Don't Miss

ಭಾರತ ಸರ್ಕಾರವು ಅರುಣಾಚಲ ಮತ್ತು ಲಡಾಖ್ ಅನ್ನು ಚೀನಾಕ್ಕೆ ಶರಣಾಗಿಸಿದೆ ಎಂದು CDS ಸಿಬ್ಬಂದಿ ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ವಾಯುಪಡೆಯ ದುರ್ಬಲತೆಯಿಂದಾಗಿ ಭಾರತ ಸರ್ಕಾರವು ಅರುಣಾಚಲ ಮತ್ತು ಲಡಾಖ್ ಅನ್ನು ಚೀನಾಕ್ಕೆ ಶರಣಾಗಿಸಿದೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆಂಬಂತೆ ವೀಡಿಯೊ ತೋರಿಸುತ್ತದೆ.

ಕಡೆನುಡಿ/Conclusion:ಹೇಳಿಕೆ ಸಂಪೂರ್ಣವಾಗಿ ಸುಳ್ಳು. ವೀಡಿಯೊವನ್ನು AI ಮೂಲಕ ಮಾರ್ಪಡಿಸಲಾಗಿದೆ ಮತ್ತು CDS ಜನರಲ್ ಅನಿಲ್ ಚೌಹಾಣ್ ಈ ಮಾತುಗಳನ್ನು ಹೇಳಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.

ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು– Five rating

******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

 ಅಥವಾ ಕೆಳಗಿನ ಲೇಖನವನ್ನು ಓದಿ.
******************************************************

ದುರ್ಬಲ ವಾಯುಪಡೆಯ ಕಾರಣದಿಂದಾಗಿ ಭಾರತ ಸರ್ಕಾರವು ಅರುಣಾಚಲ ಮತ್ತು ಲಡಾಖ್ ಅನ್ನು ಚೀನಾಕ್ಕೆ ಹೇಗೆ ಶರಣಾಗಿಸಿದೆ ಎಂಬುದರ ಕುರಿತು ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾದ ಜನರಲ್ ಅನಿಲ್ ಚೌಹಾಣ್ ಮಾತನಾಡುವ ಕ್ಲಿಪ್ ಅನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಫೇಸ್‌ಬುಕ್ ಬಳಕೆದಾರ ‘ಮಿಲಿಟರಿ ಪೊಲಿಟಿಕಲ್ ಅಫೇರ್ಸ್’ ಕೆಳಗೆ ಕಾಣುವ ವೀಡಿಯೊದೊಂದಿಗೆ ಅಂತಹ ಒಂದು ಹೇಳಿಕೆಯನ್ನು ಹಂಚಿಕೊಂಡಿದ್ದಾರೆ:

ವಿಡಿಯೋದಲ್ಲಿನ ನಿಖರವಾದ ಕಾಮೆಂಟ್‌ಗಳು ಹೀಗಿವೆ: “ನಾವು ಎಂದಿಗೂ ಭರವಸೆ ಕಳೆದುಕೊಳ್ಳಬಾರದು ಎಂದು ನಮ್ಮ ನೌಕಾ ಅಧಿಕಾರಿಗಳಿಗೆ ನಾನು ಭರವಸೆ ನೀಡಲು ಬಯಸುತ್ತೇನೆ. ನಮ್ಮ ದುರ್ಬಲ ವಾಯುಪಡೆಯಿಂದಾಗಿ ಭಾರತ ಸರ್ಕಾರವು ಅರುಣಾಚಲ ಮತ್ತು ಲಡಾಖ್ ಅನ್ನು ಚೀನಾಕ್ಕೆ ಶರಣಾಗಿಸಿದೆ ಎಂದು ನನಗೆ ತಿಳಿದಿದೆಯಾದರೂ ಭಾರತ ನೌಕಾಪಡೆ ದುರ್ಬಲವಾಗಿಲ್ಲ ಎಂಬುದು ಖಚಿತ. ಪಾಕಿಸ್ತಾನವು ಭಾರತದ ಯಾವುದೇ ಬಂದರು ನಗರಕ್ಕೆ ಎಂದಿಗೂ ಹಾನಿಯುಂಟು ಮಾಡಲು ಸಾಧ್ಯವಿಲ್ಲ. ಮೇ 10 ರಂದು ಸಹ ಪಾಕಿಸ್ತಾನಿ ನೌಕಾಪಡೆಯ ಹಡಗುಗಳು ಗುಜರಾತ್ ಅನ್ನು ತಲುಪಲು ಸಾಧ್ಯವಾಗಲಿಲ್ಲ, ಅವರ ಡ್ರೋನ್‌ಗಳು ತಲುಪಿದವು, ಅದು ವಾಯು ರಕ್ಷಣೆಯ ವೈಫಲ್ಯ, ನಮ್ಮದಲ್ಲ.”(Sic)

