Don't Miss

ಲಂಡನ್‌ನಲ್ಲಿ ನಡೆದ ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಪ್ರಿನ್ಸ್ ವಿಲಿಯಂ ಮತ್ತು ಅವರ ಕುಟುಂಬವನ್ನು ಜನಸಮೂಹವು ಕಡೆಗಣಿಸಿತೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಲಂಡನ್‌ನಲ್ಲಿ ನಡೆದ ಸಾರ್ವಜನಿಕ ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಪ್ರಿನ್ಸ್ ವಿಲಿಯಂ ಮತ್ತು ಅವರ ಕುಟುಂಬವನ್ನು ಜನಸಮೂಹವು ಕಡೆಗಣಿಸಿತು ಎಂಬುದನ್ನು ವೀಡಿಯೊ ತೋರಿಸುತ್ತದೆ.

ಕಡೆನುಡಿ/Conclusion: ಈ ಹೇಳಿಕೆಯು ತಪ್ಪು ನಿರೂಪಣೆ ನೀಡುತ್ತದೆ. ಈ ವೀಡಿಯೊ ವೇಲ್ಸ್ ರಾಜಕುಮಾರಿ ವಾರ್ಷಿಕವಾಗಿ ಆಯೋಜಿಸುವ “ಟುಗೆದರ್ ಅಟ್ ಕ್ರಿಸ್‌ಮಸ್” ಕ್ಯಾರೋಲ್ ಸೇವಾ ಕಾರ್ಯಕ್ರಮಕ್ಕೆ ಸಂಬಂಧಿಸಿರುವಂಥದ್ದು. ಇದು ಆಹ್ವಾನಿತರಿಗಾಗಿ ಮಾತ್ರ ತೆರೆಯುವ ಸಭೆಯಾಗಿದ್ದು, ಸಾರ್ವಜನಿಕ ಪ್ರದರ್ಶನವಲ್ಲ.

ರೇಟಿಂಗ್/Rating : ತಪ್ಪು ನಿರೂಪಣೆ —

******************************************************

ಕ್ರಿಸ್‌ಮಸ್ ಕಾರ್ಯಕ್ರಮದ ಸಂದರ್ಭದಲ್ಲಿ ಲಂಡನ್‌ನಲ್ಲಿ ರಾಜಮನೆತನವನ್ನು ಹೇಗೆ ಕಡೆಗಣಿಸಲಾಯಿತು ಎಂಬುದರ ಕುರಿತು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೆಯನ್ನು ಹಂಚಿಕೊಳ್ಳುತ್ತಿದ್ದಾರೆ. ದೃಢೀಕೃತ X ಬಳಕೆದಾರ ‘kingkapoor72’ ಈ ಹೇಳಿಕೆಯನ್ನು ಈ ಮುಂದಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: “ಲಂಡನ್‌ನಲ್ಲಿ ಯಾರೂ ಸಾರ್ವಜನಿಕ ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ರಾಜಮನೆತನವನ್ನು ನೋಡಲು ಬಂದಿಲ್ಲ. ಏಕೆಂದರೆ ಲಂಡನ್ ಈಗೇನು ಬ್ರಿಟಿಷ್ ಅಲ್ಲವೇನೋ. ರಾಜಪ್ರಭುತ್ವವು ಸಾಮೂಹಿಕ ವಲಸೆಯ ಕಾಲವನ್ನು ಬದುಕುಳಿಯುವುದಿಲ್ಲ.” ಈ ಪೋಸ್ಟ್ ಸುಮಾರು 158,000 ವೀಕ್ಷಣೆಗಳನ್ನು ಗಳಿಸಿದೆ, ಇದನ್ನು ಕೆಳಗೆ ನೋಡಬಹುದು:

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅದನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ಕುರಿತು ತನಿಖೆ ಮಾಡಲು ನಿರ್ಧರಿಸಿತು ಮತ್ತು ಇದು ತಪ್ಪು ನಿರೂಪಣೆ ಎಂದು ಕಂಡುಕೊಂಡಿತು. ವೇಲ್ಸ್ ರಾಜಕುಮಾರಿಯು ವಾರ್ಷಿಕವಾಗಿ ಆಯೋಜಿಸುವ “ಟುಗೆದರ್ ಅಟ್ ಕ್ರಿಸ್‌ಮಸ್” ಕರೋಲ್ ಸೇವೆಯು 1,600 ಸಮುದಾಯದ ನಾಯಕರಿಗೆ, ದತ್ತಿ ಕಾರ್ಯಕರ್ತರು ಮತ್ತು ಕುಟುಂಬಗಳಂತಹ ಆಹ್ವಾನಿತರಿಗಾಗಿ ಮಾತ್ರ ನಡೆಯುವ ಸಭೆಯಾಗಿದ್ದು, ಇದು ಮುಕ್ತ ಸಾರ್ವಜನಿಕ ಪ್ರದರ್ಶನವಲ್ಲ. ಕ್ಲಿಪ್ ನಲ್ಲಿ ವೆಸ್ಟ್‌ಮಿನಿಸ್ಟರ್ ಅಬಿಯಲ್ಲಿ ನಡೆದ ಕಾರ್ಯಕ್ರಮದ ಸುರಕ್ಷಿತ ಪ್ರವೇಶವನ್ನು ಪ್ರದರ್ಶಿಸಲಾಗಿದೆ, ಮತ್ತು ಅದರಲ್ಲಿ ಅವರನ್ನು ಕಡೆಗಣಿಸುವ ಜನಸಮೂಹವನ್ನು ತೋರಿಸಲಾಗಿಲ್ಲ.

