Don't Miss

ಭಾರತೀಯ ಸೇನೆಯು LoC ಉದ್ದಕ್ಕೂ ಬಾಲಾಕೋಟ್ ಸೆಕ್ಟರ್‌ನಲ್ಲಿ ಹಲವಾರು ನೆಲಬಾಂಬ್‌ಗಳನ್ನು ಸ್ಫೋಟ ಮಾಡಿತೇ? ಸತ್ಯ ಪರಿಶೀಲನೆ

ಹೇಳಿಕೆ/Claim:  ಭಾರತೀಯ ಸೇನೆಯು ಬಾಲಕೋಟ್ ಸೆಕ್ಟರ್‌ನಲ್ಲಿ ಅನೇಕ ನೆಲಬಾಂಬ್‌ಗಳನ್ನು ಸ್ಫೋಟಿಸಿದ್ದರಿಂದ, LoC ಉದ್ದಕ್ಕೂ ಭಾರಿ ಪ್ರಮಾಣದ ಕಾಳ್ಗಿಚ್ಚು ಹಬ್ಬಿತು.

ಕಡೆನುಡಿ/Conclusion:  ಈ ಹೇಳಿಕೆ ದಾರಿ ತಪ್ಪಿಸುವಂತಿದೆ. ಡಿಸೆಂಬರ್ 7, 2025ರಂದು LoC (ನಿಯಂತ್ರಣ ರೇಖೆ) ಉದ್ದಕ್ಕೂ ಕಾಡಿನ ಬೆಂಕಿಯ ಕಾರಣದಿಂದ ಅನೇಕ ನೆಲಬಾಂಬ್‌ಗಳು ಹೊತ್ತಿಕೊಂಡವು, ಭಾರತೀಯ ಸೇನೆಯು ನೆಲಬಾಂಬ್‌ಗಳನ್ನು ಸ್ಫೋಟಿಸಲಿಲ್ಲ. ಆದರೆ, ಯಾವುದೇ ಸಾವುನೋವುಗಳು ವರದಿಯಾಗಿಲ್ಲ.

ರೇಟಿಂಗ್/Rating: ದಾರಿ ತಪ್ಪಿಸುವಂತಿದೆ. —

******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.
******************************************************

ಭಾರತೀಯ ಸೇನೆಯು ಬಾಲಾಕೋಟ್ ಸೆಕ್ಟರ್‌ನಲ್ಲಿ ನೆಲಬಾಂಬ್‌ಗಳನ್ನು ಸ್ಫೋಟಿಸುತ್ತಿದೆ, ಮತ್ತಿದು ನಿಯಂತ್ರಣ ರೇಖೆಯ (LoC) ಉದ್ದಕ್ಕೂ ಕಾಡ್ಗಿಚ್ಚನ್ನು ಹುಟ್ಟುಹಾಕಿ ಪಾಕಿಸ್ತಾನಿ ಮಿಲಿಟರಿಯನ್ನು ಎಚ್ಚರಿಸಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. X ಬಳಕೆದಾರ ‘BabarM767’ ಅಂತಹ ಪೋಸ್ಟ್ ಅನ್ನು ಈ ಮುಂದಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: “ಬ್ರೇಕಿಂಗ್: ಭಾರತೀಯ ಸೇನೆಯು ಬಾಲಾಕೋಟ್ ಸೆಕ್ಟರ್‌ನಲ್ಲಿ ಅನೇಕ ನೆಲಬಾಂಬ್‌ಗಳನ್ನು ಸ್ಫೋಟಿಸಿದೆ, ಇದರಿಂದಾಗಿ LOCಯ ಉದ್ದಕ್ಕೂ ಭಾರಿ ಕಾಡ್ಗಿಚ್ಚನ್ನು ಹರಡಿತು.- ಪಾಕಿಸ್ತಾನವೂ ಸಹ ಸೈನ್ಯವನ್ನು ಅಲರ್ಟ್ ನಲ್ಲಿ ಇರಿಸಿದೆ!!” ಪೋಸ್ಟ್ ಅನ್ನು ಕೆಳಗೆ ನೋಡಿ-

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

 

View this post on Instagram

 

A post shared by tmtc24 (@tmtc2_4t)

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ದಾರಿತಪ್ಪಿಸುವಂತಿದೆ ಎಂದು ಕಂಡುಬಂದಿತು. ಡಿಸೆಂಬರ್ 7, 2025ರಂದು ನಿಯಂತ್ರಣ ರೇಖೆಯ ಬಳಿಯ ಮೆಂಧರ್‌ನ ಬಾಲಾಕೋಟ್ ಸೆಕ್ಟರ್‌ನಲ್ಲಿ ಭಾನುವಾರ ನೆಲಬಾಂಬ್‌ಗಳ ಸ್ಫೋಟ ಕಾಡ್ಗಿಚ್ಚಿನಿಂದಾಗಿ ಸಂಭವಿಸಿತು. ಭಾರತೀಯ ಸೇನೆಯು LoC ಉದ್ದಕ್ಕೂ ನೆಲಬಾಂಬ್‌ಗಳನ್ನು ಸ್ಫೋಟಿಸಲಿಲ್ಲ.

