ಹೇಳಿಕೆ/Claim: ಚೀನಾ ದೇಶವು US ಮತ್ತು ಯುರೋಪ್ ಔಷಧ ಉದ್ಯಮವನ್ನು ನಾಶಪಡಿಸುವಂತಹ ರಷ್ಯಾದ ಉಚಿತ-ಕ್ಯಾನ್ಸರ್ ಲಸಿಕೆಯನ್ನು ಅನುಮೋದಿಸಿ, ರಷ್ಯಾದ ಸಂಸ್ಥೆಗಳೊಂದಿಗೆ ಪರಸ್ಪರ ಔಷಧೀಯ ಸಂಬಂಧಗಳಿಗೆ ಸಹಿ ಹಾಕಲು ಯೋಜಿಸಿದೆ.
ಕಡೆನುಡಿ/Conclusion: ಹೇಳಿಕೆ ಸುಳ್ಳು. ಅಂತಹ ಅನುಮೋದನೆ ಬಂದಿದೆ ಎಂದು ದೃಢೀಕರಿಸಲು ಯಾವುದೇ ಅಧಿಕೃತ ಹೇಳಿಕೆಗಳಿಲ್ಲ. ರಷ್ಯಾ ಮತ್ತು ಚೀನಾ ವೈಯಕ್ತಿಕಗೊಳಿಸಿದ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಒಟ್ಟುಗೂಡಿ ಕೆಲಸ ಮಾಡುತ್ತಿವೆ ಮತ್ತು ಜನವರಿ 9, 2026 ರಂದು, ಚೀನಾ ಮತ್ತು ರಷ್ಯಾ ಲಸಿಕೆ ಅಭಿವೃದ್ಧಿಯ ಕುರಿತು ಜಂಟಿಯಾಗಿ ಅಧ್ಯಯನ ಮಾಡಲು ಮತ್ತು ಸಹಕಾರವನ್ನು ಬಲಪಡಿಸಲು ಒಪ್ಪಿಕೊಂಡಿವೆ. ಪ್ರಸ್ತುತ ಜಂಟಿ ಕ್ಯಾನ್ಸರ್ ಲಸಿಕೆ ಅನುಮೋದನೆ ಮತ್ತು ಉತ್ಪಾದನೆಯ ಕುರಿತು ಯಾವುದೇ ಅಧಿಕೃತ ವರದಿಗಳಿಲ್ಲ..
ರೇಟಿಂಗ್/Rating: ಸುಳ್ಳು — ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.![]()
ಅಥವಾ ಕೆಳಗಿನ ಲೇಖನವನ್ನು ಓದಿ.![]()
******************************************************
ಚೀನಾ ದೇಶವು ರಷ್ಯಾದ ಉಚಿತ-ಕ್ಯಾನ್ಸರ್ ಲಸಿಕೆಯನ್ನು ಅನುಮೋದಿಸಲು ಯೋಜಿಸುತ್ತಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘jacksonhinklle’ ಅಂತಹ ಒಂದು ಹೇಳಿಕೆಯನ್ನು ನೀಡಿದ್ದು, ಚೀನಾ ದೇಶವು ರಷ್ಯಾದ ಸಂಸ್ಥೆಗಳೊಂದಿಗೆ ಪರಸ್ಪರ ಔಷಧೀಯ ಸಂಬಂಧಗಳಿಗೆ ಸಹಿ ಹಾಕಲಿದ್ದು ಇದು $2.6 ಲಕ್ಷ ಕೋಟಿಯಷ್ಟು US ಮತ್ತು ಯುರೋಪಿನ ಔಷಧೀಯ ಮೌಲ್ಯವನ್ನು ನಾಶಪಡಿಸುತ್ತದೆ ಮತ್ತು ಎರಡು ವರ್ಷಗಳಲ್ಲಿ $1 ಲಕ್ಷ ಕೋಟಿಯ ಆದಾಯವನ್ನು ಗಳಿಸುವ ಲಸಿಕೆಗಳನ್ನು ಜಂಟಿಯಾಗಿ ಉತ್ಪಾದಿಸುತ್ತದೆ ಎಂದು ಆರೋಪಿಸಿದ್ದಾರೆ. ಈ ಪೋಸ್ಟ್ ಗೆ ಸುಮಾರು 2.8 ಮಿಲಿಯ ವೀಕ್ಷಣೆಗಳು ದೊರಕಿದ್ದು, ಅದನ್ನು ಕೆಳಗೆ ನೋಡಬಹುದು –
🚨🇨🇳🇷🇺 BREAKING: China plans to approve Russia’s Free-Cancer Vaccine and sign mutual pharmaceutical ties with Russian firms that will destroy $2.6 trilion US and European worth pharmaceutical production, firms and companies. pic.twitter.com/7yXsLTiTKQ
— Jackson Hinkle 🇺🇸 (@jacksonhinklle) January 11, 2026

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅದನ್ನು ಇಲ್ಲಿ ನೋಡಬಹುದು
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಹೇಳಿಕೆ ಸುಳ್ಳು ಎಂದು ಕಂಡುಕೊಂಡಿತು. ರಷ್ಯಾದ ಉಚಿತ-ಕ್ಯಾನ್ಸರ್ ಲಸಿಕೆಯನ್ನು ಅನುಮೋದಿಸಲು ಮತ್ತು ಒಪ್ಪಂದಗಳಿಗೆ ಸಹಿ ಹಾಕಲು ಚೀನಾ ಯೋಜಿಸಿದೆ ಎಂದು ದೃಢೀಕರಿಸಲು ಯಾವುದೇ ವಿಶ್ವಾಸಾರ್ಹ ವರದಿಗಳು ಅಥವಾ ಪುರಾವೆಗಳಿಲ್ಲ. ಎರಡೂ ದೇಶಗಳು ವೈಯಕ್ತಿಕಗೊಳಿಸಿದ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿವೆಯಾದರೂ, ಅಂತಹ ಯಾವುದೇ ಅನುಮೋದನೆ ಇಲ್ಲ.
