Don't Miss

ಈ ವೀಡಿಯೊದಲ್ಲಿ ಮಗುವೊಂದು ಸಂವಾದದ ಸಮಯದಲ್ಲಿ ಮೋದಿಯವರ ಮೇಲೆ ‘ವೋಟ್ ಚೋರಿ’ಯ ಆರೋಪ ಹೊರಿಸಿತೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಸಂವಾದದ ಸಮಯದಲ್ಲಿ ಒಂದು ಮಗು ಪ್ರಧಾನಿ ನರೇಂದ್ರ ಮೋದಿಯವರನ್ನು “ವೋಟ್ ಚೋರಿ”ಗಾಗಿ ಆರೋಪಿಸಿದೆ ಎಂದು ವೈರಲ್ ವೀಡಿಯೊವೊಂದರಲ್ಲಿ ಹೇಳಲಾಗಿದೆ.

ಕಡೆನುಡಿ/Conclusion:  ತಪ್ಪು ನಿರೂಪಣೆ. “ವೋಟ್ ಚೋರಿ” ಪ್ರತಿಕ್ರಿಯೆಯನ್ನು ಸೇರಿಸಲು ಮತ್ತು ದಾರಿತಪ್ಪಿಸುವ ಉಪಶೀರ್ಷಿಕೆಗಳೊಂದಿಗೆ ವೀಡಿಯೊದಲ್ಲಿ ಡಿಜಿಟಲ್ ತಿದ್ದುಪಡಿ ಮಾಡಲಾಗಿದೆ.

ರೇಟಿಂಗ್/Rating: ತಪ್ಪು ನಿರೂಪಣೆ —

************************************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

****************************************************************

ವಿವಿಧ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿರುವ ವೀಡಿಯೊದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಕ್ರಮವೊಂದರಲ್ಲಿ ಮಕ್ಕಳೊಂದಿಗೆ ಮಾತಕತೆ ನಡೆಸುತ್ತಿರುವುದನ್ನು ತೋರಿಸಲಾಗಿದೆ. ದೃಢೀಕೃತ X ಬಳಕೆದಾರ ‘sanjeev_goyal’ ಸೆಪ್ಟೆಂಬರ್ 2, 2025 ರಂದು ಪೋಸ್ಟ್ ಮಾಡಿರುವ ಕ್ಲಿಪ್ ಜೊತೆಗೆ ಉಪಶೀರ್ಷಿಕೆಗಳು ಮತ್ತು ಎಮೋಜಿಗಳು ಕಂಡುಬರುತ್ತವೆ.

ಪೋಸ್ಟ್ ಅನ್ನು ಕೆಳಗೆ ನೋಡಿ

 

ಈ ಕ್ಲಿಪ್‌ನಲ್ಲಿ, ಪ್ರಧಾನಿ ಮೋದಿಯವರು ತಮ್ಮ ಪರಿಚಯವಿದೆಯೇ ಎಂದು ಮಕ್ಕಳಲ್ಲಿ ಕೇಳುತ್ತಾರೆ, ಅದಕ್ಕೆ ಮಕ್ಕಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ ಮತ್ತು ಅವರನ್ನು ಟಿವಿಯಲ್ಲಿ ನೋಡಿರುವುದಾಗಿ ತಿಳಿಸುತ್ತಾರೆ. ಟಿವಿಯಲ್ಲಿ ಏನು ನೋಡಿದರೆಂದು ಕೇಳಿದಾಗ, ಒಂದು ಮಗು “ವೋಟ್ ಚೋರಿ” (ಮತ ಕಳ್ಳತನ) ಎಂದು ಉತ್ತರಿಸುತ್ತದೆ ಎಂದು ಆರೋಪಿಸಲಾಗಿದೆ.