ವಿವರಗಳು

ಹೇಳಿಕೆಗಳ ಬಗ್ಗೆ ತಿಳಿಯಲು ನಾವು ಮೊದಲು “ಕಾಡ್ಗಿಚ್ಚು ನೆಲಬಾಂಬ್‌ಗಳು ಬಾಲಕೋಟ್ LoC” ಎಂಬ ಪದಗುಚ್ಛದೊಂದಿಗೆ ಕೀವರ್ಡ್ ಹುಡುಕಾಟವನ್ನು ನಡೆಸಿದೆವು. ಡಿಸೆಂಬರ್ 7, 2025 ರಂದು ದ ಟ್ರಿಬ್ಯೂಟ್ ಪ್ರಕಟಿಸಿದ ವರದಿ ಪ್ರಕಾರ, “ಭಾನುವಾರ ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯಲ್ಲಿ ಕಾಡ್ಗಿಚ್ಚಿನಿಂದಾಗಿ ಕನಿಷ್ಠ ಅರ್ಧ ಡಜನ್ ನೆಲಬಾಂಬ್‌ಗಳು ಸ್ಫೋಟಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.” ಸಂಜೆಯ ಹೊತ್ತಿಗೆ ಅದನ್ನು ನಿಯಂತ್ರಿಸಲಾಯಿತು ಮತ್ತು ಸ್ಫೋಟಗಳಿಂದ ಯಾವುದೇ ಹಾನಿ ಅಥವಾ ಗಾಯಗಳುಂಟಾಗಿಲ್ಲ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

 

ದ ಹ್ಯಾನ್ಸ್ ಇಂಡಿಯಾ ಪ್ರಕಟಿಸಿದ ಮತ್ತೊಂದು ವರದಿಯೂ ಇದನ್ನು ದೃಢಪಡಿಸಿದೆ, ಅಧಿಕಾರಿಗಳು ಪೂಂಚ್‌ನಲ್ಲಿ ನಿಜಕ್ಕೂ ಕಾಡ್ಗಿಚ್ಚು ಹೊತ್ತಿತ್ತು ಎಂದು ದೃಢಪಡಿಸಿದ್ದಾರೆ ಎಂದು ಈ ವರದಿಯು ಹೇಳಿದೆ. ಈ ವರದಿಯಲ್ಲಿ ತಿಳಿಸಿರುವಂತೆ, “ಬೆಳಿಗ್ಗೆ 10 ಗಂಟೆ ಸುಮಾರಿಗೆ ಬಾಲಾಕೋಟ್ ಅರಣ್ಯದಲ್ಲಿ ಶೂನ್ಯ ರೇಖೆಯ ಉದ್ದಕ್ಕೂ ಕಾಡ್ಗಿಚ್ಚು ಹೊತ್ತಿಕೊಂಡು ಆರು ನೆಲಬಾಂಬ್‌ಗಳನ್ನು ಸ್ಫೋಟಿಸಿತು” ಎಂದು ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಇದಲ್ಲದೆ, ಭಾರತದ PIB ಸತ್ಯ ಪರಿಶೀಲನಾ ಘಟಕವು ಈ ಸುದ್ದಿಯನ್ನು ದಾರಿತಪ್ಪಿಸುವಂಥದ್ದು ಎಂದು ಸ್ಪಷ್ಟಪಡಿಸಿ, ಪಾಕಿಸ್ತಾನಿ ಖಾತೆಗಳು ಭಾರತೀಯ ಪಡೆಗಳನ್ನು ದುರ್ಬಲಗೊಳಿಸಲು ಇಂತಹ ವೀಡಿಯೊಗಳನ್ನು ಪ್ರಸಾರ ಮಾಡಿದೆ  ಎಂದು ಆರೋಪಿಸಿದೆ. ಬೆಂಕಿ ನೈಸರ್ಗಿಕವಾಗಿತ್ತು, ಸೈನ್ಯದಿಂದ ಪ್ರಾರಂಭಿಸಲ್ಪಟ್ಟದ್ದಲ್ಲ, ಇದು ತಪ್ಪು ಮಾಹಿತಿ ಪ್ರಸಾರದ ಭಾಗವಾಗಿತ್ತು. Xನಲ್ಲಿ PIB ಮಾಡಿದ ಪೋಸ್ಟ್ ಅನ್ನು ಕೆಳಗೆ ನೋಡಿ

ಹೀಗಾಗಿ, ಹೇಳಿಕೆ ದಾರಿತಪ್ಪಿಸುವಂಥದ್ದು ಎನ್ನಬಹುದು.

******************************************************
ಇದನ್ನೂ ಓದಿ:

ನ್ಯೂ ಯಾರ್ಕ್ ನಗರದ ಮೇಯರ್ ಚುನಾಯಿತ ಜೋಹ್ರಾನ್ ಮಮ್ದಾನಿ ಟ್ರಂಪ್ ಟವರ್ ಅನ್ನು ನಿರಾಶ್ರಿತರ ಆಶ್ರಯ ತಾಣವನ್ನಾಗಿ ಪರಿವರ್ತಿಸಲು ಯೋಜಿಸಿದ್ದಾರೆಯೇ? ಸತ್ಯ ಪರಿಶೀಲನೆ

ಹೊಸ ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ಕಾರ್ಖಾನೆ ಮಾಲೀಕರು 8 ಗಂಟೆಗಳ ವೇತನಕ್ಕೆ 12 ಗಂಟೆಗಳ ಕೆಲಸವನ್ನು ಪಡೆಯಬಹುದೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*