ಹೇಳಿಕೆ/Claim:ತಮ್ಮನ್ನು ಟೀಕಿಸಿದ ಯಾವುದೇ ಒಲಿಂಪಿಕ್ ಕ್ರೀಡಾಪಟುವಿನ ಪಾಸ್‌ಪೋರ್ಟ್ ಅನ್ನು ಡೊನಾಲ್ಡ್ ಟ್ರಂಪ್ ರವರು ರದ್ದುಗೊಳಿಸುವುದಾಗಿ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೆವಿಟ್ ಹೇಳಿದ್ದಾರೆ.
ಕಡೆನುಡಿ/Conclusion: ಹೇಳಿಕೆ ಸುಳ್ಳು. ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೆವಿಟ್ ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಆರೋಪಿತ ಉಲ್ಲೇಖವು ಕಟ್ಟುಕಥೆಯಾಗಿದ್ದು, ಲೆವಿಟ್ ಅಥವಾ ಟ್ರಂಪ್ ಆಡಳಿತದ ಸಂದರ್ಶನ ಅಥವಾ ಅಧಿಕೃತ ದಾಖಲೆಯ ಅಥವಾ ಯಾವುದೇ ರೂಪದಲ್ಲಿ ಆಧಾರವನ್ನು ಹೊಂದಿಲ್ಲ.
ರೇಟಿಂಗ್/Rating : ಸುಳ್ಳು — ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
******************************************************
ಡೊನಾಲ್ಡ್ ಟ್ರಂಪ್ ರವರು ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸುವ ವಿಷಯವಾಗಿ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೆವಿಟ್ ಹೇಳಿಕೆ ನೀಡಿದ್ದಾರೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘dotNoso’ ಲೆವಿಟ್ ಹೇಳಿರುವ ಮಾತು ಎಂಬ ಉಲ್ಲೇಖದೊಂದಿಗೆ ಅಂತಹ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅದರ ಶೀರ್ಷಿಕೆ ಹೀಗಿದೆ: “ಇದು ನಂಬಲಸಾಧ್ಯ. ಕ್ಯಾರೋಲಿನ್ ಲೆವಿಟ್: ‘ತಮ್ಮನ್ನು ಟೀಕಿಸಿದ ಯಾವುದೇ ಒಲಿಂಪಿಕ್ಸ್ ಕ್ರೀಡಾಪಟುವಿನ ಪಾಸ್‌ಪೋರ್ಟ್ ಅನ್ನು ಅಧ್ಯಕ್ಷ ಟ್ರಂಪ್ ರವರು ರದ್ದುಗೊಳಿಸುತ್ತಾರೆ.’” ಪೋಸ್ಟ್ ಅನ್ನು ಕೆಳಗೆ ನೋಡಿ:
THIS IS ABSOLUTELY INSANE
Karoline Leavitt: “President Trump will revoke the passport of any Olympics athlete who has criticized him.”
— dot (@dotNoso) February 10, 2026

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅದನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಈ ಹೇಳಿಕೆಯನ್ನು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೆವಿಟ್ ಮಾಡಿಯೇ ಇಲ್ಲ. ಈ ಉಲ್ಲೇಖವು ಸಂಪೂರ್ಣವಾಗಿ ಕಲ್ಪಿತವಾದದ್ದು ಮತ್ತು ಲೆವಿಟ್ ರವರಿಂದ ಅಥವಾ ಟ್ರಂಪ್ ಆಡಳಿತದ ಯಾವುದೇ ಪರಿಶೀಲಿಸಿದ ಭಾಷಣ, ಬ್ರೀಫಿಂಗ್, ಸಂದರ್ಶನ ಅಥವಾ ಅಧಿಕೃತ ದಾಖಲೆಯಲ್ಲಿ ಈ ವಿಷಯವು ಕಂಡುಬರುವುದಿಲ್ಲ.
