ಹೇಳಿಕೆ/Claim : ಉಕ್ರೇನ್ US ಫೈಟರ್ ಜೆಟ್‌ಗಳನ್ನು ತಿರಸ್ಕರಿಸಿ ಫ್ರಾನ್ಸ್‌ನೊಂದಿಗೆ 100 ರಫೇಲ್ ಫೈಟ್ ಜೆಟ್‌ಗಳಿಗಾಗಿ ಒಪ್ಪಂದಕ್ಕೆ ಸಹಿ ಹಾಕಿದೆ..
ಕಡೆನುಡಿ/Conclusion : ಈ ಹೇಳಿಕೆ ದಾರಿ ತಪ್ಪಿಸುವಂತಿದೆ. ಉಕ್ರೇನ್ ನವೆಂಬರ್ 17, 2025 ರಂದು 100 ಫ್ರೆಂಚ್ ರಫೇಲ್ ಜೆಟ್‌ಗಳಿಗಾಗಿ ಆರಂಭಿಕ ಒಪ್ಪಂದಕ್ಕೆ ಸಹಿ ಹಾಕಿದ್ದು ನಿಜ, ಆದರೆ US ಜೆಟ್‌ಗಳನ್ನು ತಿರಸ್ಕರಿಸಿದ್ದರ ಕುರಿತು ಯಾವುದೇ ಪುರಾವೆಗಳಿಲ್ಲ. ಬದಲಾಗಿ, ಕ್ಯೀವ್ US F-16ಗಳು ಮತ್ತು ಸ್ವೀಡನ್‌ನ ಗ್ರಿಪೆನ್ E/F ಮಲ್ಟಿರೋಲ್ ಫೈಟರ್ ಜೆಟ್‌ಗಳನ್ನು ಒಳಗೊಂಡಂತೆ ಬಹು-ರಾಷ್ಟ್ರ ವೈವಿಧ್ಯೀಕರಣ ತಂತ್ರವನ್ನು ಅನುಸರಿಸುತ್ತಿದೆ.
ರೇಟಿಂಗ್/Rating : ದಾರಿ ತಪ್ಪಿಸುವಂತಿದೆ — ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
******************************************************
ಇತ್ತೀಚೆಗೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಫ್ರಾನ್ಸ್ ಜೊತೆಗೆ 100 ರಫೇಲ್ ಜೆಟ್‌ಗಳಿಗೆ ಒಪ್ಪಂದ ಮಾಡಿಕೊಳ್ಳೂವ ಸಲುವಾಗಿ ಉಕ್ರೇನ್ ಅಮೆರಿಕದ ಫೈಟರ್ ಜೆಟ್‌ಗಳನ್ನು ತಿರಸ್ಕರಿಸಿದೆ ಎಂದು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘MeghUpdates’ ಇಂತಹ ಒಂದು ಹೇಳಿಕೆಯನ್ನು ಈ ಮುಂದಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ: ಉಕ್ರೇನ್ US ಫೈಟರ್ ಜೆಟ್‌ಗಳನ್ನು ತಿರಸ್ಕರಿಸಿದೆ ಮತ್ತು ಫ್ರಾನ್ಸ್ ಜೊತೆ 100 ರಫೇಲ್ ಜೆಟ್‌ಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಅಮೆರಿಕ ಮತ್ತು ಪಾಕಿಸ್ತಾನದ ಪ್ರಚಾರ ಭಗ್ನಗೊಂಡಿದೆ. ಆಪರೇಷನ್ ಸಿಂಧೂರ್‌ನ ಯಶಸ್ಸಾ?” ಈ ಪೋಸ್ಟ್ 777,000 ಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 34,000 ಲೈಕ್‌ಗಳನ್ನು ಗಳಿಸಿದೆ, ಅದನ್ನು ಕೆಳಗೆ ನೋಡಬಹುದು:
Ukraine rejects US fighter jets and Sign a deal with France for 100 Rafale jets🔥
Propaganda of US and Pakistan Busted 💥
Success of Operation Sindoor? pic.twitter.com/pxStOIYsHt
— Megh Updates 🚨™ (@MeghUpdates) November 17, 2025

View this post on Instagram
ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಇದು ದಾರಿತಪ್ಪಿಸುವಂತಿದೆ ಎಂದು ಕಂಡುಕೊಂಡಿತು. ಫ್ರಾನ್ಸ್‌ನ ರಫೇಲ್‌ಗಾಗಿ ಉಕ್ರೇನ್ US ಫೈಟರ್ ಜೆಟ್‌ಗಳನ್ನು ತಿರಸ್ಕರಿಸಿದೆ ಎಂದು ಸೂಚಿಸುವ ಯಾವುದೇ ವಿಶ್ವಾಸಾರ್ಹ ಪುರಾವೆಗಳು ಅಥವಾ ಮಾಧ್ಯಮ ವರದಿಗಳಿಲ್ಲ. ಭಾರತದ ಆಪರೇಷನ್ ಸಿಂಧೂರ್ ನ ಯಶಸ್ಸಿನ ನಂತರ ಉಕ್ರೇನ್ ಈ ಕ್ರಮವನ್ನು ಕೈಗೊಂಡಿದೆ ಎಂದು ಸೂಚಿಸುವ ಹೇಳಿಕೆಗಳು ದಾರಿತಪ್ಪಿಸುವಂತಿವೆ, ಏಕೆಂದರೆ ಇದರ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಇಲ್ಲ.
