Don't Miss

ಸ್ವಿಟ್ಜರ್ಲ್ಯಾಂಡ್ ನಲ್ಲಿ ಹಿಜಾಬ್ ಅನ್ನು ನಿಷೇಧಿಸಲಾಗಿದೆಯೇ ಮತ್ತು ಅಲ್ಲಿ ಇಸ್ಲಾಂ ಒಂದು ಧರ್ಮವೆಂದು ಗುರುತಿಸಲು ನಿರಾಕರಿಸಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :ಸ್ವಿಟ್ಜರ್ಲ್ಯಾಂಡ್ ನಲ್ಲಿ ಹಿಜಾಬ್ ಅನ್ನು ನಿಷೇಧಿಸಲಾಗಿದೆ ಮತ್ತು ಇಸ್ಲಾಂ ಅನ್ನು ಧರ್ಮವಾಗಿ ಗುರುತಿಸಲಾಗಿಲ್ಲ.

ಕಡೆನುಡಿ/Conclusion: ಇದು ದಾರಿತಪ್ಪಿಸುವ ಹೇಳಿಕೆ. ಮುಖವನ್ನು ಮುಚ್ಚಿಕೊಳ್ಳುವುದು ನಿಷೇಧಿತವಾಗಿರುವುದರಿಂದ ಮೊದಲ ಹೇಳಿಕೆ ಭಾಗಶಃ ನಿಜವಾಗಿದ್ದರೂ, ಇಸ್ಲಾಂ ಧರ್ಮವನ್ನು ಗುರುತಿಸಲಾಗಿಲ್ಲ ಎಂಬ ಎರಡನೆಯ ಹೇಳಿಕೆ ಸುಳ್ಳು.

ರೇಟಿಂಗ್:ದಾರಿತಪ್ಪಿಸುವ ಹೇಳಿಕೆ.–

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

ಮುಸುಕು ಧರಿಸಿರುವ ಮಹಿಳೆಯ ವಾಲ್ ಪೋಸ್ಟರ್‌ನ ಮುಂದೆ ಇಬ್ಬರು ಮಹಿಳೆಯರು ನಿಂತಿರುವುದನ್ನು ತೋರಿಸುವ, “ನಾನ್ ಔ ವಾಯಿಲ್” ಎಂಬ ಶೀರ್ಷಿಕೆಯೊಂದಿಗಿನ ವೈರಲ್ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ, ಶೀರ್ಷಿಕೆಯ ಆಂಗ್ಲ ಅನುವಾದ ಹೀಗಿದೆ: “ನೋ ಟು ದಿ ವೇಲ್” (ಮುಸುಕು ಬೇಡ). ಜನಾಭಿಪ್ರಾಯ ಸಂಗ್ರಹಣೆಯ ನಂತರ ಸ್ವಿಟ್ಜರ್ಲ್ಯಾಂಡ್‌ನಲ್ಲಿ ಹಿಜಾಬ್ ಅನ್ನು ನಿಷೇಧಿಸಲಾಗಿದೆ ಮತ್ತು ಅಲ್ಲಿ ಇಸ್ಲಾಂ ಅನ್ನು ಇನ್ನು ಮುಂದೆ ಧರ್ಮವಾಗಿ ಗುರುತಿಸಲಾಗುವುದಿಲ್ಲ ಎಂದು ಹೇಳಿಕೆ ಹೇಳುತ್ತದೆ. ಮತ್ತೊಂದು ಹೇಳಿಕೆಯ ಪ್ರಕಾರ, “ಸ್ವಿಟ್ಜರ್ಲ್ಯಾಂಡ್ ಜನಾಭಿಪ್ರಾಯದ ಅನುಸಾರ ತನ್ನ ಬೀದಿಗಳಲ್ಲಿ ಬುರ್ಖಾ ನಿಷೇಧಿಸಿದೆ ಮತ್ತು ಇಸ್ಲಾಂ ಅನ್ನು ಧರ್ಮವಾಗಿ ಅಧಿಕೃತಗೊಳಿಸಲು ನಿರಾಕರಿಸಿದೆ.”

 