ವಿವರಗಳು:
ಈ ವಿಷಯದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಾವು ಮೊದಲು “ಡೊನಾಲ್ಡ್ ಟ್ರಂಪ್ ಒಲಂಪಿಕ್ ಕ್ರೀಡಾಪಟುಗಳ ಪಾಸ್‌ಪೋರ್ಟ್ ರದ್ದುಗೊಳಿಸುತ್ತಾರೆ” ಎಂಬ ಪದಗಳನ್ನ್ನು ಬಳಸಿ ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. ಗಾರ್ಡಿಯನ್‌ನ ಒಂದು ವರದಿಯಿಂದ ನಮಗೆ ತಿಳಿದುಬಂದದ್ದೇನೆಂದರೆ, 2026ರ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ USA ಅನ್ನು ಪ್ರತಿನಿಧಿಸುವ ಫ್ರೀಸ್ಟೈಲ್ ಸ್ಕೀಯರ್ ಹಂಟರ್ ಹೆಸ್- US ಅನ್ನು ಪ್ರತಿನಿಧಿಸುವುದು “ಮಿಶ್ರ ಭಾವನೆಗಳನ್ನು” ತರುತ್ತದೆ ಮತ್ತು ಅದು “ಸ್ವಲ್ಪ ಕಷ್ಟಕರವಾಗಿದೆ” ಏಕೆಂದರೆ “ನನಗೆ ಇಷ್ಟವೆನ್ನಲಾರದಂತಹ ಬಹಳಷ್ಟು ವಿಷಯಗಳು ನಡೆಯುತ್ತಿವೆ.”ಎಂದು ಪತ್ರಿಕಾಗೋಷ್ಠಿಯ ಸಮಯದಲ್ಲಿ ಹೇಳಿದ್ದರು. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ:

“ಸ್ನೇಹಿತರು ಮತ್ತು ಕುಟುಂಬವನ್ನು ಪ್ರತಿನಿಧಿಸುತ್ತಿದ್ದೇನೆ.. ನಾನು ಅಮೆರಿಕದ ಬಗ್ಗೆ ನಂಬುವ ವಿಷಯಗಳೆಲ್ಲಾ ಒಳ್ಳೆಯದೇ” ಆದರೆ “ನಾನು ಧ್ವಜ ಧರಿಸಿರುವ ಮಾತ್ರಕ್ಕೆ ನಾನು ಅಮೆರಿಕದಲ್ಲಿ ನಡೆಯುತ್ತಿರುವ ಎಲ್ಲವನ್ನೂ ಪ್ರತಿನಿಧಿಸುತ್ತೇನೆ ಎಂದರ್ಥವಲ್ಲ”. ಎಂದು ಆತ ಸ್ಪಷ್ಟಪಡಿಸಿದರು ಈ ಹೇಳಿಕೆಗಳ ನಂತರ, ಅಧ್ಯಕ್ಷ ಟ್ರಂಪ್ ರವರು ಟ್ರುತ್ ಸೋಶಿಯಲ್‌ನಲ್ಲಿ ಪ್ರತಿಕ್ರಿಯಿಸುತ್ತಾ, ಹೆಸ್ ಅವರನ್ನು ನಿಜವಾದ ಲೂಸರ್” ಆತ “ತಂಡದಲ್ಲಿರಲು ಪ್ರಯತ್ನಿಸಬಾರದಿತ್ತು” ಎಂದು ಮತ್ತು “ಇಂತಹ ವ್ಯಕ್ತಿಯನ್ನು ಬೆಂಬಲಿಸುವುದು ತುಂಬಾ ಕಷ್ಟ” ಎಂದು ಹೇಳಿದರು. ಪಾಸ್‌ಪೋರ್ಟ್ ರದ್ದುಗೊಳಿಸುವುದಾಗಿ ಟ್ರಂಪ್ ರವರು ಎಲ್ಲಿಯೂ ಹೇಳಿಲ್ಲ. ಪೂರ್ಣ ಪೋಸ್ಟ್ ಅನ್ನು ಇಲ್ಲಿ ನೋಡಿ:

ವ್ಯಾಪಕ ಹುಡುಕಾಟಗಳಲ್ಲಿ ಮತ್ತು ಸುದ್ದಿ ವರದಿಗಳಲ್ಲಿ ಟ್ರಂಪ್ ಅವರನ್ನು ಟೀಕಿಸುವ ಕ್ರೀಡಾಪಟುಗಳ ಪಾಸ್‌ಪೋರ್ಟ್ ರದ್ದತಿಯ ಬಗ್ಗೆ ಲೆವಿಟ್ ಏನನ್ನೂ ಹೇಳಿದ ಅಥವಾ ಸೂಚಿಸಿದ ಯಾವುದೇ ನಿದರ್ಶನಗಳು ಕಂಡುಬಂದಿಲ್ಲ.
