂಡಿತು ಮತ್ತು ಉಳಿದ 40% ಪಾಲು ಕೂರ್ ನೊಂದಿಗೆ ಉಳಿಯಿತು ಮತ್ತು 2011ನೇ ವರ್ಷದಲ್ಲಿ ಕೂರ್ ನಲ್ಲಿ (CNAC)ನ 960 ಮಿಲಿಯ ಯುಎಸ್ ಡಾಲರ್ ($2.4 ಬಿಲಿಯ – $1.22 ಬಿಲಿಯ = 960 ಮಿಲಿಯ) ಕೂಡ.
- ನಂತರ ಡಿಸ್ಕೌಂಟ್ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ (DIC, ಇಸ್ರೇಲ್) ಮಾರ್ಚ್ 2014 ರಲ್ಲಿ ಸಾಲದೊಂದಿಗೆ ಕೂರ್ ನ ಸ್ವಾಧೀನ ಪಡೆಯಿತು.
- CNAC ಇಸ್ರೇಲ್ ನ ಡಿಸ್ಕೌಂಟ್ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ (DIC) ನಲ್ಲಿ 40% ಪಾಲನ್ನು ಸ್ವಾಧೀನಪಡಿಸಿಕೊಂಡಿತು, ಈ ಮೂಲಕ ಇಸ್ರೇಲಿ ಕಂಪನಿ ಅಡಾಮಾದ ಸಂಪೂರ್ಣ ನಿಯಂತ್ರಣವನ್ನು ಪಡೆಯಿತು. ಈ ಸ್ವಾಧೀನವು ಒಂದು ಬೃಹತ್ ಒಪ್ಪಂದದ ಭಾಗವಾಗಿತ್ತು, ಇದರಲ್ಲಿ ಅಡಾಮಾದಲ್ಲಿನ DICಯ ಪಾಲನ್ನು ಸುಮಾರು $1.4 ಬಿಲಿಯಕ್ಕೆ ಕೆಮ್ಚೈನಾಗೆ ಮಾರಾಟ ಮಾಡಲಾಗಿತ್ತು (ಕೆಮ್ಚೈನಾ ಡಿಸ್ಕೌಂಟ್ ಇನ್ವೆಸ್ಟ್ಮೆಂಟ್ಗೆ $230 ಮಿಲಿಯನ್ ನಗದು ಪಾವತಿಸಿತು. ಕೆಮ್ಚೀನಾ ಡಿಸ್ಕೌಂಟ್ ಇನ್ವೆಸ್ಟ್ಮೆಂಟ್ಗೆ ನೀಡಿದ್ದ ಸುಮಾರು $1.17 ಬಿಲಿಯ ಹಿಂದಿನ ಸಾಲವನ್ನು ಅದರ ಕೈಗೆತ್ತಿಕೊಂಡಿತು. ಕೆಮ್ಚೀನಾ ಈ ಸಾಲವನ್ನು ತಾನು ತೆಗೆದುಕೊಂಡದ್ದು ಅಡಾಮಾದಲ್ಲಿನ ಉಳಿದ 40% ಪಾಲಿಗೆ ಸಂಬಂಧಿಸಿದ ಒಟ್ಟಾರೆ ಮೌಲ್ಯದ ಭಾಗವಾಗಿತ್ತು).
ಸ್ವಾಧೀನದ ವಿವರಗಳು:
ಸಾಲದ ಬಗ್ಗೆ ತಿಳಿದುಕೊಳ್ಳಲು, ನಾವು “ಇಸ್ರೇಲ್ನ ಕೂರ್ ಇಂಡಸ್ಟ್ರೀಸ್ಗೆ ಚೀನಾ ನೀಡಿದ $1.5 ಬಿಲಿಯ ಸಾಲ” ಎಂಬ ಶಬ್ದಾವಳಿಯೊಂದಿಗೆ ಕೀವರ್ಡ್ ಹುಡುಕಾಟವನ್ನು ನಡೆಸಿದೆವು. ಈ ಸಾಲದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಅಕ್ಟೋಬರ್, 2011 ರಷ್ಟು ಹಿಂದಿನ ಏಯ್ಡ್ಡೇಟಾದ ಚೈನಾ ಗ್ಲೋಬಲ್ ಡೆವಲಪ್ಮೆಂಟ್ ಟ್ರ್ಯಾಕರ್ನ ವರದಿ ನಮಗೆ ದೊರಕಿತು.-

ಸಾಲ ಮತ್ತು ಅವಧಿ ಏನಾಗಿತ್ತು?
