Don't Miss

ಪಾರದರ್ಶಕತೆಯ ಕೊರತೆಯಿಂದಾಗಿ ಪ್ಯಾಟ್ ಕಮ್ಮಿನ್ಸ್ PM CARES ನಿಧಿಯಿಂದ ತನ್ನ $50,000 ದೇಣಿಗೆಯನ್ನು UNICEF ಗೆ ಮರುನಿರ್ದೇಶಿಸಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :ಆಸ್ಟ್ರೇಲಿಯಾದ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್ PM CARES ನಿಧಿಗೆ $50,000 ದೇಣಿಗೆ ನೀಡಲು ಹೊರಟಿದ್ದರು ಆದರೆ PM CARES ನಿಧಿಯಲ್ಲಿ ಪಾರದರ್ಶಕತೆಯ ಕೊರತೆಯಿರುವುದರಿಂದ ಅದನ್ನು UNICEFಗೆ ಮರುನಿರ್ದೇಶಿಸಿದ್ದಾರೆ.

ಕಡೆನುಡಿ/Conclusion : ಈ ಹೇಳಿಕೆ ದಾರಿ ತಪ್ಪಿಸುವಂತಿದೆ. ಕಮ್ಮಿನ್ಸ್ 2021ರಲ್ಲಿ PM CARES ನಿಂದ UNICEF ಗೆ ತಮ್ಮ $50,000 ದೇಣಿಗೆಯನ್ನು ಬದಲಾಯಿಸಿದರು. ಆದರೆ, ಪಾರದರ್ಶಕತೆಯ ಕೊರತೆಯ ಬಗ್ಗೆ ಯಾವುದೇ ರೀತಿಯ ಉಲ್ಲೇಖವಿರಲಿಲ್ಲ, ಬದಲಿಗೆ ಕಮ್ಮಿನ್ಸ್ ‘ಕ್ರಿಕೆಟ್ ಆಸ್ಟ್ರೇಲಿಯಾ’ UNICEF ಗೆ ದೇಣಿಗೆ ನೀಡಿದ್ದರಿಂದ ಅದೇ ಸಂಸ್ಥೆಯನ್ನು ಅನುಸರಿಸಿದರು.

ರೇಟಿಂಗ್/Rating : ದಾರಿ ತಪ್ಪಿಸುವಂತಿದೆ. —

******************************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.
******************************************************

2021ರ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ಯಾಟ್ ಕಮ್ಮಿನ್ಸ್ PM CARES  ನಿಧಿಗೆ $50,000 ದೇಣಿಗೆ ನೀಡಲಿದ್ದರು, ಆದರೆ ಪಾರದರ್ಶಕತೆಯ ಕೊರತೆಯಿಂದಾಗಿ ಅದನ್ನು UNICEF ಗೆ ಮರುನಿರ್ದೇಶಿಸಿದರು ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಬಳಕೆದಾರರು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘Amisha_Go’ ಅಂತಹ ಒಂದು ಪೋಸ್ಟ್ ಅನ್ನು ಈ ಮುಂದಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: “PM CARES ನಿಧಿಗೆ ಪಾರದರ್ಶಕತೆಯ ಕೊರತೆಯಿದೆ ಎಂದು ಅವರು ಅರಿತುಕೊಂಡರು, ಹಣ ಎಲ್ಲಿಗೆ ಹೋಗುತ್ತದೆ ಎಂದು ಯಾರಿಗೂ ತಿಳಿಯುವುದಿಲ್ಲ”. ಪೋಸ್ಟ್ 64,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿತು ಮತ್ತು ಅದನ್ನು ಕೆಳಗೆ ವೀಕ್ಷಿಸಬಹುದು –

ಅಪಾರದರ್ಶಕತೆಯ ಆರೋಪಗಳನ್ನು ಬೆಂಬಲಿಸಲು ನಿಧಿಯ ಕಾನೂನು ಸ್ಥಿತಿಯ ಕುರಿತಾದ 2023ರ ಬಾರ್ ಮತ್ತು ಬೆಂಚ್ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ಸಹ ಈ ಮೇಲಿನ ಪೋಸ್ಟ್ ಒಳಗೊಂಡಿದೆ. ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಮಾರ್ಚ್ 2020ರಲ್ಲಿ ಸ್ಥಾಪಿಸಲಾದ PM CARES ನಿಧಿಯು, RTI ಕಾನೂನುಗಳಿಂದ ನಿಯಂತ್ರಿಸಲ್ಪಡದ ಸಾರ್ವಜನಿಕ ದತ್ತಿ ಟ್ರಸ್ಟ್ ಆಗಿದ್ದು, ಅದರ ಲೆಕ್ಕಪರಿಶೋಧನೆಗಳನ್ನು ಸ್ವತಂತ್ರ ಸಂಸ್ಥೆಗಳು ನಡೆಸುತ್ತವೆ. ಒಳಪಡಿಸಲಾಗಿರುವ ಬಾರ್ ಆಂಡ್ ಬೆಂಚ್‌ನ ಸ್ಕ್ರೀನ್‌ಶಾಟ್ ದೆಹಲಿ ಹೈಕೋರ್ಟ್‌ಗೆ 2023 ರ ಸರ್ಕಾರ ಸಲ್ಲಿಸಿದ ಅಫಿಡವಿಟ್ ಅನ್ನು ನಿಖರವಾಗಿ ವರದಿ ಮಾಡುತ್ತದೆ, ಈ ನಿಧಿಯನ್ನು ಸಂವಿಧಾನ ಅಥವಾ ಯಾವುದೇ ಸಂಸದೀಯ ಕಾನೂನಿನ ಅಡಿಯಲ್ಲಿ ರಚಿಸಲಾಗಿಲ್ಲ ಎಂದು ಹೇಳುತ್ತದೆ.

 ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ವಾಸ್ತವ ಪರಿಶೀಲನೆ ಮಾಡಲು ನಿರ್ಧರಿಸಿತು ಮತ್ತು ಅದು ದಾರಿತಪ್ಪಿಸುವಂತಿದೆ ಎಂದು ಕಂಡುಕೊಂಡಿತು. ಪ್ಯಾಟ್ ಕಮ್ಮಿನ್ಸ್ 2021ರಲ್ಲಿ PM CARES ನಿಧಿಯಿಂದ UNICEF ಗೆ $50,000 ದೇಣಿಗೆಯನ್ನು ಬದಲಾಯಿಸಿದರೂ, ಆತ ಪಾರದರ್ಶಕತೆಯ ಕೊರತೆಯ ಬಗ್ಗೆ ಏನನ್ನೂ ಉಲ್ಲೇಖಿಸಿಲ್ಲ.

ಈ ವಿಷಯದ ಬಗ್ಗೆ ತಿಳಿದುಕೊಳ್ಳಲು ನಾವು ಮೊದಲು “ಪ್ಯಾಟ್ ಕಮ್ಮಿನ್ಸ್ PM CARES ನಿಧಿಗೆ $50,000 ದೇಣಿಗೆ ನೀಡುತ್ತಾರೆ” ಎಂಬ ಪದಗುಚ್ಛದೊಂದಿಗೆ ಕೀವರ್ಡ್ ಹುಡುಕಾಟವನ್ನು ನಡೆಸಿದೆವು. ಏಪ್ರಿಲ್ 26, 2021ರ ಕಮ್ಮಿನ್ಸ್ ರವರ ಆರಂಭಿಕ ಘೋಷಣೆಯು ಆಮ್ಲಜನಕ ಖರೀದಿಗಾಗಿ PM CARES ಗೆ ದೇಣಿಗೆಯನ್ನು ನೀಡುವುದಾಗಿ ತಿಳಿಸಿತ್ತು. ತಮ್ಮ ಹೇಳಿಕೆಯಲ್ಲಿ, ಆತ ಇದನ್ನು “ನಿರ್ದಿಷ್ಟವಾಗಿ ಭಾರತದ ಆಸ್ಪತ್ರೆಗಳಿಗೆ ಆಮ್ಲಜನಕ ಸರಬರಾಜನ್ನು ಪಡೆಯಲು” ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದರು. X ಖಾತೆಯಲ್ಲಿ ಪೋಸ್ಟ್ ಮಾಡಲಾದ ಆತನ ಹೇಳಿಕೆಯನ್ನು ಇಲ್ಲಿ ವೀಕ್ಷಿಸಿ.

 

ಮೇ 3, 2021 ರಂದು ಆತ ಮೊತ್ತವನ್ನು UNICEF ಗೆ ಹಂಚಿಕೆ ಮಾಡಿರುವುದಾಗಿ ಹೊಸ ಮಾಹಿತಿ ನೀಡಿದ್ದರು, ಆಮ್ಲಜನಕ ಉತ್ಪಾದನಾ ಸ್ಥಾವರಗಳನ್ನು ಸಂಗ್ರಹಿಸಲು ಈ ಸಂಸ್ಥೆಯೊಂದಿಗೆ ಕ್ರಿಕೆಟ್ ಆಸ್ಟ್ರೇಲಿಯಾದ ಜೊತೆಗೂಡಿರುವುದನ್ನು ಶ್ಲಾಘಿಸಿದರು. ಟೈಮ್ಸ್ ನೌ ಪ್ರಕಟಿಸಿದ ಒಂದು ವರದಿ ಸೇರಿದಂತೆ ಹಲವಾರು ವರದಿಗಳು ಈ ಬದಲಾವಣೆಯನ್ನು ದೃಢಪಡಿಸಿವೆ. ಹಿಂದುಸ್ತಾನ್ ಟೈಮ್ಸ್‌ನ ಮತ್ತೊಂದು ವರದಿಯೂ ಇದನ್ನು ದೃಢಪಡಿಸುತ್ತದೆ, “ಕ್ರಿಕೆಟ್ ಆಸ್ಟ್ರೇಲಿಯಾ ಯುನಿಸೆಫ್ ಆಸ್ಟ್ರೇಲಿಯಾಕ್ಕೆ ಆರ್ಥಿಕ ಸಹಾಯವನ್ನು ನೀಡಿದ ನಂತರ ಕಮ್ಮಿನ್ಸ್ ತಮ್ಮ ಮನಸ್ಸನ್ನು ಬದಲಾಯಿಸಿಕೊಂಡಿರುವಂತಿದೆ” ಎಂದದು ಗಮನಿಸಿತು.