ವಿವರಗಳು:
ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು “ರಷ್ಯಾದ ಉಚಿತ ಕ್ಯಾನ್ಸರ್ ಲಸಿಕೆಗೆ ಚೀನಾ ಅನುಮೋದನೆ” ಎಂಬ ಪದಗಳೊಂದಿಗೆ ನಾವು ಮೊದಲು ಅಂತರ್ಜಾಲ ಹುಡುಕಾಟವನ್ನು ನಡೆಸಿದೆವು. ಅಧಿಕೃತ ಹೇಳಿಕೆಗಳಿಗಾಗಿ ಹುಡುಕಾಟ ನಡೆಸಿದಾಗ ಚೀನಾ ಯಾವುದೇ ರಷ್ಯಾದ ಕ್ಯಾನ್ಸರ್ ಲಸಿಕೆಯನ್ನು ಅನುಮೋದಿಸುತ್ತಿದೆ ಎಂಬುದರ ದೃಢೀಕರಣ ದೊರೆತಿಲ್ಲ. ಜೂನ್ 26, 2024 ರಂದು ಪ್ರಕಟವಾದ ರಾಯಿಟರ್ಸ್ ವರದಿಯ ಪ್ರಕಾರ, ಚೀನಾ ದೇಶವು ಮಾನವ ಪ್ರಯೋಗಗಳಿಗಾಗಿ ಒಂದು ಅದ್ಭುತ mRNA ಕ್ಯಾನ್ಸರ್ ಚಿಕಿತ್ಸೆಯನ್ನು ಮುಂದಾಗಿಸಿದೆ. CSPC ಯ SYS6020 “ಕ್ಲಿನಿಕಲ್ ಪ್ರಯೋಗಗಳಿಗೆ ಅನುಮೋದಿಸಲಾದ ವಿಶ್ವದ ಮೊದಲ mRNA-LNP-ಆಧಾರಿತ ಕೋಶ ಚಿಕಿತ್ಸಾ ಉತ್ಪನ್ನವಾಗಿದೆ” ಮತ್ತು ಇದು ಕನಿಷ್ಠ ಅಡ್ಡಪರಿಣಾಮಗಳೊಂದಿಗೆ “ಮೈಲೋಮಾ ಕೋಶಗಳನ್ನು ಗುರಿಯಾಗಿಸಿ ಕೊಲ್ಲಬಹುದಾಗಿದೆ”. ರಷ್ಯಾದ ದಾಖಲೆ ಇರುವ ಯಾವುದೇ ಅನುಮೋದನೆಗಳಿಲ್ಲ, ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಇದರ ನಂತರ, ರಷ್ಯಾವು ನಿರ್ದಿಷ್ಟ ಕ್ಯಾನ್ಸರ್ ಚಿಕಿತ್ಸೆಗಳಲ್ಲಿ ಪ್ರಗತಿ ಸಾಧಿಸುತ್ತಿದೆ ಎಂದು ಒಂದು ವರದಿಯಿಂದ ನಮಗೆ ತಿಳಿದುಬಂದಿತು, ಇದರಲ್ಲಿ ಮೆಲನೋಮ ಸಂಬಂಧಿತ mRNA ಲಸಿಕೆ (ನಿಯೋನ್ಕೋವಾಕ್) ಸೇರಿದೆ, ಇದನ್ನು “2026 ರ ಆರಂಭದಲ್ಲಿ ಮಾನವ ಬಳಕೆಗೆ ಮುಂದೂಡಬಹುದು” ಎನ್ನಲ್ಲಗಿತ್ತು. ರಷ್ಯಾದ ಎಂಟರೊಮಿಕ್ಸ್ ಈಗಾಗಲೇ “ಕ್ಯಾನ್ಸರ್ಗೆ ಚಿಕಿತ್ಸೆ” ಮತ್ತು ಸಾಮೂಹಿಕ ಬಳಕೆಗೆ ಸಿದ್ಧವಾಗಿದೆ ಎಂಬ ವದಂತಿಗಳನ್ನು CEDMO ವರದಿಯು ತಳ್ಳಿಹಾಕಿತು. ಈ ವರದಿಯಲ್ಲಿ ಚೀನಾದೊಂದಿಗೆ ಯಾವುದೇ ಪಾಲುದಾರಿಕೆಗಳು ಅಥವಾ ಯಾವುದೇ ಇತರ ದೇಶವು ಇದನ್ನು ಅಳವಡಿಸಿಕೊಳ್ಳುವ ಬಗ್ಗೆ ಏನೂ ಹೇಳಲ್ಲಗಿಲ್ಲ.
