ಹೇಳಿಕೆ/Claim: ಕಾಂಗ್ರೆಸ್ ಪಕ್ಷದ ಚುನಾವಣಾ ಚಿಹ್ನೆಯಾಗಿರುವ ತೆರೆದ ಹಸ್ತವನ್ನು ಇಸ್ಲಾಂ ಧರ್ಮದಿಂದ ಪಡೆಯಲಾಗಿದೆ ಎಂದು ವೈರಲ್ ಆಗಿರುವ ಸಾಮಾಜಿಕ ಮಾಧ್ಯಮದ ಚಿತ್ರವೊಂದು ಹೇಳುತ್ತದೆ.
ಕಡೆನುಡಿ/Conclusion: ಕಾಂಗ್ರೆಸ್ ಪಕ್ಷವು ವರ್ಷಗಳಾದ್ಯಂತ ತನ್ನ ಚುನಾವಣಾ ಚಿಹ್ನೆಗಳನ್ನು ಬದಲಾಯಿಸಿದೆ. ತೆರೆದ ಹಸ್ತದ ಪ್ರಸ್ತುತ ಚಿಹ್ನೆಯು 1977 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಅಷ್ಟೇ ಅಲ್ಲದೆ, ಯಾವುದೇ ಪಕ್ಷವು ಧಾರ್ಮಿಕ ಅಥವಾ ಸಾಮುದಾಯಿಕ ಅರ್ಥವನ್ನು ಹೊಂದಿರುವ ಚಿಹ್ನೆಯನ್ನು ಹೊಂದಿರಬಾರದು ಎಂದು ಭಾರತೀಯ ಚುನಾವಣಾ ಆಯೋಗವು ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.
ರೇಟಿಂಗ್: ತಪ್ಪು ನಿರೂಪಣೆ —
ಸತ್ಯ ಪರಿಶೀಲನೆ ವಿವರಗಳು
ಕಾಂಗ್ರೆಸ್ ಚುನಾವಣಾ ಚಿಹ್ನೆಯನ್ನು ಇಸ್ಲಾಂ ಧರ್ಮದಿಂದ ಪಡೆಯಲಾಗಿದೆ ಎಂದು ಹೇಳುವ ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಇಸ್ಲಾಂ ಕುರಿತಾಗಿ ತಳಮಳವನ್ನುಂಟು ಮಾಡುವ ಹೇಳಿಕೆಗಳೊಂದಿಗೆ ವೈರಲ್ ಆಗುತ್ತಿವೆ. ಪೋಸ್ಟ್ಗಳಲ್ಲಿ ಒಂದು ಕಡೆ ಅರೇಬಿಕ್ ಕ್ಯಾಲಿಗ್ರಫಿ ಹೊಂದಿರುವ ಒಂದು ಕೈ ಹಾಗೂ ಮತ್ತೊಂದೆಡೆ ಕಾಂಗ್ರೆಸ್ ಚಿಹ್ನೆಯನ್ನು ತೋರಿಸಲಾಗಿದೆ. ಚುನಾವಣಾ ಚಿಹ್ನೆಯನ್ನು ಇಸ್ಲಾಂ ಧರ್ಮದಿಂದ ಪಡೆಯಲಾಗಿದೆ ಎಂದು ಅದು ಆರೋಪಿಸುತ್ತದೆ.
Another Shocking Fact ..
Hazrat Imam Hussain Ali, who was martyred in the field of Karbala, is considered a symbol of Islamic bravery, Islamic struggle and Islamic sacrifice. In Islam, idol or photo worship is prohibited, hence instead of worshiping any photo or idol, only the… pic.twitter.com/arpbcLu2GG
— AstroCounselKK🇮🇳 (@AstroCounselKK) November 6, 2023
ಡಿಜಿಟೈ ಇಂಡಿಯಾ ತಂಡಕ್ಕೆ ಈ ವೈರಲ್ ಹೇಳಿಕೆ ಸತ್ಯ-ಪರಿಶೀಲನೆಗಾಗಿ ವಾಟ್ಸಾಪ್ ಮೂಲಕ ದೊರಕಿತು.
