ಹೇಳಿಕೆ/Claim :ಪ್ರವಾಹ ಪರಿಹಾರಕ್ಕಾಗಿ ಶ್ರೀಲಂಕಾಕ್ಕೆ ಹೋಗುವ ಮಾನವೀಯ ನೆರವು ಒದಗಿಸುವ ಪಾಕಿಸ್ತಾನದ ವಿಮಾನಗಳಿಗೆ ಭಾರತವು ವಾಯುಪ್ರದೇಶ ನೀಡಲು ನಿರಾಕರಿಸಿದೆ.
ಕಡೆನುಡಿ/Conclusion : ಹೇಳಿಕೆ ಸುಳ್ಳು. ಭಾರತದ ವಿದೇಶಾಂಗ ಸಚಿವಾಲಯದ ಅಧಿಕೃತ ಮೂಲಗಳು ಯಾವುದೇ ನಿರಾಕರಣೆ ಮಾಡಿಲ್ಲ ಎಂದು ಬಹಿರಂಗಪಡಿಸುತ್ತವೆ. ಇದಲ್ಲದೆ, ಸಹಾಯ ಒದಗಿಸುವ ಸಲುವಾಗಿ ತಮ್ಮ ವಾಯುಪ್ರದೇಶವನ್ನು ಬಳಸಲು ಭಾರತವು ಪಾಕಿಸ್ತಾನಕ್ಕೆ ಅವಕಾಶ ನೀಡಿದೆ ಎಂದು ಶ್ರೀಲಂಕಾದ ಮಾಧ್ಯಮಗಳು ದೃಢಪಡಿಸುತ್ತವೆ.
ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು– ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
******************************************************
ಶ್ರೀಲಂಕಾದಲ್ಲಿ ಪರಿಹಾರ ಒದಗಿಸಲು ಭಾರತವು ಪಾಕಿಸ್ತಾನಕ್ಕೆ ತನ್ನ ವಾಯುಪ್ರದೇಶವನ್ನು ನೀಡಲು ನಿರಾಕರಿಸಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘ij422’ ಅಂತಹ ಒಂದು ಹೇಳಿಕೆಯನ್ನು – “ಭಾರತದ ಮುಖ ಪುನಃ ಬಹಿರಂಗ!! ನಡೆಯುತ್ತಿರುವ ಪ್ರವಾಹ ವಿಕೋಪದಿಂದ ಹಾನಿಗೊಳಗಾದ ಜನರಿಗೆ ಸಹಾಯ ಮಾಡಲು ಶ್ರೀಲಂಕಾಕ್ಕೆ ತೆರಳುವ ಪಾಕಿಸ್ತಾನದ ಮಾನವೀಯ ನೆರವು ವಿಮಾನಗಳಿಗೆ ವಾಯುಪ್ರದೇಶವನ್ನು ನೀಡಲು ಭಾರತ ನಿರಾಕರಿಸಿದೆ. ಪಾಕಿಸ್ತಾನವು ಇನ್ನು ಹಡಗಿನ ಮೂಲಕ ಸಹಾಯವನ್ನು ಕಳುಹಿಸಲಿದೆ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ. ಡಿಸೆಂಬರ್ 1, 2025 ರಂದು ಅಪ್ಲೋಡ್ ಮಾಡಲಾದ ಪೋಸ್ಟ್ ಅನ್ನು ಕೆಳಗೆ ನೋಡಬಹುದು –

🚨🇮🇳 INDIA’S FACE EXPOSED AGAIN!!
India has refused to grant airspace to Pakistan for humanitarian aid flights headed to Sri Lanka to help people affected by the ongoing flood disaster. Pakistan will now send the aid by ship. pic.twitter.com/GdHbuCsYTy
— Ch Mudasir 🇵🇰 (@ij422) December 1, 2025
ಇದಲ್ಲದೆ, ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಡಿಸೆಂಬರ್ 2, 2025 ರಂದು X ನಲ್ಲಿ ಭಾರತವು “ಪಾಕಿಸ್ತಾನದಿಂದ ಶ್ರೀಲಂಕಾಕ್ಕೆ ಮಾನವೀಯ ನೆರವು ನೀಡುವುದನ್ನು ತಡೆಯುತ್ತಿದೆ” ಎಂದು ಆರೋಪಿಸಿತು. ಶ್ರೀಲಂಕಾಕ್ಕೆ ಪಾಕಿಸ್ತಾನದ ಮಾನವೀಯ ನೆರವನ್ನು ಸಾಗಿಸುವ ವಿಶೇಷ ವಿಮಾನವು ಈಗ ಭಾರತದಿಂದ ವಿಮಾನ ಅನುಮತಿಗಾಗಿ ಕಾಯುತ್ತಿದ್ದು 60 ಗಂಟೆಗಳ ವಿಳಂಬ ಕಂಡಿದೆ. ಈ ಪೋಸ್ಟ್ ಅನ್ನು ಇಲ್ಲಿ ನೋಡಬಹುದು.