ಕೊನೆಯದಾಗಿ, ಜನವರಿ 9, 2026 ರಂದು, ಟಿವಿ ಬ್ರಿಕ್ಸ್ ಪ್ರಕಟಿಸಿದ ವರದಿಯಲ್ಲಿ ಮಾಸ್ಕೋ ಮತ್ತು ಚೀನಾದ ವಿಜ್ಞಾನಿಗಳು “ಅತ್ಯಾಧುನಿಕ ಕೋಶ ತಂತ್ರಜ್ಞಾನಗಳು ಮತ್ತು ಜೀನೋಮ್ ಸಂಪಾದನೆಯನ್ನು ಬಳಸಿಕೊಂಡು ವೈಯಕ್ತಿಕಗೊಳಿಸಿದ ಕ್ಯಾನ್ಸರ್ ಚಿಕಿತ್ಸೆಗಳ ಕುರಿತು ಸಹಕಾರವನ್ನು ಬಲಪಡಿಸಲು ಒಪ್ಪಿಕೊಂಡಿದ್ದಾರೆ” ಎಂದು ಉಲ್ಲೇಖಿಸಲಾಗಿದೆ. ಈ ವರದಿಯ ಪ್ರಕಾರ, ಮಾತುಕತೆಗಳ ಮುಖ್ಯ ವಿಷಯವು “ವೈಯಕ್ತಿಕಗೊಳಿಸಿದ ಕ್ಯಾನ್ಸರ್ ವಿರೋಧಿ ಲಸಿಕೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಕ್ಲಿನಿಕಲ್ ಅಭ್ಯಾಸದಲ್ಲಿ ನವೀನ ಕೋಶ-ಆಧಾರಿತ ಚಿಕಿತ್ಸೆಗಳನ್ನು ಅನ್ವಯಿಸುವುದು” ಆಗಿತ್ತು. ಯಾವುದೇ ಅಧಿಕೃತ ಹೇಳಿಕೆಗಳಲ್ಲಿ ಜಂಟಿ ಲಸಿಕೆ ಉತ್ಪಾದನೆ, ಅನುಮೋದನೆಗಳು ಅಥವಾ ಆದಾಯ ಹಂಚಿಕೆಯನ್ನು ಉಲ್ಲೇಖಿಸಲಾಗಿಲ್ಲ. ಈ ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಅಮೆರಿಕ ಮತ್ತು ಯುರೋಪಿನ ಔಷಧಗಳ $2.6 ಲಕ್ಷ ಕೋಟಿ “ನಾಶ”ಕ್ಕೆ ಸಂಬಂಧಿಸಿದ ಹೇಳಿಕೆಯಲ್ಲಿ 2024ರ ಜಾಗತಿಕ ಔಷಧ ಮಾರುಕಟ್ಟೆ ವಾರ್ಷಿಕ 1.8 ಲಕ್ಷ ಕೋಟಿ ಮತ್ತು ಫಾರ್ಚೂನ್ ಬಿಸ್ನೆಸ್ ಇನ್ಸೈಟ್ ವರದಿಯ ಪ್ರಕಾರ 2025ರ ಅಂದಾಜು 1.9 ಲಕ್ಷ ಕೋಟಿ ಎಂಬ ಅಂಕಿಅಂಶಗಳಿಲ್ಲ. ಆದ್ದರಿಂದ, $2.6 ಲಕ್ಷ ಕೋಟಿ ಕುಸಿತದ ಹೇಳಿಕೆಗಳು ಗಣಿತಶಾಸ್ತ್ರಾನುಸಾರ ಅಸಮಂಜಸವಾಗಿವೆ ಏಕೆಂದರೆ ಇದು ನಿಜವಾದ ಮಾರುಕಟ್ಟೆ ಗಾತ್ರವನ್ನು ವಿರೋಧಿಸುತ್ತದೆ.
ಆದ್ದರಿಂದ, ಈ ಹೇಳಿಕೆ ಸುಳ್ಳು ಮತ್ತು ಇದಕ್ಕೆ ಚೀನಾದಿಂದ ಯಾವುದೇ ಅನುಮೋದನೆ ಇಲ್ಲ.
***************************************************************************************
ಸಂಬಂಧಿತ ವೀಡಿಯೊಗಳು:
Digiteye Kannada Fact Checkers