ಮೇಲಿನ ಈ ವರದಿಯ ಪ್ರಕಾರ, ಚೀನಾ ರಾಷ್ಟ್ರೀಯ ಕೃಷಿ ರಾಸಾಯನಿಕ ನಿಗಮವು (ಅಥವಾ CNAC/CNCC)) ಮಖ್ತೆಶಿಮ್ ಅಗಾನ್ ಇಂಡಸ್ಟ್ರೀಸ್ನ (ಈಗ ಅಡಾಮಾ ಅಗ್ರಿಕಲ್ಚರಲ್ ಸೊಲ್ಯೂಷನ್ಸ್) 60% ಅನ್ನು ಸ್ವಾಧೀನಪಡಿಸಿಕೊಂಡ ನಂತರ ಕೂರ್ ಇಂಡಸ್ಟ್ರೀಸ್ಗೆ $960 ಮಿಲಿಯ ಸಿಂಡಿಕೇಟೆಡ್ ಸಾಲವನ್ನು ಒದಗಿಸಿತು.
ಸಾಲದ ಮೊತ್ತವು 1.18 ಬಿಲಿಯ ಆಗಿದ್ದು, 7 ವರ್ಷಗಳ ಅವಧಿ, 4 ವರ್ಷಗಳ ಅನುಗ್ರಹ ಅವಧಿ ಮತ್ತು 5.095% ಬಡ್ಡಿಯನ್ನು ಹೊಂದಿತ್ತು, ಇದನ್ನು ಕೂರ್ನ MAI ಷೇರುಗಳಿಂದ ಸುರಕ್ಷಿತಗೊಳಿಸಲಾಗಿತ್ತು. ಈ ಸಾಲದ ಸ್ಥಿತಿಯನ್ನು “ಪೂರ್ಣಗೊಳಿಸಲಾಗಿದೆ” ಎಂದು ಗುರುತಿಸಲಾಗಿದೆ ಮತ್ತು ಮರುಪಾವತಿಯ ಕುರಿತು ಯಾವುದೇ ಹೊಸ ಸುದ್ದಿಗಳಿಲ್ಲ. ಕೆಳಗಿನ ಸ್ಕ್ರೀನ್ಶಾಟ್ ನೋಡಿ-

ಇದರ ನಂತರ, “ಪ್ರಮುಖ ಕೃಷಿ ರಾಸಾಯನಿಕ ತಯಾರಕರಾದ ಕೆಮ್ಚೈನಾ ಸಂಸ್ಥೆಯು $1.438 ಮೌಲ್ಯಕ್ಕೆ ಮಖ್ತೆಶಿಮ್ ಅಗಾನ್ ಇಂಡಸ್ಟ್ರೀಸ್ನಲ್ಲಿ 60% ಪಾಲನ್ನು ಖರೀದಿಸಲಿದೆ. ಉಳಿದ 40% ಕೂರ್ನ ಕೈಯಲ್ಲಿರುತ್ತದೆ” ಎಂದು ದೃಢಪಡಿಸುವ ಆಗ್ನ್ಯೂಸ್ ವರದಿಯನ್ನು ನಮಗೆ ಸಿಕ್ಕಿತು. “ಮಖ್ತೆಶಿಮ್ ಅಗಾನ್ ಇಂಡಸ್ಟ್ರೀಸ್ನಲ್ಲಿ ಕೂರ್ ಷೇರುಗಳನ್ನು ಬಳಸಿಕೊಂಡು ಕೆಮ್ಚೈನಾ ಕೂರ್ಗಾಗಿ $960 ಮಿಲಿಯನ್ ಸಾಲವನ್ನು ವ್ಯವಸ್ಥೆ ಮಾಡಲಿದೆ…” ಎಂದೂ ಸಹ ವರದಿಯು ನಮೂದಿಸಿತ್ತು. ವರದಿಯ ಒಂದು ತುಣುಕನ್ನು ಕೆಳಗೆ ನೋಡಿ-

