ಹೇಳಿಕೆ/Claim: ಕರ್ನಾಟಕ ಪೊಲೀಸರು ಗಣೇಶನನ್ನು ಬಂಧಿಸಿದ್ದಾರೆ ಎನ್ನುವ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿರುವ ಪೊಲೀಸ್ ವ್ಯಾನ್‌ನಲ್ಲಿರುವ ಗಣೇಶನ ವಿಗ್ರಹದ ಚಿತ್ರ.
ಕಡೆನುಡಿ/Conclusion: ದಾರಿತಪ್ಪಿಸುವ ಹೇಳಿಕೆ — ಪ್ರತಿಭಟನಕಾರರು ಗಣೇಶನ ವಿಗ್ರಹವನ್ನು ನಿಷೇಧಿತ ಸ್ಥಳಕ್ಕೆ ತಂದಾಗ, ಪೊಲೀಸರು ಅವರನ್ನು ಬಂಧಿಸಿ, ವಿಗ್ರಹವನ್ನು ವ್ಯಾನ್‌ನಲ್ಲಿ ಇರಿಸಿದರು ಮತ್ತು ನಂತರ ಅಧಿಕಾರಿಗಳು ವಿಧಿವತ್ತಾಗಿ ಅದರ ವಿಸರ್ಜನೆ ಮಾಡಿದರು.
ರೇಟಿಂಗ್/Rating: ದಾರಿತಪ್ಪಿಸುವ ಹೇಳಿಕೆ —
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
************************************************************************
ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಗಣೇಶ್ ಜೀಯವರನ್ನು ‘ಅರೆಸ್ಟ್’ ಮಾಡಿದೆ ಎಂಬ ಹೇಳಿಕೆಯೊಂದಿಗೆ ಪೊಲೀಸ್ ವ್ಯಾನ್ ಒಂದರಲ್ಲಿ ಗಣೇಶನ ವಿಗ್ರಹವನ್ನು ತೆಗೆದುಕೊಂಡು ಹೋಗುತ್ತಿರುವ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ, ಮತ್ತು ಈ ಚಿತ್ರದೊಂದಿಗೆ ‘ಅವಮಾನಿತರಾಗಲು’ ಹಿಂದೂಗಳು ಕಾಂಗ್ರೆಸ್‌ಗೆ ಏಕೆ ಮತ ಹಾಕುತ್ತಾರೆ? ಎಂಬ ಪ್ರಶ್ನೆಯನ್ನೂ ಬಳಸಲಾಗುತ್ತಿದೆ. X.com ನಲ್ಲಿ ಇಲ್ಲಿ ಈ ಹೇಳಿಕೆಯನ್ನು ನೋಡಿ :
भारत के इतिहास में पहली बार किसी राज्य की पुलिस ने गणेश जी को गिरफ्तार किया
जी हां कर्नाटक की कांग्रेस सरकार की कांग्रेसी पुलिस ने गणेश जी को हिरासत में लिया
हिंदुओं क्यों अपमानित होने के लिए कांग्रेस को वोट देते हो ? pic.twitter.com/Q61UMVTC1i
— Manish Kasyap Son Of Bihar (@ManishKasyapsob) September 13, 2024
ಹಿಂದಿಯಲ್ಲಿರುವ ಹೇಳಿಕೆಯು ಹೇಗಿದೆ :”भारत के इतिहास में पहली बार किसी राज्य की पुलिस ने गणेश जी को गिरफ्तार किया l जी हां कर्नाटक की कांग्रेस सरकार की कांग्रेसी पुलिस ने गणेश जी को हिरासत में लिया …हिंदुओं क्यों अपमानित होने के लिए कांग्रेस को वोट देते हो ?”ಕನ್ನಡದ ಅನುವಾದ ಹೀಗಿದೆ: “ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ, ಒಂದು ರಾಜ್ಯದ ಪೊಲೀಸರು ಗಣೇಶ್ ಜೀಯವರನ್ನು ಬಂಧಿಸಿದ್ದಾರೆ. ಹೌದು, ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಕಾಂಗ್ರೆಸ್ ಪೊಲೀಸರು ಗಣೇಶ್ ಜೀಯವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅವಮಾನಿತರಾಗಲು ಹಿಂದೂಗಳು ಕಾಂಗ್ರೆಸ್‌ಗೆ ಏಕೆ ಮತ ಹಾಕುತ್ತಾರೆ?”
कर्नाटक पुलिस ने श्री गणेश जी को हिंदू कार्यकर्ताओ के साथ हिरासत मे ले लिया
ये गिरफ्तारियां नाग मंगला मे गणेश जुलूस पर कट्टरपंथियो द्वारा किए गए पथराव की निंदा करते हुए विरोध प्रदर्शन के बाद हुईं
अभी भी समय है जाग जाओ हिंदुओ नही तो यही हाल पूरे देश मे होगाhttps://t.co/7IAR9bi9YG pic.twitter.com/iert8wnp1q— कृष्णा सिंह राजपुत 🇮🇳 (@Krishna_SR1) September 13, 2024
ಹೇಳಿಕೆಯನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
FACT CHECK
ಮೊದಲಿಗೆ, ನಾವು ಘಟನೆಯ ಬಗ್ಗೆ ಸುದ್ದಿ ವರದಿಗಳನ್ನು ಪರಿಶೀಲಿಸಿದೆವು, ಆಗ ಕರ್ನಾಟಕದಲ್ಲಿ ಗಣೇಶ ಪೂಜೆಯನ್ನು ಎಂದಿಗೂ ನಿಷೇಧಿಸಲಾಗಿಲ್ಲ ಎಂಬುದನ್ನು ನಾವು ಕಂಡುಕೊಂಡೆವು. ಎರಡನೆಯದಾಗಿ, ಗಣೇಶನ ವಿಗ್ರಹವನ್ನು ಪೊಲೀಸ್ ವ್ಯಾನ್‌ನಲ್ಲಿ ಕೊಂಡೊಯ್ಯಲು ಕಾರಣವೇನು ಎಂದು ಇಲ್ಲಿ ಮತ್ತು ಇಲ್ಲಿ ಸುದ್ದಿಗಳು ಬಹಿರಂಗಪಡಿಸುತ್ತವೆ.