ಆಗಸ್ಟ್ 31, 2025 ರಂದು ‘Politicx2029’ ಎಂಬ ದೃಢೀಕೃತ X ಬಳಕೆದಾರರು ಇದೇ ರೀತಿಯ ಹೇಳಿಕೆಯನ್ನು ನೀಡಿದ್ದು, ಇದು ಸುಮಾರು 106,200 ವೀಕ್ಷಣೆಗಳನ್ನು ಪಡೆದುಕೊಂಡಿದೆ. ಕ್ಲಿಪ್ ಅನ್ನು ಇಲ್ಲಿ ನೋಡಿ.

 

 “ಮತದಾರ ಅಧಿಕಾರ ಯಾತ್ರೆ” ಅಭಿಯಾನವನ್ನೂ ಸಹ ಕೈಗೊಂಡ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಮತಗಳ ಕುರಿತಾದ ತಂತ್ರಕಾರಿಕೆಯ ಕುರಿತು ಆರೋಪ ಹೊರಿಸಿದ ನಂತರ, ಮಕ್ಕಳು ಮೋದಿಯವರನ್ನು ಸಾರ್ವಜನಿಕವಾಗಿ ಅಪಹಾಸ್ಯ ಮಾಡುತ್ತಿದ್ದರು ಎಂದು ಈ ಹೇಳಿಕೆ ಸೂಚಿಸುತ್ತದೆ. ಬಿಹಾರ, ಮಹಾರಾಷ್ಟ್ರ ಮತ್ತು ಕರ್ನಾಟಕದಂತಹ ರಾಜ್ಯಗಳಲ್ಲಿ ಮತದಾರರ ಪಟ್ಟಿ ತಿರುಚುವಿಕೆಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷ (BJP) ಮತ್ತು ಭಾರತೀಯ ಚುನಾವಣಾ ಆಯೋಗದ (ECI) ವಿರುದ್ಧ ಗಾಂಧಿ ಆರೋಪ ಮಾಡಿದರು.

FACT CHECK 

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ಪರಿಶೀಲಿಸಿದಾಗ, ವೀಡಿಯೊವನ್ನು ತಿರುಚಿ ತಿದ್ದಲಾಗಿದೆ ಎಂದು ಕಂಡುಬಂತು. “ವೋಟ್ ಚೋರಿ” ಪ್ರತಿಕ್ರಿಯೆಯನ್ನು ಸೇರಿಸಲು ಮತ್ತು ದಾರಿತಪ್ಪಿಸುವ ಉಪಶೀರ್ಷಿಕೆಗಳನ್ನು ಸೇರಿಸಲು ವೀಡಿಯೊವನ್ನು ಡಿಜಿಟಲ್ ಆಗಿ ತಿದ್ದಲ್ಲಗಿದೆ. ಮೂಲ ದೃಶ್ಯಾವಳಿಯು ಜುಲೈ 29, 2023 ರಂದು ಪ್ರಧಾನಿ ಮೋದಿಯವರು ದೆಹಲಿಯ ಭಾರತ್ ಮಂಟಪದಲ್ಲಿ ಅಖಿಲ ಭಾರತೀಯ ಶಿಕ್ಷಾ ಸಮಾಗಮವನ್ನು ಉದ್ಘಾಟಿಸಿದಾಗಿನಿಂದ ಪಡೆದಿರುವಂಥದ್ದು.

ನಾವು ಅಧಿಕೃತ ದೃಢೀಕರಣಗಳಿಗಾಗಿ ಹುಡುಕಿದಾಗ, ನಮಗೆ ಅಧಿಕೃತ PIB ವರದಿ ಸಿಕ್ಕಿತು.  “ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಇಂದು ಭಾರತ್ ಮಂಟಪದಲ್ಲಿ ನಡೆದ ಅಖಿಲ ಭಾರತೀಯ ಶಿಕ್ಷಾ ಸಮಾಗಮದ ಸಂದರ್ಭದಲ್ಲಿ ಬಾಲ್ ವಾಟಿಕಾದಲ್ಲಿ ಮಕ್ಕಳೊಂದಿಗೆ ಸಮಯ ಕಳೆದರು” ಎಂದು ಜುಲೈ 29, 2023 ರಂದು ಪ್ರಕಟವಾದ ಪತ್ರಿಕಾ ಪ್ರಕಟಣೆಗಳು ಹೇಳುತ್ತದೆ.