ಸತ್ಯ ಪರಿಶೀಲನೆ
ಇಸ್ಲಾಮೀಯ ಕೈ ಚಿಹ್ನೆಯನ್ನು ‘ಪಂಜಾ ಆಲಂ’ ಎಂದು ಕರೆಯಲಾಗುತ್ತದೆ. ಗೂಗಲ್ ಆರ್ಟ್ಸ್ & ಕಲ್ಚರ್ ಪ್ರಕಾರ, ಇಸ್ಲಾಂನಲ್ಲಿ ಇದೊಂದು ಪ್ರಮುಖ ಧಾರ್ಮಿಕ ವಸ್ತುವಾಗಿದೆ. ಇದು ಹೇಳುವುದೇನೆಂದರೆ, “ರಕ್ಷಣಾತ್ಮಕ ಹಸ್ತದ ಐದು ಬೆರಳುಗಳು ಕೊನೆಯ ಪ್ರವಾದಿ ಹಜರತ್ ಮೊಹಮ್ಮದ್ (PBUH), ಹಜರತ್ ಫಾತಿಮಾ, ಹಜರತ್ ಅಲಿ, ಹಜರತ್ ಹಸನ್ ಮತ್ತು ಹಜರತ್ ಹುಸೇನ್ ರವರನ್ನು ಸಂಕೇತಿಸುತ್ತವೆ. ಈ ಪಂಜಾ ಆಲಂ ಅನ್ನು ಎರಡೂ ಬದಿಗಳಲ್ಲಿ ಸಂಪೂರ್ಣವಾಗಿ ಕೆತ್ತಲಾಗಿದೆ.”
ಕಾಂಗ್ರೆಸ್ ಪಕ್ಷದ ಚುನಾವಣಾ ಚಿಹ್ನೆಯ ಇತಿಹಾಸದ ಬಗ್ಗೆ ಇನ್ನಷ್ಟು ತಿಳಿಯಲು ಡಿಜಿಟೈ ಇಂಡಿಯಾ ತಂಡವು ಗೂಗಲ್ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿತು. ಏಪ್ರಿಲ್ 5, 2019 ರಂದು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ವರದಿಯ ಪ್ರಕಾರ ಹೋದ ಸಮಯದಲ್ಲಿ ಪಕ್ಷದ ಚಿಹ್ನೆ ಬದಲಾಗುತ್ತಲೇ ಬಂದಿದೆ. ಅದರ ಪ್ರಕಾರ 1952 ಮತ್ತು 1969 ರ ನಡುವೆ, ನೊಗವನ್ನು ಹೊತ್ತೊಯ್ಯುವ ಜೋಡಿ ಎತ್ತುಗಳು ಕಾಂಗ್ರೆಸ್ ಅನ್ನು ಪ್ರತಿನಿಧಿಸುತ್ತಿದ್ದವು. ಆದರೆ, ಹೊರಹಾಕಲ್ಪಟ್ಟ ನಂತರ ಇಂದಿರಾಗಾಂಧಿ INC(R) ಅನ್ನು ಪ್ರಾರಂಭಿಸಿದಾಗ, ಮೊಲೆಯುಣ್ಣುವ ಕರುವಿನೊಂದಿಗೆ ಹಸುವಿನ ಚಿತ್ರವು ಪಕ್ಷವನ್ನು ಪ್ರತಿನಿಧಿಸುತ್ತಿತ್ತು. 1977ರಲ್ಲಿ ಕಾಂಗ್ರೆಸ್ (R)ನಿಂದ ಬೇರ್ಪಟ್ಟು ಕಾಂಗ್ರೆಸ್ (I) ಆರಂಭಿಸಿದಾಗ ಇಂದಿರಾ ಗಾಂಧಿಯವರು ಹಸ್ತ ಚಿಹ್ನೆಯನ್ನು ಬಳಸಿದ್ದರು.
ಏಪ್ರಿಲ್ 1, 2018 ರಂದು ಪ್ರಕಟವಾದ NDTVಯ ಮತ್ತೊಂದು ವರದಿಯಲ್ಲಿ ಹೇಳಿರುವುದೇನೆಂದರೆ ಆಗಿನ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಬೂಟಾ ಸಿಂಗ್ ರವರು ಹೊಸ ಚಿಹ್ನೆಗಾಗಿ ಚುನಾವಣಾ ಆಯೋಗವನ್ನು ಕೋರಿದ್ದರು ಎಂದು ಉಲ್ಲೇಖಿಸಲಾಗಿದೆ. ಅವರಿಗೆ- ಆನೆ, ಸೈಕಲ್ ಮತ್ತು ತೆರೆದ ಹಸ್ತದ ಆಯ್ಕೆಗಳನ್ನು ನೀಡಲಾಗಿತ್ತು. ಸಿಂಘ್ ರವರು ಇಂದಿರಾ ಗಾಂಧಿಯವರ ಒಪ್ಪಿಗೆಯನ್ನು ಕೋರಿದರು ಮತ್ತು ಹೀಗೆ ತೆರೆದ ಹಸ್ತವನ್ನು ಆಯ್ಕೆ ಮಾಡಲಾಯಿತು.