India continues to block humanitarian assistance from Pakistan to Sri Lanka. The special aircraft carrying Pakistan’s humanitarian assistance to Sri Lanka continues to face delay for over 60 hours now awaiting flight clearance from India.
The partial flight clearance issued by…
— Ministry of Foreign Affairs – Pakistan (@ForeignOfficePk) December 2, 2025
FACT CHECK
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಇದು ಸುಳ್ಳು ಎಂದು ಕಂಡುಕೊಂಡಿತು. ಪಾಕಿಸ್ತಾನವು ಭಾರತೀಯ ವಿಮಾನಗಳ ಮೇಲೆ ನಿರಂತರ ನಿಷೇಧವನ್ನು ಹೇರಿದ್ದರೂ, ಮಾನವೀಯ ಮಾನದಂಡಗಳಿಗೆ ಅನುಗುಣವಾಗಿ ಡಿಸೆಂಬರ್ 1, 2025 ರಂದು ಪಾಕಿಸ್ತಾನದ ವಿನಂತಿಯ ನಾಲ್ಕು ಗಂಟೆಗಳೊಳಗೆ ಭಾರತವು ಓವರ್ಫ್ಲೈಟ್ ಅನುಮತಿಯನ್ನು ನೀಡಿತ್ತು. ಇದನ್ನು ಭಾರತೀಯ ಸರ್ಕಾರಿ ಮೂಲಗಳು ಮತ್ತು ವಿವಿಧ ಮಾಧ್ಯಮಗಳು ದೃಢಪಡಿಸಿವೆ.
ದಿಟ್ವಾ ಚಂಡಮಾರುತವು 25 ಜಿಲ್ಲೆಗಳಲೆಲ್ಲೆಡೆ ತೀವ್ರ ಮಳೆ ಮತ್ತು ಭೂಕುಸಿತಗಳನ್ನುಂಟುಮಾಡಿದ ಹಿನ್ನೆಲೆಯಲ್ಲಿ ಶ್ರೀಲಂಕಾ ಎರಡು ದಶಕಗಳಲ್ಲಿನ ಅತ್ಯಂತ ಭೀಕರ ಪ್ರವಾಹವನ್ನು ಎದುರಿಸುತ್ತಿದೆ, ಇದು ಸುಮಾರು ಒಂದು ಮಿಲಿಯ ಜನರ ಮೇಲೆ ಪರಿಣಾಮ ಬೀರಿದ್ದು 400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಅಥವಾ ಕಾಣೆಯಾಗಿದ್ದಾರೆ. ನವೆಂಬರ್ 30, 2025 ರಂದು ಪೋಸ್ಟ್ ಮಾಡಿದ ವಿಶ್ವಸಂಸ್ಥೆಯ ವರದಿಯ ಪ್ರಕಾರ, “ಶೋಧ ಮತ್ತು ರಕ್ಷಣಾ ಪ್ರಯತ್ನಗಳು ಮುಂದುವರೆಯುತ್ತಿರುವ ಈ ಸಮಯ 51,000 ಕ್ಕೂ ಹೆಚ್ಚು ಕುಟುಂಬಗಳ 180,000 ಕ್ಕೂ ಹೆಚ್ಚು ಜನರು ಸರ್ಕಾರ ನಡೆಸುತ್ತಿರುವವ 1,094 ಸುರಕ್ಷತಾ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.” ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಇದರ ನಂತರ, ಅನುಮೋದನೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಾವು “ಪಾಕಿಸ್ತಾನದ ಮಾನವೀಯ ನೆರವಿಗೆ ಭಾರತ ಅನುಮೋದನೆ” ಎಂಬ ಪದಗಳನ್ನು ಬಳಸಿ ಕೀವರ್ಡ್ ಹುಡುಕಾಟವನ್ನು ನಡೆಸಿದೆವು. ಭಾರತದ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆ ಸೇರಿದಂತೆ ಹಲವಾರು ವರದಿಗಳು ಪಾಕಿಸ್ತಾನದ ಸುಳ್ಳು ಹೇಳಿಕೆಯನ್ನು ವಿರೋಧಿಸಿವೆ. ಕೆಳಗಿನ ಸ್ಕ್ರೀನ್ಶಾಟ್ ನೋಡಿ-
