ಹೇಳಿಕೆ/Claim : ಒಬ್ಬ ಎಮಿರಾಟಿ ಮೈಕ್ರೊಫೋನ್ ಮುಟ್ಟಿದ ನಂತರ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಸ್ಯಾನಿಟೈಸರ್ ಕೇಳಿದ್ದಾರೆ.
ಕಡೆನುಡಿ/Conclusion : : ಈ ಹೇಳಿಕೆಯು ತಪ್ಪು ನಿರೂಪಣೆಯಾಗಿದೆ. ಈ ವೀಡಿಯೊ ನವೆಂಬರ್ 26, 2020 ರಂದು ಇಸ್ರೇಲ್‌ನ ಬೆನ್-ಗುರಿಯನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ನಡೆದ ರಾಜತಾಂತ್ರಿಕ ಕಾರ್ಯಕ್ರಮದ ಸಮಯದಲ್ಲಿ ಸೆರೆಹಿಡಿದದ್ದು, ಮತ್ತು ಅದು ಅಗೌರವ ಸೂಚಿಸುವ ಕ್ರಿಯೆಯಲ್ಲ.
ರೇಟಿಂಗ್/Rating : ತಪ್ಪು ನಿರೂಪಣೆ — ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.![]()
******************************************************
ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಒಂದು ಕ್ಲಿಪ್ ಅನ್ನು ಹಂಚಿಕೊಳ್ಳುತ್ತಾ ಎಮಿರಾಟಿಯೊಬ್ಬರು ಮೈಕ್ರೊಫೋನ್ ಅನ್ನು ಮುಟ್ಟಿದ ನಂತರ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹ್ಯಾಂಡ್ ಸ್ಯಾನಿಟೈಸರ್ ಕೇಳಿ ಅಗೌರವ ತೋರಿದರು ಎಂದು ಹೇಳಿಕೊಂಡಿದ್ದಾರೆ. ಪೋಸ್ಟ್ ನಲ್ಲಿ ಒಂದು ಸಣ್ಣ ವೀಡಿಯೊ ಕ್ಲಿಪ್ ಅನ್ನು ಸೇರಿಸಲಾಗಿದ್ದು ಶೀರ್ಷಿಕೆ ಹೀಗಿದೆ, “ಎಮಿರಾಟಿಯೊಬ್ಬರು ಮೈಕ್ರೊಫೋನ್ ಮುಟ್ಟಿದ ನಂತರ ನೆತನ್ಯಾಹು ಸ್ಯಾನಿಟೈಸರ್ ಕೇಳಿದರು”, ನಂತರ “ಸಿಗಬಹುದಾದ ಸಂಪೂರ್ಣ ಅಗೌರವಕ್ಕೆ ಅವರು ಅರ್ಹರು” ಎಂದೂ ಸಹ ಕಾಮೆಂಟ್ ಮಾಡಲಾಗಿದೆ. ಪೋಸ್ಟ್ ಅನ್ನು ಕೆಳಗೆ ನೋಡಿ-
“Netanyahu requests sanitizers after an Emirati touched the microphone.” 🤣🤣🤣🤣
They deserve every disrespect they can get. .pic.twitter.com/OopowadZ3z
— jewels (@Jewels_MsJay) January 5, 2026

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅದನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ದಾರಿತಪ್ಪಿಸುವಂತಿದೆ ಎಂದು ಕಂಡುಕೊಂಡಿತು. ಇದು ಇಸ್ರೇಲ್‌ನ ಬೆನ್-ಗುರಿಯನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ರಾಜತಾಂತ್ರಿಕ ಕಾರ್ಯಕ್ರಮದಲ್ಲಿ ಸಂಭವಿಸಿತ್ತು, ಈ ಘಟನೆಯು ದುಬೈನಿಂದ ಇಸ್ರೇಲ್‌ಗೆ ಮೊದಲ ವಾಣಿಜ್ಯ ವಿಮಾನವನ್ನು ಗುರುತಿಸುವ ಸನ್ನಿವೇಶ. ಈ ಹೇಳಿಕೆಯಲ್ಲಿ COVID-19 ಸಾಂಕ್ರಾಮಿಕ ರೋಗದ ಸಂದರ್ಭದ ಈ ವೀಡಿಯೊ ಸೆರೆಹಿಡಿಯಲಾಗಿತ್ತು ಎಂಬ ಪ್ರಮುಖ ಅಂಶವನ್ನು ಬಿಟ್ಟುಹಾಕಿದೆ, ಮತ್ತು ಈ ಮೂಲಕ ಆಗಿನ ನೈರ್ಮಲ್ಯ ಕ್ರಮಗಳನ್ನು ತಾರತಮ್ಯದ ನಡವಳಿಕೆ ಎಂದು ತಪ್ಪಾಗಿ ಪ್ರತಿನಿಧಿಸಿದೆ.