ಹೇಳಿಕೆಗಳ ಬಗ್ಗೆ ತಿಳಿದುಕೊಳ್ಳಲು ನಾವು ಮೊದಲು ‘ಉಕ್ರೇನ್ ಮತ್ತು ಫ್ರಾನ್ಸ್ 100 ಫೈಟರ್ ಜೆಟ್‌ಗಳಿಗೆ ಒಪ್ಪಂದಕ್ಕೆ ಸಹಿ ಹಾಕಿವೆ’ ಎಂಬ ಪದಗಳೊಂದಿಗೆ ಅಂತರ್ಜಾಲ ಹುಡುಕಾಟವನ್ನು ನಡೆಸಿದೆವು. ನವೆಂಬರ್ 17, 2025 ರಂದು, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ 2035ರ ವೇಳೆಗೆ ಉಕ್ರೇನ್ 100 ಡಸಾಲ್ಟ್ ರಫೇಲ್ F4 ಮಲ್ಟಿರೋಲ್ ಫೈಟರ್ ಜೆಟ್‌ಗಳ ಸ್ವಾಧೀನ ಪಡೆಯಲಿಕ್ಕಾಗಿ ಪ್ಯಾರಿಸ್‌ನಲ್ಲಿ 10 ವರ್ಷಗಳ ಆಶಯ ಪತ್ರಕ್ಕೆ ಸಹಿ ಹಾಕಿದರು.
ಫ್ರೆಂಚ್ ರಫೇಲ್ ಒಪ್ಪಂದದ ದೃಢೀಕರಣ ಕಂಡುಬಂದಿದ್ದು, ಉಕ್ರೇನಿಯನ್ ಅಧ್ಯಕ್ಷರ ಕಚೇರಿಯು ಇದನ್ನು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಪ್ರಕಟಣೆಯ ಅನುಸಾರ, ಒಪ್ಪಂದವು “2035 ರ ವೇಳೆಗೆ ಉಕ್ರೇನ್‌ನ ಯುದ್ಧ ವಿಮಾನಯಾನಕ್ಕಾಗಿ 100 ರಫೇಲ್ F4 ವಿಮಾನಗಳು, SAMP/T ವಾಯು-ರಕ್ಷಣಾ ವ್ಯವಸ್ಥೆಗಳು, ವಾಯು-ರಕ್ಷಣಾ ರೇಡಾರ್‌ಗಳು, ವಾಯು-ಆಕಾಶ ಕ್ಷಿಪಣಿಗಳು ಮತ್ತು ವೈಮಾನಿಕ ಬಾಂಬ್‌ಗಳಿಗೆ ಸಂಬಂಧಿಸಿದೆ.” ಮುಂದುವರಿದು, “ಉಕ್ರೇನ್‌ನಲ್ಲಿ ಸ್ಥಳೀಕರಣದೊಂದಿಗೆ ತಂತ್ರಜ್ಞಾನ ವರ್ಗಾವಣೆ ಮತ್ತು ಜಂಟಿ ವಿಮಾನ ಉತ್ಪಾದನೆಯ ಸಾಧ್ಯತೆ” ಕೂಡ ಇರುತ್ತದೆ. ಇದರ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ನೋಡಿ.

