ಹೇಳಿಕೆ/Claim: ಟ್ರಂಪ್ ರ‍್ಯಾಲಿಯಲ್ಲಿ ಯಾರೋ “ಅಲ್ಲಾ ಹು ಅಕ್ಬರ್” ಎಂದು ಕೂಗಿದರು ಮತ್ತಿದು ಅವರನ್ನು ಬೆಚ್ಚಿಬೀಳಿಸಿ ಭಯಭೀತಗೊಳಿಸಿತು ಎಂದು ದೃಶ್ಯಗಳು ತೋರಿಸುತ್ತವೆ.
ಕಡೆನುಡಿ/Conclusion:ತಪ್ಪು ನಿರೂಪಣೆ. ವೀಡಿಯೊ ತುಣುಕನ್ನು ತಿದ್ದುಪಡಿ ಮಾಡಲಾಗಿದ್ದು, ಹೇಳಿಕೆಗೆ ಸರಿಹೊಂದುವಂತೆ ಹೊಸ ಆಡಿಯೊ ಟ್ರ್ಯಾಕ್ ರಚಿಸಲಾಗಿದೆ. ನಿಜವಾದ ಆಡಿಯೊದಲ್ಲಿ ಜನಸಮೂಹ ಗದ್ದಲ ಮಾಡುತ್ತಿದೆ, ಟ್ರಂಪ್ ಗಾಗಿ ಹರ್ಷೋದ್ಗಾರವೆತ್ತುತಿದೆ, ಅದೇ ಸಮಯದಲ್ಲಿ ಭದ್ರತಾ ತಡೆಗಳನ್ನು ದಾಟಿದ ಒಬ್ಬ ಪ್ರತಿಭಟನಾಕಾರ ವೇದಿಕೆಗೆ ಧಾವಿಸುತ್ತಾನೆ, ಇದು ಟ್ರಂಪ್‌ರ ಅಂತಹ ಪ್ರತಿಕ್ರಿಯೆಗೆ ಕಾರಣವಾಯಿತು.
ರೇಟಿಂಗ್/Rating: ತಪ್ಪು ನಿರೂಪಣೆ–.![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
******************************************************
ಮಾರ್ಚ್ 12, 2016 ರಂದು ಟ್ರಂಪ್ ತಮ್ಮ ರ‍್ಯಾಲಿಯಲ್ಲಿ “ಅಲ್ಲಾ ಹು ಅಕ್ಬರ್” ಎಂದು ಯಾರೋ ಕೂಗುತ್ತಿರುವುದನ್ನು ಕೇಳಿ ಗಾಬರಿಗೊಂಡಿದ್ದನ್ನು ತೋರಿಸುವ ಕ್ಲಿಪ್ ಅನ್ನು ಹಲವಾರು ಬಳಕೆದಾರರು ಹಂಚಿಕೊಂಡಿದ್ದಾರೆ. ಅನೇಕರು ಇದನ್ನು ಕಳೆದ ಹಲವು ವರ್ಷಗಳ ಅವಧಿಯಲ್ಲಿ ವಿವಿಧ ವೇದಿಕೆಗಳಲ್ಲಿ ಹಂಚಿಕೊಂಡಿದ್ದರಿಂದ ಈ ಕ್ಲಿಪ್ ವೈರಲ್ ಆಗಿತ್ತು ಮತ್ತೀಗ ಇದು ಪುನಃ ಚರ್ಚೆಯಲ್ಲಿದೆ.