ವಿವರಗಳು:

ಕ್ಲಿಪ್‌ನಲ್ಲಿ ತೋರಿಸಿರುವ ವೀಡಿಯೊದ ಕೀಫ್ರೇಮ್‌ಗಳಿಂದ ನಾವು ಮೊದಲು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ನಮ್ಮ ಹುಡುಕಾಟವು ಡಿಸೆಂಬರ್ 6, 2025 ರಂದು ದ ಡೈಲಿ ಗಾರ್ಡಿಯನ್ ಪೋಸ್ಟ್ ಮಾಡಿದ ಯುಟ್ಯೂಬ್ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು, ಅದರ ಶೀರ್ಷಿಕೆ: “ಕೇಟ್ ರವರ  ಟುಗೆದರ್ ಅಟ್ ಕ್ರಿಸ್‌ಮಸ್ ಸೇವೆಗಾಗಿ ವೆಸ್ಟ್‌ಮಿನಿಸ್ಟರ್ ಆಬಿಗೆ ಆಗಮಿಸುತ್ತಿರುವ UK ರಾಜಮನೆತನ”. ವಿವರಣೆಯ ಹೀಗಿದೆ: “ಕೇಟ್ ರವರ ಟುಗೆದರ್ ಫಾರ್ ಕ್ರಿಸ್‌ಮಸ್ ಕ್ಯಾರೋಲ್ ಸೇವೆಗಾಗಿ ವೇಲ್ಸ್‌ನ ರಾಜಕುಮಾರ ಮತ್ತು ರಾಜಕುಮಾರಿಯವರು ಜಾರ್ಜ್, ಷಾರ್ಲೆಟ್ ಮತ್ತು ಲೂಯಿಸ್ ಅವರೊಂದಿಗೆ ಆಗಮನ, ಯುಜೀನ್ ಲೆವಿ, ಕೇಟ್ ವಿನ್ಸ್ಲೆಟ್ ಮತ್ತು ಚಿವೆಟೆಲ್ ಎಜಿಯೊಫೋರ್ ಸೇರಿದಂತೆ ತಾರೆಯರು ಸೇರಿದ್ದರು.” ಇದರ ಸ್ಕ್ರೀನ್‌ಶಾಟ್ ಮತ್ತು ವೀಡಿಯೊವನ್ನು ಕೆಳಗೆ ನೋಡಿ-

(ಕೃಪೆ: ದ ಡೈಲಿ ಗಾರ್ಡಿಯನ್)

ಇದರ ನಂತರ, ವೆಸ್ಟ್‌ಮಿನಿಸ್ಟರ್ ಆಬಿಯಲ್ಲಿ ನಡೆದ “ಟುಗೆದರ್ ಅಟ್ ಕ್ರಿಸ್‌ಮಸ್” ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗಾಗಿ ನಾವು ವರದಿಗಳನ್ನು ಹುಡುಕಿದೆವು. ಇನ್‌ಸ್ಟೈಲ್ ಪ್ರಕಟಿಸಿದ ವರದಿಯ ಪ್ರಕಾರ 2021ರಲ್ಲಿ, ಮಿಡಲ್ಟನ್ ರವರು COVID-19 ಸಾಂಕ್ರಾಮಿಕದ ನಡುವೆ “ಸಮುದಾಯ ವೀರ”ರಿಗೆ ಹಾರೈಸಲು ಮತ್ತು ಉತ್ತೇಜಿಸಲು ತಮ್ಮ ಮೊದಲ “ಟುಗೆದರ್ ಅಟ್ ಕ್ರಿಸ್‌ಮಸ್” ಸೇವೆಯನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮವನ್ನು ವೇಲ್ಸ್‌ನ ರಾಜಕುಮಾರ ಮತ್ತು ರಾಜಕುಮಾರಿ ನಡೆಸುತ್ತಿರುವ ದತ್ತಿ ಸಂಸ್ಥೆಯಾದ ದ ರಾಯಲ್ ಫೌಂಡೇಶನ್ ಬೆಂಬಲಿಸುತ್ತಿತು (ಮತ್ತು ಈಗಲೂ ಬೆಂಬಲಿಸುತ್ತಿದೆ).