ನವೆಂಬರ್ 17, 2025 ರಂದು ನಡೆದ ಎರಡು ಪಕ್ಷಗಳ ಪತ್ರಿಕಾಗೋಷ್ಠಿಯಲ್ಲಿ, ಝೆಲೆನ್ಸ್ಕಿ ಈ ಪ್ಯಾಕೇಜ್ ಬಗ್ಗೆ ವಿವರಿಸುತ್ತಾ: “ಉಕ್ರೇನ್ ನೂರು ರಫೇಲ್ F4 ವಿಮಾನಗಳು, ಅತ್ಯಂತ ಶಕ್ತಿಶಾಲಿ ಫ್ರೆಂಚ್ ರೇಡಾರ್‌ಗಳು ಮತ್ತು ಆರು ಲಾಂಚರ್‌ಗಳೊಂದಿಗಿನ ಎಂಟು SAMP/T ವಾಯು ರಕ್ಷಣಾ ವ್ಯವಸ್ಥೆಗಳನ್ನು ಪಡೆಯುವುದು ಸಾಧ್ಯವಾಗುತ್ತದೆ,” ಇದು 2026ರಿಂದ ಜಾರಿಗೆ ಬರುವಂತಹ “ಕಾರ್ಯತಾಂತ್ರಿಕ ಒಪ್ಪಂದ” ಎಂದವರು ಹೇಳಿದರು. ಉಕ್ರೇನ್‌ನ ರಕ್ಷಣಾ ವಲಯವನ್ನು ಬೆಂಬಲಿಸಲು ಅವರು ಕೈಗಾರಿಕಾ ಸಹಕಾರವನ್ನು ಒತ್ತಿ ಹೇಳಿದರು. ಫಸ್ಟ್‌ಪೋಸ್ಟ್‌ನ ಯುಟ್ಯೂಬ್ ವಾಹಿನಿಯಲ್ಲಿ ಅಪ್‌ಲೋಡ್ ಮಾಡಲಾದ ಈ ದೃಶ್ಯಾವಳಿಯನ್ನು ಇಲ್ಲಿ ವೀಕ್ಷಿಸಿ.
ಆದಾಗ್ಯೂ, ಯಾವುದೇ ಪಕ್ಷಗಳು US ಫೈಟರ್ ಜೆಟ್‌ಗಳನ್ನು ತಿರಸ್ಕರಿಸುವ ಅಥವಾ ಸಹಾಯವನ್ನು ಸ್ವೀಕರಿಸದಿರುವ ಬಗ್ಗೆ ಉಲ್ಲೇಖಿಸಿಲ್ಲ. ಇದರ ನಂತರ, ಉಕ್ರೇನ್ ವೈವಿಧ್ಯೀಕರಣದ ತಂತ್ರವನ್ನು ಅನುಸರಿಸುತ್ತಿದೆ ಎಂಬುದನ್ನೂ ನಾವು ಕಂಡುಕೊಂಡೆವು. ಉದಾಹರಣೆಗೆ, ಉಕ್ರೇನ್ ಮತ್ತು ಸ್ವೀಡನ್ ಅಕ್ಟೋಬರ್ 22, 2025 ರಂದು 100-150 JAS 39 ಗ್ರಿಪೆನ್ E/F ಮಲ್ಟಿರೋಲ್ ಫೈಟರ್ ಜೆಟ್‌ಗಳ ಸ್ವಾಧೀನದ ಸಂಭಾವನೆಯ ಕುರಿತು ಆಶಯ ಪತ್ರಕ್ಕೆ ಸಹಿ ಹಾಕಿದವು. 10-15 ವರ್ಷಗಳಲ್ಲಿ ಸಂಭಾವ್ಯವಾಗಿ €20-30 ಶತಕೋಟಿ ಮೌಲ್ಯದ ಪ್ರಮುಖ ರಫ್ತು ಒಪ್ಪಂದದತ್ತ ಇದು ಮೊದಲ ಔಪಚಾರಿಕ ಹೆಜ್ಜೆಯಾಗಿರುವ ಈ ಒಪ್ಪಂದವು ಉಕ್ರೇನ್‌ನ ವಾಯುಪಡೆಯನ್ನು ಪುನರ್ನಿರ್ಮಿಸುವ ಗುರಿಯನ್ನು ಹೊಂದಿದೆ.