FACT-CHECK

ಈ ಹೇಳಿಕೆಯ ಸತ್ಯ ಪರಿಶೀಲನೆ ನಡೆಸಲು ಡಿಜಿಟೈ ಇಂಡಿಯಾದ ವಾಟ್ಸಾಪ್ ಟಿಪ್‌ಲೈನ್‌ನಲ್ಲಿ ವಿನಂತಿ ಬಂತು, ತದನಂತರ ಗೂಗಲ್ ರಿವರ್ಸ್ ಇಮೇಜ್ ಹುಡುಕಾಟದಲ್ಲಿ ಮೂಲ ಚಿತ್ರ ಮತ್ತು ಅದರ ಮೂಲವನ್ನು ಪರಿಶೀಲಿಸಿತು. ಮೂಲ ಚಿತ್ರವು ಹಿಜಾಬ್ ಅಥವಾ ಮುಸುಕನ್ನು ವಿರೋಧಿಸುವ, ಫ್ರಾನ್ಸ್ ಮತ್ತು ಸ್ವಿಟ್ಜರ್ಲ್ಯಾಂಡ್‌ನಲ್ಲಿ ಸಕ್ರಿಯವಾಗಿರುವ ‘ಕಲೆಕ್ಟಿಫ್ ನೆಮೆಸಿಸ್‘ ಎಂಬ ಹೆಸರಿನ ಸ್ತ್ರೀವಾದಿ ಫ್ರೆಂಚ್ ಗುಂಪಿನದ್ದು. ಚಿತ್ರದಲ್ಲಿರುವ ಮಹಿಳೆಯರಿಬ್ಬರೂ ಇಲ್ಲಿ ಕಾಣುವ ಗುಂಪಿನ ವಕ್ತಾರರು. ಅವರ ವೆಬ್‌ಸೈಟ್‌ನಲ್ಲಿ ಹೆಚ್ಚಿನ ಹುಡುಕಾಟ ನಡೆಸಿದಾಗ ಮೂಲ ವೀಡಿಯೊ ಬಹಿರಂಗಗೊಂಡಿತು, ಅದರಲ್ಲಿ ಈ ಇಬ್ಬರು ಮಹಿಳೆಯರನ್ನು ಒಳಗೊಂಡಿರುವ ಅದೇ ಪೋಸ್ಟರ್ ಅನ್ನು ಇನ್ಸ್ಟಾಗ್ರಾಮ್‌ನಲ್ಲಿ ಕಾಣಬಹುದು.

ಎರಡನೆಯದಾಗಿ, ಮುಖವನ್ನು ಮುಚ್ಚುವ ಬಟ್ಟೆಯಾದ ನಿಖಾಬ್ ಅಥವಾ ಸಂಪೂರ್ಣ ದೇಹವನ್ನು ಮುಚ್ಚುವ ಬಟ್ಟೆಯಾದ ಬುರ್ಖಾಗಳನ್ನು ಸ್ವಿಟ್ಜರ್ಲ್ಯಾಂಡ್ 2021ರ ಜನಾಭಿಪ್ರಾಯ ಸಂಗ್ರಹಣೆಯ ಮೂಲಕ ನಿಷೇಧಿಸಿತು ಎಂಬುದು ನಿಜ.

ಆದರೆ, ಸ್ವಿಟ್ಜರ್ಲ್ಯಾಂಡ್ ನಲ್ಲಿ ಇಸ್ಲಾಂ ಅನ್ನು ಒಂದು ಧರ್ಮವಾಗಿ ಗುರುತಿಸಲಾಗಿಲ್ಲ ಎಂದು ಹೇಳುವಂತಹ ಯಾವುದೇ ನಿರ್ದಿಷ್ಟ ಕಾನೂನು ಅಥವಾ ಕಾಯಿದೆ ಇಲ್ಲ. ಧಾರ್ಮಿಕ ಸ್ವಾತಂತ್ರ್ಯವು, ಫೆಡರಲ್ ಸಂವಿಧಾನದ ರಕ್ಷಣೆಯುಳ್ಳ ಮೂಲಭೂತ ಹಕ್ಕು ಎಂದು ಧರ್ಮದ ಬಗೆಗಿನ ಸರ್ಕಾರಿ ವೆಬ್‌ಸೈಟ್ ಹೇಳುತ್ತದೆ. ದೇಶವು ಧಾರ್ಮಿಕ ಸ್ವಾತಂತ್ರ್ಯಕ್ಕೆ ಬದ್ಧವಾಗಿದೆ ಎಂದು ಇದು ಸ್ಪಷ್ಟವಾಗಿ ಹೇಳುತ್ತದೆ.

ಆದ್ದರಿಂದ, ಸಾರ್ವಜನಿಕವಾಗಿ ಜನರ ಮುಖವನ್ನು ಸಂಪೂರ್ಣವಾಗಿ ಮುಚ್ಚುವ ವಸ್ತುಗಳನ್ನು ಸ್ವಿಟ್ಜರ್ಲ್ಯಾಂಡ್ ನಿಷೇಧಿಸಿದೆ ಎಂಬ ಅಂಶವು ನಿಜ, ಆದರೆ ಎರಡನೆಯ ಹೇಳಿಕೆ ಸುಳ್ಳು.

ಇದನ್ನೂ ಓದಿ:
ಆನಿಮೇಟರ್‌ಗಳ ಪೋಸ್ಟ್ ನಿಂದಾಗಿ X ನಲ್ಲಿ ಹ್ಯಾಶ್‌ಟ್ಯಾಗ್ #RIPCartoonNetwork ಟ್ರೆಂಡ್ ಗೆ ಪ್ರಚೋದನೆ; ಸತ್ಯ ಪರಿಶೀಲನೆ
ಪ್ಯಾರಿಸ್ ನ ಚರ್ಚ್‌ನಿಂದ ಒಲಂಪಿಕ್ ಜ್ಯೋತಿ ಬೆಳಗಿದ್ದನ್ನು ಈ ವೀಡಿಯೊ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

 

Leave a Reply

Your email address will not be published. Required fields are marked *

*