Don't Miss

ಫಿಲಿಪೈನ್ಸ್ ಇನ್ನು ಮುಂದೆ ಇಸ್ರೇಲ್‌ನಿಂದ ಯಾವುದೇ ಶಸ್ತ್ರಾಸ್ತ್ರಗಳನ್ನು ಖರೀದಿಸುವುದಿಲ್ಲ ಎಂದು ಘೋಷಿಸಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim:  ಫಿಲಿಪೈನ್ಸ್ ಇನ್ನು ಮುಂದೆ ಇಸ್ರೇಲ್‌ನಿಂದ ಯಾವುದೇ ಶಸ್ತ್ರಾಸ್ತ್ರಗಳನ್ನು ಖರೀದಿಸುವುದಿಲ್ಲ ಎಂದು ಘೋಷಿಸಿದೆ

ಕಡೆನುಡಿ/Conclusion : ಈ ಹೇಳಿಕೆ ದಾರಿತಪ್ಪಿಸುವಂತಿದೆ. ಫಿಲಿಪೈನ್ಸ್ ನಿಜವಾಗಿಯೂ ಇಸ್ರೇಲಿ ಕಂಪನಿಗಳೊಂದಿಗೆ ಹೊಸ ಶಸ್ತ್ರಾಸ್ತ್ರ ಒಪ್ಪಂದಗಳನ್ನು ಮಾಡಿಕೊಳ್ಳದಿರಲು ನಿರ್ಧರಿಸಿದೆ, ಆದರೆ ಇದನ್ನು ಶಾಶ್ವತ ನಿಷೇಧವೆಂದು ಅರ್ಥೈಸಿಕೊಳ್ಳಲಾಗದು.

ರೇಟಿಂಗ್/Rating: ದಾರಿತಪ್ಪಿಸುವಂತಿದೆ–

******************************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.
******************************************************

ಫಿಲಿಪೈನ್ಸ್ ಇನ್ನು ಮುಂದೆ ಇಸ್ರೇಲ್‌ನಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುವುದಿಲ್ಲ ಎಂದು ಘೋಷಿಸಿದ ಬಗ್ಗೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘GlobalUpdates24’ ಅಂತಹ ಹೇಳಿಕೆಯನ್ನು ಈ ಮುಂದಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: “ಫಿಲಿಪೈನ್ಸ್ ಇನ್ನು ಮುಂದೆ ಇಸ್ರೇಲ್‌ನಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುವುದಿಲ್ಲ ಎಂದು ಘೋಷಿಸಿತು. ಇಸ್ರೇಲ್ ಜಗತ್ತಿನಲ್ಲಿ ವೇಗವಾಗಿ ಪರಕೀಯವಾಗುತ್ತಿದೆ.” ಆಗಸ್ಟ್ 18 ರಂದು ಪ್ರಕಟವಾದ ಈ ಪೋಸ್ಟ್ 653,000 ವೀಕ್ಷಣೆಗಳನ್ನು ಗಳಿಸಿದೆ ಮತ್ತು ಅದನ್ನು ಇಲ್ಲಿ ನೋಡಬಹುದು.

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಾದ್ಯಂತ ಇತರ ಬಳಕೆದಾರರು ಸಹ ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅದನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ನಿರ್ಧರಿಸಿತು ಮತ್ತು ಹೇಳಿಕೆ ದಾರಿತಪ್ಪಿಸುವಂಥದ್ದು ಎಂದು ಕಂಡುಕೊಂಡಿತು. ಫಿಲಿಪೈನ್ಸ್ ಇಸ್ರೇಲ್‌ನೊಂದಿಗೆ ಹೊಸ ಶಸ್ತ್ರಾಸ್ತ್ರ ಒಪ್ಪಂದಗಳನ್ನು ಮಾಡಿಕೊಳ್ಳದಿರಲು ನಿರ್ಧರಿಸಿದೆಯಾದರೂ ಹಳೆಯದನ್ನು ಮುಂದುವರಿಸಿದೆ, ಮತ್ತು ಈ ನಿರ್ಧಾರವು ಶಾಶ್ವತವಲ್ಲ. ಅದು ಪೂರೈಕೆ ಸರಪಳಿ ಸಮಸ್ಯೆಗಳಿಂದಾಗಿ ಸದ್ಯಕ್ಕೆ ಮಾತ್ರ ಅನ್ವಯಿಸುವುದು.

