ಹೇಳಿಕೆ/Claim:2024-25 ರ ಬಜೆಟ್ ನಿಯಮಗಳ ಅಡಿಯಲ್ಲಿ, ವಿದೇಶಕ್ಕೆ ಪ್ರಯಾಣಿಸುವ ಎಲ್ಲಾ ವ್ಯಕ್ತಿಗಳು ಅಕ್ಟೋಬರ್ 1, 2024 ರಿಂದ ಅನ್ವಯವಾಗುವ ಆದಾಯ ತೆರಿಗೆ ತೆರವು ಪ್ರಮಾಣಪತ್ರವನ್ನು ಪಡೆಯಬೇಕು.
ಕಡೆನುಡಿ/Conclusion: ತಪ್ಪು ನಿರೂಪಣೆ. 10 ಲಕ್ಷ ರೂ.ಗಿಂತ ಹೆಚ್ಚಿನ ತೆರಿಗೆ ದಾವೆ ಅಥವಾ ಹೊಣೆಗಾರಿಕೆಗಳನ್ನು ಹೊಂದಿರುವ ಭಾರತೀಯ ನಾಗರಿಕರಿಗೆ ಮಾತ್ರ ವಿದೇಶಕ್ಕೆ ಪ್ರಯಾಣಿಸುವ ಮೊದಲು ಆದಾಯ ತೆರಿಗೆ ತೆರವು ಪ್ರಮಾಣಪತ್ರದ ಅಗತ್ಯವಿರುತ್ತದೆ.
ರೇಟಿಂಗ್: ತಪ್ಪು ನಿರೂಪಣೆ —
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
************************************************************************
2024-25 ರ ಬಜೆಟ್ ಮಂಡನೆಯ ನಂತರ, ಹಲವಾರು ವಿಭಿನ್ನ ಹೇಳಿಕೆಗಳು ಹೊರಹೊಮ್ಮಿವೆ, ಅವುಗಳಲ್ಲಿ ಒಂದು ಎಲ್ಲಾ ಭಾರತೀಯ ನಾಗರಿಕರು ವಿದೇಶಕ್ಕೆ ಪ್ರಯಾಣಿಸುವ ಮೊದಲು ಆದಾಯ ತೆರಿಗೆ ಅಧಿಕಾರಿಗಳಿಂದ ತೆರಿಗೆ ತೆರವು ಪ್ರಮಾಣಪತ್ರವನ್ನು ಪಡೆಯಬೇಕೆಂದು ಸೂಚಿಸುವ ಸುದ್ದಿ. ಹೊಸ ಕಾಯಿದೆಯು ಅಕ್ಟೋಬರ್ 1, 2024 ರಿಂದ ಜಾರಿಗೆ ಬರಲಿದೆ ಎಂದೂ ಅದು ಹೇಳುತ್ತದೆ.
The Finance Bill, 2024 has mandated that any person domiciled in India would require an income tax clearance certificate to leave the countryhttps://t.co/cUwByEYvgj
— Business Today (@business_today) July 26, 2024
ಬಿಸ್ನೆಸ್ ಟುಡೆಯ ಸುದ್ದಿ ವರದಿಯನ್ನು ಹೊಂದಿರುವ X ನ ಒಂದು ಹೇಳಿಕೆಯು ವೈರಲ್ ಆಗಿದೆ. ಆ ಹೇಳಿಕೆ ಹೀಗಿದೆ, “ಭಾರತದಲ್ಲಿ ನೆಲೆಸಿರುವ ಯಾವುದೇ ವ್ಯಕ್ತಿಯು ದೇಶದಿಂದ ಹೊರಹೋಗಲು ಆದಾಯ ತೆರಿಗೆ ತೆರವು ಪ್ರಮಾಣಪತ್ರ ಬೇಕು ಎಂದು 2024ರ ಹಣಕಾಸು ಮಸೂದೆ ಕಡ್ಡಾಯಗೊಳಿಸಿದೆ.”
ಹೇಳಿಕೆಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
FACT CHECK
ಆದಾಯ ತೆರಿಗೆ ತೆರವು ಪ್ರಮಾಣಪತ್ರದ ವಿಷಯವನ್ನು 2024-25 ರ ಬಜೆಟ್ ಪ್ರಸ್ತುತಿಯಲ್ಲಿ ಉಲ್ಲೇಖಿಸಲಾಗಿದೆ. 2024-25 ಬಜೆಟ್ ಪ್ರಕಾರ, ಹೊಸ ಕಾನೂನಿನಡಿಯಲ್ಲಿ, ಭಾರತದಲ್ಲಿ ನೆಲೆಸಿರುವ ವ್ಯಕ್ತಿಗಳು ದೇಶದಿಂದ ಹೊರಡುವ ಮೊದಲು ಎಲ್ಲಾ ತೆರಿಗೆ ಬಾಕಿಗಳನ್ನು ತೆರವುಗೊಳಿಸಿ, ‘ತೆರವು ಪ್ರಮಾಣಪತ್ರಗಳನ್ನು’ ಪಡೆಯುವ ಅಗತ್ಯವಿದೆ.
Following the debate over the new provision on news and social media, the Finance Ministry clarified that this modification does not require all individuals to obtain a tax clearance certificate but applies to those with financial irregularities or major tax arrears pending before the Income Tax authorities.