ಮೇ 3, 2021 ರಂದು ಪ್ಯಾಟ್ ಕಮ್ಮಿನ್ಸ್ ಒಂದು ಹೊಸ ನಿರ್ಧಾರವನ್ನು ಪೋಸ್ಟ್ ಮಾಡುತ್ತಾ ಕ್ರಿಕೆಟ್ ಆಸ್ಟ್ರೇಲಿಯಾವನ್ನು ಅಭಿನಂದಿಸಿದರು: “ಅದ್ಭುತ ಕೆಲಸ @CricketAus ನಿಮ್ಮ ಮಾಹಿತಿಗಾಗಿ, ನಾನು UNICEF ಆಸ್ಟ್ರೇಲಿಯಾದ ಭಾರತ COVID-19 ಬಿಕ್ಕಟ್ಟಿನ ಮನವಿಗೆ ನನ್ನ ದೇಣಿಗೆಯನ್ನು ನೀಡಿದೆ. ನಿಮಗೆ ಸಾಧ್ಯವಾದರೆ, ದಯವಿಟ್ಟು ಇದನ್ನು ಬೆಂಬಲಿಸಲು ಇತರರೊಂದಿಗೆ ಕೈಜೋಡಿಸಿ https://india.unicef.org.au/t/australian-cricket” ಪೋಸ್ಟ್ ಅನ್ನು ಇಲ್ಲಿ ನೋಡಿ.

 

ಕಮ್ಮಿನ್ಸ್ ಕ್ರಿಕೆಟ್ ಆಸ್ಟ್ರೇಲಿಯಾದ ಮಾರ್ಗವನ್ನು ಅನುಸರಿಸಿ ತಮ್ಮ ದೇಣಿಗೆಯನ್ನು UNICEF ಗೆ ಮರುನಿರ್ದೇಶಿಸಿದರು. PM CARES ನಿಧಿಯಲ್ಲಿ ಪಾರದರ್ಶಕತೆಯ ಕೊರತೆಯಿಂದಾಗಿ ಆತನ ನಿರ್ಧಾರವನ್ನು ಬದಲಾಯಿತು ಎಂದು ಯಾವುದೇ ವಿಶ್ವಾಸಾರ್ಹ ಮಾಧ್ಯಮದ ಯಾವುದೇ ವರದಿ ತಿಳಿಸಿಲ್ಲ. ಆದಾಗ್ಯೂ, ಆತ ತಮ್ಮ ಕೊಡುಗೆಗಳನ್ನು UNICEF ಗೆ ಮರುನಿರ್ದೇಶಿಸಿದ್ದಕ್ಕೆ ಕಾರಣವನ್ನು ನಿರ್ದಿಷ್ಟಪಡಿಸಿರಲಿಲ್ಲ.

ಹೀಗಾಗಿ, ಹೇಳಿಕೆ ದಾರಿತಪ್ಪಿಸುವಂತಿದೆ ಎನ್ನಬಹುದು.

******************************************************
ಇದನ್ನೂ ಓದಿ:

ಪ್ರಧಾನಿ ಮೆಲೋನಿ ಪ್ಯಾಲೆಸ್ಟೈನ್ ಅನ್ನು ಗುರುತಿಸಲು ನಿರಾಕರಿಸಿದ ನಂತರ ಇಟಲಿಯಲ್ಲಿ ಬೃಹತ್ ಪ್ರತಿಭಟನೆಗಳು ಭುಗಿಲೆದ್ದವೇ? ಸತ್ಯ ಪರಿಶೀಲನೆ

ಫಿಲಿಪೈನ್ಸ್ ಇನ್ನು ಮುಂದೆ ಇಸ್ರೇಲ್‌ನಿಂದ ಯಾವುದೇ ಶಸ್ತ್ರಾಸ್ತ್ರಗಳನ್ನು ಖರೀದಿಸುವುದಿಲ್ಲ ಎಂದು ಘೋಷಿಸಿದೆಯೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*