Don't Miss

ತಿರುಪತಿ ಲಾಡುಗಳ ವೀಡಿಯೊಗೆ ಸಂಬಂಧಿಸಿದಂತೆ ತಮಿಳುನಾಡಿನ ಕಾರ್ಯಕರ್ತ ಪಿಯೂಷ್ ಮಾನುಷ್ ರವರ ಮೇಲೆ ಹಲ್ಲೆ ನಡೆಯಿತೇ? ಸತ್ಯ ಪರಿಶೀಲನೆ

ಹೇಳಿಕೆ/Claim:  “ಎಲ್ಲಾ ಹಿಂದೂಗಳಿಗಾಗಿ ಗೋಮಾಂಸ ಲಾಡು” ಎಂಬ ವೀಡಿಯೊದಲ್ಲಿ ಹಿಂದೂಗಳನ್ನು ಅಪಹಾಸ್ಯ ಮಾಡಿದ ಪಿಯೂಷ್ ಮಾನುಷ್ ರವರನ್ನು ತಮಿಳುನಾಡಿನಲ್ಲಿ ಥಳಿಸಲಾಗಿದೆ.

ಕಡೆನುಡಿ/Conclusion:  ತಪ್ಪು ನಿರೂಪಣೆ. 2019 ರಲ್ಲಿ ಪಿಯೂಷ್ ಮಾನುಷ್ ಮೇಲೆ ಹಲ್ಲೆಯಾದ ಹಳೆಯ ವೀಡಿಯೊವನ್ನು ಲಾಡು ವಿವಾದಕ್ಕೆ ಸಂಬಂಧಿತ ಇತ್ತೀಚಿನ ಹಲ್ಲೆ ಎಂದು ಹಂಚಿಕೊಳ್ಳಲಾಗಿದೆ.

ರೇಟಿಂಗ್/Rating: ತಪ್ಪು ನಿರೂಪಣೆ —

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

ತಮಿಳುನಾಡಿನ ಕಾರ್ಯಕರ್ತ ಪಿಯೂಷ್ ಮಾನುಷ್ ಅವರನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರು ಥಳಿಸುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ತಿರುಪತಿ ಲಾಡುಗಳ ವಿವಾದದ ಕುರಿತು ಆತ ನೀಡಿದ ಹೇಳಿಕೆಗಳಿಂದಾಗಿ ಇತ್ತೀಚೆಗೆ ಹಲ್ಲೆ ನಡೆದಿದೆ ಎಂಬುದು ಆರೋಪ. ವೀಡಿಯೊ ನೋಡಿ:

ವೀಡಿಯೊವನ್ನು X ನಲ್ಲಿ ಅನೇಕರು, ” ‘ಎಲ್ಲಾ ಹಿಂದೂಗಳಿಗಾಗಿ ಪೆರುಮಾಳ್ ಸ್ವತಃ ವಿತರಿಸಿದ ಗೋಮಾಂಸ ಲಾಡು’ ಎಂಬ ಶೀರ್ಷಿಕೆಯ ವೀಡಿಯೊದೊಂದಿಗೆ ಹಿಂದೂಗಳನ್ನು ಅಪಹಾಸ್ಯ ಮಾಡಿದ ಪಿಯೂಷ್ ಮಾನುಷ್ ಗೆ ತಮಿಳುನಾಡಿನ ಸೇಲಂನಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿದೆ. ಒಳ್ಳೆಯ ಪ್ರತಿರೋಧ. ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ತಿರುಪತಿ ಲಾಡು ವಿವಾದ: ತಿರುಮಲದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ವಿತರಿಸಲಾದ ಲಾಡುಗಳಲ್ಲಿ ಪ್ರಾಣಿಗಳ ಕೊಬ್ಬು ಕಂಡುಬಂದಿದೆ ಎಂಬ ಆರೋಪದಿಂದ ತಿರುಪತಿ ಲಡ್ಡುಗಳು ವಿವಾದಾವೃತ್ತವಾಗಿವೆ. ಇದು ರಾಜಕೀಯ ಘರ್ಷಣೆಗೆ ಕಾರಣವಾಗಿದ್ದು, ಆಂಧ್ರಪ್ರದೇಶದ ಆಡಳಿತಾರೂಢ ತೆಲುಗು ದೇಶಂ ಪಕ್ಷವು, ಇದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿಯವರ ಸರ್ಕಾರದ ನಿರ್ಲಕ್ಷ್ಯ ಎಂದು ಆರೋಪಿಸಿದೆ, ಆದರೆ ರೆಡ್ಡಿ ಬೆಂಬಲಿಗರು ಈ ಆರೋಪವನ್ನು ನಿರಾಕರಿಸಿದ್ದಾರೆ.

ಈ ಸಂಬಂಧ, ವೀಡಿಯೊವನ್ನು X ನಲ್ಲಿ ಅನೇಕರು ಹಂಚಿಕೊಂಡಿದ್ದಾರೆ ಮತ್ತದನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಸತ್ಯ ಪರಿಶೀಲನೆ ವಿವರಗಳು:

ಗೂಗಲ್‌ನಲ್ಲಿ ಡಿಜಿಟೈ ಇಂಡಿಯಾ ನಡೆಸಿದ ತೀವ್ರ ಹುಡುಕಾಟದಿಂದಾಗಿ, ಈ ವೀಡಿಯೊ ಆಗಸ್ಟ್ 2019 ರದ್ದು ಎಂದು ತಿಳಿದುಬಂತು, ಆಗ ತಮಿಳುನಾಡಿನ ಸೇಲಂನಲ್ಲಿರುವ ಬಿಜೆಪಿ ಪಕ್ಷದ ಕಚೇರಿಯಲ್ಲಿ ತೀವ್ರ ವಾಗ್ವಾದದ ನಂತರ ಪಿಯೂಷ್ ಮಾನುಷ್ ರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿದ್ದರು. ಆ ಸಮಯದಲ್ಲಿ ಹಲವಾರು ಸುದ್ದಿವಾಹಿನಿಗಳು ಘಟನೆಯ ಬಗ್ಗೆ ವರದಿ ಮಾಡಿದ್ದವು. ಈಗಿನ ವೈರಲ್ ವೀಡಿಯೊ ಐದು ವರ್ಷಗಳ ಹಿಂದೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದ ಆ ಘಟನೆಯ ತುಣುಕನ್ನು ಹೋಲುತ್ತದೆ.