ಈ ವಿಷಯದ ಬಗ್ಗೆ ತಿಳಿದುಕೊಳ್ಳಲು ನಾವು ಮೊದಲು “ರಕ್ಷಣಾ ಕಾರ್ಯದರ್ಶಿ ಗಿಲ್ಬರ್ಟ್ ಟಿಯೋಡೋರೊ ಇಸ್ರೇಲ್ ಶಸ್ತ್ರಾಸ್ತ್ರ ಒಪ್ಪಂದ” ಎಂಬ ಶಬ್ದಾವಳಿಯೊಂದಿಗೆ ಕೀವರ್ಡ್ ಹುಡುಕಾಟವನ್ನು ನಡೆಸಿದೆವು. ABS-CBN ಸೇರಿದಂತೆ ಹಲವಾರು ಮಾಧ್ಯಮಗಳು ಅವರ ಹೇಳಿಕೆಗಳನ್ನು ವರದಿ ಮಾಡಿವೆ. ಅವುಗಳನ್ನು ಇಲ್ಲಿ ನೋಡಬಹುದು.

ಸೆಪ್ಟೆಂಬರ್ 16, 2025 ರಂದು, ಸದನ ಸಮಿತಿಯ ವಿಚಾರಣೆಯ ಸಮಯದಲ್ಲಿ, “ಇಸ್ರೇಲ್ ಮೂಲದ ಯಾವುದೇ ಕಂಪನಿಗಳೊಂದಿಗೆ ನಾವು ಯಾವುದೇ ಹೊಸ ಒಪ್ಪಂದಗಳನ್ನು ಹೊಂದಿಲ್ಲ” ಎಂದು ಟಿಯೋಡೋರೊ ಹೇಳಿದ್ದರು, ಆತ ಸಂಘರ್ಷ-ಸಂಬಂಧಿತ ಪೂರೈಕೆ ಅಪಾಯಗಳು ಮತ್ತು ವಿಶ್ವಾಸಾರ್ಹ ಪಾಲುದಾರರ ಅಗತ್ಯವನ್ನು ಉಲ್ಲೇಖಿಸಿದರು. ಆತ ಇದನ್ನು ಹೇಳುವ ಕ್ಲಿಪ್ ಅನ್ನು ಕೆಳಗೆ ನೋಡಿ.

ಇದು ಯುದ್ಧದ ಮಧ್ಯೆ ಹೊಸ ಅವಲಂಬನೆಗಳನ್ನು ತಪ್ಪಿಸುವ ಹೆಜ್ಜೆ. ಸಂಘರ್ಷದ ನಂತರ ಎಂದಿಗೂ ಮರುಪರಿಶೀಲಿಸಲಾಗದ ಸಂಪೂರ್ಣ ನಿಷೇಧವಲ್ಲ ಎಂದು ಟಿಯೋಡೋರೊ ಸ್ಪಷ್ಟಪಡಿಸಿದ್ದಾರೆ. ಯುದ್ಧದಿಂದಾಗಿ ಬಾಧ್ಯತೆ ಪೂರೈಸುವ ಇಸ್ರೇಲ್‌ನ ಸಾಮರ್ಥ್ಯದ ಮೇಲೆ ಪರಿಣಾಮ ಉಂಟಾಗಿದೆ ಎಂದು ಟಿಯೋಡೋರೊ ಗಮನಿಸಿರುವುದರ ಕುರಿತು ಅನಾಡೋಲು ಅಜಾನ್ಸಿ ಪ್ರಕಟಿಸಿದ ವರದಿಯು ಹೇಳುತ್ತದೆ, ಇದು ಭವಿಷ್ಯದ ಖರೀದಿಗಳಿಗೆ ಸಂಬಂಧಿಸಿದಂತೆ ಅವರು “ಕಲಿತ ಪಾಠ”ವಾಗಿದೆ.

ಆದಾಗ್ಯೂ, ಇದು ಬದಲಾಯಿಸಲಾಗದ ನೀತಿ ಎಂದು ಯಾವುದೇ ಅಧಿಕೃತ ಮೂಲವು ಸೂಚಿಸಿಲ್ಲ; ಪ್ರಸ್ತುತ ಭೌಗೋಳಿಕ ರಾಜಕೀಯ ಸನ್ನಿವೇಶಗಳಿಗನುಗುಣವಾಗಿ ಪ್ರಾಯೋಗಿಕ ಪ್ರತಿಕ್ರಿಯೆಯಾಗಿ ಇದನ್ನು ಪ್ರಸ್ತುತಪಡಿಸಲಾಗಿದೆ ಮತ್ತು ಪರಿಸ್ಥಿತಿಗಳು ಬದಲಾದರೆ ಪುನರಾರಂಭಗೊಳ್ಳುವ ಸಾಧ್ಯತೆಯಿದೆ ಎನ್ನುವಂತೆ ಇದನ್ನು ತೋರಿಸಲಾಗುತ್ತಿದೆ. ನೀತಿಯು ಹೊಸ ವ್ಯವಸ್ಥೆಗಳನ್ನು ಹೊರತುಪಡಿಸುತ್ತದೆ ಆದರೆ ಇತ್ತೀಚಿನ ಆಗಸ್ಟ್ 2025 ರ ಯುದ್ಧಸಾಮಗ್ರಿಗಳಿಗಾಗಿ ಎಲ್ಬಿಟ್ ಒಪ್ಪಂದದಲ್ಲಿ ಕಂಡುಬರುವಂತೆ ಪ್ರಸ್ತುತ ವೇದಿಕೆಗಳನ್ನು ನಿರ್ವಹಿಸಲು ಸಂಗ್ರಹಣೆಯನ್ನು ಅನುಮತಿಸುತ್ತದೆ.

