ಹೇಳಿಕೆ/Claim: ಭಾರತದ ರಾಷ್ಟ್ರಗೀತೆಯನ್ನು ಕೇಳಿದ ನಂತರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೌರವಾರ್ಥವಾಗಿ ನಡೆಯುವುದನ್ನು ನಿಲ್ಲಿಸಿದರು.
ಕಡೆನುಡಿ/Conclusion: ಈ ಹೇಳಿಕೆ ದಾರಿತಪ್ಪಿಸುವಂಥದ್ದು. ದೃಶ್ಯಗಳನ್ನು ಎಡಿಟ್ ಮಾಡಲಾಗಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಷ್ಯಾದ ರಾಷ್ಟ್ರಗೀತೆಯನ್ನು ಕೇಳಿ ನಡೆಯುವುದನ್ನು ನಿಲ್ಲಿಸಿದ್ದರು..
ರೇಟಿಂಗ್/Rating: ದಾರಿತಪ್ಪಿಸುವಂಥದ್ದು —
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
******************************************************
ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವಿವಿಧ ವೇದಿಕೆಗಳಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತೀಯ ರಾಷ್ಟ್ರಗೀತೆಯನ್ನು ಕೇಳಿ ನಿಂತರು ಎಂದು ಹೇಳಿಕೊಂಡಿದ್ದಾರೆ.
X ಬಳಕೆದಾರ ‘sttalkindia’ ಸೆಪ್ಟೆಂಬರ್ 4, 2025 ರಂದು ಅಂತಹ ಒಂದು ಪೋಸ್ಟ್ ಅನ್ನು ಹಂಚಿಕೊಂಡು ಅದರಲ್ಲಿ ಪುಟಿನ್ ಭಾರತೀಯ ರಾಷ್ಟ್ರಗೀತೆಯನ್ನು “ಅರ್ಥಮಾಡಿಕೊಂಡರು” ಮತ್ತು “ಗೌರವದಿಂದ ಅಲುಗಾಡದೆ ನಿಂತರು” ಎಂದು ಹೇಳಿದರು.
ಪೋಸ್ಟ್ ಮತ್ತು ಕ್ಲಿಪ್ ಅನ್ನು ಕೆಳಗೆ ವೀಕ್ಷಿಸಿ:
When #Putin understood #India #NationalAnthem & stayed still in respect. pic.twitter.com/8SEAT94f5U
— Straight Talk India (@sttalkindia) September 4, 2025
ಮತ್ತೊಬ್ಬ ಪರಿಶೀಲಿತ X ಬಳಕೆದಾರ ‘Meenaks06356943’ ಅದೇ ವೀಡಿಯೊವನ್ನು ಈ ಮುಂದಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: “पुतिन जो भारत के राष्ट्रीय गान पर ठहर गए भारत के और मोदी जी के सच्चे दोस्त” ಕನ್ನಡದ ಅನುವಾದ ಹೀಗಿದೆ: ಪುಟಿನ್ ಭಾರತದ ರಾಷ್ಟ್ರಗೀತೆಗಾಗಿ ನಿಂತರು ಭಾರತದ ಮತ್ತು ಮೋದಿಜೀಯ ನಿಜವಾದ ಸ್ನೇಹಿತರು. ಪೋಸ್ಟ್ ಅನ್ನು ಇಲ್ಲಿ ನೋಡಿ:
पुतिन जो भारत के राष्ट्रीय गान पर ठहर गए 🫡🫡
भारत के और मोदी जी के सच्चे दोस्त ♥️♥️ pic.twitter.com/Z58lv1lP12— Meenakshi Singh (@Meenaks06356943) September 2, 2025
FACT CHECK
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ದಾರಿತಪ್ಪಿಸುವಂತಿದೆ ಎಂದು ಕಂಡುಕೊಂಡಿತು. ಈ ದೃಶ್ಯಗಳು ಮೂಲತಃ ಎಲ್ಲಿಂದ ಬಂದವು ಎಂಬುದನ್ನು ಗುರುತಿಸಲು ನಾವು ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ನಾವು ಹುಡುಕಾಟ ನಡೆಸಿದಾಗ 11 ವರ್ಷಗಳ ಹಿಂದೆ ಯೂಟ್ಯೂಬ್ ನಲ್ಲಿ ಪೋಸ್ಟ್ ಮಾಡಲಾದ ಒಂದು ವೀಡಿಯೊ ದೊರಕಿತು, ಅದರಲ್ಲಿ ರಷ್ಯಾದ ರಾಷ್ಟ್ರಗೀತೆಯನ್ನು ನುಡಿಸಲಾಗಿತ್ತು.
