ಹೇಳಿಕೆ/Claim: ಮೆಟ್ರೋದ ಒಂದು ಚಿತ್ರವನ್ನು ಹೊಂದಿರುವ ಬಿಜೆಪಿ ಪಶ್ಚಿಮ ಬಂಗಾಳ ಘಟಕದ ಪೋಸ್ಟರ್, ಅದು ಪ್ರಧಾನಿ ಮೋದಿಯವರ ಸಾಧನೆಗಳಲ್ಲಿ ಒಂದಾಗಿದೆ ಎಂದು ಹೇಳುತ್ತದೆ.
ಕಡೆನುಡಿ/Conclusion : ಹೇಳಿಕೆ ಸುಳ್ಳು. ಸಿಂಗಾಪುರದ ಜುರಾಂಗ್ ಮೆಟ್ರೋದ ಚಿತ್ರವನ್ನು ಮೋದಿಯವರ ಸಾಧನೆ ಎಂದು ಬಳಸಲಾಗಿದೆ.
ರೇಟಿಂಗ್: ತಪ್ಪು ನಿರೂಪಣೆ—
ಸತ್ಯ ಪರಿಶೀಲನೆ ವಿವರಗಳು
ಪ್ರಸಕ್ತವಾಗಿ ನಡೆಯುತ್ತಿರುವ ಲೋಕಸಭಾ ಚುನಾವಣೆಗಳ ನಡುವೆ ಪಶ್ಚಿಮ ಬಂಗಾಳ ಬಿಜೆಪಿಯು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಅನ್ನು ಹಾಕಿದೆ, ಈ ಮೂಲಕ ದೇಶದಾದ್ಯಂತ ಅನೇಕ ನಗರಗಳಲ್ಲಿ ಭಾರತದ ಮೆಟ್ರೋ ರೈಲು ಜಾಲವನ್ನು ಅಭಿವೃದ್ಧಿಪಡಿಸುವೆಡೆಗೆ ನೀಡಿದ ಕೊಡುಗೆಗಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದೆ.
কর্মসংস্থান না বাড়লে কীভাবে ভারতের শহরে শহরে পৌঁছে গেল মেট্রো পরিষেবা?
কংগ্রেস বলবে, বিজেপি করবে! #Vote4BJP #PhirEkBaarModiSarkar pic.twitter.com/Jmmb9ngsfK
— BJP West Bengal (@BJP4Bengal) May 12, 2024
ಬಂಗಾಳಿಯಲ್ಲಿರುವ ಹೇಳಿಕೆ ಹೀಗಿದೆ: কর্মসংস্থান না বাড়লে কীভাবে ভারতের শহরে শহরে পৌঁছে গেল মেট্রো পরিষেবা? কংগ্রেস বলবে, বিজেপি করবে!”
[ಬಂಗಾಳಿ ಭಾಷೆಯಿಂದ ಅನುವಾದಿಸಿದ ಶೀರ್ಷಿಕೆ ಹೀಗಿದೆ: “ಉದ್ಯೋಗಾವಕಾಶವನ್ನು ಹೆಚ್ಚಿಸದೆ ಮೆಟ್ರೋ ಸೇವೆಗಳು ಭಾರತದ ನಗರಗಳನ್ನು ತಲುಪಿದ್ದು ಹೇಗೆ? ಕಾಂಗ್ರೆಸ್ ಹೇಳುತ್ತದೆ, ಬಿಜೆಪಿ ಮಾಡುತ್ತದೆ!”]
ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಹಂಚಿಕೊಳ್ಳಲಾಗಿರುವ ಚಿತ್ರ ಮತ್ತು ಭಾರತದಲ್ಲಿ ಇದು ಮೋದಿಯವರ ಸಾಧನೆಯೆಂದು ಹೇಳಿರುವುದನ್ನು ಬಳಕೆದಾರರು ಪ್ರಶ್ನಿಸಿದ್ದಾರೆ. ಪೋಸ್ಟರ್ನಲ್ಲಿ ಬಳಸಲಾದ ರೈಲ್ವೇ ಮಾರ್ಗವು ಸಿಂಗಾಪುರದ ಜುರಾಂಗ್ ಈಸ್ಟ್ ಎಮ್ಆರ್ಟಿ ಆಗಿತ್ತು ಮತ್ತದು ಭಾರತದ ಚಿತ್ರವಲ್ಲ ಎಂದು ಹಲವಾರು X ಬಳಕೆದಾರರು ಸೂಚಿಸಿದ್ದಾರೆ.
