Don't Miss

ತಿದ್ದುಪಡಿ ನೀತಿ

ಸತ್ಯವನ್ನು ಹೊರತರುವುದು ನಮ್ಮ ಪ್ರಾಮಾಣಿಕ ಪ್ರಯತ್ನವಾಗಿದ್ದರೂ, ನಮ್ಮ ಪ್ರಯತ್ನಗಳಲ್ಲಿ ತಪ್ಪುಗಳು ಉಂಟಾಗಬಹುದು. ನಾವು ತಪ್ಪು ಎಂದಾದಾಗಲೆಲ್ಲ ಅದನ್ನು ಮುಕ್ತವಾಗಿ ಹೇಳುತ್ತೇವೆ ಮತ್ತು ತಪ್ಪು ಸುದ್ದಿಗಳನ್ನು ಸರಿಪಡಿಸಿಕೊಳ್ಳುತ್ತೇವೆ. ನಾವು ತಿದ್ದುಪಡಿಯ ಬಗ್ಗೆ ನಮ್ಮ ಓದುಗರಿಗೆ ತಕ್ಷಣವೇ ತಿಳಿಸುತ್ತೇವೆ ಮತ್ತು ಟ್ವಿಟರ್ ಮತ್ತು ವಾಟ್ಸಾಪ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ವಾಸ್ತವವನ್ನು ಇರಿಸುತ್ತೇವೆ. ಓದುಗರು ಮತ್ತು ಸಾರ್ವಜನಿಕರಿಂದ ರಚನಾತ್ಮಕ ಪ್ರತಿಕ್ರಿಯೆ ಮತ್ತು ಟೀಕೆಗಳನ್ನು ಸ್ವೀಕರಿಸಲು ನಾವು ಸದಾ ಮುಕ್ತರಾಗಿದ್ದೇವೆ.

ನಾವು ಸತ್ಯ ಪರಿಶೀಲನೆಗಳನ್ನು ತಕ್ಷಣವೇ ಸರಿಪಡಿಸಲು ಪ್ರಯತ್ನಿಸುತ್ತೇವೆಯಾದರೂ ಕೆಲವು ಸಂದರ್ಭಗಳಲ್ಲಿ ಪರಿಷ್ಕರಣೆ, ಮರು-ಪರಿಶೀಲನೆ ಮತ್ತು ಮರು-ಪ್ರಕಟಣೆಯಿಂದಾಗಿ ತಿದ್ದುಪಡಿ ಪ್ರಕ್ರಿಯೆಯು ಕನಿಷ್ಠ ಹತ್ತು ದಿನಗಳನ್ನು ತೆಗೆದುಕೊಳ್ಳಬಹುದು. ಆದರೆ, ಸುದ್ದಿಗೆ ಅಗತ್ಯವಿರುವ ಮಾಹಿತಿಯ ಹುಡುಕಾಟವನ್ನು ಅವಲಂಬಿಸಿ ಅಥವಾ ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಇನ್ನೂ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು.

ನಿಮ್ಮ ದೂರುಗಳನ್ನು ಕಳುಹಿಸಿ:

ನಮ್ಮ ಯಾವುದೇ ಪ್ರಕಟಿತ ಸತ್ಯ-ಪರಿಶಿಲನೆಗಳನ್ನು ಸರಿಪಡಿಸಲು ತಮ್ಮ ದೂರುಗಳು ಅಥವಾ ಸಲಹೆಗಳನ್ನು ಇಮೇಲ್‌ಗೆ  ಕಳುಹಿಸಲು ನಾವು ನಮ್ಮ ಓದುಗರನ್ನು ಪ್ರೋತ್ಸಾಹಿಸುತ್ತೇವೆ: admin@digiteye.in.

ಅವರು ನಮ್ಮನ್ನು ವಾಟ್ಸಾಪ್ ಸಹಾಯವಾಣಿ ಸಂಖ್ಯೆಯ ಮೂಲಕವೂ ಸಂಪರ್ಕಿಸಬಹುದು –WhatsApp Helpline No.: 9632830256.