ಪತ್ರಿಕಾ ಪ್ರಕಟಣೆಯು ಪ್ರಧಾನ ಮಂತ್ರಿಯವರು ತಮ್ಮ ಅಧಿಕೃತ X ಖಾತೆಯ (ಆಗ ಟ್ವಿಟರ್) ಮಾಡಿದ ಪೋಸ್ಟ್ ಅನ್ನು ಸಹ ಸೆರೆಹಿಡಿದಿದೆ. ಜುಲೈ 29, 2023 ರಂದು ಮಾಡಿದ ಪೋಸ್ಟ್‌ಗೆ ಈ ಕೆಳಗಿನ ಶೀರ್ಷಿಕೆ ನೀಡಲಾಗಿದೆ: “मासूम बच्चों के साथ आनंद के कुछ पल! इनकी ऊर्जा और उत्साह से मन उमंग से भर जाता है।” ಕನ್ನಡದ ಅನುವಾದ ಹೀಗಿದೆ: “ಮುಗ್ಧ ಮಕ್ಕಳೊಂದಿಗೆ ಕೆಲವು ಸಂತಸದ ಕ್ಷಣಗಳು! ಅವರ ಶಕ್ತಿ ಮತ್ತು ಉತ್ಸಾಹವು ಮನದಲ್ಲಿ ಉತ್ಸಾಹ ತುಂಬುತ್ತದೆ.”

 

ಹೀಗಾಗಿ, ಹೇಳಿಕೆ ದಾರಿತಪ್ಪಿಸುವಂತಿದೆ ಮತ್ತು ಮಗು ಅಂತಹ ಯಾವುದೇ ಮಾತನ್ನು ಹೇಳಿಲ್ಲ. ವೀಡಿಯೊದ ತಿದ್ದುಪಡಿ ಮಾಡಲಾದ ಭಾಗದಲ್ಲಿ “ವೋಟ್ ಚೋರಿ” ಎಂಬ ಸಾಲನ್ನು ತೋರಿಸಲು ನಕಲಿ ಆಡಿಯೋ ಮತ್ತು ಹೆಚ್ಚುವರಿ ಪಠ್ಯವನ್ನು ಓವರ್‌ಲೇ ಮಾಡಲಾಗಿದೆ. ಆದ್ದರಿಂದ, ಇದು ಸುಳ್ಳು ಹೇಳಿಕೆ.

*********************************************************************************

ಇದನ್ನೂ ಓದಿ:

ಮಾಲ್ಡೀವ್ಸ್‌ನ ರಕ್ಷಣಾ ಸಚಿವಾಲಯದ ಕಟ್ಟಡದಲ್ಲಿ ‘SURRENDER’ (ಶರಣಾಗತಿ) ಎಂಬ ಪದದೊಂದಿಗೆ ಮೋದಿಯವರ ಭಾವಚಿತ್ರವನ್ನು ಪ್ರದರ್ಶಿಸಲಾಯಿತೇ? ಸತ್ಯ ಪರಿಶೀಲನೆ

1960ರ ಸಿಂಧೂ ನೀರಿನ ಮಾತುಕತೆಯಲ್ಲಿ ಸರ್ದಾರ್ ಪಟೇಲ್ ರವರ ಪಾತ್ರದ ಬಗ್ಗೆ ಅಮಿತ್ ಶಾ ಮಾತನಾಡಿದ್ದರೇ? ಸತ್ಯ ಪರಿಶೀಲನೆ

 

Leave a Reply

Your email address will not be published. Required fields are marked *

*