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ, ಅದನ್ನು ಇಲ್ಲಿ ನೋಡಬಹುದು:

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸಂಪೂರ್ಣವಾಗಿ ಸುಳ್ಳು ಎಂದು ಕಂಡುಕೊಂಡಿತು. ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಅಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ಪುರಾವೆಗಳು ಅಥವಾ ವರದಿಗಳಿಲ್ಲ. ವೀಡಿಯೊದ ಆಡಿಯೊವನ್ನು AI ಬಳಸಿ ಮಾರ್ಪಡಿಸಲಾಗಿದೆ, ಈ ಡೀಪ್‌ಫೇಕ್ ವೀಡಿಯೊ ನಿಜವಲ್ಲ.

ವಿವರಗಳು:

ಹೇಳಿಕೆಗಳ ಬಗ್ಗೆ ತಿಳಿಯಲು ನಾವು ಮೊದಲು “ಭಾರತ ಅರುಣಾಚಲ ಮತ್ತು ಲಡಾಖ್ ಶರಣಾಗಿಸಿದ ಕುರಿತು CDS ಅನಿಲ್ ಚೌಹಾಣ್ ಹೇಳಿಕೆಗಳು” ಎಂಬ ಪದಗುಚ್ಛದೊಂದಿಗೆ ಅಂತರ್ಜಾಲ ಹುಡುಕಾಟವನ್ನು ನಡೆಸಿದೆವು. ಅಂತಹ ಹೇಳಿಕೆಯನ್ನು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ಮಾಧ್ಯಮಗಳು ಅಥವಾ ಸರ್ಕಾರಿ ಮೂಲಗಳಿಂದ ನಮಗೆ ಯಾವುದೇ ವರದಿಗಳು ದೊರಕಿಲ್ಲ. ಇದನ್ನು ಸೂಚಿಸುವ ವಿಶ್ವಾಸಾರ್ಹ ವಾಹಿನಿಗಳ ಯಾವುದೇ ವೀಡಿಯೊಗಳು ಕೂಡ ಲಭ್ಯವಿಲ್ಲ.

ಮುಂದೆ ನಾವು ವೀಡಿಯೊದ ಮೂಲದ ಬಗ್ಗೆ ತಿಳಿದುಕೊಳ್ಳಲು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಹುಡುಕಾಟವು ನಮ್ಮನ್ನು 29 ನವೆಂಬರ್, 2025 ರಂದು ಭಾರತೀಯ ನೌಕಾಪಡೆಯು ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊಗೆ ಕರೆದೊಯ್ಯಿತು. ವೀಡಿಯೊದ ಶೀರ್ಷಿಕೆ: “ಪಾಸಿಂಗ್ ಔಟ್ ಪರೇಡ್ ಆಟಂ ಟರ್ಮ್ 2O25” ಮತ್ತು 1:46:38 ರಿಂದ ವೀಡಿಯೊವನ್ನು ನೋಡಿದರೆ CDS ಜನರಲ್ ಅನಿಲ್ ಚೌಹಾಣ್  ಮಾತನಾಡುತ್ತಿರುವ ನಿಖರವಾದ ಕೀಫ್ರೇಮ್‌ಗಳಿಗೆ ಹೊಂದಾಣಿಕೆಯಾಗುತ್ತದೆ. ವೀಡಿಯೊ ಮತ್ತು ಸ್ಕ್ರೀನ್‌ಶಾಟ್ ಕೆಳಗೆ ನೋಡಿ-