ನಮ್ಮ ತಿದ್ದುಪಡಿಗಳ ಪಟ್ಟಿ:

ನಮ್ಮ ಓದುಗರ ಸಲಹೆ-ಸೂಚನೆಗಳ ಆಧಾರದ ಮೇಲೆ ಡಿಜಿಟೈ ಇಂಡಿಯಾ ತಂಡವು ಸರಿಪಡಿಸಿರುವ ಎಲ್ಲಾ ಲೇಖನಗಳನ್ನು ಈ ಪುಟ ಒಳಗೊಂಡಿದೆ. ನಮ್ಮ ತಂಡವು ವರದಿಮಾಡಿರುವ ಹೇಳಿಕೆಗಳು ಅಥವಾ ಘಟನೆಗಳಿಗೆ ಸಂಬಂಧಿಸಿದಂತೆ ಯಾವುದೇ ಟೀಕೆಗಳು, ಸಲಹೆಗಳು ಅಥವಾ ಅಪ್‌ಡೇಟ್‌ಗಳನ್ನು ಮಾಡಲು ಮುಕ್ತರಾಗಿರಬೇಕೆಂಬ ನಮ್ಮ ನೀತಿಯ ಭಾಗವಾಗಿ, ನಮ್ಮ ಓದುಗರಿಗೆ ಇತ್ತೀಚಿನ ಸುದ್ದಿ ನೀಡಲು

ಸತ್ಯ-ಪರಿಶೀಲನೆಗಳ ಪ್ರಕಟಣೆಯ ನಂತರವೂ ನಾವು ನಿರಂತರವಾಗಿ ಪ್ರಯತ್ನಿಸುತ್ತೇವೆ.

ತಿದ್ದುಪಡಿಗಳು:

1. ಸುದ್ದಿಯ ಮೊದಲ ಆವೃತ್ತಿಯ ಶೀರ್ಷಿಕೆ: ‘ಸತ್ಯಕ್ಕೆ ನಕಲಿ ಸುದ್ದಿ ಎಂಬ ಪರದೆ, ಇದಕ್ಕಾಗಿ ಚಂದ್ರಬಾಬು ನಾಯ್ಡು ಆದರು ಟ್ರೋಲ್’. ಈ ಸುದ್ದಿಯನ್ನು ಸತ್ಯ ಪರಿಶೀಲನೆಗಾಗಿ ಕೈಗೆತ್ತಿಕೊಂಡಾಗ, ಮೂಲ ಟ್ವೀಟ್ ಕಣ್ಮರೆಯಾಯಿತು ಮತ್ತು ಏಕತೆಯ ಪ್ರತಿಮೆಯ ಹೆಸರನ್ನು ತೆಲುಗು ಭಾಷೆಯಲ್ಲಿ ಬಹಿರಂಗಪಡಿಸುವ ಹೊಸ ಫಲಕ ಕಂಡುಬಂದಿತು. ನಂತರ, ಪ್ರಾದೇಶಿಕ ಭಾಷೆಗಳಲ್ಲಿ ಹೆಸರನ್ನು ತೋರಿಸದೆ ಹಳೆಯ ಫಲಕದ ಬಗ್ಗೆ ಮೂಲ ಸಾಕ್ಷ್ಯಗಳು ಕಾಣಿಸಿಕೊಂಡಾಗ, ನಾವು ಸುದ್ದಿಯನ್ನು ಸರಿಪಡಿಸಿ ನಮ್ಮ ಓದುಗರಿಗೆ ಪುಟದಲ್ಲಿ ಸ್ಪಷ್ಟನೆ ನೀಡಿದ್ದೇವೆ.

ಸರಿಪಡಿಸಿದ ಆವೃತ್ತಿ:

https://digiteye.in/truth-given-fake-news-cover-up-chandrababu-naidu-trolled/

2.. ಸುದ್ದಿಯ ಮೊದಲ ಆವೃತ್ತಿಯು ಅಗ್ರ ‘ಜಾಹೀರಾತುದಾರ’ ಮತ್ತು ಅಗ್ರ  ‘ಬ್ರ್ಯಾಂಡ್’ ಎಂಬ ಪದವನ್ನು ಪ್ರತ್ಯೇಕಿಸಲು ವಿಫಲಗೊಂಡಿತ್ತು ಮತ್ತು ಆಡಳಿತ ಪಕ್ಷ ಬಿಜೆಪಿಯು ಅಗ್ರ ಟಿವಿ ಜಾಹೀರಾತುದಾರ ಎನ್ನುವ ಮೊದಲ ಹೇಳಿಕೆ ಹೊರಬಿತ್ತು. ಆದರೆ BARC ನೀಡಿದ ಎರಡು ಕೋಷ್ಟಕಗಳು  (ಈಗ ಸುದ್ದಿಯಲ್ಲಿ ಪ್ರಕಟಿಸಲಾಗಿದೆ) ವಿಭಿನ್ನವಾಗಿವೆ ಎಂದು ಕಂಡುಬಂದಾಗ, ನಾವು ನಮ್ಮ ಸುದ್ದಿಯನ್ನು ಬದಲಾಯಿಸಿ ಹಳೆಯ ಆವೃತ್ತಿಯಲ್ಲಿ ವಾಸ್ತವಾಶದ ದೋಷವಿದೆ ಎಂದು ಸ್ಪಷ್ಟವಾಗಿ ತಿಳಿಸಿ ಸರಿಪಡಿಸಿದ ಆವೃತ್ತಿಯನ್ನು ಬಿಡುಗಡೆ ಮಾಡಿದ್ದೇವೆ.

ಸರಿಪಡಿಸಿದ ಆವೃತ್ತಿ:

https://digiteye.in/bjp-not-top-advertiser-but-top-brand-in-tv-ads-whats-the-truth/

3. ಒರಿಸ್ಸಾದ ಬೋಲಂಗಿರ್‌ನಲ್ಲಿ ಹೆಲಿಪ್ಯಾಡ್‌ಗಾಗಿ ಅನುಮತಿ ಪಡೆಯದೆ ಹಲವಾರು ಮರಗಳನ್ನು ಕಡೆಯಲಾಗಿದೆ ಎಂದು ಸ್ಥಳೀಯ ವಿಭಾಗೀಯ ಅರಣ್ಯಾಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿತ್ತು ಮತ್ತು ತನಿಖೆಯ ಆದೇಶವಾಗಿತ್ತು. ಪಿಟಿಐ ನಂತರ ಕಥೆಯನ್ನು ತೆಗೆದುಹಾಕಿತು. ಮರಗಳನ್ನು ಕಡಿಯುವುದನ್ನು ತೋರಿಸುವ ಮೂಲ ವೀಡಿಯೊ ಮತ್ತು ಈ ಸ್ಥಳದಲ್ಲಿ ಪೊದೆಗಳನ್ನು ಕಡೆಯಲಾಗಿತ್ತು, ಈ ಸುದ್ದಿಗಳಲ್ಲಿ ಹೇಳಿಕೊಂಡಂತೆ  ಮರಗಳನ್ನಲ್ಲ ಎಂದು ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಮತ್ತೊಂದು TOI ಭುವನೇಶ್ವರ್ ಅವರ ಟ್ವೀಟ್ ನೊಂದಿಗೆ ಈ ಮೇಲಿನ ಸುದ್ದಿಯನ್ನು ಅಪ್ಡೇಟ್ ಮಾಡಲಾಗಿದೆ . ಹೇಳಿಕೆಯ ದೃಢೀಕರಣಕ್ಕಾಗಿ ನಾವು ಪ್ರಮುಖ ಮಾಧ್ಯಮ ಮೂಲಗಳನ್ನು ಬಳಸಿದ್ದೇವೆ. ಇದಲ್ಲದೆ, ಹೆಲಿಪ್ಯಾಡ್ ನಿರ್ಮಿಸಲಾಗಿರುವ ಪ್ರದೇಶದಲ್ಲಿ ಯಾವುದೇ ಮರಗಳಿರದ ಬೋಲಂಗಿರ್ ವೈಮಾನಿಕ ನಕ್ಷೆಯ ಹಳೆಯ ಚಿತ್ರವೂ ನಮಗೆ ದೊರಕಿತ್ತು. ನಮ್ಮ ಸರಿಪಡಿಸಿದ ಆವೃತ್ತಿಯಲ್ಲಿ ನಾವು ವಿಷಯಗಳನ್ನು ಅಳವಡಿಸಿಕೊಂಡಿದ್ದೇವೆ.

ಸರಿಪಡಿಸಿದ ಆವೃತ್ತಿ: One helipad for PM means cutting 1000 trees? What’s the truth?

