ಹೇಳಿಕೆ/Claim: ಕ್ಯಾಲಿಫೋರ್ನಿಯಾದಲ್ಲಿ ವಲಸಿಗ ಪೋಷಕರಿಗೆ ಜನಿಸಿದ ಕಮಲಾ ಹ್ಯಾರಿಸ್ ಯುನೈಟೆಡ್ ಸ್ಟೇಟ್ಸ್‌ನ “ನೈಸರ್ಗಿಕ ಜನನದ ನಾಗರಿಕ”ರಲ್ಲ ಮತ್ತು ಈ ಕಾರಣದಿಂದ ಯುಎಸ್ ಅಧ್ಯಕ್ಷೀಯ ಸ್ಪರ್ಧೆಗೆ ಅನರ್ಹರಾಗಿದ್ದಾರೆ.
ಕಡೆನುಡಿ/Conclusion: ಹೇಳಿಕೆ ಸುಳ್ಳು. ಕಮಲಾ ಹ್ಯಾರಿಸ್ ರವರು ಯುನೈಟೆಡ್ ಸ್ಟೇಟ್ಸ್‌ನ “ನೈಸರ್ಗಿಕ ಜನನದ ನಾಗರಿಕರು” ಮತ್ತು ಆದ್ದರಿಂದ ಯುಎಸ್ ಅಧ್ಯಕ್ಷೀಯ ಅಭ್ಯರ್ಥಿಯಾಗಲು ಅರ್ಹರಾಗಿದ್ದಾರೆ.
ರೇಟಿಂಗ್:ದಾರಿತಪ್ಪಿಸುವ ಹೇಳಿಕೆ —
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
************************************************************************
ಜುಲೈ 21, 2024 ರಂದು ತಾವು 2024ರ ಅಧ್ಯಕ್ಷೀಯ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವುದಾಗಿ ಯುಎಸ್ ಅಧ್ಯಕ್ಷರಾದ ಜೋ ಬಿಡೆನ್ ಘೋಷಿಸುತ್ತಿದ್ದಂತೆಯೇ ಒಂದು ಸಾಮಾಜಿಕ ಮಾಧ್ಯಮ ಪೋಸ್ಟ್ ಕಾಣಿಸಿಕೊಂಡಿದೆ. ತಮ್ಮ ಬದಲಿಗೆ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್ ಡೆಮೋಕ್ರಾಟ್ ಅಭ್ಯರ್ಥಿಯೆಂದು ಆತ ಅನುಮೋದಿಸಿದರು ಕೂಡ. ಕಮಲಾ ಹ್ಯಾರಿಸ್ “ಸಹಜ ಪ್ರಜೆ” ಅಲ್ಲದ ಕಾರಣ ಯುಎಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರಲ್ಲ ಎಂದು ಈ ಸಾಮಾಜಿಕ ಮಾಧ್ಯಮ ಪೋಸ್ಟ್ ಹೇಳಿಕೊಂಡಿದೆ.
Kamala Harris is not a natural born citizen! pic.twitter.com/WdbR8jNge1
— DivaPatriot 🇺🇸 (@TeamAmerica2020) July 21, 2024
ಕೆಳಗಿನಂತೆ ಫೇಸ್‌ಬುಕ್‌ನಲ್ಲಿಯೂ ಈ ಹೇಳಿಕೆಯನ್ನು ನೋಡಬಹುದು:
ಹೇಳಿಕೆಯ ಅನುಸಾರ, “ಆಕೆಯ (ಕಮಲಾ) ತಂದೆ ಜಮೈಕಾದ ಪ್ರಜೆಯಾಗಿದ್ದರು, ಆಕೆಯ ತಾಯಿ ಭಾರತದವರು, ಮತ್ತು 1964 ರಲ್ಲಿ ಹ್ಯಾರಿಸ್ ಹುಟ್ಟಿದ ಸಮಯದಲ್ಲಿ ಇವರಿಬ್ಬರೂ ಯುಎಸ್ ನ ಸಹಜ ಪ್ರಜೆಗಳಾಗಿರಲಿಲ್ಲ… ಈ ಅಂಶದಿಂದಾಗಿ ಆಕೆ “ಸಹಜವಾಗಿ ಜನಿಸಿದ ನಾಗರಿಕ”ರಾಗುವುದಿಲ್ಲ – ಮತ್ತು ಇದರಿಂದಾಗಿ ಅಧ್ಯಕ್ಷರ ಹುದ್ದೆಗೆ ಆಕೆ ಅನರ್ಹರು.”
