ಹೇಳಿಕೆ/Claim: ರಾಹುಲ್ ಗಾಂಧಿಯವರು ಬಿಜೆಪಿಯನ್ನು ಕಾಂಗ್ರೆಸ್‌ನೊಂದಿಗೆ ಗೊಂದಲಿಸಿಕೊಂಡು , ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿದ್ದಾರೆಂದು ವೀಡಿಯೊ ತೋರಿಸುತ್ತದೆ.
ಕಡೆನುಡಿ/Conclusion: ಸುಳ್ಳು. ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿರುವುದನ್ನು ತೋರಿಸಲು ವೀಡಿಯೊವನ್ನು ತಿದ್ದಲಾಗಿದೆ ಮತ್ತು ಧ್ವನಿಯನ್ನು ಬದಲಾಯಿಸಲಾಗಿದೆ.
ರೇಟಿಂಗ್:ಸಂಪೂರ್ಣವಾಗಿ ಸುಳ್ಳು–
ಸತ್ಯ ಪರಿಶೀಲನೆ ವಿವರಗಳು
ಮಧ್ಯಪ್ರದೇಶದಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಪಾಲ್ಗೊಂಡು ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವೀಡಿಯೊವನ್ನು ವಾಟ್ಸಾಪ್‌ನಲ್ಲಿ “ಪರಮ ಸತ್ಯ” ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೊದಲ್ಲಿ, ರಾಹುಲ್ ಗಾಂಧಿಯವರು ಬಿಜೆಪಿಯನ್ನು ಕಾಂಗ್ರೆಸ್‌ಗೆ ಹೋಲಿಸುತ್ತಾ ಅವರ ಪಾತ್ರಗಳನ್ನು ಹೇಗೆ ಗೊಂದಲಗೊಳಿಸುತ್ತಾರೆಂದರೆ ಅವರು ಬಿಜೆಪಿಯನ್ನು ಹೊಗಳಿ ತಮ್ಮದೇ ಪಕ್ಷವನ್ನು ಟೀಕಿಸುವುದು ಕಂಡುಬರುತ್ತದೆ. ವಾಟ್ಸಾಪ್ ನಲ್ಲಿ ಶೇರ್ ಆಗುತ್ತಿರುವ ವೀಡಿಯೋವನ್ನು ಇಲ್ಲಿ ನೋಡಿ:
FACT CHECK
ವೀಡಿಯೊ ಧ್ವನಿಯು ಅನುಮಾನಾಸ್ಪದವಾಗಿ ಕಂಡುಬಂದದ್ದರಿಂದ, ನಾವು InVID ಫ್ರೇಮ್ ಕಟ್‌ಗಳನ್ನು ಬಳಸಿ ಅವುಗಳನ್ನು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟದಲ್ಲಿ ಹುಡುಕಿದಾಗ, ವೀಡಿಯೊದಲ್ಲಿರುವ ಧ್ವನಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಕೆಟ್ಟ ರೀತಿಯಲ್ಲಿ ತೋರಿಸಲು ಟ್ವೀಕ್ ಮಾಡಲಾಗಿದೆ ಎಂದು ಕಂಡುಬಂತು. ಮಾರ್ಚ್ 3, 2024 ರಂದು ಮಧ್ಯಪ್ರದೇಶದ ಮೊರೆನಾದಲ್ಲಿ ಧ್ವಜ ಹಸ್ತಾಂತರ ಸಮಾರಂಭದಲ್ಲಿ ರಾಹುಲ್ ಗಾಂಧಿಯವರು ನೀಡಿದ ಭಾಷಣದ ಮೂಲ ವೀಡಿಯೊವನ್ನು ನಾವು ಕಂಡುಹಿಡಿದೆವು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿಕೃತ ಯುಟ್ಯೂಬ್ ವಾಹಿನಿಯಲ್ಲಿ ಅಪ್‌ಲೋಡ್ ಮಾಡಲಾದ ಮೂಲ ವೀಡಿಯೊ ಇಲ್ಲಿದೆ:
ಮೇಲಿನ ವೀಡಿಯೊದಲ್ಲಿ, 20:11 ನಿಮಿಷದಿಂದ 20:30 ನಿಮಿಷಗಳವರೆಗೆ ವೀಕ್ಷಿಸಿದರೆ ರಾಹುಲ್ ಗಾಂಧಿಯವರು ಬಿಜೆಪಿ ಮತ್ತು ಅರ್.ಎಸ್.ಎಸ್ ಸಿದ್ಧಾಂತವನ್ನು ಸ್ಪಷ್ಟವಾಗಿ ಟೀಕಿಸುತ್ತಾ ಅದರ ವಿರುದ್ಧವಾಗಿ ಕಾಂಗ್ರೆಸ್ ಸಿದ್ಧಾಂತವನ್ನು ವಿವರಿಸುವುದನ್ನು ಕಾಣಬಹುದು. ಅವರು ಮಾತನಾಡುವಾಗ ಪಕ್ಷಗಳ ಪಾತ್ರಗಳನ್ನು ಗೊಂದಲಗೊಳಿಸಲಿಲ್ಲ, ಬದಲಾಯಿಸಲೂ ಇಲ್ಲ. ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ತಿದ್ದಿದ ವೀಡಿಯೊದಲ್ಲಿ ತೋರಿಸಿರುವಂತೆ ಅವರು ತಮ್ಮದೇ ಪಕ್ಷವನ್ನು ಟೀಕಿಸುವಷ್ಟು ಗೊಂದಲಕ್ಕೊಳಗಾಗುವುದಿಲ್ಲ ಎಂಬುದು ಸ್ಪಷ್ಟ. ಹಾಗಾಗಿ ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ವಿಡಿಯೋ ಸಂಪೂರ್ಣ ಸುಳ್ಳು.
ಇದನ್ನೂ ಓದಿ:
ಬೆಂಗಳೂರಿನಲ್ಲಿ ಅಂಗಡಿಗಳ ಕೇಸರಿ ಬಣ್ಣದ ಸೂಚನಾ ಫಲಕಗಳನ್ನು ಬೃ.ಬೆಂ.ಮ.ಪಾ ತೆಗೆದುಹಾಕುತ್ತಿದ್ದಾರಾ? ಸತ್ಯ ಪರಿಶೀಲನೆ
ಇಲ್ಲ, "ಡಿಎಂಕೆ ಹಿಂದೂಗಳನ್ನು ಮತಕ್ಕಾಗಿ ಬೇಡುವುದಿಲ್ಲ " ಎಂದು ಸ್ಟಾಲಿನ್ ಎಂದಿಗೂ ಹೇಳಿಲ್ಲ; ಸತ್ಯ ಪರಿಶೀಲನೆ