Don't Miss
Did Delhi minister Atishi say free power subsidy stops from tomorrow? Fact Check

ನಾಳೆಯಿಂದ ಉಚಿತ ವಿದ್ಯುತ್ ಅನುದಾನ ನಿಲ್ಲುತ್ತದೆ ಎಂದು ದೆಹಲಿ ಸಚಿವೆ ಅತಿಶಿ ಹೇಳಿದ್ದಾರಾ? ಸತ್ಯ ಪರಿಶೀಲನೆ

ಹೇಳಿಕೆ/Claim: ದೆಹಲಿ ಸಚಿವೆ ಅತಿಶಿಯವರ ವೀಡಿಯೊ ಕ್ಲಿಪ್ ನಲ್ಲಿ ಆಕೆ ದೆಹಲಿಯ ವಿದ್ಯುತ್ ಅನುದಾನವು ನಾಳೆಯಿಂದ (ಮೇ 23, 2024) ನಿಲ್ಲುತ್ತದೆ ಎಂದು ಹೇಳುತ್ತಿರುವುದನ್ನು ತೋರಿಸುತ್ತದೆ.

ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಸಚಿವೆ ಅತಿಶಿಯವರ ಏಪ್ರಿಲ್ 2023 ರ ಹಳೆಯ ವೀಡಿಯೊವನ್ನು ಇತ್ತೀಚಿನದು ಎಂದು ಹಂಚಿಕೊಳ್ಳಲಾಗುತ್ತಿದೆ. ತದ್ವಿರುದ್ಧವಾಗಿ, ಇತ್ತೀಚಿನ ಅಧಿಕೃತ ದೃಢೀಕರಣದ ಅನುಸಾರ ಉಚಿತ ವಿದ್ಯುತ್ ಅನುದಾನವು 2025 ರವರೆಗೆ ಮುಂದುವರಿಯಲಿದೆ.

ರೇಟಿಂಗ್: ತಪ್ಪು ನಿರೂಪಣೆ

ಸತ್ಯ ಪರಿಶೀಲನೆ ವಿವರಗಳು:

ಶನಿವಾರ, ಮೇ 25, 2024 ರಂದು ದೆಹಲಿಯಲ್ಲಿ ಏಳು ಲೋಕಸಭಾ ಸ್ಥಾನಗಳಿಗಾಗಿ ಚುನಾವಣೆಯ ನಡುವೆ, ಕೇಜ್ರಿವಾಲ್ ಸರ್ಕಾರವು ದೆಹಲಿಯ ನಿವಾಸಿಗಳಿಗೆ ನೀಡಿದ್ದ ವಿದ್ಯುತ್ ಅನುದಾನವನ್ನು ಹಿಂಪಡೆಯಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಮುಂದಿನ ದಿನದಿಂದ ಉಚಿತ ವಿದ್ಯುತ್ ಸರಬರಾಜು ಸೌಲಭ್ಯವನ್ನು ನಿಲ್ಲಿಸಲಾಗುವುದು ಎಂದು ದೆಹಲಿ ಸಚಿವೆ ಅತಿಶಿ ಮರ್ಲೆನಾ ಹೇಳುತ್ತಿರುವುದನ್ನು ವೀಡಿಯೊ ಕ್ಲಿಪ್ ತೋರಿಸುತ್ತದೆ.

ಹೇಳಿಕೆ ಹೀಗಿದೆ: “ಉಚಿತ ವಸ್ತುವಿಗಾಗಿ ಮತ ಹಾಕಿದ ಜನರಿಗೆ ಹೀಗೇ ಆಗಬೇಕು. ಉಚಿತ ಸವಲತ್ತುಗಳು ಆರ್ಥಿಕ ವಿಪತ್ತಿಗೆ ಖಚಿತ ಮಾರ್ಗ.”

ದೆಹಲಿಯ ನಿವಾಸಿಗಳಿಗೆ ದೆಹಲಿ ಸರ್ಕಾರವು 300 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದೆ ಎಂಬುದು ತಿಳಿದಿರುವ ಸಂಗತಿ ಮತ್ತು ಈ ಅನುದಾನದ ವಿಷಯವು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷ (AAP) ಅಧಿಕಾರದಲ್ಲಿರುವ ರಾಷ್ಟ್ರ ರಾಜಧಾನಿಯಲ್ಲಿ ರಾಜಕೀಯ ಪಕ್ಷಗಳ ನಡುವೆ ವಿವಾದಕ್ಕೆ ಕಾರಣವಾಗಿದೆ.

ಈ ಹೇಳಿಕೆಯನ್ನು ಇಲ್ಲಿ ಮತ್ತು ಇಲ್ಲಿ ವಿಭಿನ್ನ ಟೀಕೆಗಳು ಮತ್ತು ಶೀರ್ಷಿಕೆಗಳೊಂದಿಗೆ ಹಂಚಿಕೊಳ್ಳಲಾಗಿದೆ.