FACT-CHECK
ಈ ಹೇಳಿಕೆ ಹೊಸದೇನಲ್ಲ ಮತ್ತು ನಾಲ್ಕು ವರ್ಷಗಳ ಹಿಂದೆ 2020 ರಲ್ಲಿ ಜೋ ಬಿಡೆನ್ ರವರು ತಮ್ಮ ಉಪಾಧ್ಯಕ್ಷ ಸಹೋದ್ಯೋಗಿಯಾಗಿ ಕಮಲಾ ಹ್ಯಾರಿಸ್ ಅವರನ್ನು ಆಯ್ಕೆ ಮಾಡಿದಾಗಲೂ ಈ ವಿಷಯವನ್ನೆತ್ತಲಾಗಿತ್ತು. ಈಗ ಆಕೆ ಬಿಡೆನ್ ಅವರ ಬದಲಾಗಿ ಡೆಮೋಕ್ರಾಟ್‌ಗಳ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವುದಾಗಿ ಹೇಳಿರುವುದರಿಂದ, ಹಳೆಯ ವಿವಾದವನ್ನು ಪುನಃ ಹುಟ್ಟುಹಾಕಲಾಗುತ್ತಿದೆ. ಆದರೆ, ಯುಎಸ್ ಸಂವಿಧಾನವು ಅಧ್ಯಕ್ಷೀಯ ಅಭ್ಯರ್ಥಿಯ ಅರ್ಹತೆಯ ಬಗ್ಗೆ ಸ್ಪಷ್ಟವಾಗಿದೆ.
ಯುಎಸ್ ಸಂವಿಧಾನವು ಹೇಳುವುದೇನೆಂದರೆ:
ಯುಎಸ್ ಸಂವಿಧಾನದ ಅನುಚ್ಛೇದ II ಹೇಳುವಂತೆ: “ನೈಸರ್ಗಿಕವಾಗಿ ಜನಿಸಿದ ನಾಗರಿಕರನ್ನು ಹೊರತುಪಡಿಸಿ ಯಾವುದೇ ವ್ಯಕ್ತಿ… ಅಧ್ಯಕ್ಷ ಹುದ್ದೆಗೆ ಅರ್ಹರಾಗಿರುವುದಿಲ್ಲ.” ಮತ್ತು ಯುಎಸ್ ಸಂವಿಧಾನದ ಹದಿನಾಲ್ಕನೆಯ ತಿದ್ದುಪಡಿಯು ಹೀಗೆ ಹೇಳುತ್ತದೆ: “ಯುನೈಟೆಡ್ ಸ್ಟೇಟ್ಸ್‌ನಲ್ಲಿ ಜನಿಸಿದ ಅಥವಾ ಸ್ವಾಭಾವಿಕ ನಾಗರಿಕರಾಗಿರುವ ಎಲ್ಲಾ ವ್ಯಕ್ತಿಗಳು, ಅದರ ನ್ಯಾಯವ್ಯಾಪ್ತಿಗೆ ಒಳಪಟ್ಟು, ಯುನೈಟೆಡ್ ಸ್ಟೇಟ್ಸ್ ನ ಮತ್ತು ತಾವು ವಾಸಿಸುವ ರಾಜ್ಯದ ನಾಗರಿಕರು”.
ಬೇ ಏರಿಯಾ ನ್ಯೂಸ್ ಗ್ರೂಪ್ ಅಪ್‌ಲೋಡ್ ಮಾಡಿದ ಆಕೆಯ ಜನನ ಪ್ರಮಾಣಪತ್ರವು ಈ ಕೆಳಗಿನ ವಿವರಗಳನ್ನು ಹೊಂದಿದೆ. ಆಕೆ ಅಕ್ಟೋಬರ್ 20, 1964 ರಂದು ಕ್ಯಾಲಿಫೋರ್ನಿಯಾದ ಓಕ್ಲೆಂಡ್ನಲ್ಲಿ ಜನಿಸಿದರು.
ಕ್ಯಾಲಿಫೋರ್ನಿಯಾದಲ್ಲಿ ಜನಿಸಿದ ಕಮಲಾ ಹ್ಯಾರಿಸ್ ರವರು ಯುನೈಟೆಡ್ ಸ್ಟೇಟ್ಸ್‌ನ “ನೈಸರ್ಗಿಕ ಜನನದ ನಾಗರಿಕ”ರು ಎಂದು ಇದು ಸೂಚಿಸುತ್ತದೆ. ಇದಲ್ಲದೆ, ಯುಎಸ್ ಸಂವಿಧಾನದಡಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಬ್ಬರಿಗೂ ಅರ್ಹತೆಯ ಷರತ್ತುಗಳು ಒಂದೇ ಸಮನಾಗಿವೆ. ಸೇವೆಯಲ್ಲಿರುವ ಉಪಾಧ್ಯಕ್ಷರಾಗಿ ಆಕೆ ಈಗಾಗಲೇ ಈ ಷರತ್ತನ್ನು ಪೂರೈಸಿದ್ದಾರೆ. ಆದ್ದರಿಂದ, ಆಕೆ ಯುಎಸ್ ಅಧ್ಯಕ್ಷೀಯ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಹಾಗಾಗಿ ಹೇಳಿಕೆ ಸುಳ್ಳು.
ಇದನ್ನೂ ಓದಿ:
ಪ್ಯಾರಿಸ್ ನ ಚರ್ಚ್‌ನಿಂದ ಒಲಂಪಿಕ್ ಜ್ಯೋತಿ ಬೆಳಗಿದ್ದನ್ನು ಈ ವೀಡಿಯೊ ತೋರಿಸುತ್ತದೆಯೇ? ಸತ್ಯ ಪರಿಶೀಲನೆ