Don't Miss

ಈ ವೈರಲ್ ವೀಡಿಯೊ ಪ್ಲಾಸ್ಟಿಕ್ನಿಂದ ಗೋಧಿಯ ಉತ್ಪಾದನೆಯನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

Claim/ಹೇಳಿಕೆ: ಫ್ಯಾಕ್ಟರಿಯು ಪ್ಲಾಸ್ಟಿಕ್‌ನಿಂದ ಗೋಧಿ ಧಾನ್ಯಗಳನ್ನು ತಯಾರಿಸುತ್ತಿರುವುದನ್ನು ಒಂದು ವೈರಲ್ ವೀಡಿಯೊ ತೋರಿಸುತ್ತದೆ.

Conclusion/ಕಡೆನುಡಿ: ಈ ವೈರಲ್ ವೀಡಿಯೊ ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡುವಂತಹ ಉತ್ಪಾದನಾ ಕಂಪನಿಯೊಂದನ್ನು ತೋರಿಸುತ್ತದೆ. ಪ್ಲಾಸ್ಟಿಕ್ ಅನ್ನು ಸಣ್ಣ ತುಂಡುಗಳಾಗಿ ವಿಭಜಿಸಿ, ತೊಳೆದು, ನೂಲನ್ನಾಗಿ ಮಾಡಿ, ನಂತರ ಸಣ್ಣ ಗುಳಿಗೆಗಳನ್ನು ರೂಪಿಸಲು ಪುಡಿಮಾಡಲಾಗುತ್ತದೆ. ಈ ಗುಳಿಗೆಗಳನ್ನು ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ ಮತ್ತು ಅವು ಮಾನವ ಬಳಕೆಗಾಗಿ ಅಲ್ಲ. ಅವು ಆಹಾರ ಧಾನ್ಯಗಳೂ ಸಹ ಅಲ್ಲ.

ರೇಟಿಂಗ್: ಶುದ್ಧ ಸುಳ್ಳು.

Fact check  ವಿವರಗಳು:

ಒಂದು ವೈರಲ್ ವೀಡಿಯೊ ಪ್ಲಾಸ್ಟಿಕ್‌ನಿಂದ ಗೋಧಿಯನ್ನು ಉತ್ಪಾದಿಸಲಾಗುತ್ತಿದೆ ಎನ್ನುವ ದೃಶ್ಯವನ್ನು ತೋರಿಸುತ್ತದೆ. 1:15 ನಿಮಿಷಗಳ ಅವಧಿಯ ಈ ವೀಡಿಯೊ, ಬಳಸಿದ ಪ್ಲಾಸ್ಟಿಕ್ ಅನ್ನು ಕಾರ್ಮಿಕರು ಕಾರ್ಖಾನೆಯಲ್ಲಿ ತಂದು ಹಾಕುವುದನ್ನು ಮತ್ತು ಅಲ್ಲಿ ಪ್ಲಾಸ್ಟಿಕ್ ಅನ್ನು ಸಣ್ಣ ತುಂಡುಗಳಾಗಿ ವಿಭಜಿಸಿ, ಹಲವಾರು ಬಾರಿ ತೊಳೆದು, ಪ್ಲಾಸ್ಟಿಕ್ ನೂಲುಗಳಾಗಿ ಮಾಡಿ, ನಂತರ ಗೋಧಿಯ ಕಂದು  ಬಣ್ಣದ ಧಾನ್ಯಗಳಂತೆ ಕಾಣುವ ರೀತಿಯಲ್ಲಿ ಪುಡಿಮಾಡುವುದನ್ನು ತೋರಿಸುತ್ತದೆ. ಈ ವಿಡಿಯೋ ವಾಟ್ಸ್‌ಆ್ಯಪ್‌ನಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ.

ಡಿಜಿಟೈ ಇಂಡಿಯಾ ತಂಡಕ್ಕೆ ಈ ವಿಡಿಯೋ ಸತ್ಯ-ಪರಿಶೀಲನೆಗಾಗಿ ವಾಟ್ಸಾಪ್‌ ಮೂಲಕ ದೊರಕಿತು.

FACT CHECK

ಡಿಜಿಟೈ ಇಂಡಿಯಾ ತಂಡವು ವೀಡಿಯೊದ್ದಕ್ಕೂ ಕೆಳ ಮಧ್ಯಭಾಗದಲ್ಲಿ ವಾಟರ್‌ಮಾರ್ಕ್ ಅನ್ನು ಗುರುತಿಸಿತು. ವಾಟರ್‌ಮಾರ್ಕ್ ನಲ್ಲಿದೆ ಬರಹ – ಸ್ಮಾರ್ಟೆಸ್ಟ್ ವರ್ಕರ್ಸ್. ನಾವು ಈ ಸುಳಿವನ್ನು ಬಳಸಿ ಗೂಗಲ್ ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದೆವು. ಫಲಿತಾಂಶಗಳಲ್ಲಿ ನಮಗೆ ಸ್ಮಾರ್ಟೆಸ್ಟ್ ವರ್ಕರ್ಸ್‌ನ ಯೂಟ್ಯೂಬ್ ಪೇಜ್ ದೊರಕಿತು, ಅಲ್ಲಿ ನಮಗೆ ಈ ವೈರಲ್ ವೀಡಿಯೊ ದೊರಕಿತು.