X ಬಳಕೆದಾರ ‘Obaidul75155432’ ಜೂನ್ 24, 2025 ರಂದು ಹಿಂದಿಯಲ್ಲಿ “ಕಿಸಿ ನೆ ಸೈಡ್ ಸೆ ಅಲ್ಲಾ ಹು ಅಕ್ಬರ್ ಬೋಲ್ ದಿಯಾ ಔರ್ ಟ್ರಂಪ್ ಕಾ ರಿಯಾಕ್ಷನ್ ದೇಖ್ನೆ ಲಾಯಕ್ ಥಾ” ಎಂಬ ಶೀರ್ಷಿಕೆಯೊಂದಿಗೆ ಅಂತಹ ಒಂದು ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಇದರ ಅರ್ಥ: “ಯಾರೋ ಪಕ್ಕದಿಂದ ಅಲ್ಲಾ ಹು ಅಕ್ಬರ್ ಎಂದರು ಮತ್ತು ಟ್ರಂಪ್ ನ್ಸ್ ಪ್ರತಿಕ್ರಿಯೆ ನೋಡಲೇಬೇಕಾದ್ದು.” ಪೋಸ್ಟ್ ಅನ್ನು ಕೆಳಗೆ ನೋಡಿ:
Kisi ne side se Allah Hu Akbar bol diya aur trump ka reaction dekhne layak tha 😲😂😜#Trump pic.twitter.com/8bx8UZZiTk
— Obaidul Sk (@Obaidul75155432) June 24, 2025

ಜನವರಿ 6, 2020 ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಇದೇ ರೀತಿಯ ಹೇಳಿಕೆ ನೀಡಲಾಗಿತ್ತು, ಇದನ್ನು ಕೆಳಗೆ ಕಾಣಬಹುದು:
View this post on Instagram
ಏಪ್ರಿಲ್ 27, 2024 ರಂದು “ರ‍್ಯಾಲಿಯಲ್ಲಿ ಬೆದರಿದ ಡೊನಾಲ್ಡ್ ಟ್ರಂಪ್: ಅಲ್ಲಾಹು ಅಕ್ಬರ್” ಎಂಬ ಶೀರ್ಷಿಕೆಯಡಿಯಲ್ಲಿ ಅದೇ ಹೇಳಿಕೆಯನ್ನು ಯುಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು, ಅದನ್ನು ಕೆಳಗೆ ಮತ್ತು ಇಲ್ಲಿ ನೋಡಿ:
ಮತ್ತೊಬ್ಬ ಬಳಕೆದಾರರು ಸೆಪ್ಟೆಂಬರ್ 4, 2018 ರಂದು ಅದೇ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ, ಅದನ್ನು ಇಲ್ಲಿ ನೋಡಬಹುದು:
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ಈ ಹೇಳಿಕೆಯ ಕುರಿತು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ರ‍್ಯಾಲಿಯ ಸಮಯದಲ್ಲಿ, ಪ್ರತಿಭಟನಾಕಾರ ಥಾಮಸ್ ಡಿಮಾಸ್ಸಿಮೊ ತಡೆಗೋಡೆಗಳನ್ನು ದಾಟಿ ಭದ್ರತೆಯನ್ನು ಉಲ್ಲಂಘಿಸಿ ವೇದಿಕೆಯ ಮೇಲೆ ಪ್ರತಿಭಟಿಸಲು ಧಾವಿಸಿದರು, ಮತ್ತು ಅವರನ್ನು ಸುರಕ್ಷಾ ತಂಡವು ನಿಯಂತ್ರಿಸಿತು. ಏಜೆಂಟ್‌ಗಳು ಅವರನ್ನು ರಕ್ಷಣೆಗೆ ನಿಂತಾಗ ಟ್ರಂಪ್ ಸ್ವಲ್ಪ ದೂರ ಸರಿದಿದ್ದರು, ಆದರೆ ಯಾರೂ “ಅಲ್ಲಾಹು ಅಕ್ಬರ್” ಎಂದು ಕೂಗಿರಲಿಲ್ಲ.