ಸುರಕ್ಷಿತ, ಸುಗಮ ಮತ್ತು ಐತಿಹಾಸಿಕವಾಗಿ ಯಶಸ್ವಿಯಾಗುವ “ಒಲಿಪಿಕ್ಸ್ 2028” ನಡೆಸುವುದನ್ನು ಖಚಿತಪಡಿಸಲು 2028ರ ಒಲಿಂಪಿಕ್ ಕಾರ್ಯಪಡೆಯ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಆಗಸ್ಟ್ 2025 ರಲ್ಲಿ ಸಹಿ ಹಾಕಿದರು.
ಮತ್ತು ಆಗಸ್ಟ್ 5ರಂದು ಪ್ರಕಟವಾದ PBS ವರದಿಯ ಪ್ರಕಾರ, ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೆವಿಟ್ ತಮ್ಮ ಹೇಳಿಕೆಯಲ್ಲಿ, “ಈ ಜಾಗತಿಕ ಕ್ರೀಡಾ ಪ್ರದರ್ಶನವನ್ನು ನೋಡಿಕೊಳ್ಳುವುದು ಒಂದು ದೊಡ್ಡ ಗೌರವವೆಂದು ಟ್ರಂಪ್ ರವರು ಪರಿಗಣಿಸುತ್ತಾರೆ” ಎಂದು ಹೇಳಿದರು ಮತ್ತು ಕ್ರೀಡೆಯು ಅಧ್ಯಕ್ಷರಿಗೆ “ಅತ್ಯುತ್ಸಾಹ ತರುವಂಥ ವಿಷಯ”ಗಳಲ್ಲಿ ಒಂದೆಂದು ಹೇಳಿದರು.
ಫೆಬ್ರವರಿ 2025 ರಲ್ಲಿ ಟ್ರಂಪ್ ಸಹಿ ಮಾಡಿದ “ಮಹಿಳೆಯರ ಕ್ರೀಡೆಗಳಿಂದ ಪುರುಷರನ್ನು ದೂರವಿಡುವುದು” ಎಂಬ ಮತ್ತೊಂದು ಕಾರ್ಯನಿರ್ವಾಹಕ ಆದೇಶವು, “ಲೈಂಗಿಕತೆ”ಯು ಹುಟ್ಟಿನಿಂದಲೇ ನಿಗದಿಪಡಿಸಲಾದ ವ್ಯಕ್ತಿಯ ಲಿಂಗವನ್ನು ಮಾತ್ರ ಸೂಚಿಸುತ್ತದೆ ಎಂಬ ಅವರ ಆಡಳಿತದ ದೃಷ್ಟಿಕೋನವನ್ನು ಜಾರಿಗೊಳಿಸುತ್ತದೆ. ಈ ಆದೇಶವು ಮಹಿಳೆಯರು ಮತ್ತು ಹುಡುಗಿಯರು ಸುರಕ್ಷಿತ ಮತ್ತು ನ್ಯಾಯಯುತ ಕ್ರೀಡೆಗಳಲ್ಲಿ ಸ್ಪರ್ಧಿಸುವ ಅವಕಾಶಗಳನ್ನು ರಕ್ಷಿಸುತ್ತದೆ. “2028ರ ಒಲಿಂಪಿಕ್ಸ್‌ನಲ್ಲಿ ಪುರುಷರು ಮಹಿಳೆಯರಿಂದ ಟ್ರೋಫಿಗಳನ್ನು ಕದಿಯಲು ಯುನೈಟೆಡ್ ಸ್ಟೇಟ್ಸ್ ಬಿಡುವುದಿಲ್ಲ” ಎಂದು ಟ್ರಂಪ್ ಸ್ಪಷ್ಟವಾಗಿ ಹೇಳಿದರು.
