ಹೇಳಿಕೆ/Claim : ಕರ್ನಾಟಕದ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದ ಹೊರಗೆ ಕೇಸರಿ ಬಣ್ಣದ ಸೀರೆ ಧರಿಸಿದ್ದಕ್ಕಾಗಿ ಮಹಿಳೆಯನ್ನು ಕರ್ನಾಟಕ ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದಾರೆ.
ಕಡೆನುಡಿ/Conclusion : ಈ ಹೇಳಿಕೆ ದಾರಿ ತಪ್ಪಿಸುವಂತಿದೆ. ಪ್ರತಿಭಟನೆಯ ಸಮಯದಲ್ಲಿ ಮಹಿಳೆಯನ್ನು ತಪ್ಪಾಗಿ ಬಂಧಿಸಲಾಗಿತ್ತಷ್ಟೇ, ಆಕೆಯ ಕೇಸರಿ ಸೀರೆಗಾಗಿ ಅಲ್ಲ. ಸ್ಪಷ್ಟೀಕರಣದ ನಂತರ ಆಕೆಯನ್ನು ಯಾವುದೇ ಬಂಧನ ಅಥವಾ ಆರೋಪಗಳಿಲ್ಲದೆ ತಕ್ಷಣವೇ ಬಿಡುಗಡೆ ಮಾಡಲಾಯಿತು.
ರೇಟಿಂಗ್/Rating : ದಾರಿ ತಪ್ಪಿಸುವಂತಿದೆ — ![]()
ಕೇಸರಿ ಬಣ್ಣದ ಸೀರೆಯನ್ನು ಉಟ್ಟದ್ದಕ್ಕಾಗಿ ಮಹಿಳೆಯೊಬ್ಬರನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ ಎಂಬ ಹೇಳಿಕೆಯನ್ನು ಇತ್ತೀಚೆಗೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. X ಬಳಕೆದಾರ ‘KulaguruK’, ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದ ಬಳಿ ಕೇಸರಿ ರಂಗಿನ ಸೀರೆ ಉಟ್ಟಿದ್ದ ಮಹಿಳೆಯನ್ನು ಪೋಲೀಸರು ಬಂಧಿಸುತ್ತಿರುವ ಕ್ಲಿಪ್ ಅನ್ನು ಅಕ್ಟೋಬರ್ 1, 2025ರಂದು ಹಂಚಿಕೊಂಡಿದ್ದು, ಆಕೆಯ ಉಡುಪಿನ ಕಾರಣದಿಂದಾಗಿ ಬಂಧನದ ನಡೆಯಿತು ಒಂದು ಸುದ್ದಿಗಳನ್ನು ಹುಟ್ಟುಹಾಕಿತ್ತು. ಪೋಸ್ಟ್ ಅನ್ನು ಕೆಳಗೆ ನೋಡಿ –
Outside the Mata Chamunda Devi Temple, #Karnataka, a woman is waiting for her husband, who has gone inside the temple.
Police tries to arrest her. Luckily her husband arrives & saves her.
What was her crime?
Waiting in front of a temple?
Wearing a saffron sari?
Being a #Hindu? pic.twitter.com/JR9XLoJJgE— KulaGuru🚩 (@KulaguruK) October 1, 2025

ಮತ್ತೊಬ್ಬ X ಬಳಕೆದಾರ ‘@narpat_rat18280’ कर्नाटक की कांग्रेस सरकार में भगवा वस्त्र धारण करना गुनाह हो गया है।
इस महिला की गलती मात्र इतनी है कि इसने भगवा रंग की साड़ी पहन रखी थी इसलिए पुलिस ने जबरन इसे गाड़ी में डाल दिया। ಕನ್ನಡದ ಅನುವಾದ ಹೀಗಿದೆ: ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ಕೇಸರಿ ಉಡುಪು ಧರಿಸುವುದು ಅಪರಾಧವಾಗಿಬಿಟ್ಟಿದೆ. ಈ ಮಹಿಳೆ ಏಕೈಕ ತಪ್ಪು ಏನೆಂದರೆ ಆಕೆ ಕೇಸರಿ ಬಣ್ಣದ ಸೀರೆ ಉಟ್ಟದ್ದು, ಆದರಿಂದಾಗಿ ಪೊಲೀಸರು ಆಕೆಯನ್ನು ಬಲವಂತವಾಗಿ ವಾಹನಕ್ಕೆ ಏರಿಸಿದರು. ಪೋಸ್ಟ್ ಅನ್ನು ಇಲ್ಲಿ ನೋಡಿ.