4.ಮಿತ್ರೊಂ ಆ್ಯಪ್‌ ಭಾರತದ್ದು ಎಂಬ ಹೇಳಿಕೆಯ ಕುರಿತಾದ ಜೂನ್ 3, 2020 ರಂದು ಪ್ರಕಟಿಸಲಾದ ನಮ್ಮ ಸತ್ಯ ಪರಿಶೀಲನೆಯಾದ ಸುದ್ದಿಯಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಸೇರಿಸಿ ತಿದ್ದುಪಡಿ ಮಾಡಲಾಗಿದೆ. ಈ ಸುದ್ದಿಯನ್ನು ಮೊದಲ ಬಾರಿ ಜೂನ್ 3 ರಂದು ಪ್ರಕಟಿಸಿದ್ದಾಗ, ನಿಯಮಗಳ ಅನಾನುಸರಣೆಯನ್ನು ಕಾರಣ ನೀಡಿ ಗೂಗಲ್ ಈ  ಆ್ಯಪ್‌ ಅನ್ನು ತೆಗೆದುಹಾಕಿತ್ತು. ಆದರೆ, ಅದನ್ನು ಮರುಸ್ಥಾಪಿಸಲಾಗಿದೆ ಮತ್ತು ನಮ್ಮ ಸತ್ಯ-ಪರೀಕ್ಷಕರು ಪರಿಶೀಲಿಸಿರುವಂತೆ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ಈ ಕಂಪನಿಯು ಗೂಗಲ್ ಸ್ಟೋರ್ ಪುಟದಲ್ಲಿ ತಿಳಿಸಿದೆ. ನಾವು ನಮ್ಮ ಸುದ್ದಿಯನ್ನು ಸರಿಯಾಗಿ ಅಪ್ಡೇಟ್ ಮಾಡಿದ್ದು, ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಇದನ್ನು ನೋಡಬಹುದು:

ಸರಿಪಡಿಸಿದ ಆವೃತ್ತಿ: Is Mitron, new rival to Tik Tok, really an Indian made app? Fact Check

5. ಡೆಂಗ್ಯೂಗೆ ಚಿಕಿತ್ಸೆಯಾಗಿ ತೆಂಗಿನ ಎಣ್ಣೆಯ ಕುರಿತಾದ ನಮ್ಮ ಸುದ್ದಿಯನ್ನು ಆ ಹೇಳಿಕೆಯ ನಿಜಸ್ವರೂಪ ತೋರುವಂತೆ ಸ್ಪಷ್ಟವಾಗಿ ಪರಿಷ್ಕರಿಸಲಾಗಿದೆ. ಜುಲೈ 26, 2020ರ ಸುದ್ದಿಯು ಈ ಹೇಳಿಕೆಯನ್ನು ಎರಡು ಭಾಗಗಳಲ್ಲಿ ಪರಿಶೀಲಿಸಿತು– ಬ್ಯಾಕ್ಟೀರಿಯಾ ವಿರೋಧಿ ಎಂಬ ಹೇಳಿಕೆ ಮತ್ತು ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆಯಾಗಿ. ರೋಗಾಣುಗಳಿಂದ ಉಂಟಾಗುವ ಡೆಂಗ್ಯೂಗೆ ಚಿಕಿತ್ಸೆ ಎಂದು ಹೇಳಿಕೊಳ್ಳುವಾಗ ತೆಂಗಿನಕಾಯಿಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಅಂಶಗಳ ವಿಷಯವು ಅಸಂಬದ್ಧವಾಗಿರುವುದರಿಂದ ತೀರ್ಮಾನವನ್ನು ಪರಿಷ್ಕರಿಸಲಾಗಿದೆ. ನಾವು ಅನಗತ್ಯ ಭಾಗವನ್ನು ತೆಗೆದುಹಾಕಿದ್ದೇವೆ ಮತ್ತು ಬ್ಯಾಕ್ಟೀರಿಯಾ ವಿರೋಧಿ ಚಿಕಿತ್ಸೆಯು ರೋಗಾಣುಗಳಿಗೆ ಪರಿಹಾರವಲ್ಲ ಎಂದು ಸ್ಪಷ್ಟಪಡಿಸಿದ್ದೇವೆ.

ಸರಿಪಡಿಸಿದ ಆವೃತ್ತಿ: Coconut oil protects humans from dengue fever? Fact Check