ನ್ಯೂಸ್ 3ರ ಮತ್ತೊಂದು ವರದಿಯಿಂದ ನಮಗೆ ತಿಳಿದುಬಂದದ್ದೇನೆಂದರೆ, “ಟ್ರಂಪ್ ಅವರ ಆದೇಶವನ್ನು ಕಾನೂನನ್ನಾಗಿ ಮಾಡಲು ಕಾಂಗ್ರೆಸ್ ಶಾಸನವನ್ನು ಪರಿಗಣಿಸುವುದೆಂದು ಆಶಿಸುವುದಾಗಿ” ಎಂದು ಲೆವಿಟ್ TNNDಗೆ ಹೇಳಿದರು. “ಇದು ಮೈದಾನದಲ್ಲಿ ನ್ಯಾಯಯುತವಾದ ಪಾಲನ್ನು ಕೇಳುತ್ತಿರುವಂತಹ ದೇಶಾದ್ಯಂತದ ಮಹಿಳಾ ಕ್ರೀಡಾಪಟುಗಳು ಮತ್ತು ಮಹಿಳೆಯರು ಮತ್ತು ಹುಡುಗಿಯರಿಗೆ ಒಂದು ದೊಡ್ಡ ಗೆಲುವು…” ಎಂದು ಆಕೆ ಮುಂದುವರಿದು ಹೇಳಿದರು.
Men do not belong in women’s sports.
We’re dedicated to opposing male participation in women’s sports as a matter of safety, fairness, respect, and truth.
In support of Executive Order 14201, Keeping Men Out of Women’s Sports, we’ve clarified eligibility for certain visa… pic.twitter.com/lNbs5eep6w
— USCIS (@USCIS) August 4, 2025
ಕೊನೆಯದಾಗಿ, U.S. ಅಧ್ಯಕ್ಷರು ಯರದ್ದಾದರೂ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಬಹುದೇ ಎಂದು ನಾವು ಹುಡುಕಿದಾಗ, ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಪಾಯ್ಂಟರ್ ನ ಒಂದು ಲೇಖನದಲ್ಲಿ ವಿವರಿಸಿರುವುದು ಕಂಡುಬಂದಿತು. ಲೇಖನದ ಪ್ರಕಾರ, “ಸ್ವಾಭಾವಿಕ U.S. ನಾಗರಿಕರು ತಮ್ಮ ಪೌರತ್ವವನ್ನು ಕಳೆದುಕೊಳ್ಳಲು ಎರಡು ಮಾರ್ಗಗಳಿವೆ. ಎರಡೂ ವಿಧಾನಗಳಲ್ಲಿ, ರಾಜಕೀಯ ವ್ಯತ್ಯಾಸಗಳ ಆಧಾರದ ಮೇಲೆ ಅಧ್ಯಕ್ಷರು ಪೌರತ್ವವನ್ನು ರದ್ದುಗೊಳಿಸಲು ಅನುಮತಿ ಇಲ್ಲ.” ಮತ್ತು, ನಾಗರಿಕರಾಗಿ, ಅವರು ಪಾಸ್‌ಪೋರ್ಟ್ ಪಡೆಯಬಹುದು.
ಹೀಗಾಗಿ, ಲೆವಿಟ್ ಅಂತಹ ಹೇಳಿಕೆ ನೀಡಿಲ್ಲ ಮತ್ತು U.S. ಅಧ್ಯಕ್ಷರು ಒಬ್ಬರ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಲೂ ಸಾಧ್ಯವಿಲ್ಲ.
ಆದ್ದರಿಂದ, ಹೇಳಿಕೆ ಸುಳ್ಳು.
******************************************************
ಇದನ್ನೂ ಓದಿ:
2025ರ ನೊಬೆಲ್ ಶಾಂತಿ ಪ್ರಶಸ್ತಿಯ ನಾಮನಿರ್ದೇಶಿತರ ಪಟ್ಟಿಯಿಂದ ಟ್ರಂಪ್ ಅವರನ್ನು ತೆಗೆದುಹಾಕಲಾಗಿದೆಯೇ? ಸತ್ಯ ಪರಿಶೀಲನೆ

