Don't Miss

ಭಾರತ ವಿರುದ್ಧ ಪಾಕಿಸ್ತಾನ 2025 ಏಷ್ಯಾ ಕಪ್ ಪಂದ್ಯದ ಸಮಯದಲ್ಲಿ ಅನುರಾಗ್ ಠಾಕೂರ್, ಶಾಹಿದ್ ಅಫ್ರಿದಿ, ಜಯ್ ಶಾ ಮಾತನಾಡುತ್ತಿರುವುದು ಕಂಡುಬಂದಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಸೆಪ್ಟೆಂಬರ್ 14, 2025 ರಂದು ನಡೆದ ಭಾರತ ವಿರುದ್ಧ ಪಾಕಿಸ್ತಾನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದ ಸಮಯದಲ್ಲಿ ಅನುರಾಗ್ ಠಾಕೂರ್, ಶಾಹಿದ್ ಅಫ್ರಿದಿ ಮತ್ತು ಜಯ್ ಶಾ ಕುಳಿತಿರುವುದು ದೃಶ್ಯಗಳಲ್ಲಿ ಕಂಡುಬರುತ್ತದೆ.

ಕಡೆನುಡಿ/Conclusion:  ತಪ್ಪು ನಿರೂಪಣೆ. ಈ ಚಿತ್ರವು ಮಾರ್ಚ್-ಏಪ್ರಿಲ್ 2025 ರಲ್ಲಿ ನಡೆದ 2025ರ ICC ಚಾಂಪಿಯನ್ಸ್ ಟ್ರೋಫಿಯ ಹಳೆಯ ಚಿತ್ರವಾಗಿದೆ, ಇತ್ತೀಚಿನ ಏಷ್ಯಾ ಕಪ್ 2025ರ ಚಿತ್ರವಲ್ಲ.

ರೇಟಿಂಗ್/Rating: ತಪ್ಪು ನಿರೂಪಣೆ — 


2025 ರ ಏಷ್ಯಾ ಕಪ್ ಸಮಯದಲ್ಲಿ ಅನುರಾಗ್ ಠಾಕೂರ್, ಶಾಹಿದ್ ಅಫ್ರಿದಿ ಮತ್ತು ಜಯ್ ಶಾ ಒಟ್ಟಿಗೆ ಕುಳಿತಿರುವ ವೀಡಿಯೊಗಳನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. 2025 ರ ಏಷ್ಯಾ ಕಪ್ ಸಮಯದಲ್ಲಿ ಸೆಪ್ಟೆಂಬರ್ 14, 2025 ರಂದು ಭಾರತ-ಪಾಕಿಸ್ತಾನ ಪಂದ್ಯವು  UAEಯ ದುಬೈಯಲ್ಲಿರುವ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು. ಏಪ್ರಿಲ್ 2025 ರಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದಾಗಿ ಪಂದ್ಯದ ಸಮಯದಲ್ಲಿ ಹೆಚ್ಚಿದ ಉದ್ವಿಗ್ನತೆಯಿಂದಾಗಿ ಈ ಹೇಳಿಕೆ ವೈರಲ್ ಆಗುತ್ತಿದೆ.

ಪಂದ್ಯದ ನಂತರ, ಯಾದವ್ ನೇತೃತ್ವದ ಭಾರತೀಯ ತಂಡವು ಪ್ರತಿಭಟನೆಯ ಸಂಕೇತವಾಗಿ ಪಾಕಿಸ್ತಾನಿ ಆಟಗಾರರೊಂದಿಗೆ ಸಾಂಪ್ರದಾಯಿಕ ಹಸ್ತಲಾಘವ ಮಾಡದಿರುವುದಾಗಿ ನಿರ್ಧರಿಸಿತು. ಇದರ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (PCB) ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ರವರನ್ನು ತೆಗೆದುಹಾಕುವಂತೆ ಕೋರಿ ಅಧಿಕೃತ ದೂರು ದಾಖಲಿಸಿತು.