ಸಂದರ್ಭದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಾವು ಮೊದಲು ಕ್ಲಿಪ್‌ನ ವಿವಿಧ ಕೀಫ್ರೇಮ್‌ಗಳಿಂದ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಹುಡುಕಾಟದ ಫಲಿತಾಂಶಗಳಲ್ಲಿ ನಮಗೆ ನವೆಂಬರ್ 26, 2020 ರಂದು ‘ಇಸ್ರೇಲಿಪಿಎಂ’ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾದ ಯುಟ್ಯೂಬ್ ವೀಡಿಯೊ ದೊರಕಿತು. ವೀಡಿಯೊದ ಶೀರ್ಷಿಕೆ ಹೀಗಿದೆ: “ದುಬೈನಿಂದ ಮೊದಲ ಫ್ಲೈದುಬೈ ವಾಣಿಜ್ಯ ವಿಮಾನದ ಸ್ವಾಗತ ಸಮಾರಂಭದಲ್ಲಿ ಪ್ರಧಾನಿ ನೆತನ್ಯಾಹು ಅವರ ಮಾತುಗಳು.” ಇದರ ವೀಡಿಯೊ ಮತ್ತು ಸ್ಕ್ರೀನ್‌ಶಾಟ್ ಅನ್ನು ಕೆಳಗೆ ವೀಕ್ಷಿಸಿ –
ಈ ಘಟನೆಯು ದುಬೈನಿಂದ ಇಸ್ರೇಲ್‌ಗೆ ಮೊದಲ ವಾಣಿಜ್ಯ ವಿಮಾನವನ್ನು ಸೂಚಿಸುವ ಸನ್ನಿವೇಶ ಎಂದು ವೀಡಿಯೊದಿಂದ ನಮಗೆ ತಿಳಿದುಬರುತ್ತದೆ. ಸುಮಾರು 3:07 ನಿಮಿಷದ ಸಮಯಮುದ್ರೆಯಲ್ಲಿ, ನೆತನ್ಯಾಹು ಮೈಕ್ರೊಫೋನ್ ತೆಗೆದುಕೊಳ್ಳುವ ಮೊದಲು ತಮ್ಮ ಕೈಗಳನ್ನು ಉಜ್ಜುತ್ತಾ ಯಾರಿಗೋ ಹ್ಯಾಂಡ್ ಸ್ಯಾನಿಟೈಸರ್ ತರುವಂತೆ ಸನ್ನೆ ಮಾಡುತ್ತಾರೆ. ಈ ಸಂವಾದದ ಉದ್ದಕ್ಕೂ, ಆತ ನಗುತ್ತಿರುವುದನ್ನು ಕಾಣಬಹುದು ಮತ್ತು ಸರಿಸುಮಾರು 3:18 ನಿಮಿಷಗಳ ಸಮಯಮುದ್ರೆಯಲ್ಲಿ “ಧನ್ಯವಾದ” ಹೇಳುತ್ತಿರುವಂತೆ ಕಾಣುತ್ತದೆ. ಅವರು ತಮ್ಮ ಕೈಗಳನ್ನು ಸ್ಯಾನಿಟೈಸ್ ಮಾಡುತ್ತಿರುವ ಕ್ಷಣವನ್ನು ಕೆಳಗೆ ಕಾಣಬಹುದು:

ಗಲ್ಫ್ ನ್ಯೂಸ್ ಪ್ರಕಟಿಸಿದ ವರದಿಯಂತಹ ಇತರ ವರದಿಗಳು ಸಹ ಈ ಘಟನೆ ನವೆಂಬರ್ 26, 2020 ರಂದು ನಡೆದದ್ದು ಎಂದು ದೃಢಪಡಿಸುತ್ತವೆ. ದುಬೈನಿಂದ ಇಸ್ರೇಲ್‌ಗೆ ಮೊದಲ ಫ್ಲೈದುಬೈ ವಾಣಿಜ್ಯ ವಿಮಾನದ ಸ್ವಾಗತ ಸಮಾರಂಭದಲ್ಲಿ ಪ್ರಧಾನಿ ನೆತನ್ಯಾಹು ರವರ ಹೇಳಿಕೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ ಇಸ್ರೇಲ್ PMO ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿತ್ತು. ಆದಾಗ್ಯೂ, ಈ ಹೇಳಿಕೆಯಲ್ಲಿ ಕೋವಿಡ್ 19 ಸಾಂಕ್ರಾಮಿಕದ ಸಂದರ್ಭವನ್ನು ತಿಳಿಸದೆ ಬಿಡಲಾಗಿದೆ ಮತ್ತು ಇದು ಸಾಂಸ್ಕೃತಿಕ ಅಗೌರವ ಎಂದು ತಪ್ಪಾಗಿ ಚಿತ್ರಿಸಲಾಗಿದೆ.
ಹೀಗಾಗಿ, ಈ ಹೇಳಿಕೆಯು ಸುಳ್ಳನ್ನು ಪ್ರಾತಿನಿಧಿಸುತ್ತದೆ ಎನ್ನಬಹುದು.
******************************************************
ಇದನ್ನೂ ಓದಿ:
ದಕ್ಷಿಣ ಕೊರಿಯಾ ತಮ್ಮ ದೇಶಕ್ಕೆ ಎಲ್ಲಾ ಇಸ್ರೇಲಿ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿದೆಯೇ? ಸತ್ಯ ಪರಿಶೀಲನೆ
Digiteye Kannada Fact Checkers