“ಈಗ ಐದನೇ ವರ್ಷಕ್ಕೆ ಕಾಲಿಡುತ್ತಿರುವ “ಟುಗೆದರ್ ಅಟ್ ಕ್ರಿಸ್‌ಮಸ್” ಹಾಡಲು, ಆಚರಿಸಲು ಮತ್ತು ರಜಾದಿನಗಳ ಸಂಭ್ರಮವನ್ನು ಆನಂದಿಸಲು ಸುಮಾರು 1,600 ಅತಿಥಿಗಳನ್ನು ಆಹ್ವಾನಿಸುತ್ತದೆ.” ಪ್ರತಿ ವರ್ಷ “ಟುಗೆದರ್ ಅಟ್ ಕ್ರಿಸ್‌ಮಸ್” ಕಾರ್ಯಕ್ರಮವು ಹೊಸ ಥೀಮ್ ಅನ್ನು ಹೊಂದಿರುತ್ತದೆ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

(ಕೃಪೆ: ಇನ್‌ಸ್ಟೈಲ್)

ವೇಲ್ಸ್ ನ ರಾಜಕುಮಾರ ಮತ್ತು ರಾಜಕುಮಾರಿಯವರ ದ ರಾಯಲ್ ಫೌಂಡೇಶನ್ ಪ್ರಕಟಿಸಿದ ಮತ್ತೊಂದು ವರದಿಯು, ಈ ಕಾರ್ಯಕ್ರಮವು “ಎಲ್ಲಾ ರೀತಿಗಳಲ್ಲಿ ಪ್ರೀತಿಯನ್ನು ಆಚರಿಸಲು UKಯಾದ್ಯಂತದಿಂದ 1,600ಕ್ಕೂ ಹೆಚ್ಚು ಜನರನ್ನು ಒಟ್ಟುಗೂಡಿಸಿತು” ಎಂದು ಉಲ್ಲೇಖಿಸುತ್ತದೆ.

ಈ ಕಾರ್ಯಕ್ರಮವು ಇತರರ ಸೇವೆಗಾಗಿ ತಮ್ಮ ಸಮಯವನ್ನು ನೀಡುವ, ತಮ್ಮ ಸಮುದಾಯದ ಜನರನ್ನು ಒಟ್ಟುಗೂಡಿಸುವ ಉಪಕ್ರಮಗಳನ್ನು ಮುನ್ನಡೆಸುವ ಅಥವಾ ತಮ್ಮ ಸುತ್ತಮುತ್ತಲಿನವರಿಗೆ ಸಹಾಯ ಹಸ್ತ ನೀಡುವ ಅನೇಕ ಜನರನ್ನು ಗುರುತಿಸಿದೆ ಎಂದು ವರದಿಯು ಉಲ್ಲೇಖಿಸುತ್ತದೆ ಮತ್ತು ಈ ಕಾರ್ಯಕ್ರಮದಲ್ಲಿ ಸಂಗೀತ ಪ್ರದರ್ಶನಗಳು, ವಾಚನಗೋಷ್ಠಿಗಳು ಮತ್ತು ಇತರ ಉಲ್ಲಾಸಭರಿತ ಕಾರ್ಯಕ್ರಮಗಳನ್ನು ಸಹ ಒಳಗೊಂಡಿತ್ತು. ಹೆಚ್ಚಿನ ಮಾಹಿತಿಯನ್ನು ಇಲ್ಲಿ ರಾಯಲ್ ಫೌಂಡೇಶನ್‌ನಲ್ಲಿ ಕಾಣಬಹುದು.

ವರದಿಯ ಒಂದು ಭಾಗವನ್ನು ಕೆಳಗೆ ನೋಡಿ:

 

(ಕೃಪೆ: ರಾಯಲ್ ಫೌಂಡೇಶನ್)

ಆದ್ದರಿಂದ, ಹೇಳಿಕೆ ತಪ್ಪು ನಿರೂಪಣೆಯಾಗಿದೆ.

******************************************************
ಇದನ್ನೂ ಓದಿ:

ಈ ವೀಡಿಯೊದಲ್ಲಿ ಆಪರೇಷನ್ ಸಿಂಧೂರ್ ಕುರಿತಂತೆ ಐಶ್ವರ್ಯಾ ರೈ ಬಚ್ಚನ್ ಪ್ರಧಾನಿ ಮೋದಿಯವರನ್ನು ಪ್ರಶ್ನಿಸುತ್ತಿರುವುದು ಕಾಣುತ್ತದೆಯೇ? ಸತ್ಯ ಪರಿಶೀಲನೆ

ಈ ಫೋಟೋದಲ್ಲಿ ಚುನಾವಣಾ ಸೋಲಿನ ನಂತರ ಪಾಟ್ನಾದ RJD ಕಚೇರಿಯಲ್ಲಿ ಸಿಹಿತಿಂಡಿಗಳನ್ನು ಗುಂಡಿಯಲ್ಲಿ ಸುರಿಯಲಾಗುತ್ತಿದೆಯೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*