ಮೇಲಿನ ಪತ್ರಿಕಾ ಪ್ರಕಟಣೆಯ ಪ್ರಕಾರ, ಪಾಕಿಸ್ತಾನವು ಡಿಸೆಂಬರ್ 1 ರಂದು ಇಸ್ಲಾಮಾಬಾದ್ನಲ್ಲಿರುವ ಭಾರತೀಯ ಹೈಕಮಿಷನ್ ಮೂಲಕ 1300 ಗಂಟೆಗಳ ಸಮಯಕ್ಕೆ ಓವರ್ಫ್ಲೈಟ್ ವಿನಂತಿಯನ್ನು ಸಲ್ಲಿಸಿತು. ಪರಿಹಾರ ಸಾಮಗ್ರಿಗಳನ್ನು ಸಾಗಿಸುವ ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ (PIA) ವಿಮಾನದ ಪ್ರಸ್ತಾವಿತ ಪ್ರಯಾಣದ ವೇಳಾಪಟ್ಟಿಗೆ ಬದ್ಧವಾಗಿ ಭಾರತ ಅದೇ ದಿನ 1730 ಗಂಟೆಗೆ ಅದನ್ನು ಅನುಮೋದಿಸಿತು. ವಿಳಂಬದ ಕುರಿತಾದ ಪಾಕಿಸ್ತಾನದ ಹೇಳಿಕೆಗಳನ್ನು ಭಾರತವು “ಹಾಸ್ಯಾಸ್ಪದ” ಮತ್ತು “ಭಾರತ ವಿರೋಧಿ ತಪ್ಪು ಮಾಹಿತಿ” ಎಂದು ಕರೆದಿದೆ.
ನಂತರ ನಾವು ಮಾಧ್ಯಮ ವರದಿಗಳನ್ನು ಪರಿಶೀಲಿಸಿದಾಗ, ಶ್ರೀಲಂಕಾದ ಮಾಧ್ಯಮ ‘ದಿ ಐಲ್ಯಾಂಡ್’ ಸೇರಿದಂತೆ ಹಲವಾರು ಮಾಧ್ಯಮಗಳು ಇದನ್ನು ದೃಢಪಡಿಸಿವೆ. “ಚಂಡಮಾರುತ ಪೀಡಿತ ಶ್ರೀಲಂಕಾಕ್ಕೆ ಪರಿಹಾರ ಸಾಮಗ್ರಿಗಳನ್ನು ಸಾಗಿಸುವ ಪಾಕಿಸ್ತಾನದ ಸಹಾಯ ವಿಮಾನಕ್ಕೆ ನವದೆಹಲಿಯು ತ್ವರಿತ ಅನುಮತಿ ನೀಡಿದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವರದಿಯನ್ನು ಇಲ್ಲಿ ನೋಡಿ.

(ಕೃಪೆ: ‘ದಿ ಐಲ್ಯಾಂಡ್’)
ಡಿಸೆಂಬರ್ 1, 2025 ರಂದು, ಶ್ರೀಲಂಕಾಕ್ಕೆ ತುರ್ತು ನೆರವು ಮತ್ತು ಸಹಾಯಕ್ಕಾಗಿ ಭಾರತವು ಆಪರೇಷನ್ ಸಾಗರ್ ಬಂಧು ಅನ್ನು ಕೈಗೊಂಡಿತು. MEA ಭಾರತದ ಅಧಿಕೃತ ಪತ್ರಿಕಾ ಪ್ರಕಟಣೆಯ ಪ್ರಕಾರ, “ನಮ್ಮ ಹತ್ತಿರದ ಕಡಲ ನೆರೆರಾಷ್ಟ್ರಕ್ಕೆ ‘ತುರ್ತು ಹುಡುಕಾಟ ಮತ್ತು ರಕ್ಷಣೆ’ ಮತ್ತು ‘ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (HADR)’ ಬೆಂಬಲವನ್ನು ಒದಗಿಸಲು 28 ನವೆಂಬರ್ 2025 ರಂದು ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.” ಇದರ ಒಂದು ಭಾಗವನ್ನು ಕೆಳಗೆ ನೋಡಿ-

ಹೀಗಾಗಿ, ಹೇಳಿಕೆ ಸುಳ್ಳು.
******************************************************
ಇದನ್ನೂ ಓದಿ:
ಈ ವೀಡಿಯೊದಲ್ಲಿ ಭಾರತೀಯ ಸೇನಾ ಮುಖ್ಯಸ್ಥರು ಸೋನಮ್ ವಾಂಗ್ಚುಕ್ಗೆ ಸಂತಾಪ ಸೂಚಿಸಿದರೇ? ಸತ್ಯ ಪರಿಶೀಲನೆ
Digiteye Kannada Fact Checkers