ಸುದ್ದಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹೊಸ ನಿಬಂಧನೆಯ ಚರ್ಚೆಯ ನಂತರ, ಈ ಮಾರ್ಪಾಡಿನ ಪ್ರಕಾರ ಎಲ್ಲಾ ವ್ಯಕ್ತಿಗಳು ತೆರಿಗೆ ತೆರವು ಪ್ರಮಾಣಪತ್ರವನ್ನು ಪಡೆಯುವ ಅಗತ್ಯವಿಲ್ಲ ಎಂದು ಹಣಕಾಸು ಸಚಿವಾಲಯವು ಸ್ಪಷ್ಟಪಡಿಸಿದೆ, ಬದಲಾಗಿ ಇದು ಹಣಕಾಸಿನ ಅಕ್ರಮಗಳನ್ನು ಹೊಂದಿರುವವರಿಗೆ ಅಥವಾ ಆದಾಯ ತೆರಿಗೆ ಅಧಿಕಾರಿಗಳಿಗೆ ಪ್ರಮುಖ ತೆರಿಗೆ ಬಾಕಿ ಹೊಂದಿರುವವರಿಗೆ ಅನ್ವಯಿಸುತ್ತದೆ.
ಎಲ್ಲರಿಗೂ ಪ್ರಮಾಣಪತ್ರದ ಅಗತ್ಯವಿಲ್ಲ ಆದರೆ ಹಣಕಾಸಿನ ಅಕ್ರಮಗಳನ್ನು ಹೊಂದಿರುವವರಿಗೆ ಅಥವಾ 10 ಲಕ್ಷ ರೂ.ಗಿಂತ ಹೆಚ್ಚಿನ ನೇರ ತೆರಿಗೆ ಬಾಕಿ ಇರುವವರಿಗೆ ಮಾತ್ರ ಪ್ರಮಾಣಪತ್ರದ ಅಗತ್ಯವಿದೆ ಎಂದು ಆಗಸ್ಟ್ 20, 2024ರಂದು ನೀಡಿದ ಹೇಳಿಕೆಯಲ್ಲಿ ನೇರ ತೆರಿಗೆಯ ಕೇಂದ್ರ ಮಂಡಳಿ (CBDT) ಕೂಡ ಸ್ಪಷ್ಟಪಡಿಸಿದೆ. ಸಂಪೂರ್ಣ ಲೇಖನವನ್ನು ಇಲ್ಲಿ ನೋಡಿ.
ಹೇಳಿಕೆಯು ಹೀಗಿದೆ, “… CBDT, ಅದರ ದಿನಾಂಕ 05.02.2004 ರ ಸೂಚನೆ ಸಂ. 1/200ರ4 ಪ್ರಕಾರ, ಈ ಕೆಳಗಿನ ಸಂದರ್ಭಗಳಲ್ಲಿ ಮಾತ್ರ ಭಾರತದಲ್ಲಿ ನೆಲೆಸಿರುವ ವ್ಯಕ್ತಿಗಳು, ಕಾಯಿದೆಯ ಕಲಂ 230(1A) ಅಡಿಯಲ್ಲಿ ತೆರಿಗೆ ತೆರವು ಪ್ರಮಾಣಪತ್ರವನ್ನು ಪಡೆಯಬೇಕಾಗುವುದು ಎಂದು ನಿರ್ದಿಷ್ಟಪಡಿಸಿದೆ:
-ಒಬ್ಬ ವ್ಯಕ್ತಿಯು ಗಂಭೀರವಾದ ಹಣಕಾಸಿನ ಅಕ್ರಮಗಳಲ್ಲಿ ಭಾಗಿಯಾಗಿದ್ದರೆ ಮತ್ತು ಆದಾಯ ತೆರಿಗೆ ಕಾಯಿದೆ ಅಥವಾ ಸಂಪತ್ತು-ತೆರಿಗೆ ಕಾಯಿದೆಯಡಿ ಪ್ರಕರಣಗಳ ತನಿಖೆಯಲ್ಲಿ ಅವರ ಉಪಸ್ಥಿತಿಯು ಅವಶ್ಯಕವಾಗಿದ್ದರೆ, ಮತ್ತು ಅವರ ವಿರುದ್ಧ ತೆರಿಗೆ ಬೇಡಿಕೆಯನ್ನು ಹೊರಡಿಸುವ ಸಾಧ್ಯತೆಯಿದ್ದರೆ, ಅಥವಾ
– ಒಬ್ಬ ವ್ಯಕ್ತಿಯ ವಿರುದ್ಧ ರೂ. 10 ಲಕ್ಷ ಕ್ಕಿಂತ ಹೆಚ್ಚಿನ ನೇರ ತೆರಿಗೆ ಬಾಕಿ ಇದ್ದು, ಅದರ ವಿರುದ್ಧ ಯಾವುದೇ ಪ್ರಾಧಿಕಾರವು ತಡೆ ಹೇರಿಲ್ಲವಾದಲ್ಲಿ.”-
ಆದ್ದರಿಂದ, ವಿದೇಶಕ್ಕೆ ಹೋಗುವ ಮೊದಲು ಎಲ್ಲಾ ವ್ಯಕ್ತಿಗಳು ಆದಾಯ ತೆರಿಗೆ ತೆರವು ಪ್ರಮಾಣಪತ್ರವನ್ನು ಪಡೆಯಬೇಕು ಎಂಬ ಹೇಳಿಕೆ ಸುಳ್ಳು.
ಇದನ್ನೂ ಓದಿ:
ಭಾರತವು ಮಾಲ್ಡೀವ್ಸ್‌ನಿಂದ 28 ದ್ವೀಪಗಳನ್ನು “ಖರೀದಿಸಿದೆಯೇ”? ಸತ್ಯ ಪರಿಶೀಲನೆ
ಈ ಚಿತ್ರವು ರಾಜಸ್ಥಾನದ 5000 ವರ್ಷ ಹಳೆಯ ದೇವಾಲಯವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