ಹೇಳಿಕೆ/Claim: ಭಾರತೀಯ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ಟ್ಯಾಗ್ ಮಾಡಿ, “ರಸ್ತೆಗಳ ಇಲಾಖೆ” ಕಟ್ಟಡದ ಮುಂಭಾಗದಲ್ಲಿ ಜಲಾವೃತಗೊಂಡ ರಸ್ತೆಯನ್ನು ಹಂಚಿಕೊಳ್ಳಲಾಗಿದೆ.
ಕಡೆನುಡಿ/Conclusion:ಸುಳ್ಳು. ಕಟ್ಟಡ ಮತ್ತು ಜಲಾವೃತ ರಸ್ತೆಯೆರಡೂ ನೇಪಾಳದಲ್ಲಿದೆ, ಭಾರತದಲ್ಲಿ ಅಲ್ಲ.
ರೇಟಿಂಗ್:ತಪ್ಪು ನಿರೂಪಣೆ--
ಸತ್ಯ ಪರಿಶೀಲನೆ ವಿವರಗಳು
ಜಲಾವೃತಗೊಂಡ ರಸ್ತೆಯನ್ನು ಚಿತ್ರಿಸುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ, ಇದು “ರಸ್ತೆ ಇಲಾಖೆ” ಕಟ್ಟಡದ ದೃಶ್ಯವೆಂಬುದು ಚಿತ್ರದ ಜೊತೆಯಿರುವ ಹೇಳಿಕೆ.
பாஜகவின் சாதனைகளில் இதுவும் ஒன்று….
“Department of Roads” “சாலை போக்குவரத்து துறை”ஒட்டிய சாலைக்கே சாலை அமைக்க வக்கில்லை 💦💦💦 pic.twitter.com/53ECsR62jt
— ஶ்ரீ தேவி ரஞ்சன் குமார் (@Shree_Rk0803) March 7, 2024
ತಮಿಳಿನಲ್ಲಿರುವ ಟ್ವೀಟ್ ಅನ್ನು ಕನ್ನಡಕ್ಕೆ ಇಲ್ಲಿ ಅನುವಾದಿಸಲಾಗಿದೆ: “ಇದು ಬಿಜೆಪಿಯ ಸಾಧನೆಗಳಲ್ಲಿ ಒಂದು.”ರಸ್ತೆ ಸಾರಿಗೆ ಇಲಾಖೆ”ಯ ಪಕ್ಕದಲ್ಲಿ ರಸ್ತೆ ನಿರ್ಮಿಸುವ ಹಕ್ಕು “ರಸ್ತೆ ಇಲಾಖೆ”ಗೆ ಇಲ್ಲ.”
ನಾವು ಮತ್ತಷ್ಟು ಹುಡುಕಿದಾಗ, ಇದನ್ನು ಕೆಳಗೆ ಕಾಣುವಂತೆ ಮಾರ್ಚ್ 3, 2024 ರಿಂದೀಚೆಗೆ ಟ್ವಿಟರ್ ನಲ್ಲಿ ಹಲವಾರು ಬಳಕೆದಾರರು ಹಂಚಿಕೊಂಡಿದ್ದಾರೆ ಎಂದು ನಮಗೆ ತಿಳಿದುಬಂತು:
Department of roads 😅 pic.twitter.com/5vb08JwLou
— Rakesh Laroia (@r_laroia) March 4, 2024
ಮತ್ತೊಬ್ಬ ಬಳಕೆದಾರರು ಇದನ್ನು: “ರಸ್ತೆಗಳ ಇಲಾಖೆ. ಇದು ಭಾರತದಲ್ಲಿ ಮಾತ್ರ ಆಗೋದು. ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ
सडक विभाग हजुर! दबाब यात्रा यता पो गर्ने की! नजिकै 😂🫢 pic.twitter.com/4hP4URpwK6
— Deependra (DC) (@deependradc) March 3, 2024
X(ಈ ಹಿಂದೆ ಟ್ವಿಟರ್)ನ ಕೆಲವು ಬಳಕೆದಾರರು ಇದನ್ನು ಭಾರತೀಯ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ನಿತಿನ್ ಗಡ್ಕರಿಯವರನ್ನು ಟ್ಯಾಗ್ ಮಾಡಿ ಹಂಚಿಕೊಂಡಿದ್ದಾರೆ.