FACT-CHECK

ನಾವು ವಾಟ್ಸಾಪ್ ನಲ್ಲಿ ಕೋರಿಕೆನ್ನು ಸ್ವೀಕರಿಸಿದಾಗ, ನಾವು ಮೊದಲಿಗೆ ಅತಿಶಿಯ ಅಧಿಕೃತ ಹ್ಯಾಂಡಲ್‌ ಮತ್ತು AAP ಹ್ಯಾಂಡಲ್‌ ಗಳನ್ನು ಪರಿಶೀಲಿಸಿದೆವು. ಒಂದು ವರ್ಷದ ಹಿಂದೆ ಸುದ್ದಿ ಸಂಸ್ಥೆ ANI ಅಪ್‌ಲೋಡ್ ಮಾಡಿದ್ದ ಮೂಲ ವೀಡಿಯೊವನ್ನು ಸಹ ಶೀಘ್ರದಲ್ಲೇ ಕಂಡುಕೊಂಡೆವು, ಅದರಲ್ಲಿ ಸಚಿವೆ ಅತಿಶಿಯವರು ವಿದ್ಯುತ್ ಸಬ್ಸಿಡಿಯ ಬಗ್ಗೆ ಮಾತನಾಡುವುದನ್ನು ಕಾಣಬಹುದು. ಇದನ್ನು ಏಪ್ರಿಲ್ 14, 2023 ರಂದು ಪೋಸ್ಟ್ ಮಾಡಲಾಗಿತ್ತು, ಚುನಾವಣಾ ಪ್ರಚಾರವು ಜೋರಾಗಿ ನಡೆಯುತ್ತಿರುವ ಮೇ 24, 2024 ರಂದು ಅಲ್ಲ.

ANI ವರದಿಯ ಶೀರ್ಷಿಕೆಯು ಹೀಗಿದೆ, “ಇಂದಿನಿಂದ, ದೆಹಲಿಯ ಜನರಿಗೆ ನೀಡಲಾಗುತ್ತಿರುವ ಅನುದಾನಿತ ವಿದ್ಯುತ್ ಅನ್ನು ನಿಲ್ಲಿಸಲಾಗುವುದು. ಇದರರ್ಥ ನಾಳೆಯಿಂದ ಅನುದಾನಿತ ಬಿಲ್‌ಗಳನ್ನು ನೀಡಲಾಗುವುದಿಲ್ಲ. ಈ ಅನುದಾನವನ್ನು ನಿಲ್ಲಿಸಲಾಗಿರುವುದು ಏಕೆಂದರೆ AAP ಸರ್ಕಾರವು ಮುಂಬರುವ ವರ್ಷಕ್ಕೆ ಅನುದಾನವನ್ನು ಮುಂದುವರಿಸುವ ನಿರ್ಧಾರವನ್ನು ಕೈಗೊಂಡಿದೆ, ಆದರೆ ಆ ಕಡತ ದೆಹಲಿ ಎಲ್‌ಜಿ ಬಳಿ ಇದೆ ಮತ್ತು ಕಡತ ಹಿಂದಿರುಗುವ ತನಕ, AAP ಸರ್ಕಾರವು ಅನುದಾನಿತ ಬಿಲ್ ಅನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ: ದೆಹಲಿ ಮಂತ್ರಿ ಅತಿಶಿ” ಮತ್ತು ದಿನಾಂಕವು ಏಪ್ರಿಲ್ 14, 2023 ಎಂದು ತೋರಿಸುತ್ತದೆ.

ಅನುದಾನದ ಕಡತವು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಬಳಿ ಉಳಿದುಕೊಂಡಿರುವುದು ವಿಳಂಬಕ್ಕೆ ಕಾರಣ ಎಂದು ಅತಿಶಿ ಹಿಂದಿಯಲ್ಲಿ ಹೇಳುವುದನ್ನು ವೀಡಿಯೊದಲ್ಲಿ ಕೇಳಬಹುದು. ಆದರೆ, ಇತ್ತೀಚಿನ ಅಧಿಕೃತ ದೃಢೀಕರಣದ ಪ್ರಕಾರ ಈ ಸಮಸ್ಯೆಯನ್ನು ಪರಿಹರಿಸಲಾಗಿದ್ದು 2025 ರವರೆಗೆ ಅನುದಾನ ಮುಂದುವರೆಯಲಿದೆ ಎಂದು ಸುದ್ದಿ ವರದಿಗಳನ್ನು ತಿಳಿಸಿವೆ.

ದೆಹಲಿಯಲ್ಲಿ ವಿದ್ಯುತ್, ನೀರು ಮತ್ತು ಬಸ್ ದರದ ಅನುದಾನಗಳನ್ನು ಮುಂದುವರಿಸಲಾಗುವುದು ಎಂದು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾರವರು ಏಪ್ರಿಲ್ 13, 2024 ರಂದು ಸ್ಪಷ್ಟಪಡಿಸಿದರು ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲಿನಲ್ಲಿರುವ ಕಾರಣ ಯೋಜನೆಗಳನ್ನು ನಿಲ್ಲಿಸಲಾಗುವುದು ಎಂಬ ಹೇಳಿಕೆಗಳಿಗೆ ಗಮನ ಕೊಡಬೇಡಿ ಎಂದು ಜನರನ್ನು ಕೇಳಿಕೊಂಡರು.

ಆದ್ದರಿಂದ ಹೇಳಿಕೆ ಸುಳ್ಳು.

 

ಇದನ್ನೂ ಓದಿ:

ಅನೇಕ ದೇಶಗಳಲ್ಲಿ ಭಾರತೀಯ ತರಕಾರಿಗಳನ್ನು ನಿಷೇಧಿಸಲಾಗಿದೆಯೇ? ಸತ್ಯ ಪರಿಶೀಲನೆ
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪಿತ್ರಾರ್ಜಿತ ತೆರಿಗೆಯನ್ನು ಪ್ರಸ್ತಾಪಿಸಲಾಗಿದೆಯೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*