ಆದರೆ, ಅವರ ಭಾಷಣವು- ಅಸಮರ್ಥತೆಯು ಜೀವಗಳನ್ನು ಹೇಗೆ ಬಲಿ ತೆಗೆದುಕೊಳ್ಳುತ್ತದೆ ಮತ್ತು ಈ ಕಾರಣಕ್ಕಾಗಿ, ವೃತ್ತಿಪರ ಶ್ರೇಷ್ಠತೆಯು ಒಂದು ಕರ್ತವ್ಯ, ಆಯ್ಕೆಯಲ್ಲ ಎಂಬುದರ ಕುರಿತು ಆಗಿತ್ತು. ಪಡೆಯು ಶಾಂತಿಯಲ್ಲಿ ಸಿದ್ಧ ಮತ್ತು ಯುದ್ಧದಲ್ಲಿ ವಿಜಯಶಾಲಿಯಾಗಿ ಉಳಿಯುವಂತಾಗಲು ಸಂಪೂರ್ಣ ಸಮರ್ಪಣೆಯ ಕುರಿತು ಅವರು ಒತ್ತಿ ಹೇಳಿದರು. ತಂತ್ರಜ್ಞಾನವು ಈಗ ತಂತ್ರ ಮತ್ತು ಸಮರೋಪಾಯಗಳನ್ನು ರೂಪಿಸುವುದರಿಂದ ಜಂಟಿ ಬಹು-ಡೊಮೇನ್ ಕಾರ್ಯಾಚರಣೆಗಳನ್ನು ಅತ್ಯಗತ್ಯಗೊಳಿಸುತ್ತದೆ, ಏಕೆಂದರೆ ಯಾವುದೇ ಸೇವೆಯು ಏಕಾಂಗಿಯಾಗಿ ಯುದ್ಧವನ್ನು ಗೆಲ್ಲಲು ಸಾಧ್ಯವಿಲ್ಲ. ಭಾರತವು ಭೂಖಂಡ ಮತ್ತು ಸಮುದ್ರ ಎರಡೂ ಆಗಿದ್ದರೂ, ಅದರ ಭವಿಷ್ಯವು ಸಮುದ್ರದಲ್ಲಿ ಸುರಕ್ಷಿತವಾಗಿರುತ್ತದೆ ಮತ್ತು ಭಾರತೀಯ ನೌಕಾಪಡೆಯು ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಮುಂದುವರೆದು ದೃಢವಾಗಿ ನುಡಿದರು.

ಇದನ್ನು ಸುದ್ದಿ ಸಂಸ್ಥೆ ANI ದೃಢಪಡಿಸಿದೆ, ಮೂಲ ಕ್ಲಿಪ್ ಅನ್ನು ಅದರ X ಖಾತೆಯಲ್ಲಿ ಮತ್ತು ಭಾರತೀಯ ನೌಕಾಪಡೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ದ ಹಿಂದೂ ಪ್ರಕಟಿಸಿದ ಮತ್ತೊಂದು ವರದಿಯು “ಮಿಡ್‌ಶಿಪ್‌ಮೆನ್ ಮತ್ತು ಕೆಡೆಟ್‌ಗಳ ಸಾಧನೆಗಾಗಿ CDS ಅನಿಲ್ ಚೌಹಾಣ್ ಅಭಿನಂದಿಸಿದರು” ಎಂದು ದೃಢಪಡಿಸಿದೆ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಕೊನೆಯದಾಗಿ, ನಾವು ಹೇಳಿಕೆಯಿಂದ ಧ್ವನಿಮುದ್ರೆಯನ್ನು ತೆಗೆದು ಅದನ್ನು ರಿಸೆಂಬಲ್ AIನ ಆಡಿಯೊ ಡಿಟೆಕ್ಟರ್ ನಲ್ಲಿ ಹಾಕಿ ಪರೀಕ್ಷಿಸುದೆವು. ಫಲಿತಾಂಶಗಳು ನಕಲಿ ಎಂದು ತಿಳಿದುಬಂದಿದೆ, ಮತ್ತು ಇದು AI ಬಳಸಿ ಆಡಿಯೊವನ್ನು ಬದಲಾಯಿಸಲಾಗಿದೆ ಎಂದು ಸಾಬೀತುಪಡಿಸುತ್ತದೆ. ಫಲಿತಾಂಶಗಳನ್ನು ಕೆಳಗೆ ವೀಕ್ಷಿಸಿ –

ಹೀಗಾಗಿ, ಹೇಳಿಕೆ ಸಂಪೂರ್ಣವಾಗಿ ಸುಳ್ಳು.

******************************************************
ಇದನ್ನೂ ಓದಿ:

ಭಾರತೀಯ ಸೇನೆಯು LoC ಉದ್ದಕ್ಕೂ ಬಾಲಾಕೋಟ್ ಸೆಕ್ಟರ್‌ನಲ್ಲಿ ಹಲವಾರು ನೆಲಬಾಂಬ್‌ಗಳನ್ನು ಸ್ಫೋಟ ಮಾಡಿತೇ? ಸತ್ಯ ಪರಿಶೀಲನೆ

ಈ ವೀಡಿಯೊದಲ್ಲಿ ತೆಲಂಗಾಣದಲ್ಲಿ ಕ್ಯಾಥೋಲಿಕ್ ಶಾಲೆಯನ್ನು ‘RSS ಉಗ್ರಗಾಮಿಗಳು ಧ್ವಂಸಗೊಳಿಸುವುದನ್ನು’ ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

 

Leave a Reply

Your email address will not be published. Required fields are marked *

*