ಮಾರ್ಚ್ 28, 2012ರಂದು ಪ್ರಕಟವಾದ ದ ವಾಲ್ ಸ್ಟ್ರೀಟ್ ಜರ್ನಲ್ ವರದಿಯಲ್ಲಿ, “1980ರ ಚುನಾವಣೆಗೆ ಮುಂಚಿತವಾಗಿ ಹಸ್ತ ಅಥವಾ ಆನೆಯ ಚಿಹ್ನೆಗಳಲ್ಲಿ ಒಂದನ್ನು ಆಯ್ಕೆ ಮಾಡಲು ಪಕ್ಷದ ಇತರ ಅಧಿಕಾರಿಗಳು ಮಾಜಿ ಪ್ರಧಾನಿ ಇಂದಿರಾಗಾಂಧಿಯವರಿಗೆ ಸಲಹೆ ನೀಡಿದ್ದರು. ಫ್ರಾಕ್, ಕೇಕ್ ಮತ್ತು ಉಗುರು ಕಟ್ಟರ್ಗಳು ಹಾಗೂ ಇತರ ಅನೇಕ ಗೃಹೋಪಯೋಗಿ ವಸ್ತುಗಳು ಇಂದು ಮುಕ್ತ ಆಯ್ಕೆಗಳಾಗಿರುವಂತೆ ಆ ಸಮಯದಲ್ಲಿ ಈ ಎರಡೂ ಚಿತ್ರಗಳು ‘ಮುಕ್ತ ಚಿಹ್ನೆ’ಗಳಾಗಿದ್ದವು. ಯಾವುದೇ ಪಕ್ಷದ ಆಯ್ಕೆಗೆ ಇವು ಲಭ್ಯವಿದ್ದವು.”
ಅಷ್ಟೇ ಅಲ್ಲದೆ, 2017ರಲ್ಲಿ ಭಾರತದ ಚುನಾವಣಾ ಆಯೋಗದ ಆದೇಶವೊಂದು ಕೆಳಗಿನಂತೆ ಹೇಳಿತು “ಪಕ್ಷಗಳು ಪ್ರಸ್ತಾಪಿಸುವ ಚಿಹ್ನೆಗಳು ಅಸ್ತಿತ್ವದಲ್ಲಿರುವ ಕಾಯ್ದಿರಿಸಿದ ಚಿಹ್ನೆಗಳು ಅಥವಾ ಮುಕ್ತ ಚಿಹ್ನೆಗಳಿಗೆ ಯಾವುದೇ ಹೋಲಿಕೆಯನ್ನು ಹೊಂದಿರಕೂಡದು ಅಥವಾ ಯಾವುದೇ ಧಾರ್ಮಿಕ ಅಥವಾ ಸಾಮುದಾಯಿಕ ಅರ್ಥವನ್ನು ಹೊಂದಿರಬಾರದು ಅಥವಾ ಯಾವುದೇ ಪಕ್ಷಿ ಅಥವಾ ಪ್ರಾಣಿಯನ್ನು ಚಿತ್ರಿಸಬಾರದು.”
ಆದ್ದರಿಂದ, ಹೇಳಿಕೆ ಸುಳ್ಳು.
ಇದನ್ನೂ ಓದಿ:
ಲಾಸ್ ಏಂಜಲೀಸ್ನಲ್ಲಿ ಬ್ಲ್ಯಾಕ್ ಫ್ರೈಡೆಯಂದು ನೈಕಿ ಅಂಗಡಿಯಲ್ಲಿ ದರೋಡೆಯಾಗಿದೆಯೇ? ಸತ್ಯ ಪರಿಶೀಲನೆ
One comment
Pingback: ಇಲ್ಲ, ಹೇಳಲಾಗಿರುವಂತೆ ರಾಹುಲ್ ಗಾಂಧಿಯವರು ಕಾಂಗ್ರೆಸ್ ಕಾರ್ಯಕರ್ತರಿಗೆ ನಾಯಿ ಬಿಸ್ಕೆಟ್ ನೀಡಲಿಲ್ಲ; ಸತ್ಯ ಪರಿ