ಹಿನ್ನಲೆ:
ಸೆಪ್ಟೆಂಬರ್ 11 ರಂದು ಭುಗಿಲೆದ್ದ ಕೋಮು ಗಲಭೆಗಳ ನಂತರ, ಕರ್ನಾಟಕದ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ಚತುರ್ಥಿ ಮೆರವಣಿಗೆಯನ್ನು ಒಂದು ಮಸೀದಿಯ ಮುಂದೆ ದೀರ್ಘಕಾಲದವರೆಗೆ ನಿಲ್ಲಿಸಿದಾಗ, ಕರ್ನಾಟಕ ಪೊಲೀಸರು 55 ಜನರನ್ನು ಬಂಧಿಸಿ ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದರು. ಬಂಧನದ ನಂತರ ಬಿಜೆಪಿ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು.
ಆದದ್ದೇನು?
ಸೆಪ್ಟೆಂಬರ್ 13, 2024 ರಂದು, ನಿಷೇಧಾಜ್ಞೆಯನ್ನು ಧಿಕ್ಕರಿಸಿ, ಮಂಡ್ಯದ ಕೋಮುಗಲಭೆಯ ಬಗ್ಗೆ ತನಿಖೆಗೆ ಒತ್ತಾಯಿಸುತ್ತಾ, ಬೆಂಗಳೂರಿನ ಟೌನ್ ಹಾಲ್ ಬಳಿ ಅಂತಹ ಒಂದು ಪ್ರತಿಭಟನೆಯನ್ನು ನಡೆಸಲಾಯಿತು. ಪ್ರತಿಭಟನಾಕಾರರಲ್ಲಿ ಒಬ್ಬರು ಗಣೇಶನ ವಿಗ್ರಹವನ್ನು ಹಿಡಿದಿದ್ದರಿಂದ, ಪೊಲೀಸರು ಆತನನ್ನು ಇತರರೊಂದಿಗೆ ಬಂಧಿಸಿ, ಆತ ಹಿಡಿದಿದ್ದ ವಿಗ್ರಹವನ್ನು ಖಾಲಿ ವ್ಯಾನ್ ಒಂದರಲ್ಲಿ ಇರಿಸಿದರು, ಇದನ್ನು ಗಣೇಶ ದೇವರ ಬಂಧನ ಎಂದು ಬಿಂಬಿಸಲಾಯಿತು.
ಫ್ರೀಡಂ ಪಾರ್ಕ್‌ನಲ್ಲಿ ಮಾತ್ರವೇ ಪ್ರತಿಭಟನೆಗೆ ಅವಕಾಶ ನೀಡುವ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುತ್ತಾ, ಪ್ರತಿಭಟನಾಕಾರರು ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಸೇರುತ್ತಿದ್ದರು ಎಂದು ಬೆಂಗಳೂರು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರು (ಡಿಸಿಪಿ) ಶೇಖರ್ ಎಚ್. ತೆಕ್ಕಣ್ಣವರ್ ರವರು ಮಾಧ್ಯಮಗಳಿಗೆ ಹೀಗೆಂದು ತಿಳಿಸಿದ್ದಾರೆ: “ ಸೆಪ್ಟೆಂಬರ್ 13, 2024 ರಂದು ಹಿಂದೂ ಗುಂಪುಗಳು ನಾಗಮಂಗಲದ ಗಣೇಶ ಮೆರವಣಿಗೆಯ ಘಟನೆಯ ಕುರಿತು, ಬೆಂಗಳೂರಿನ ಟೌನ್ ಹಾಲ್ ನಲ್ಲಿ ಹೈ ಕೋರ್ಟ್ ಆದೇಶವನ್ನು ಮೀರಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಬಂಧಿಸಲಾಯಿತು. ನಂತರ ಅಧಿಕಾರಿಗಳು ಧಾರ್ಮಿಕ ವಿಧಿಗಳ ಅನುಸಾರ ಗಣೇಶನ ವಿಗ್ರಹವನ್ನು ವಿಸರ್ಜನೆ ಮಾಡಿದರು.”
ಹೀಗಾಗಿ ಈ ಹೇಳಿಕೆಯು ಸುಳ್ಳು.
ಇದನ್ನೂ ಓದಿ:
ಈ ಚಿತ್ರವು ರಾಜಸ್ಥಾನದ 5000 ವರ್ಷ ಹಳೆಯ ದೇವಾಲಯವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