ಇಂತಹ ಸಂದರ್ಭದಲ್ಲಿ ಮೂವರೂ ಗಡಿ ಉದ್ವಿಗ್ನತೆಯನ್ನು ನಿರ್ಲಕ್ಷಿಸಿ “ಶಾಲಾ ಸ್ನೇಹಿತರಂತೆ” ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಪಂದ್ಯವನ್ನು ಆನಂದಿಸುತ್ತಿದ್ದಾರೆ ಎಂಬ ಹೇಳಿಕೆಯನ್ನು X ಬಳಕೆದಾರ ‘nibraz88cricket’ ಹಂಚಿಕೊಂಡಿದ್ದರು. ಈ ಪೋಸ್ಟ್ ಗೆ 889,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 3,000 ಕ್ಕೂ ಹೆಚ್ಚು ಲೈಕ್‌ಗಳು ದೊರಕಿವೆ, ಅದನ್ನು ಕೆಳಗೆ ನೋಡಬಹುದು:

 

ಮತ್ತೊಬ್ಬ X ಬಳಕೆದಾರರು ಇದೇ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ: “ನಿನ್ನೆ ಅನುರಾಗ್ ಠಾಕೂರ್, ಶಾಹಿದ್ ಅಫ್ರಿದಿ ಮತ್ತು ಜಯ್ ಶಾ ಒಟ್ಟಿಗೆ ಕುಳಿತು ಪಂದ್ಯವನ್ನು ಆನಂದಿಸುತ್ತಿದ್ದರು, ಭಾರತೀಯ ಕಾಮೆಂಟೇಟರುಗಳು ಪಾಕಿಸ್ತಾನಿ ಕಾಮೆಂಟೇಟರುಗಳೊಂದಿಗೆ ಕುಳಿತಿದ್ದರು, ಎಲ್ಲರೂ ಭಾರಿ ಹಣ ಸಂಪಾದಿಸಿದರು, ಮತ್ತು ಸಾಮಾನ್ಯ ಮನುಷ್ಯ ಕ್ರೀಡಾಂಗಣದಲ್ಲಿ ಜೋರು ಜೋರಾಗಿ ಘೋಷಣೆ ಕೂಗುತ್ತಿದ್ದ…”

ಇತರ ಬಳಕೆದಾರರು ಸಹ ಅಂತಹ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅದನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ಕುರಿತು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ದಾರಿತಪ್ಪಿಸುವಂತಿದೆ ಎಂದು ಕಂಡುಕೊಂಡಿತು. ಈ ದೃಶ್ಯಗಳು ಫೆಬ್ರವರಿ 2025 ರಲ್ಲಿ ನಡೆದ ICC ಚಾಂಪಿಯನ್ಸ್ ಟ್ರೋಫಿಯದ್ದು, ಮತ್ತು ಏಷ್ಯಾ ಕಪ್ 2025ರದ್ದಲ್ಲ ಎಂಬುದು ಕಂಡುಬಂತು. ಠಾಕೂರ್, ಅಫ್ರಿದಿ ಅಥವಾ ಶಾ ಸೆಪ್ಟೆಂಬರ್ 14, 2025 ರಂದು ನಡೆದ ಏಷ್ಯಾ ಕಪ್ ಪಂದ್ಯವನ್ನು ಒಟ್ಟಿಗೆ ವೀಕ್ಷಿಸಿದ್ದರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.

ನಾವು ಮೊದಲು ವೀಡಿಯೊದ ವಿವಿಧ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು, ಆಗ ಮಾರ್ಚ್ 11, 2025ರ ಫೇಸ್‌ಬುಕ್ ಪೋಸ್ಟ್ ನಮಗೆ ದೊರಕಿತು. ಪೋಸ್ಟ್‌ ನ ಶೀರ್ಷಿಕೆ ಹೀಗಿತ್ತು: “ಒಂದು ಅಪರೂಪದ ಕ್ಷಣ! ಜಯ್ ಶಾ ಮತ್ತು ಶಾಹಿದ್ ಅಫ್ರಿದಿಯವರು ಒಟ್ಟಿಗೆ ನಿರಾತಂಕ ಕ್ರಿಕೆಟ್ ಕ್ಷಣವನ್ನು ಹಂಚಿಕೊಂಡರು ಮತ್ತು ಅಭಿಮಾನಿಗಳಿಗೆ ಇದರ ಬಗ್ಗೆ ಮಾತನಾಡಿದಷ್ಟು ಸಾಲದು.”

ಇದನ್ನನುಸರಿಸಿ, ನಾವುಫೆಬ್ರವರಿ 26ರಂದು ಪ್ರಕಟವಾದ ಯೂಟ್ಯೂಬ್ ಶಾರ್ಟ್ ಗೆ ತಲುಪಿದೆವು. ಅದರ ಶೀರ್ಷಿಕೆ ಹೀಗಿದೆ: “ಶಾಹಿದ್ ಅಫ್ರಿದಿ ಮತ್ತು ಜಯ್ ಶಾ ಒಟ್ಟಾಗಿ ದುಬೈ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಪಂದ್ಯವನ್ನು ವೀಕ್ಷಿಸಿದರು”