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ದಾರಿತಪ್ಪಿಸುವಂತಿದೆ ಎಂದು ಕಂಡುಕೊಂಡಿತು. ಈ ದೃಶ್ಯಗಳು ಮೂಲತಃ ಎಲ್ಲಿಂದ ಬಂದವು ಎಂಬುದನ್ನು ಗುರುತಿಸಲು ನಾವು ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ನಾವು ಹುಡುಕಾಟ ನಡೆಸಿದಾಗ 11 ವರ್ಷಗಳ ಹಿಂದೆ ಯೂಟ್ಯೂಬ್ ನಲ್ಲಿ ಪೋಸ್ಟ್ ಮಾಡಲಾದ ಒಂದು ವೀಡಿಯೊ ದೊರಕಿತು, ಅದರಲ್ಲಿ ರಷ್ಯಾದ ರಾಷ್ಟ್ರಗೀತೆಯನ್ನು ನುಡಿಸಲಾಗಿತ್ತು.
ದೃಶ್ಯಾವಳಿಗಳನ್ನು ಇಲ್ಲಿ ವೀಕ್ಷಿಸಿ:
10 ವರ್ಷಗಳ ಹಿಂದೆ ಯೂಟ್ಯೂಬ್ ನಲ್ಲಿ ಪೋಸ್ಟ್ ಮಾಡಲಾದ ಅದೇ ಸನ್ನಿವೇಶದ ವೀಡಿಯೊವನ್ನು ಇಲ್ಲಿ ನೋಡಬಹುದು.
13 ವರ್ಷಗಳ ಹಿಂದೆ ಪೋಸ್ಟ್ ಮಾಡಲಾದ ವೀಡಿಯೊದ ದೀರ್ಘ ಆವೃತ್ತಿಯೂ ನಮಗೆ ದೊರಕಿತು, ಅದರಲ್ಲಿ ಪುಟಿನ್ ಗೀತೆಯನ್ನು ಕೇಳಿದ ನಂತರ ನಡೆಯುವುದನ್ನು ನಿಲ್ಲಿಸುವುದು ಕಾಣುತ್ತದೆ. ಈ ದೃಶ್ಯಾವಳಿಯಲ್ಲಿ 1:30ರ ಸಮಯಮುದ್ರೆಯ ನಂತರ ಇಲ್ಲಿ ವೀಕ್ಷಿಸಿ. ಈ ಕ್ಲಿಪ್ ಅನ್ನು ಸೆರೆಹಿಡಿಯಲಾದ ಘಟನೆಯನ್ನೂ ಸಹ ಈ ವೀಡಿಯೊ 1:19ಕ್ಕೆ ತೋರಿಸುತ್ತದೆ.
ರಷ್ಯನ್ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಲಾದ ಪಠ್ಯವು ಹೀಗಿದೆ: ಆಲ್ ರಷ್ಯನ್ ಪೊಲಿಟಿಕಲ್ ಪಾರ್ಟಿಯ ಒಟ್ಟುಗೂಡಿಕೆ “ಯುನೈಟೆಡ್ ರಷ್ಯಾ”, ಸೆಪ್ಟೆಂಬರ್ 23-24, 2011. ಮೇಲಿನ ಅನುವಾದದ ಸ್ಕ್ರೀನ್‌ಶಾಟ್ ನೋಡಿ.
ಈ ವಿಷಯದ ಸಂದರ್ಭವೆಂದರೆ ಆಗಿನ ರಷ್ಯಾದ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ರವರು ವ್ಲಾಡಿಮಿರ್ ಪುಟಿನ್ ರವರನ್ನು 2012ರ ಅಧ್ಯಕ್ಷೀಯ ಅಭ್ಯರ್ಥಿಯನ್ನಾಗಿ ನಾಮನಿರ್ದೇಶಿಸಿದ್ದರು. 24 ಸೆಪ್ಟೆಂಬರ್ 2011 ರಂದು ಪ್ರಕಟವಾದ ಅಲ್ ಜಜೀರಾ ವರದಿಯು ಈ ಘಟನೆಯನ್ನು ದೃಢೀಕರಿಸುತ್ತದೆ.
ವರದಿಯ ಒಂದು ತುಣುಕನ್ನು ಕೆಳಗೆ ನೋಡಿ –
ವೀಕ್ಷಕರ ದಾರಿತಪ್ಪಿಸಲು 2011ರ ರಷ್ಯಾದ ರಾಜಕೀಯ ಕಾರ್ಯಕ್ರಮದ ಮೂಲ ವೀಡಿಯೊದ ಮೇಲೆ ಭಾರತೀಯ ರಾಷ್ಟ್ರಗೀತೆಯನ್ನು ಸೇರಿಸಿ ಪ್ರಸ್ತುತ ಹಂಚಿಕೊಳ್ಳಲಾದ ವೀಡಿಯೊವನ್ನು ಬದಲಾಯಿಸಲಾಗಿದೆ. ಆದ್ದರಿಂದ, ಈ ಹೇಳಿಕೆ ದಾರಿತಪ್ಪಿಸುವಂಥದ್ದು.