FACT CHECK
ಚರ್ಚೆಯ ಬಾಬ್ತು, ನಾವು ಜುರಾಂಗ್ ಈಸ್ಟ್ ಎಮ್ಆರ್ಟಿಯ ಚಿತ್ರಗಳನ್ನು ತ್ವರಿತವಾಗಿ ಹುಡುಕಿದೆವು ಮತ್ತು ವಿಕಿಪೀಡಿಯಾದಲ್ಲಿ ಬಳಸಲಾದ ಚಿತ್ರವನ್ನು ಬಿಜೆಪಿಯ ಪಶ್ಚಿಮ ಬಂಗಾಳ ಘಟಕವು ಇದು ಮೋದಿ ನಿರ್ಮಿಸಿದ್ದು ಎಂದು ತೋರಿಸಲು ಬಳಸಿದೆ ಎಂಬುದನ್ನು ನಾವು ಕಂಡುಕೊಂಡೆವು. ಜುರಾಂಗ್ ಈಸ್ಟ್ ಎಮ್ಆರ್ಟಿ ನಿಲ್ದಾಣವು ಸಿಂಗಾಪುರದ ಜುರಾಂಗ್ ಈಸ್ಟ್ನಲ್ಲಿರುವ ಎಲವೇಟೆಡ್ ಇಂಟರ್ಸೆಕ್ಷನ್ ಆಗಿದ್ದು ಇದನ್ನು ಸಿಂಗಾಪುರದ ಎಸ್.ಎಂ.ಆರ್.ಟಿ ಟ್ರೈನ್ಸ್ ಲಿಮಿಟೆಡ್ ನಿರ್ವಹಿಸುತ್ತದೆ.
ಇದಲ್ಲದೆ, ನಾವು ಚಿತ್ರವನ್ನು ತೆಗೆದುಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್ನಲ್ಲಿ ಪರಿಶೀಲಿಸಿದಾಗ, ಸಿಂಗಾಪುರ ಮೂಲದ ದ ಸ್ಟ್ರೈಟ್ಸ್ ಟೈಮ್ಸ್ನಲ್ಲಿ ಫೆಬ್ರವರಿ 13, 2020 ರಂದು ಇದೇ ಚಿತ್ರವನ್ನು ಪ್ರಕಟಿಸಲಾಗಿತ್ತು ಎಂದು ನಮಗೆ ತಿಳಿದುಬಂತು. ಲೇಖನದ ಶೀರ್ಷಿಕೆ “ತಮ್ಮ ಚೋ ಚು ಕಾಂಗ್ ಎಂ.ಆರ್.ಟಿ ಮತ್ತು ಜುರಾಂಗ್ ಈಸ್ಟ್ ಎಂ.ಆರ್.ಟಿ ನಿಲ್ದಾಣಗಳ ನಡುವಿನ ರೈಲು ಪ್ರಯಾಣಗಳಿಗೆ ಸುಮಾರು 20 ನಿಮಿಷಗಳನ್ನು ಸೇರಿಸುವಂತೆ ಪ್ರಯಾಣಿಕರಿಗೆ ತಿಳಿಸಲಾಗಿದೆ.”
ಮೂಲಸೌಕರ್ಯಗಳ ವಿಷಯದಲ್ಲಿ ಸಾಧನೆಯನ್ನು ತೋರಿಸಲು ಬಿಜೆಪಿ ಘಟಕವು ತಪ್ಪು ಚಿತ್ರಣವನ್ನು ಬಳಸುತ್ತಿರುವುದು ಇದೇ ಮೊದಲಲ್ಲ. 2021 ರಲ್ಲಿ ಉತ್ತರ ಪ್ರದೇಶದಲ್ಲಿ ಎಕ್ಸ್ಪ್ರೆಸ್ವೇ ಬಗ್ಗೆ ಡಿಜಿಟೈ ಇಂಡಿಯಾ ಅಂತಹ ಹೇಳಿಕೆಯನ್ನು ತಳ್ಳಿಹಾಕಿತ್ತು.
ಆದ್ದರಿಂದ, ಮೆಟ್ರೋ ಚಿತ್ರದ ಸಂಬಂಧರಹಿತ ಚಿತ್ರಣದೊಂದಿಗಿರುವ ಹೇಳಿಕೆ ಸುಳ್ಳು.
ಇದನ್ನೂ ಓದಿ:
ಬೆಂಗಳೂರಿನಲ್ಲಿ ಅಂಗಡಿಗಳ ಕೇಸರಿ ಬಣ್ಣದ ಸೂಚನಾ ಫಲಕಗಳನ್ನು ಬೃ.ಬೆಂ.ಮ.ಪಾ ತೆಗೆದುಹಾಕುತ್ತಿದ್ದಾರಾ? ಸತ್ಯ ಪರಿಶೀಲನೆ