ಮೊದಲು ನಾವು ವೀಡಿಯೊದ ವಿವಿಧ ಕೀಫ್ರೇಮ್‌ಗಳನ್ನು ಬಳಸಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಹುಡುಕಾಟದಲ್ಲಿ ನಮಗೆ ABC ನ್ಯೂಸ್‌ನ “ಟ್ರಂಪ್ ಸೀಕ್ರೆಟ್ ಸರ್ವಿಸ್ ಓಹಾಯೋ ರ‍್ಯಾಲಿಯಲ್ಲಿ ವೇದಿಕೆಗೆ ನುಗ್ಗುವುದು” ಎಂಬ ಶೀರ್ಷಿಕೆಯ ಮೂಲ ಸುದ್ದಿ ದೃಶ್ಯಗಳಿಗೆ ದೊರಕಿತು. ರ‍್ಯಾಲಿ ಓಹಾಯೋದಲ್ಲಿ ನಡೆಯಿತು , ಅಲ್ಲಿ ಯಾರೋ ವೇದಿಕೆಯನ್ನು ತಲುಪಲು ಪ್ರಯತ್ನಿಸುತ್ತಿರುವಂತೆ ಕಂಡುಬಂದುದರಿಂದ ನಾಲ್ವರು ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು ವೇದಿಕೆಯ ಮೇಲೆ ಹಾರಿ ಟ್ರಂಪ್ ಅವರನ್ನು ಸುತ್ತುವರೆದರು ಎಂದು ಉಲ್ಲೇಖಿಸಲಾಗಿದೆ. ವೀಡಿಯೊ ತುಣುಕನ್ನು ಇಲ್ಲಿ ನೋಡಿ:
ಕೆಳಗಿನ ಸ್ಕ್ರೀನ್‌ಶಾಟ್ ವೀಕ್ಷಿಸಿ :

ಇಡೀ ವೀಡಿಯೊದ ದೀರ್ಘ ಆವೃತ್ತಿಯನ್ನು ಹುಡುಕಿದಾಗ, ಅಸೋಸಿಯೇಟೆಡ್ ಪ್ರೆಸ್ ಬೇರೆ ಕೋನದಿಂದ ಪ್ರಕಟಿಸಿದ ಕ್ಲಿಪ್ ನಮಗೆ ಸಿಕ್ಕಿತು. ಈ ಕ್ಲಿಪ್ ಸುಮಾರು 1 ನಿಮಿಷ 44 ಸೆಕೆಂಡುಗಳದ್ದು ಮತ್ತು 0:08ರ ಸಮಯಕ್ಕೆ ಪ್ರತಿಭಟನಾಕಾರ ವೇದಿಕೆಯ ಮೇಲೆ ಧಾವಿಸುತ್ತಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ವೀಡಿಯೊದಲ್ಲಿ “ಅಲ್ಲಾ ಹು ಅಕ್ಬರ್” ಘೋಷಣೆಗಳು ಕೇಳಿಬಂದಿಲ್ಲ. ಪ್ರತಿಭಟನಾಕಾರ ಒಳನುಗ್ಗಲು ಪ್ರಯತ್ನಿಸುತ್ತಿರುವ ಕ್ಷಣವನ್ನು ಕೆಳಗಿನ ವೀಡಿಯೊದಲ್ಲಿ ಮತ್ತು ಇಲ್ಲಿ ವೀಕ್ಷಿಸಿ:

ಮುದುವರೆದಂತೆ, ಮಾರ್ಚ್ 12, 2016 ರಂದು ಪ್ರಕಟವಾದ NBC ನ್ಯೂಸ್ ಪ್ರಕಟಿಸಿದ ವರದಿಯಿಂದ ಕೂಡ ನಾವು ಘಟನೆಯನ್ನು ದೃಢಪಡಿಸಿದ್ದೇವೆ. ಶಂಕಿತನನ್ನು “32 ವರ್ಷದ ಥಾಮಸ್ ಡಿಮಾಸ್ಸಿಮೊ ಎಂದು ಗುರುತಿಸಲಾಗಿತ್ತು ಮತ್ತು ಅತನ ಮೇಲೆ ಅವ್ಯವಸ್ಥಿತ ನಡವಳಿಕೆ ಮತ್ತು ಭೀತಿಯನ್ನು ಉಂಟುಮಾಡಿದ ಆರೋಪ ಹೊರಿಸಲಾಗಿತ್ತು…” ಎಂದು ವರದಿಯು ಹೇಳುತ್ತದೆ. “ಘರ್ಷಣೆಯ ನಡುವೆ ಐದು ಜನರನ್ನು ಬಂಧಿಸಲಾಯಿತು ಮತ್ತು ಇಬ್ಬರು ಅಧಿಕಾರಿಗಳು ಗಾಯಗೊಂಡರು” ಎಂಬುದರ ಕುರಿತು ವರದಿಯು ಮತ್ತಷ್ಟು ಚರ್ಚಿಸುತ್ತದೆ.
ಹೀಗಾಗಿ, ಹೇಳಿಕೆ ತಪ್ಪು ನಿರೂಪಣೆಯಾಗಿದೆ.
******************************************************
ಇದನ್ನೂ ಓದಿ:
ಗ್ರೇಟಾ ಥನ್‌ಬರ್ಗ್ ಬಂಧನದ ಬಗ್ಗೆ ಸ್ವೀಡನ್ ಇಸ್ರೇಲ್‌ಗೆ ಅಂತಿಮ ಎಚ್ಚರಿಕೆ ನೀಡಿದೆಯೇ? ಸತ್ಯ ಪರಿಶೀಲನೆ
Digiteye Kannada Fact Checkers