ಕಬಾಟನ್ ಪಕ್ಷದ-ಪಟ್ಟಿ ಪ್ರತಿನಿಧಿ ರೆನೀ ಲೂಯಿಸ್ ಕಂ ಕೆಲವು ನೈತಿಕ ಕಾಳಜಿಗಳನ್ನು ಮುಂದಿಟ್ಟಿದ್ದರೂ, ಈ ನಿರ್ಧಾರವು ಗಾಜಾದಲ್ಲಿ ನಡೆದ ನರಮೇಧ ಅಥವಾ ಇಸ್ರೇಲ್‌ನ ಯುದ್ಧ ಅಪರಾಧಗಳಿಂದಾಗಿ ಈ ನಿರ್ಧಾರವನ್ನು ಮಾಡಲಾಗಿತ್ತೆಂದು ಟಿಯೋಡೊರೊ ಎಲ್ಲಿಯೂ ಉಲ್ಲೇಖಿಸಿಲ್ಲ, ಆದರೆ ಇಸ್ರೇಲ್ ಯುದ್ಧದಲ್ಲಿದ್ದ ಕಾರಣ ಅದು ಸಂಪೂರ್ಣವಾಗಿ ಪೂರೈಕೆ ಸರಪಳಿ ಸಮಸ್ಯೆಯಾಗಿದೆ. ಮನಿಲಾ ಬುಲೆಟಿನ್ ವರದಿಯ ಒಂದು ತುಣುಕನ್ನು ಕೆಳಗೆ ನೋಡಿ:

ಫಿಲಿಪೈನ್ಸ್‌ನಿಂದ ಅಂತಹ ಯಾವುದೇ ಸಂಪೂರ್ಣ ನಿಷೇಧವಿಲ್ಲ. ಫಿಲಿಪೈನ್ಸ್ ಕಾನೂನು ರಚನಾಕಾರರಿಂದ ಕೆಲವು ನೈತಿಕ ಕಾಳಜಿಗಳು ಬಂದಿದ್ದರೂ, ಈ ನಿರ್ಧಾರವನ್ನು ನೈತಿಕ ಅಥವಾ ರಾಜಕೀಯ ಬಹಿಷ್ಕಾರದಿಂದಾಗಿ ಮಾಡಲಾಗಿಲ್ಲ. ಇದು ಕೇವಲ ವಿಶ್ವಾಸಾರ್ಹತೆಯ ಸಮಸ್ಯೆಯ ಕಾರಣದಿಂದಾಗಿ ಮತ್ತು ಹಿಂದಿನ ಸ್ವಾಧೀನಗಳ ಭಾಗವಾಗಿ ಮುಂದುವರಿಯುತ್ತದೆ ಏಕೆಂದರೆ ಫಿಲಿಪೈನ್ಸ್ “ಈ ಹಿಂದೆ ಮಾಡಿದ ವ್ಯವಸ್ಥೆಯಿಂದಾಗಿ ಸಾಮರ್ಥಿಕೆಯನ್ನು ರದ್ದುಗೊಳಿಸುವ ಸ್ಥಿತಿಯಲ್ಲಿಲ್ಲ, ಮತ್ತೀಗ ಅದರೊಂದಿಗೆ ಸಿಲುಕಿಕೊಂಡಿದೆ”.

ಆದ್ದರಿಂದ, ಹೇಳಿಕೆ ದಾರಿತಪ್ಪಿಸುವಂತಿದೆ ಎನ್ನಬಹುದು.

******************************************************

ಇದನ್ನೂ ಓದಿ:

ಈಗಿನಿಂದ ಪ್ರತಿ ತಿಂಗಳ ಎಲ್ಲಾ ಭಾನುವಾರಗಳು ಮತ್ತು ಶನಿವಾರಗಳಂದು ಬ್ಯಾಂಕುಗಳು ಮುಚ್ಚಿರುತ್ತವೆಯೇ? ಸತ್ಯ ಪರಿಶೀಲನೆ

ನೇಪಾಳ ಪ್ರತಿಭಟನಾಕಾರರು ಭಾರತದ ಪ್ರಧಾನಿ ಮೋದಿಯವರನ್ನು ಬೆಂಬಲಿಸಿ ಮೆರವಣಿಗೆ ನಡೆಸಿದರೇ? ಸತ್ಯ ಪರಿಶೀಲನೆ

 

Leave a Reply

Your email address will not be published. Required fields are marked *

*