ಡಿಸ್ಕೌಂಟ್ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ (DIC)ನೊಂದಿಗೆ ಕೂರ್ ಇಂಡಸ್ಟ್ರೀಸ್ ವಿಲೀನ
2014 ರಲ್ಲಿ, ಡಿಸ್ಕೌಂಟ್ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ (DIC)ನೊಂದಿಗೆ ಕೂರ್ ಇಂಡಸ್ಟ್ರೀಸ್ ವಿಲೀನಗೊಂಡಾಗ ಕೂರ್ ಇಂಡಸ್ಟ್ರೀಸ್ ಸ್ವತಂತ್ರ ಕಂಪನಿಯಾಗಿ ಅಸ್ತಿತ್ವ ಕಳೆದುಕೊಂಡಿತು. ಮಾರ್ಚ್ 2, 2014 ರಂದು ರಾಯಿಟರ್ಸ್ ಪ್ರಕಟಿಸಿದ ವರದಿಯ ಪ್ರಕಾರ, ಇಸ್ರೇಲ್ನ ಡಿಸ್ಕೌಂಟ್ ಇನ್ವೆಸ್ಟ್ಮೆಂಟ್ ಕಾರ್ಪ್ ಸಂಸ್ಥೆಯು ಪೂರ್ಣ ವಿಲೀನದಲ್ಲಿ ಕೂರ್ ಅನ್ನು 2014ರಲ್ಲಿ ಸ್ವಾಧೀನಪಡಿಸಿಕೊಂಡಿತು. ವರದಿಯ ಒಂದು ತುಣುಕನ್ನು ಕೆಳಗೆ ನೋಡಿ-

ಎರಡು ವರ್ಷಗಳ ನಂತರ, 2016 ರಲ್ಲಿ, ಕೂರ್ ಮೂಲಕ DIC, ಅಡಾಮಾದಲ್ಲಿನ ತನ್ನ ಉಳಿದ 40% ಪಾಲನ್ನು ಕೆಮ್ಚೈನಾದ ಕೃಷಿ ರಾಸಾಯನಿಕ ವಿಭಾಗವಾದ CNACಗೆ ಮಾರಾಟ ಮಾಡಲು ಒಪ್ಪಿಕೊಂಡಿತು. ಒಪ್ಪಂದದ ಮೌಲ್ಯ ಸುಮಾರು $1.4 ಬಿಲಿಯ ಆಗಿತ್ತು. $1.4 ಬಿಲಿಯದಲ್ಲಿ, $230 ಮಿಲಿಯಗಳನ್ನು ನಗದು ರೂಪದಲ್ಲಿ ಪಾವತಿಸಲಾಯಿತು ಮತ್ತು ಕೂರ್ ಸಂಸ್ಥೆಯ ಬಾಕಿ ಚೀನೀ ಬ್ಯಾಂಕ್ ಸಾಲವನ್ನು ಪಡೆದುಕೊಳ್ಳುವ ಮೂಲಕ ಉಳಿದ $1.17 ಬಿಲಿಯವನ್ನು CNAC ಇತ್ಯರ್ಥಪಡಿಸಿತು. ಈ ಮೂಲಕ ಕೂರ್ ನ ಹೊಣೆಗಾರಿಕೆಗಳನ್ನು ಪರಿಣಾಮಕಾರಿಯಾಗಿ ತನ್ನ ಪುಸ್ತಕಗಳಿಂದ ತೆರವುಗೊಳಿಸಿತು.