FACT-CHECK
ಡಿಜಿಟೈ ಇಂಡಿಯಾ ತಂಡವು ಇದನ್ನು ಸತ್ಯ ಪರಿಶೀಲನೆಗಾಗಿ ಕೈಗೆತ್ತಿಕೊಂಡಿತು. ಮೊದಲಿಗೆ, ನಾವು ಭಾರತೀಯ ಸಾರಿಗೆ ಸಚಿವಾಲಯದ ಲಾಂಛನವನ್ನು ಹುಡುಕಿದೆವು, ಆಗ ಕಟ್ಟಡದ ಮೇಲಿನ ಲಾಂಛನವು ವಿಭಿನ್ನವಾಗಿದೆ ಎಂದು ಕಂಡುಬಂತು.
ಎರಡನೆಯದಾಗಿ, ನಾವು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟದಲ್ಲಿ ಚಿತ್ರವನ್ನು ಪರಿಶೀಲಿಸಿದಾಗ ನೇಪಾಳಿ ಸುದ್ದಿ ವೆಬ್‌ಸೈಟ್ “ಬಿಜ್ನೆಸ್ ನ್ಯೂಸ್” ನಲ್ಲಿ ಮಾರ್ಚ್ 4 ರ ವರದಿಯಲ್ಲಿ ಈ ಚಿತ್ರವನ್ನು ಬಳಸಲಾಗಿದೆ ಎಂದು ನಮಗೆ ತಿಳಿದುಬಂತು.
Xನಲ್ಲಿ ಹೆಚ್ಚಿನ ಹುಡುಕಾಟ ನಡೆಸಿದಾಗ ಅದೇ ಚಿತ್ರವನ್ನು X ಬಳಕೆದಾರ ದೀಪೇಂದ್ರ ಚೌಲಗೈ ಅವರು ಒಂದು ದಿನದ ಮುಂಚೆ ಹಂಚಿಕೊಂಡಿದ್ದಾರೆ ಎಂದು ತಿಳಿದುಬಂತು, ಇದನ್ನು ಮಾರ್ಚ್ 4, 2024 ರಂದು ನೇಪಾಳದ ಕಠ್ಮಂಡು ರಸ್ತೆ ವಿಭಾಗದ ಪತ್ರಿಕಾ ಪ್ರಕಟಣೆಯಲ್ಲಿ ಮರು ಟ್ವೀಟ್ ಮಾಡಲಾಗಿದೆ. 2015 ರಲ್ಲಿ ನೇಪಾಳದ ಭೂಕಂಪದ ನಂತರ ಕಟ್ಟಡದ ಬಳಕೆಯನ್ನು ಸಂಕ್ಷಿಪ್ತವಾಗಿ ನಿಲ್ಲಿಸಲಾಗಿತ್ತು ಮತ್ತು ಈಗ ರಸ್ತೆಗಳ ಇಲಾಖೆಯು ಅದನ್ನು ಬಳಸುತ್ತಿದ್ದರೂ ಅದರ ನವೀಕರಣವನ್ನು ಮಾಡುವ ಅಗತ್ಯವಿದೆ ಎಂದು ಅದರ ಅನುವಾದವು ಹೇಳುತ್ತದೆ.
ಆದ್ದರಿಂದ, ಚಿತ್ರವು ಕಠ್ಮಂಡುವಿನಲ್ಲಿ ಭಾರೀ ಮಳೆಯ ನಡುವೆ ರಿಪೇರಿ ಬಾಕಿ ಉಳಿದಿರುವ ರಸ್ತೆ ವಿಭಾಗದ ಆವರಣವನ್ನು ತೋರಿಸುತ್ತದೆ, ಮತ್ತು ಹೇಳಿಕೊಂಡಿರುವಂತೆ ಇದು ಭಾರತದ್ದಲ್ಲ.
ಇದನ್ನೂ ಓದಿ:
ಭಾರತದಲ್ಲಿ ಈಗ ಹೊಸ ರೈಲು ಹಳಿ ಯಂತ್ರಗಳನ್ನು ಬಳಸಲಾಗುತ್ತಿದೆ ಎಂದು ವೈರಲ್ ವೀಡಿಯೊ ಹೇಳುತ್ತದೆ; ಸತ್ಯ ಪರಿಶೀಲನೆ