ಈ ವೈರಲ್ ವೀಡಿಯೋವನ್ನು ಸೆಪ್ಟೆಂಬರ್ 24, 2023ರಂದು Plastic’s New Purpose: Unveiling the Recycling Journey (ಪ್ಲಾಸ್ಟಿಕ್‌ನ ಹೊಸ ಉದ್ದೇಶ: ಮರುಬಳಕೆಯ ಪ್ರಯಾಣವನ್ನು ಅನಾವರಣಗೊಳಿಸುವುದು) ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಲಾಗಿತ್ತು.

ಸ್ಮಾರ್ಟೆಸ್ಟ್ ವರ್ಕರ್ಸ್ ಪೋಸ್ಟ್ ಮಾಡಿದ ಈ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಯಿತು.

ಈ ಪ್ಲಾಸ್ಟಿಕ್ ಮರುಬಳಕೆ ಸಾಹಸೋದ್ಯಮದ ವಾಸ್ತವಿಕ ಅಂತಿಮ ಉತ್ಪನ್ನ ಏನೆಂಬುದನ್ನು ತಿಳಿದುಕೊಳ್ಳಲು ನಾವು ಈ ಸುಳಿವುಗಳನ್ನು ಬಳಸಿದೆವು. ಇದೇ ರೀತಿಯ ಪ್ರಕ್ರಿಯೆಯನ್ನು ಅನುಸರಿಸುತ್ತಿರುವ ವೀಡಿಯೊ ಒಂದರಲ್ಲಿ, ಪ್ಲಾಸ್ಟಿಕ್ LLDPE, ಅಂದರೆ, ಲೀನಿಯರ್ ಲೊ-ಡೆನ್ಸಿಟಿ ಪಾಲಿಇಥೈಲೀನ್ ಅಂತಿಮ ಉತ್ಪನ್ನವೆಂದು ವೀಡಿಯೊ ಉಲ್ಲೇಖಿಸುತ್ತದೆ. ಈ ಉತ್ಪನ್ನಗಳು ಮೂಲತಃ ಪ್ಲಾಸ್ಟಿಕ್ ಗುಳಿಗೆಗಳಾಗಿದ್ದು, ಇವುಗಳನ್ನು ಪ್ಲಾಸ್ಟಿಕ್ ಬಾಟಲಿಗಳು, ಆಟೋಮೊಬೈಲ್‌ಗಳು, ಗ್ರಾಹಕ ಸರಕುಗಳು, ಇತ್ಯಾದಿಗಳನ್ನು ತಯಾರಿಸುವಂತಹ ಅನೇಕ ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ.

ಆಟೋಮೊಬೈಲ್ ಉದ್ಯಮದಲ್ಲಿ ಬಳಸಲಾಗುವ ಪ್ಲಾಸ್ಟಿಕ್ ಗುಳಿಗೆಗಳನ್ನು ತಯಾರಿಸಲು ಅದೇ ಪ್ರಕ್ರಿಯೆಯನ್ನು ಬಳಸಲಾಗುತ್ತಿರುವ ಮತ್ತೊಂದು ವೀಡಿಯೊ ಕೂಡ ನಮಗೆ ದೊರಕಿತು. ಡಿಜಿಟೈ ಇಂಡಿಯಾ ತಂಡವು ಉಜ್ಜಯಿನಿ ಮೂಲದ ವ್ಯಾಪಾರಿ ನಿರುಪಮ್ ಅಗರ್ವಾಲ್ ಅವರೊಂದಿಗೆ ಮಾತನಾಡಿದ್ದು, ವೈರಲ್ ವೀಡಿಯೊದಲ್ಲಿರುವ ಈ ಗುಳಿಗೆಗಳು ಅಕ್ಕಿ ಅಥವಾ ಗೋಧಿ ಧಾನ್ಯಗಳಲ್ಲ ಎಂದು ಖಚಿತಪಡಿಸಿದ್ದಾರೆ. “ಈ ಗುಳಿಗೆಗಳು ಮರುಬಳಕೆಯ ಪ್ಲಾಸ್ಟಿಕ್ ಆಗಿದ್ದು, ಇದನ್ನು ಕೈಗಾರಿಕೆಗಳಲ್ಲಿ ಬಳಸಲಾಗುವುದು, ಮಾನವ ಸೇವನೆಯಲ್ಲಿ ಅಲ್ಲ” ಎಂದು ಅಗರ್ವಾಲ್ ಹೇಳಿದರು.

ಹೀಗಾಗಿ, ವೀಡಿಯೊದ ಹೇಳಿಕೆಯು ಸುಳ್ಳು.

ಇದನ್ನೂ ಓದಿ:

ಈ ದೀಪಾವಳಿಗೆ ಚೀನಾದ ಪಟಾಕಿಗಳನ್ನು ಖರೀದಿಸುವುದನ್ನು ತಪ್ಪಿಸಬೇಕೆಂದು ಗೃಹ ಸಚಿವಾಲಯವು ಜನರಿಗೆ ಹೇಳಿದೆಯೇ? ಸತ್ಯ ಪರಿಶೀಲನೆ ;

ಉತ್ತರ ಪ್ರದೇಶ, ಬಿಹಾರದ ಜನರನ್ನು ದೆಹಲಿಯಿಂದ ಓಡಿಸಬೇಕು ಎಂದು ಬಿಜೆಪಿ ಸಂಸದ ರಮೇಶ್ ಬಿಧುರಿ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ]

 

Leave a Reply

Your email address will not be published. Required fields are marked *

*