कर्नाटक की कांग्रेस सरकार में भगवा वस्त्र धारण करना गुनाह हो गया है।
इस महिला की गलती मात्र इतनी है कि इसने भगवा रंग की साड़ी पहन रखी थी इसलिए पुलिस ने जबरन इसे गाड़ी में डाल दिया। pic.twitter.com/NZVccoKsJ5— ठाकुर साहब (@narpat_rat18280) September 29, 2025
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ದಾರಿತಪ್ಪಿಸುವಂತಿದೆ ಎಂದು ಕಂಡುಹಿಡಿಯಿತು. ಈ ಘಟನೆ ಸೆಪ್ಟೆಂಬರ್ 9, 2025 ರಂದು ನಡೆದದ್ದು, ಆ ದಿನ ಕರ್ನಾಟಕ ಪೊಲೀಸರು ಕೇಸರಿ ಬಣ್ಣದ ಉಡುಪುಗಳನ್ನು ಧರಿಸಿದ್ದ ಚಾಮುಂಡಿ ಹಿಲ್ಸ್ ಚಲೋ ಪ್ರತಿಭಟನಾಕಾರರ ಮೇಲೆ ನಿರ್ಬಂಧ ಹೇರುತ್ತಿದ್ದರು. ದಸರಾ ಉತ್ಸವವನ್ನು ಉದ್ಘಾಟಿಸಲು ಮುಸ್ಲಿಂ ಬರಹಗಾರ್ತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ್ದರ ವಿರುದ್ಧ ಈ ಪ್ರತಿಭಟನೆ ನಡೆಯುತ್ತಲಿತ್ತು. ವೀಡಿಯೊ ಇಲ್ಲಿ ನೋಡಿ.![]()
ಈ ವಿಷಯದ ಬಗ್ಗೆ ತಿಳಿದುಕೊಳ್ಳಲು ನಾವು ಮೊದಲು ವೀಡಿಯೊದ ವಿವಿಧ ಕೀಫ್ರೇಮ್ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ನ್ಯೂಸ್ 18 ಕನ್ನಡ ವಾಹಿನಿಯು ತಮ್ಮ ಯುಟ್ಯೂಬ್ ವಾಹಿನಿಯಲ್ಲಿ ಘಟನೆಯ ತುಣುಕನ್ನು ಅಪ್ಲೋಡ್ ಮಾಡಿದೆ, ಅದನ್ನು ಇಲ್ಲಿ ಕಾಣಬಹುದು.
ಹುಡುಕಾಟದ ಫಲಿತಾಂಶವಾಗಿ ಸೆಪ್ಟೆಂಬರ್ 9, 2025ರಂದು ಕನ್ನಡ ಪ್ರಭಾ ಪ್ರಕಟಿಸಿದ ವರದಿ ನಮಗೆ ದೊರಕಿತು. ಮುಸ್ಲಿಂ ಬರಹಗಾರ್ತಿ ಬಾನು ಮುಷ್ತಾಕ್ ದಸರಾ ಉದ್ಘಾಟನೆಯ ನಡೆಸಿದ್ದಕ್ಕಾಗಿ ಕೋಮು ಉದ್ವಿಗ್ನತೆಯನ್ನು ತಪ್ಪಿಸಲು ಪೊಲೀಸರು ಮೈಸೂರಿನಲ್ಲಿ “ಚಾಮುಂಡಿ ಹಿಲ್ ಚಲೋ” ಮೆರವಣಿಗೆ ಮತ್ತು ಪ್ರತಿಭಟನೆಯನ್ನು ನಿಲ್ಲಿಸಿದರೆಂಬುದನ್ನು ವರದಿಯು ಸೂಚಿಸುತ್ತದೆ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ:

ಇದರ ನಂತರ, ಸೆಪ್ಟೆಂಬರ್ 9, 2025 ರಂದು ಸ್ಟಾರ್ ಆಫ್ ಮೈಸೂರು ಪ್ರಕಟಿಸಿದ ಮತ್ತೊಂದು ವರದಿಯೂ ನಮ್ಮ ಕೈಸೇರಿತು. ದೇವಾಲಯಕ್ಕೆ ಭೇಟಿ ನೀಡಿದ್ದ ಬೆಂಗಳೂರಿನ ದಂಪತಿಗಳನ್ನು (ಕೇಸರಿ ಸೀರೆಯುಟ್ಟ ಮಹಿಳೆ ಮತ್ತು ಆಕೆಯ ಪತಿ) ತಪ್ಪಾಗಿ ಬಂಧಿಸಿದ್ದನ್ನು ಈ ವರದಿಯು ನೇರವಾಗಿ ತಿಳಿಸುತ್ತದೆ. ಅವರು ಪ್ರತಿಭಟನೆಯ ಭಾಗವಾಗಿದ್ದಾರೆಂದು ಪೊಲೀಸರು ಭಾವಿಸಿ, ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸ್ವಲ್ಪವೇ ಕಾಲ ಬಂಧಿಸಿದ್ದರು, ಆದರೆ ಅವರು ಪ್ರತಿಭಟನಾಕಾರರಲ್ಲ, ಯಾತ್ರಿಕರು ಎಂದು ತಿಳಿದಾಕ್ಷಣ ಅವರನ್ನು ಬಿಡುಗಡೆ ಮಾಡಲಾಗಿತ್ತು.
ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

‘ದ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾದ ಮತ್ತೊಂದು ಲೇಖನದಲ್ಲಿ, ಬಿಜೆಪಿ, ವಿಎಚ್ಪಿ ಮತ್ತು ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ “ಚಾಮುಂಡಿ ಚಲೋ” ರ್ಯಾಲಿಯನ್ನು ಕರ್ನಾಟಕ ಪೊಲೀಸರು ನಿಯಂತ್ರಿಸಿದ ರೀತಿಯ ಕುರಿತು ಹೆಚ್ಚಿನ ಬೆಳಕು ಚೆಲ್ಲುತ್ತದೆ. “ಪರಿಸ್ಥಿತಿಯ ಸೂಕ್ಷ್ಮತೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಬಗೆಗಿನ ಕಳವಳವನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಈಗಾಗಲೇ ರ್ಯಾಲಿಗೆ ಅನುಮತಿ ನಿರಾಕರಿಸಿದ್ದರು. ಇದಲ್ಲದೆ, ದಸರಾ ಸಂಬಂಧಿತ ಕೆಲಸಗಳು ನಡೆಯುತ್ತಿವೆ ಮತ್ತು ರ್ಯಾಲಿಯು ಸಿದ್ಧತೆಗಳಿಗೆ ಅಡ್ಡಿಯಾಗುವ ಸಾಧ್ಯತೆ ಇತ್ತು..” ಎಂದು ವರದಿಯು ಎತ್ತಿ ತೋರಿಸುತ್ತದೆ.
ಕರ್ನಾಟಕ ಪೊಲೀಸರು ಮಹಿಳೆಯನ್ನು ಕೇಸರಿ ಬಣ್ಣದ ಉಡುಪಿನಿಂದಾಗಿ ಬಂಧಿಸಲಿಲ್ಲ, ಬದಲಿಗೆ ಆಕೆ ಚಾಮುಂಡಿ ಚಲೋ ಪ್ರತಿಭಟನೆಯ ಭಾಗವಾಗಿರಬಹುದೆಂದು ಭಾವಿಸಿ ಆಕೆಯನ್ನು ಸಂಕ್ಷಿಪ್ತವಾಗಿ ಬಂಧಿಸಲಾಗಿತ್ತು. ಬಂಧನವು ಪ್ರತಿಭಟನೆಯ ಸಮಯದಲ್ಲಿ ವಿಶಾಲ ಜನಸಂದಣಿಯ ನಿಯಂತ್ರಣದ ಭಾಗವಾಗಿತ್ತೇ ಹೊರತು ಮಹಿಳೆಯ ಉಡುಗೆ ಅಥವಾ ಆಕೆ ಹಿಂದೂ ಎಂಬ ಕಾರಣಕ್ಕಾಗಿ ಆಕೆಯನ್ನು ಗುರಿಯಾಗಿಸಿರಲಿಲ್ಲ.
ಹೀಗಾಗಿ, ಈ ಹೇಳಿಕೆ ದಾರಿತಪ್ಪಿಸುವಂತಿದೆ.
******************************************************
ಇದನ್ನೂ ಓದಿ:
Digiteye Kannada Fact Checkers