ಬಿಸ್ನೆಸ್ ಇನ್ಸೈಡರ್ ಪ್ರಕಟಿಸಿದ ವರದಿಗಳು “F-16, ಗ್ರಿಪೆನ್ E ಮತ್ತು ರಫೇಲ್ F4ಗಳು ಉಕ್ರೇನ್‌ನ ಹಳೆಯದಾದ ಸೋವಿಯತ್ ನೌಕಾಪಡೆಗೆ ಬೃಹತ್ ನವೀಕರಣಗಳಾಗಿವೆ” ಎಂಬುದನ್ನು ಉಲ್ಲೇಖಿಸುತ್ತವೆ. “ಉಕ್ರೇನೀ ಪೈಲಟ್‌ಗಳು ಈಗಾಗಲೇ ಯುರೋಪಿಯನ್ NATO ಸದಸ್ಯರು ದಾನ ಮಾಡಿರುವ ಲಾಕ್‌ಹೀಡ್ ಮಾರ್ಟಿನ್ F-16 ಫೈಟಿಂಗ್ ಫಾಲ್ಕನ್‌ಗಳನ್ನು ಹಾರಿಸುತ್ತಿದ್ದಾರೆ ಮತ್ತು ಹಲವಾರು ಫ್ರೆಂಚ್ ಡಸಾಲ್ಟ್ ಮಿರಾಜ್ 2000 ಫೈಟರ್‌ಗಳನ್ನೂ ಕೂಡ” ಎಂದೂ ಸಹ ಈ ವರದಿ ನಮಗೆ ತಿಳಿಸುತ್ತದೆ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ:

ಅಮೆರಿಕದ ಯುದ್ಧ ವಿಮಾನಗಳನ್ನು ಉಕ್ರೇನ್ ತಿರಸ್ಕರಿಸುತ್ತಿದೆ ಎಂದು ಎಲ್ಲೂ ಉಲ್ಲೇಖಿಸಲಾಗಿಲ್ಲ. ಟ್ರಂಪ್ ಅಥವಾ ಝೆಲೆನ್ಸ್ಕಿ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆಯನ್ನು ಬಿಡುಗಡೆ ಮಾಡಿಲ್ಲ.
ಆದ್ದರಿಂದ, “ನಿರಾಕರಣೆ”ಯ ಹೇಳಿಕೆಗಳು ದೃಢೀಕೃತವಾಗಿರದ ಸಾಮಾಜಿಕ ಮಾಧ್ಯಮ ವಾಹಿನಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿವೆ ಮತ್ತಿವು ಯಾವುದೇ ಪುರಾವೆಗಳು ಅಥವಾ ಪರಿಶೀಲಿಸಿದ ಹೇಳಿಕೆಗಳಿಲ್ಲ. ರಫೇಲ್ ಒಪ್ಪಂದವು US ಮತ್ತು ಸ್ವೀಡಿಷ್ ಗ್ರಿಪೆನ್ ಸ್ವಾಧೀನಗಳಿಗೆ ಪೂರಕವಾಗಿ ಕೆಲಸ ಮಾಡುತ್ತದೆ, ಬದಲಿಯಾಗಿಯಲ್ಲ.
ಹೀಗಾಗಿ, ಈ ಹೇಳಿಕೆಯು ದಾರಿತಪ್ಪಿಸುವಂತಿದೆ ಎನ್ನಬಹುದು.
**************************************************************************************
ಇದನ್ನೂ ಓದಿ:
ಟ್ರಂಪ್ ರ‍್ಯಾಲಿಯಲ್ಲಿ ನಿಜವಾಗಿಯೂ ಯಾರೋ “ಅಲ್ಲಾ ಹು ಅಕ್ಬರ್” ಎಂದು ಕೂಗಿ ಅವರನ್ನು ಹೆದರಿಸಿದರೇ? ಸತ್ಯ ಪರಿಶೀಲನೆ
Digiteye Kannada Fact Checkers