ಆರ್ಥಿಕ ವ್ಯವಸ್ಥೆ ಮತ್ತು ಕಾಶ್ಮೀರ ಬಿಕ್ಕಟ್ಟಿನಂತಹ ವಿಷಯಗಳ ಕುರಿತು ಚರ್ಚೆ ಮಾಡಲು ಮನುಷ್ 2019ರಲ್ಲಿ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದರು. ವಾಗ್ವಾದವು ಉಗ್ರ ವಾಗ್ವಾದಕ್ಕೆ ತಿರುಗಿ, ದಾಳಿಗೆ ಕಾರಣವಾಯಿತು. ಘಟನೆಯ ದೃಶ್ಯಗಳನ್ನು ಯೂಟ್ಯೂಬ್‌ನಂತಹ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗಿದ್ದು, ದಿನಾಂಕ ಮತ್ತು ಸಂದರ್ಭಗಳನ್ನು ಇವು ದೃಢೀಕರಿಸುತ್ತವೆ.

ಆದರೆ, ಸೆಪ್ಟೆಂಬರ್ 19, 2024 ರಂದು ಪೋಸ್ಟ್ ಮಾಡಿದ “ಎಲ್ಲಾ ಹಿಂದೂಗಳಿಗಾಗಿ ಪೆರುಮಾಳ್ ಸ್ವತಃ ವಿತರಿಸಿದ ಗೋಮಾಂಸ ಲಾಡು!!” ಎಂಬ ಶೀರ್ಷಿಕೆಯ ವೀಡಿಯೊದಲ್ಲೆದ್ದ ಲಾಡು ವಿವಾದದ ಕುರಿತು ಮಾನುಷ್ ಅವರು ಹೇಳಿಕೆ ನೀಡಿದ್ದಾರೆ. ಆದರೆ, ಈ ವೀಡಿಯೊಗಾಗಿ ಅವರ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಸುಳ್ಳು. ಈ ಘಟನೆಯು ಪ್ರಸ್ತುತ ತಿರುಪತಿ ಲಾಡುಗಳ ವಿವಾದಕ್ಕಿಂತ ಬಹಳ ಹಳೆಯದಾದ, ಐದು ವರ್ಷಗಳ ಹಿಂದೆ ನಡೆದ ಘಟನೆ. ಪ್ರಸಾರವಾಗುತ್ತಿರುವ ವೀಡಿಯೊ  2019ರದ್ದು ಎಂದು ಮಾನುಷ್ ಸ್ವತಃ ಕೆಳಗೆ ಕಾಣುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟಪಡಿಸಿದ್ದಾರೆ:

 

ಮಾನುಷ್ ಬರೆದಿರುವುದು ಹೀಗೆ: “ಸೋಂಕಿ ಮೊಂಕಿಗಳು 2019ರ  ವೀಡಿಯೊವನ್ನು ಹರಡುತ್ತಿದ್ದಾರೆ. ನಾನು ಕಾಶ್ಮೀರದ ಬಗ್ಗೆ ಪ್ರಶ್ನಿಸಲು ಬಿಜೆಪಿ ಕಚೇರಿಗೆ ಹೋಗಿದ್ದೆ. ಬಿಜೆಪಿಯ 30 ಉಗ್ರ ಕಾರ್ಯಕರ್ತರು ನನ್ನ ಮೇಲೆ ದಾಳಿ ಮಾಡಿ ನನ್ನ ಮೇಲೆ ಒಂದು ಗೀರು ಮಾಡಿದ್ದರು. ಏನೇ ಇದ್ದರೂ, ಸೋಂಕಿ ಮಂಕಿಗಳು ಐದು ವರ್ಷಗಳ ಹಿಂದೆ ಗೀರು ಹಾಕಿದ್ದರೆಂದು ಇಂದು ಖುಷಿಪಡುತ್ತಿದ್ದಾರೆ.”

ಆದ್ದರಿಂದ, ಹೇಳಿಕೆ ಸುಳ್ಳು.

ಇದನ್ನೂ ಓದಿ:

ಹೇಳಿಕೆಯಂತೆ, ಈ ವಿಚಿತ್ರ ಸಮುದ್ರ ಪ್ರಾಣಿಯು ಸಮುದ್ರ ಹಸುವನ್ನು ಪ್ರತಿನಿಧಿಸುತ್ತದೆಯೇ? ಸತ್ಯ ಪರಿಶೀಲನೆ

ಆನಿಮೇಟರ್‌ಗಳ ಪೋಸ್ಟ್ ನಿಂದಾಗಿ X ನಲ್ಲಿ ಹ್ಯಾಶ್‌ಟ್ಯಾಗ್ #RIPCartoonNetwork ಟ್ರೆಂಡ್ ಗೆ ಪ್ರಚೋದನೆ; ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*