ನಾವು ಕ್ರೀಡಾಂಗಣದಲ್ಲಿ ಪ್ರದರ್ಶಿಸಲಾದ ಬ್ಯಾನರ್‌ಗಳನ್ನು ಸಹ ಜೂಮ್ ಮಾಡಿ ನೋಡಿದಾಗ ಫೆಬ್ರವರಿ 19, 2025ರಿಂದ ಮಾರ್ಚ್ 9, 2025ರವರೆಗೆ ನಡೆದ ICC ಚಾಂಪಿಯನ್ಸ್ ಟ್ರೋಫಿ 2025ರ ಬ್ಯಾನರ್ ಎಂದು ತಿಳಿಯಿತು. ಹೇಳಿಕೆಯಲ್ಲಿ ಹಂಚಿಕೊಳ್ಳಲಾದ ದೃಶ್ಯಗಳಲ್ಲಿ, ಬ್ಯಾನರ್‌ಗಳಲ್ಲಿ “ICC  ಚಾಂಪಿಯನ್ಸ್ ಟ್ರೋಫಿ 2025” ಮತ್ತು “#ಚಾಂಪಿಯನ್ಸ್” ಎಂದು ಪ್ರದರ್ಶಿಸಲಾಗಿರುವುದನ್ನು ನಾವು ಕಂಡೆವು. ಕೆಳಗೆ ಜೂಮ್ ಮಾಡಿದ ಸ್ಕ್ರೀನ್‌ಶಾಟ್ ನೋಡಿ:

ಏಷ್ಯಾ ಕಪ್ ವರದಿ ಮಾಡಿದ ಮಾಧ್ಯಮಗಳ ಯಾವುದೇ ವರದಿಗಳಲ್ಲಿ ಠಾಕೂರ್, ಶಾ ಅಥವಾ ಅಫ್ರಿದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಥವಾ ಸಂವಹನ ನಡೆಸಿದ ಕುರಿತು ಯಾವುದೇ ಉಲ್ಲೇಖಗಳಿಲ್ಲ. “ಠಾಕೂರ್, ಶಾ ಮತ್ತು ಅಫ್ರಿದಿ ಏಷ್ಯಾ ಕಪ್ 2025ರಲ್ಲಿ ಭೇಟಿಯಾದರು” ಎಂಬಂತಹ ಶಬ್ದಾವಳಿಗಳನ್ನು ಬಳಸಿದ ನಂತರವೂ ಅವರೆಲ್ಲರ ಉಪಸ್ಥಿತಿಯನ್ನು ದೃಢೀಕರಿಸುವ ಯಾವುದೇ ಇತ್ತೀಚಿನ ವರದಿಗಳಿಲ್ಲ.

ಅನುರಾಗ್ ಠಾಕೂರ್, ಶಾಹಿದ್ ಅಫ್ರಿದಿ ಮತ್ತು ಜಯ್ ಶಾ 2025 ರ ICC ಚಾಂಪಿಯನ್ಸ್ ಟ್ರೋಫಿಗಾಗಿ ಭೇಟಿಯಾಗಿದ್ದರಾದರೂ, ಸೆಪ್ಟೆಂಬರ್‌ನಲ್ಲಿ ನಡೆದ 2025 ರ ಏಷ್ಯಾ ಕಪ್ ಸಮಯದಲ್ಲಿ ಅವರು ಭೇಟಿಯಾಗಲಿಲ್ಲ ಅಥವಾ ಮಾತುಕತೆ ನಡೆಸಿಲ್ಲ.

ಆದ್ದರಿಂದ, ಈ ಹೇಳಿಕೆಯು ಒಂದು ತಪ್ಪು ನಿರೂಪಣೆ.

***********************************************************************

ಇದನ್ನೂ ಓದಿ:

ಆಪರೇಷನ್ ಸಿಂಧೂರ್ ಕುರಿತಾಗಿ ಅಮಿತ್ ಶಾರವರು ಪ್ರಧಾನಿ ಮೋದಿಯವರನ್ನು ಟೀಕಿಸುತ್ತಿರುವುದನ್ನು ಈ ವೀಡಿಯೊ ಕ್ಲಿಪ್‌ನಲ್ಲಿ ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ನೇಪಾಳ ಪ್ರತಿಭಟನಾಕಾರರು ಭಾರತದ ಪ್ರಧಾನಿ ಮೋದಿಯವರನ್ನು ಬೆಂಬಲಿಸಿ ಮೆರವಣಿಗೆ ನಡೆಸಿದರೇ? ಸತ್ಯ ಪರಿಶೀಲನೆ

 

Leave a Reply

Your email address will not be published. Required fields are marked *

*