Don't Miss

ಸಾಲಿಸಿಟರ್ ಜನರಲ್ ರವರು ವಾದ ಮಂಡಿಸುತ್ತಿದ್ದಾಗ ಭಾರತದ ಮುಖ್ಯ ನ್ಯಾಯಮೂರ್ತಿಗಳು ನ್ಯಾಯಾಲಯದ ಕೊಠಡಿಯಿಂದ ಹೊರ ಹೋದರೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಸಾಲಿಸಿಟರ್ ಜನರಲ್ ಸರ್ವೋಚ್ಚ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿದ್ದಾಗ, ಮುಖ್ಯ ನ್ಯಾಯಾಧೀಶರು ಅಲ್ಲಿಂದ ಹೊರನಡೆದರು.

ಕಡೆನುಡಿ/Conclusion: ಸಂಪೂರ್ಣವಾಗಿ ಸುಳ್ಳು. ಹೇಳಿಕೆಯನ್ನು ಸಮರ್ಥಿಸುವಂತೆ ವೀಡಿಯೊವನ್ನು ಥಟ್ಟನೆ ಕತ್ತರಿಸಲಾಗಿದೆ. ಅಧಿವೇಶನದುದ್ದಕ್ಕೂ ಸಿಜೆಐ ಉಪಸ್ಥಿತರಿದ್ದರು ಎಂಬುದನ್ನು ಮೂಲ ವೀಡಿಯೊ ತೋರಿಸುತ್ತದೆ.

ರೇಟಿಂಗ್: ಸಂಪೂರ್ಣವಾಗಿ ಸುಳ್ಳುFive rating

ಸತ್ಯ ಪರಿಶೀಲನೆ ವಿವರಗಳು

ರಾಜಕೀಯ ಪಕ್ಷಗಳಿಗಾಗಿ ಚುನಾವಣಾ ಬಾಂಡ್‌ಗಳ ಕುರಿತಾದ ಐತಿಹಾಸಿಕ ತೀರ್ಪಿನ ನಡುವೆ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ರವರು ತಮ್ಮ ವಾದವನ್ನು ಮಂಡಿಸುತ್ತಿರುವಾಗ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೊರನಡೆದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಹೇಳಿಕೆಗಳೊಂದಿಗೆ ವೈರಲ್ ಆಗಿದೆ.

ಜಯೇಶ್ ಮೆಹ್ತಾ ರವರ ಅಂತಹ ಒಂದು ಪೋಸ್ಟ್ ಟ್ವಿಟರ್‌ನಲ್ಲಿ ಚರ್ಚೆಗೆ ಕಾರಣವಾಗಿದೆ.



ಶೀರ್ಷಿಕೆಯು ಹೀಗಿದೆ: “#CJI ಈ ರೀತಿ ವರ್ತಿಸುವುದು ಹೇಗೆ? ಎಸ್‌ಜಿ ಅವರ ಸಮಕ್ಷ ತಮ್ಮ ವಾದ ಮಂಡಿಸಿತ್ತಿರುವಂತೆ ಅವಧಿ ಮುಂದೂಡದೆ ಅವರು ಮತ್ತು ಇತರ ನ್ಯಾಯಾಧೀಶರು ಸುಮ್ಮನೆ ಹೊರನಡೆದರು.. ಇದು ಭಾರತ ಸರ್ಕಾರಕ್ಕೆ ಘೋರ ಅವಮಾನ. ಭಾರತದ ರಾಷ್ಟ್ರಪತಿಗಳು ಸಿಜೆಐ ಚಂದ್ರಚೂಡ್ ಒಳಗೊಂಡಂತೆ ಎಲ್ಲಾ ನ್ಯಾಯಾಧೀಶರನ್ನು ಎಳೆತಂದು ರಾಜೀನಾಮೆ ಕೊಡುವಂತೆ ಮಾಡಬೇಕು. ಈ ಚಂದ್ರಚೂಡ್ ಸಂಪೂರ್ಣವಾಗಿ ಶಿಷ್ಟಾಚಾರವಿಲ್ಲದ ಮತ್ತು ದುರಹಂಕಾರಿ ಮನುಷ್ಯ. ಅವರು ಮತ್ತು ಇತರ ನ್ಯಾಯಾಧೀಶರು ಭಾರತ ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ.. ನ್ಯಾಯಾಧೀಶರ ಈ ವರ್ತನೆಯ ಹಿಂದಿನ ಕಾರಣಗಳ ಪಟ್ಟಿಯನ್ನು ನಾನು ಶೀಘ್ರದಲ್ಲೇ ಪೋಸ್ಟ್ ಮಾಡುತ್ತೇನೆ.”