28 ನವೆಂಬರ್, 2016 ರಂದು ಸಿಂಪ್ಸನ್ ಥ್ಯಾಚರ್ ಪ್ರಕಟಿಸಿದ ವರದಿಯು ಈ ವಹಿವಾಟಿನ ಕುರಿತು ಹೆಚ್ಚಿನ ಮಾಹಿತಿ ನೀಡುತ್ತದೆ. ಆದ್ದರಿಂದ CNAC ಕೂರ್ ಸಂಸ್ಥೆಯ ಖರೀದಿಯ ಭಾಗವಾಗಿ ಅದರ ಸಾಲವನ್ನು ತೆಗೆದುಕೊಳ್ಳಲು ಒಪ್ಪಿಕೊಂಡಿತು. ಇದರಿಂದಾಗಿ 2016 ರ ಹೊತ್ತಿಗೆ ಕೂರ್/DIC ಯ ಪುಸ್ತಕಗಳಿಂದ ಸಾಲ ತೆರವುಗೊಂಡಿತ್ತು. ಕೆಳಗಿನ ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಇದು ಚೀನಾ ಸರ್ಕಾರದಿಂದ ಇಸ್ರೇಲಿ ಸರ್ಕಾರಕ್ಕೆ ನೇರ ಸಾಲವಾಗಿರಲಿಲ್ಲ, ಬದಲಿಗೆ ಇದು ಸಂಸ್ಥೆಗಳ ಹಣಕಾಸು ವ್ಯವಸ್ಥೆಯಾಗಿತ್ತು. 2025 ರಲ್ಲಿ ಚೀನಾ ಈ ಸಾಲವನ್ನು ಮರುಪಾವತಿಸುವಂತೆ ಒತ್ತಾಯಿಸಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ, ಅಥವಾ ಪರಿಹರಿಸಲಾಗದ ಬಾಧ್ಯತೆಗಳ ಯಾವುದೇ ಸೂಚನೆಯೂ ಇಲ್ಲ.
ಕೊನೆಯದಾಗಿ, DIC ಹಲವಾರು ವರ್ಷಗಳ ಕಾಲಾವಧಿಯಲ್ಲಿ ಸ್ವಾಧೀನಗಳ ಮೂಲಕ ಕೂರ್ ಇಂಡಸ್ಟ್ರೀಸ್ನ ನಿಯಂತ್ರಣವನ್ನು ವಹಿಸಿಕೊಂಡಿದೆ.
ಪ್ರಸ್ತುತ ಕೂರ್ ಇಂಡಸ್ಟ್ರೀಸ್ ಒಂದು ಖಾಸಗಿ ಕಂಪನಿಯಾಗಿದ್ದು, DICಯ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ, ಅದು ತನ್ನ ಪೋರ್ಟ್ಫೋಲಿಯೊದಲ್ಲಿನ ವಿವಿಧ ಕಂಪನಿಗಳನ್ನು ಸಂಘಟಿಸುತ್ತದೆ ಮತ್ತು ಅವುಗಳನಿರ್ವಹಣೆಯಲ್ಲಿ ಭಾಗವಹಿಸುತ್ತದೆ.
ಆದ್ದರಿಂದ, ಈ ಹೇಳಿಕೆ ದಾರಿತಪ್ಪಿಸುವಂತಿದೆ ಎನ್ನಬಹುದು.
*****************************************************************************
ಇದನ್ನೂ ಓದಿ:
ಟ್ರಂಪ್ ರವರ ಆರೋಗ್ಯ ಗಂಭೀರವಾಗಿದೆಯೇ, ಮತ್ತು ಪ್ರಸ್ತುತ ಕೋಮಾದಲ್ಲಿದ್ದಾರೆಯೇ? ಸತ್ಯ ಪರಿಶೀಲನೆ
Digiteye Kannada Fact Checkers