Claim: ಒಂದು ವೀಡಿಯೊ, ಭಾರತದಲ್ಲಿ ಅಂಚೆ ಮಾಸ್ತರರ ಆಯ್ಕೆಯನ್ನು ಮಾಡುವ ವಿಧಾನವನ್ನು ತೋರಿಸುವುದೆಂಬ ಹೇಳಿಕೆಯೊಂದಿಗೆ ನೀರಿನಲ್ಲಿ ಹಲಗೆ ಸೇತುವೆಯ ಮೇಲೆ ನಿಖರ ಸೈಕಲ್ ಬ್ಯಾಲೆನ್ಸ್ ಅನ್ನು ತೋರಿಸುತ್ತದೆ.
Conclusion: ಸುಳ್ಳು. ಭಾರತದಲ್ಲಿ ಅಂಚೆ ಮಾಸ್ತರರ ಆಯ್ಕೆಗಾಗಿ ಅಂತಹ ಯಾವುದೇ ವಿಧಾನವಿಲ್ಲ. ಈ ವೀಡಿಯೊ ನೇಪಾಳದ ಕಪಿಲ್ವಾಸ್ತುವಿನಲ್ಲಿ ನಡೆದ ಸ್ಪರ್ಧೆಯದ್ದು.
ರೇಟಿಂಗ್:ತಪ್ಪು ನಿರೂಪಣೆ —
ಸತ್ಯ ಪರಿಶೀಲನೆ ವಿವರಗಳು
ಫೇಸ್‌ಬುಕ್ ರೀಲ್ಸ್‌ನಲ್ಲಿ ಒಂದು ವೀಡಿಯೋ ವೈರಲ್ ಆಗಿದೆ, ಇದರಲ್ಲಿ ವ್ಯಕ್ತಿಯೊಬ್ಬರು ಲೈಫ್ ಜಾಕೆಟ್ ಧರಿಸಿ ಸಣ್ಣ ಮರದ ಹಲಗೆ ಸೇತುವೆಯ ಮೇಲೆ ಸವಾರಿ ಮಾಡುತ್ತಿರುವುದನ್ನು ಕಾಣಬಹುದು. ವೀಡಿಯೊದೊಂದಿಗಿನ ಹೇಳಿಕೆ ಹೀಗಿದೆ: “ಭಾರತದಲ್ಲಿ ಪೋಸ್ಟ್‌ಮಾಸ್ತರರನ್ನು ಆಯ್ಕೆ (ಮಾಡುವುದು) ಹೀಗೆ.”
https://www.facebook.com/reel/1460175761597788
FACT CHECK
ಡಿಜಿಟೈ ಇಂಡಿಯಾ ತಂಡಕ್ಕೆ ಈ ವೀಡಿಯೊ ಅಸ್ವಾಭಾವಿಕವೆಂದು ತೋರಿದ್ದರಿಂದ ಇದನ್ನು ಸತ್ಯ ಪರಿಶೀಲನೆಗಾಗಿ ಕೈಗೆತ್ತಿಕೊಂಡಿತು. ನಾವು ವೀಡಿಯೊದ ಪ್ರಮುಖ ಫ್ರೇಮ್‌ಗಳನ್ನು ತೆಗೆದುಕೊಂಡು ಅವುಗಳನ್ನು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟದಲ್ಲಿ ಪರಿಶೀಲಿಸಿದೆವು. ಆಗ ನಮಗೆ ಮೂಲ ವೀಡೊಯೊದ ಲಿಂಕ್ ಸಿಕ್ಕಿತು. ಅದರಿಂದ ಈ ವೀಡಿಯೊ ನೇಪಾಳದ ಕಪಿಲವಸ್ತು ಎಂಬ ಸ್ಥಳದಲ್ಲಿ ನಡೆದ ಸೈಕಲ್ ಬ್ಯಾಲೆನ್ಸ್ ಸಾಹಸಕ್ರೀಡೆಯದ್ದು ಎಂಬುದು ಬಹಿರಂಗವಾಯಿತು. ಸಚಿನ್ ಭಟ್ಟರಾಯ್ ಚ್ಯಾನಲ್ ಅಪ್‌ಲೋಡ್ ಮಾಡಿದ ಈ ವೀಡಿಯೊದ ವಿವರಣೆ ಹೀಗಿದೆ:
“2ನೇ ಸೈಕಲ್ ಪ್ಲಾಂಕ್ ಬ್ಯಾಲೆನ್ಸ್ ಮಾಣಿಕ್ ಶ್ರೇಷ್ಠಾ ಸೈಕಲ್ ಪ್ಲ್ಯಾಂಕ್ ಬ್ಯಾಲೆನ್ಸ್ ಸ್ಪರ್ಧೆಯ ಎರಡನೇ ಆವೃತ್ತಿಯ ಪದವಿಯನ್ನು ಗೆದ್ದಿದ್ದಾರೆ. ಬಂಗಂಗಾ ಪುರಸಭೆ 3 ರ ಪ್ರವಾಸಿ ತಾಣವಾದ ರಾಜಪಾನಿಯಲ್ಲಿ ಕಪಿಲವಾಸ್ತು ಲಯನ್ಸ್ ಕ್ಲಬ್ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ಆತ 52 ಮೀಟರ್ ಟ್ರ್ಯಾಕ್ ಅನ್ನು 1 ನಿಮಿಷ ಮತ್ತು 56 ಸೆಕೆಂಡುಗಳಲ್ಲಿ ದಾಟಿ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಧರಣ್‌ನ ಅನಿಸ್ ತಮಂಗ್ ಎರಡನೇ ಸ್ಥಾನ ಪಡೆದರು. ಅವರು ನಿಗದಿತ ದೂರವನ್ನು 1 ನಿಮಿಷ 25 ಸೆಕೆಂಡುಗಳಲ್ಲಿ ದಾಟಿದರು. ಅಂತೆಯೇ ಕಪಿಲವಸ್ತುವಿನ ಸುಭಮ್ ಭಟ್ಟೈ ತೃತೀಯ ಸ್ಥಾನ ಪಡೆದರು. ಆತ ನಿಗದಿತ ದೂರವನ್ನು ದಾಟಲು 40.86 ಸೆಕೆಂಡುಗಳನ್ನು ತೆಗೆದುಕೊಂಡಿದ್ದು, ಅರುಣ್ ಆರ್ಯಲ್ ನಾಲ್ಕನೇ ಸ್ಥಾನ ಪಡೆದರು.”
ಈ ಸೈಕಲ್ ಪ್ಲ್ಯಾಂಕ್ ಬ್ಯಾಲೆನ್ಸ್ ಸಾಹಸಕ್ರೀಡೆಯನ್ನು ಕೆಳಗೆ ಕಾಣುವಂತೆ ಯೂಟ್ಯೂಬ್ ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ:
ಹಾಗಾಗಿ, ಈ ವೀಡಿಯೊ ಭಾರತದ್ದಲ್ಲ ನೇಪಾಳದ್ದು. ಇದಲ್ಲದೆ, ಕ್ರಿಯಾಪದದ ಬಳಕೆಯಲ್ಲಿ ‘ಆಯ್ಕೆ’ ಎಂದು ಬಳಸಲಾಗಿದೆ ‘ಆಯ್ಕೆ ಮಾಡುವುದು’ ಎಂದಲ್ಲ; ಇದು ನಕಲಿ ಶೀರ್ಷಿಕೆಯ ಉದ್ದೇಶವನ್ನು ತೋರಿಸುತ್ತದೆ. ಅಷ್ಟೇ ಅಲ್ಲದೆ ಭಾರತದಲ್ಲಿ, ಅಂಚೆ ಸಿಬ್ಬಂದಿಗಳ ಆಯ್ಕೆಯು ಆಯ್ಕೆ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು ಮತ್ತು ಅರ್ಹತೆಯನ್ನು ಆಧರಿಸಿದೆ. ಆದ್ದರಿಂದ, ಈ ಹೇಳಿಕೆ ಸುಳ್ಳು.
ಇದನ್ನೂ ಓದಿ:
ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡುತ್ತಿದೆಯೇ? ಹಳೆಯ ಹೇಳಿಕೆಯ ಮರುಕಳಿಕೆ; ಸತ್ಯ ಪರಿಶೀಲನೆ
ತೆಲಂಗಾಣ ಸರ್ಕಾರವು ಮೇಡ್ಚಲ್ ಜಿಲ್ಲೆಯಲ್ಲಿ 95,040 ಪಡಿತರ ಚೀಟಿಗಳನ್ನು ರದ್ದು ಮಾಡಿದೆಯೇ? ಸತ್ಯ ಪರಿಶೀಲನೆ
One comment
Pingback: ಇಂಡಿಯಾ ಮೈತ್ರಿಕೂಟವು 50% ಮೀಸಲಾತಿಯನ್ನು ತೆಗೆದುಹಾಕುತ್ತದೆ ಎಂದು ರಾಹುಲ್ ಗಾಂಧಿಯವರು ಎಂದಿಗೂ ಹೇಳಿಲ್ಲ; ಸತ್ಯ