FACT-CHECK

ಸಂಪೂರ್ಣ ವೀಡಿಯೊವನ್ನು ಹುಡುಕಿದಾಗ, ಸಾಲಿಸಿಟರ್ ಜನರಲ್ ತಮ್ಮ ವಾದವನ್ನು ಮಂಡಿಸುವಾಗ ಭಾರತದ ಮುಖ್ಯ ನ್ಯಾಯಮೂರ್ತಿಗಳು ಎಲ್ಲಿಯೂ ನ್ಯಾಯಾಲಯದ ಕೊಠಡಿಯಿಂದ ಹೊರಬಂದಿಲ್ಲ. ಮೂಲ ವೀಡಿಯೊಗಾಗಿ ನಾವು ಯೂಟ್ಯೂಬ್ ನಲ್ಲಿ ಹುಡುಕಿದಾಗ, ಮಾರ್ಚ್ 18, 2024 ರಂದು ಈ ಕೆಳಗಿನ ವೀಡಿಯೊ ಅಪ್‌ಲೋಡ್ ಮಾಡಿರುವುದು ನಮಗೆ ಕಂಡುಬಂತು.

ಹೇಳಲಾದ ಘಟನೆಯು ವೀಡಿಯೊದಲ್ಲಿ 24 ನಿಮಿಷಗಳ ಸಮಯಕ್ಕೆ ನಡೆಯುತ್ತದೆ ಮತ್ತು ಮುಖ್ಯ ನ್ಯಾಯಾಧೀಶರು ತಮ್ಮ ಸಹೋದ್ಯೋಗಿಗಳೊಂದಿಗೆ ಮಾತನಾಡುವುದನ್ನು ಮತ್ತು ತಮ್ಮ ಆಸನವನ್ನು ಸರಿಪಡಿಸುವುದನ್ನು ನಾವು ಸ್ಪಷ್ಟವಾಗಿ ಕಾಣಬಹುದು, ಆದರೆ ಅವರು ಆಸನವನ್ನು ಬಿಟ್ಟು ಹೋಗಲಿಲ್ಲ. ನಿಜಾಂಶವೆಂದರೆ, ಯಾವುದೇ ನಡಾವಳಿಗಳು ಅಡೆತಡೆಯಿಲ್ಲದೆ ಮುಂದುವರೆದವು.

ವೀಡಿಯೊವನ್ನು 24 ನಿಮಿಷಗಳಲ್ಲಿ ಥಟ್ಟನೆ ಅಂತ್ಯಗೊಳಿಸಿ, ಮುಖ್ಯ ನ್ಯಾಯಾಧೀಶರು ನ್ಯಾಯಾಲಯದ ಕೊಠಡಿಯಿಂದ ಹೊರನಡೆದಿದ್ದಾರೆ ಎಂದು ತೋರಿಸುವ ಸುಳ್ಳು ಹೇಳಿಕೆ ನೀಡಲಾಯಿತು. ಆದ್ದರಿಂದ, ವೀಡಿಯೊ ಮತ್ತು ಹೇಳಿಕೆ ಸಂಪೂರ್ಣವಾಗಿ ಸುಳ್ಳು.

ಇದನ್ನೂ ಓದಿ:

ಬೆಂಗಳೂರಿನಲ್ಲಿ ಅಂಗಡಿಗಳ ಕೇಸರಿ ಬಣ್ಣದ ಸೂಚನಾ ಫಲಕಗಳನ್ನು ಬೃ.ಬೆಂ.ಮ.ಪಾ ತೆಗೆದುಹಾಕುತ್ತಿದ್ದಾರಾ? ಸತ್ಯ ಪರಿಶೀಲನೆ

ಇಲ್ಲ, “ಡಿಎಂಕೆ ಹಿಂದೂಗಳನ್ನು ಮತಕ್ಕಾಗಿ ಬೇಡುವುದಿಲ್ಲ ” ಎಂದು ಸ್ಟಾಲಿನ್ ಎಂದಿಗೂ ಹೇಳಿಲ್ಲ; ಸತ್ಯ ಪರಿಶೀಲನೆ


					
					
									

Leave a Reply

Your email address will not be published. Required fields are marked *

*